ಹೌದು! ಚಿನ್ನಕ್ಕಿಂತಲೂ ದುಬಾರಿಯಾಗಿದೆ ‘ಈ’ ತರಕಾರಿ; ಅಂಥದ್ದೇನಿದೆ ಈ ತರಕಾರಿಯಲ್ಲಿ ಅಂತೀರಾ?
ಅಮೂಲ್ಯವಾದ, ಬೆಲೆಬಾಳುವ, ದುಬಾರಿ ಬೆಲೆಯ ವಸ್ತುಗಳೆಂದರೆ ನಮ್ಮ ಕಣ್ಣುಗಳ ಮುಂದೆ ನಿಲ್ಲುವವು ಚಿನ್ನ, ವಜ್ರ, ವೈಢೂರ್ಯಗಳಂತಹವು, ಅಲ್ವಾ?
ಆದರೆ ನಾವಿಲ್ಲಿ ಪ್ರಸ್ತಾಪಿಸುತ್ತಿರುವ ತರಕಾರಿ ಮತ್ತು ಆ ತರಕಾರಿಯ ಬೆಲೆ ಕೇಳಿದರೆ ಮೂರ್ಛೆ ಹೋಗಬಹುದು. ಹೌದು ಮಿತ್ರರೇ ಇದು ನಿಜ! ಭೂಪಟಲದ ಮೇಲೆ ಇಂಥ ತರಕಾರಿಯೂ ಇದೆ ಎಂದರೆ ನಂಬುತ್ತೀರಾ? ಇಲ್ಲವೆಂದರೂ ನಂಬಲೇಬೇಕಾಗಿದೆ.
ಈ ತರಕಾರಿಯ ಹೆಸರಿದೆ ಹಾಪ್ ಶೂಟ್. ಇದನ್ನು ಖರೀದಿಸಲು ಲಕ್ಷ ರೂಪಾಯಿಗಳ ವರೆಗೆ ಖರ್ಚು ಮಾಡಬೇಕಾಗುತ್ತದೆ. ಇಷ್ಟೊಂದು ದುಬಾರಿಯಾಗಿದೆ ಈ ತರಕಾರಿ. ಯಾಕೆ ಅಂದರೆ ಮುಂದೆ ಓದಿ…..
ಈ ತರಕಾರಿಯು ಆಮೂಲಾಗ್ರವಾದ ಔಷಧೀಯ ಗುಣಗಳನ್ನು ಹೊಂದಿದೆ. ಅನೇಕ ರೋಗಗಳನ್ನು ಹೋಗಲಾಡಿಸುವ ಶಕ್ತಿ ಈ ತರಕಾರಿಯಲ್ಲಿ ಇದೆ. ಆದ್ದರಿಂದ ಅನೇಕ ಜನರು ಇದನ್ನು ಹಾಗೆಯೇ ಸೇವಿಸುತ್ತಾರೆ. ಚಿನ್ನಕ್ಕಿಂತ ಹೆಚ್ಚು ಬೆಲೆಯುಳ್ಳದ್ದು ಇದ್ದರೂ ಜನ ಇದನ್ನು ಪ್ರೀತಿಯಿಂದ ತಿನ್ನುತ್ತಾರೆ.
ಇದರ ಜನ್ಮ ಜರ್ಮನಿಯಲ್ಲಿ ಆಗಿದೆ. ಮೊದಲು ಇದನ್ನು ಜರ್ಮನಿಯ ಉತ್ತರ ಭಾಗದಲ್ಲಿ ಹೆಚ್ಚಾಗಿ ಬೆಳೆಯುತ್ತಿದ್ದರು. ಕಾಲ ಕಳೆದಂತೆ ಈಗ ಜಗತ್ತಿನಲ್ಲಿ ಎಲ್ಲ ಕಡೆಗೆ ಬೆಳೆಯಲು ಪ್ರಾರಂಭವಾಗಿದೆ. ಹೀಗಾಗಿ ಜರ್ಮನಿಯ ಹೊರಗೂ ಈಗ ತುಂಬಾ ಜನಪ್ರಿಯವಾಗಿದೆ. ಜರ್ಮನಿಯಲ್ಲಿ ಇದರ ಉಪ್ಪಿನಕಾಯಿಗಳನ್ನು ಹೆಚ್ಚಾಗಿ ಮಾಡುತ್ತಾರೆ.
ಈ ತರಕಾರಿಯು ಟಿಬಿ ಕಡಿಮೆ ಮಾಡುವ ಸಲುವಾಗಿ ರಾಮಬಾಣವಾಗಿದೆ. ಇದರಲ್ಲಿ ಅನೇಕ ಪ್ರಕಾರದ ಎಂಟಿಬಾಯೋಟಿಕ್ ಗುಣಗಳು ಕಂಡು ಬಂದಿವೆ. ಮತ್ತು ಇದರ ಉಪಯೋಗ ಅನೇಕ ಪ್ರಕಾರದ ಔಷಧಿಗಳನ್ನು ತಯಾರಿಸಲು ಮಾಡುತ್ತಾರೆ. ಹಲ್ಲುಗಳಿಗಾಗಿಯೂ ತುಂಬಾ ಫಲಕಾರಿಯಾಗಿದೆ.
ಈ ತರಕಾರಿಯನ್ನು ಊಟದಲ್ಲಿ ಸಲಾಡ್ ರೀತಿಯಲ್ಲಿ ಉಪಯೋಗಿಸಿಕೊಳ್ಳುತ್ತಾರೆ. ಈ ಹಾಪ್ ಶೂಟ್ ತರಕಾರಿಯ ಉಪಯೋಗ ಬೀರ್ ತಯಾರಿಸಲು ಸಹ ಉಪಯೋಗಿಸುತ್ತಾರೆ. ಇದರಿಂದ ತಯಾರಿಸಿದ ಬೀರ್ ತುಂಬಾ ದುಬಾರಿಯಾಗುತ್ತದೆ. ಈ ಎಲ್ಲ ವೈಶಿಷ್ಟ್ಯಗಳಿಂದ ಇದರ ಬೆಲೆ ನಮ್ಮ ಯೋಚನೆಗೂ ನಿಲುಕಲಾರದ್ದಾಗಿದೆ. ಹಾಪ್ ಶೂಟ್ ತರಕಾರಿ ತೆಗೆದುಕೊಳ್ಳಬೇಕಾದರೆ 80 ರಿಂದ 82 ಸಾವಿರ ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ.