🤣🤣VIDEO; ಲೆಜೆಂಡ್ ಗಳೇ ಬೇರೆ, ಅವರು ಬೈಕ್ ನಿಂದ ಇಳಿಯುವ ಸ್ಟೈಲ್ ಬೇರೆ; ಸುಳ್ಳೆನಿಸಿದರೆ ಈ ವಿಡಿಯೋ ನೋಡಿ!
ಇತ್ತೀಚೆಗೆ ಸಾಕಷ್ಟು ಜನರು ಎಂಥ ಕಷ್ಟಗಳೇ ಬರಲಿ ನಗುನಗುತ್ತಾ ಇರಲು ಬಯಸುತ್ತಿದ್ದಾರೆ. ಸಿಗುವ ಒಂದು ಬದುಕು ಸದಾ ಮುಖ ಊದಿಸಿಕೊಂಡು ಇರುವುದರಲ್ಲಿ ಸುಖವಿಲ್ಲ ಎಂಬ ಆಶಯವನ್ನು ಬಹಳಷ್ಟು ಜನರು ತಿಳಿದುಕೊಂಡಿದ್ದಾರೆ ಎನಿಸುತ್ತದೆ. ಒಳ್ಳೆಯ ಮತ್ತು ಸರಳವಾದ ಬದುಕು ಕ್ಲಿಷ್ಟಕರ ಮಾಡಿಕೊಳ್ಳುವುದರಲ್ಲಿ ಅರ್ಥವಿಲ್ಲ. ಹೀಗಾಗಿ ಇರುವಷ್ಟು ದಿನ ಹಾಯಾಗಿ ತಮಾಷೆಯಿಂದ ಕೂಡಿದ ಬಾಳನ್ನು ಬದುಕಲು ಹೆಚ್ಚು ಜನ ಇಷ್ಟ ಪಡುತ್ತಿದ್ದಾರೆ. ಹೀಗಾಗಿ ಹಾಸ್ಯದ ಅಥವಾ ತಮಾಷೆಯ ಕಂಟೆಂಟ್ ಗಳು ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ತುಂಬಾ ಇಷ್ಟ ಪಡುತ್ತಾರೆ. ಸದ್ಯ ಇದೇ ರೀತಿಯ ಹಾಸ್ಯದ ವಿಡಿಯೋ ಒಂದು ಇಂಟರ್ನೆಟ್ ನಲ್ಲಿ ಗಾಳಿಯಂತೆ ಹಬ್ಬುತ್ತಿದೆ. ಬನ್ನಿ ನೋಡೋಣ.
ಪ್ರಸ್ತುತ ವಿಡಿಯೋದಲ್ಲಿ ಬೈಕ್ ಸವಾರ ಯುವಕನಿಗೆ ಲೆಜೆಂಡ್ ಎಂದು ಸಂಬೋಧಿಸಲಾಗಿದೆ. ಅದಕ್ಕೆ ಕಾರಣವೂ ಹಾಗೆಯೇ ಇದೆ. ಇಲ್ಲಿ ಬೈಕ್ ಸವಾರನೊಬ್ಬ ಬೈಕ್ ಮೇಲೆ ಕುಳಿತು ಬರುತ್ತಾನೆ. ಬಂದ ನಂತರ ಬೈಕ್ ನಿಲ್ಲಿಸಿ ನಿಧಾನವಾಗಿ ಇಳಿಯಲು ಹೋಗುತ್ತಾನೆ. ಏತನ್ಮಧ್ಯೆ ದೃಶ್ಯದಲ್ಲಿ ಸ್ವಲ್ಪ ಮಳೆಯು ಬರುತ್ತಿರುವುದು ಕಂಡು ಬರುತ್ತಿದೆ. ಯಾವುದೇ ಗಡಿಬಿಡಿ ಇಲ್ಲದೆ ಇನ್ನೇನು ಬೈಕ್ ಸವಾರ ಇಳಿಯಬೇಕು ಎನ್ನುವಾಗಲೇ ಆಕಸ್ಮಿಕವಾಗಿ ಏನಾಗುತ್ತೋ ಗೊತ್ತಿಲ್ಲ ಬ್ಯಾಲೆನ್ಸ್ ತಪ್ಪಿ ಬೈಕ್ ಸವಾರ ದಪ್ಪನೆ ಕೆಳಗೆ ಬಿದ್ದು ಬಿಡುತ್ತಾನೆ. ತಾನು ಬೀಳುತ್ತಿದ್ದೇನೆ ಎನ್ನುವ ಅಂದಾಜು ಆ ಬೈಕ್ ಸವಾರನಿಗೂ ಇರಲಿಲ್ಲ. ಬೈಕ್ ಸವಾರ ಎಷ್ಟು ಹಠಾತ್ ಕೆಳಗೆ ಬೀಳುತ್ತಾನೆ ಅದಕ್ಕಿಂತ ವೇಗದಲ್ಲಿ ಎದ್ದು ನಿಲ್ಲುತ್ತಾನೆ. ಮತ್ತು ತನ್ನನ್ನು ಯಾರು ಗಮನಿಲ್ಲ ತಾನೇ ಎಂಬುದನ್ನು ಸ್ಪಷ್ಟ ಪಡಿಸಿಕೊಳ್ಳುತ್ತಾನೆ. ಆದರೆ ಕ್ಯಾಮೆರಾ ಮಾತ್ರ ಆತನ ಈ ಪ್ರತಾಪ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ.
ವಿಡಿಯೋ ನೋಡಿ
View this post on Instagram
ಪ್ರಸ್ತುತ ವಿಡಿಯೋ pokemon_007 ಹೆಸರಿನಿಂದ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದ್ದು ಈ ವಿಡಿಯೋ ಇಲ್ಲಿಯವರೆಗೆ 11 ಮಿಲಿಯನ್ ಗಿಂತಲೂ ಹೆಚ್ಚು ವೀಕ್ಷಣೆಯನ್ನು ಪಡೆದಿದ್ದು 1 ಮಿಲಿಯನ್ ಗಿಂತಲೂ ಹೆಚ್ಚು ಲೈಕ್ಸ್ ಗಳನ್ನು ಪಡೆದಿದೆ.