₹300 ಲೋಷನ್ ಆರ್ಡರ್ ಮಾಡಿದ ವ್ಯಕ್ತಿಗೆ ₹19,000ಗಳ ಹೆಡ್‌ಫೋನ್ ಕಳುಹಿಸಿಕೊಟ್ಟ Amazon! ಆಮೇಲೆ ನಡೆಯಿತು ಅಚ್ಚರಿ ಮೂಡಿಸುವ ಸಂಗತಿ!
ಯಾವಾಗಲೂ ಇ-ಕಾಮರ್ಸ್ ಶಾಪಿಂಗ್ ನಲ್ಲಿ ಮೋಸ ಮಾಡುವವರೇ ಜಾಸ್ತಿ. ಡಿಮಾಂಡ್ ಮಾಡಿದ ವಸ್ತುಗಳ ಬದಲಾಗಿ ಇಟ್ಟಿಗೆ, ಕಲ್ಲು ಮತ್ತು ಚಪ್ಪಲಿ ಈ ತರದ ವಸ್ತುಗಳು ಕಳಿಸಿ ಕೊಡುತ್ತಾರೆಂದು ಕೇಳಿದ್ದೇವೆ. ಆದರೆ 300 ರೂಪಾಯಿಗಳ ವಸ್ತು ಡಿಮಾಂಡ್ ಮಾಡಲಾಗಿ ಕಂಪನಿ 19000 ಸಾವಿರ ರೂಪಾಯಿಗಳ ವಸ್ತು ಕಳಿಸಿ ಕೊಟ್ಟದ್ದನ್ನು ಕೇಳಿದ್ದೀರಾ? ಇಲ್ಲವಲ್ಲ, ಹಾಗಾದ್ರೆ ಕೇಳಿ ಇಂಥ ರೋಚಕ ಘಟನೆಯೊಂದು ನಡೆದು ಹೋಗಿದೆ. ಅಮೆಜಾನ್ ನಲ್ಲಿ ಬೇಡಿದ ವಸ್ತುವನ್ನು ಬಿಟ್ಟು ತಮ್ಮದೇ ತಪ್ಪಿನಿಂದಾಗಿ ತುಂಬಾ ಬೆಳೆಯುಳ್ಳ ವಸ್ತು ಒಂದನ್ನು ಕಳಿಸಿದ್ದಾರೆ. ಅಷ್ಟೇ ಅಲ್ಲ, ಈ ತಪ್ಪಿನ ಅರಿವಾದಾಗಲೂ ಸಹ ಅಮೆಜಾನ್ ಅವರು ಆ ವಸ್ತುವನ್ನು ನೀವೇ ಇಟ್ಟುಕೊಳ್ಳಿ ಎಂದು ಡಿಮಾಂಡ್ ಮಾಡಿದವರಿಗೆ ಹೇಳಿದ್ದಾರಂತೆ.
ಈ ವಿಶೇಷವಾದ ಘಟನೆಯನ್ನು ಒಬ್ಬ ಟ್ವಿಟ್ಟರ್ ಯೂಜರ್ ನೊಬ್ಬ ತನ್ನ ಅಕೌಂಟ್ ನಲ್ಲಿ ಶೇರ್ ಮಾಡಿದ್ದಾನೆ. ಈತನ ಹೆಸರು ಗೌತಮ ರೇಗೆ ಇದೆ. ಇವರು ಹೇಳುವ ಪ್ರಕಾರ, ಗೌತಮ್ ಅಮೆಜಾನ್ ನಲ್ಲಿ ಒಂದು ಸ್ಕಿನ್ ಲೋಷನ್ ಆರ್ಡರ್ ಮಾಡಿದ್ದರಂತೆ, ಅದರ ಬೆಲೆ 300 ರೂಪಾಯಿಗಳಿತ್ತು. ನಿಶ್ಚಿತ ಸಮಯಕ್ಕೆ ಡೇಲಿವರಿ ಸಹ ಮಾಡಿದರು. ನಂತರ ಡೆಲಿವರಿ ಮಾಡಿದ ವಸ್ತುವನ್ನು ತೆಗೆದು ನೋಡಲಾಗಿ ಆತ ಬೆಕ್ಕಸ ಬೆರಗಾಗಿದ್ದಾನೆ. ಆ ಬಾಕ್ಸ್ ನಲ್ಲಿ ಸ್ಕಿನ್ ಲೋಷನ್ ಇರದೇ ಅದರ ಬದಲಾಗಿ ಮ್ಯೂಸಿಕ್ ಕಂಪನಿ Bose ದ ವಾಯರ್ ಲೆಸ್ ಇಯರ್ ಬಡ್ಸ್ ಗಳಿದ್ದವು.
Bose wireless earbuds (₹19k) delivered instead of skin lotion (₹300). @amazonIN support asked to keep it as order was non-returnable! 🤪🤦♂️🥳 pic.twitter.com/nCMw9z80pW
— Gautam Rege (@gautamrege) June 10, 2020
ಪ್ಯಾಕೆಟ್ ಒಡೆದ ನಂತರ ಅದರಲ್ಲಿ ವಾಯರ್ ಲೆಸ್ ಇಯರ್ ಬಡ್ಸ್ ಇದ್ದದ್ದು ನೋಡಿ ಅವು ತುಂಬಾ ದುಬಾರಿಯಾದ ವಸ್ತುಗಳಿವೆ ಎಂಬುದು ಗೊತ್ತಾಯಿತು. Bose ಕಂಪನಿಯ ಪ್ರಿಮಿಯಮ್ ಮತ್ತು ದುಬಾರಿಯಾದ ಇಯರ್ ಬಡ್ಸ್ ಗಳಿದ್ದವು. ತನ್ನ ಟ್ವೀಟ್ ನಲ್ಲಿ ಗೌತಮ್ ಹೇಳಿದ್ದಾನೆ, ಈ ಇಯರ್ ಬಡ್ಸ್ ಗಳ ಬೆಲೆ ಮಾರ್ಕೆಟ್ ನಲ್ಲಿ 19000 ಸಾವಿರ ರೂಪಾಯಿಗಳಷ್ಟಿದೆ. 300 ರೂಪಾಯಿಗಳ ಬದಲಾಗಿ 19000 ಸಾವಿರ ರೂಪಾಯಿಗಳ ವಸ್ತು ದೊರೆತಿದ್ದಕ್ಕೆ ನಾನು ಆಶ್ಚರ್ಯಚಕಿತನಾಗಿದ್ದೇನೆ.
ಅಮೆಜಾನ್ ಕೊಟ್ಟಿತು ಗೌತಮ್ ಗೆ ಗಿಫ್ಟ್!

ಇದರ ಮುಂದಿನ ವಿಷಯ ಇನ್ನೂ ಕುತೂಹಲಕರವಾಗಿದೆ. ಗೌತಮ್ ತಪ್ಪು ವಸ್ತುವನ್ನು ಡೆಲಿವರಿ ಮಾಡಿದ್ದಕ್ಕಾಗಿ ಅಮೆಜಾನ್ ದವರಿಗೆ ಮಾಹಿತಿ ನೀಡುವ ಸಲುವಾಗಿ ಕಸ್ಟಮರ್ ಕೇರ್ ಗೆ ಸಂಪರ್ಕಿಸಿದಾಗ ಕಂಪನಿ ಕಡೆಯಿಂದ ಬಂದ ಉತ್ತರ ಹೀಗಿತ್ತು. ನಿಮಗೆ ದೊರೆತ ವಸ್ತು (19000 ಸಾವಿರ ಬೆಲೆಯ ಇಯರ್ ಬಡ್ಸ್) ಅದು ನಾನ್ ರಿಟರ್ನೆಬಲ್ ಇದೆ. ಹಾಗಾಗಿ ಅದನ್ನು ವಾಪಸ್ ತೆಗೆದುಕೊಳ್ಳಲು ಸಾಧ್ಯವಿಲ್ಲ. ಅದನ್ನು ನೀವೇ ಇಟ್ಟುಕೊಳ್ಳಿರಿ.

ಗೌತಮ್ ಮಾಡಿದ ಟ್ವೀಟ್ ನೋಡಿದ ನಂತರ ಅಮೇಜಾನ್ ಶಾಪಿಂಗ್ ಮಾಡಿದವರು ತಮ್ಮ ಅನುಭವಗಳನ್ನು ಶೇರ್ ಮಾಡುತ್ತಿದ್ದಾರೆ. ಹೀಗೆಯೇ ಇನ್ನೊಬ್ಬ ಯೂಜರ್ ತನ್ನ ಅನುಭವವನ್ನು ಹೀಗೆ ಶೇರ್ ಮಾಡಿದ್ದಾನೆ. 180 ರೂಪಾಯಿಗಳ ಆಫ್ಟರ್ ಶೇವ್ ಲೋಷನ್ ಡಿಮಾಂಡ್ ಮಾಡಿದಾಗ Lenovo Tab 4 ಡೆಲಿವರಿ ಮಾಡಿದ್ದರಂತೆ. ಈ ಸುದ್ದಿಗಳನ್ನು ಕೇಳಿ ಯೂಜರ್ ಗಳು ದೇವರೇ, ಈ ರೀತಿ ನಮ್ಮ ಜೊತೆಗಾದರೂ ಆಗಬಾರ್ದಾ ಎಂದು ಬೇಡಿಕೊಳ್ಳುತ್ತಿದ್ದಾರೆ.