1 ಎಕರೆ ಜಮೀನಿನಲ್ಲಿ 30 ಕೋಟಿಗಳ ಆದಾಯ: ಎಲ್ಲದಕ್ಕಿಂತ ದುಬಾರಿ ಗಿಡಗಳ ಕೃಷಿಯ ಬಗ್ಗೆ ಇಲ್ಲಿದೆ ಆಸಕ್ತಿಕರ ಮಾಹಿತಿ

ಶ್ರೀಗಂಧದ ಮರಗಳ ಬಗ್ಗೆ ನಾವೆಲ್ಲರೂ ತಿಳಿದುಕೊಂಡಿದ್ದೇವೆ. ಗಂಧದ ಕಟ್ಟಿಗೆಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡಲಾಗುವುದು. ಇದನ್ನು ಪೂಜೆ, ಹೋಮ, ಹವನ ಹಾಗೂ ಸುಗಂಧ ದ್ರವ್ಯಗಳು ಹಾಗೂ ಸಾಬೂನುಗಳ ತಯಾರಿಕೆಯಲ್ಲಿ ಹಾಗೂ ಮೂರ್ತಿ ಕೆತ್ತನೆ ಯಲ್ಲಿ ಬಳಸಲಾಗುವುದು.‌ ಹೇಗೆ ರೈತರು ಬೇರೆಲ್ಲಾ ರೀತಿಯ ಕೃಷಿಯ ಮೂಲಕ ಲಕ್ಷಗಳ ಆದಾಯವನ್ನು ಗಳಿಸಲು ಸಾಧ್ಯವಿದೆಯೋ ಅದೇ ರೀತಿ ಶ್ರೀಗಂಧದ ಮರವನ್ನು ಬೆಳೆಸುವ ಮೂಲಕ ಕೂಡಾ ಆದಾಯವನ್ನು ಗಳಿಸಬಹುದಾಗಿದ್ದು, ಒಂದು ಮರದಿಂದ ಸುಮಾರು ಐದು ಲಕ್ಷ ರೂಪಾಯಿಗಳ ಆದಾಯವನ್ನು ಗಳಿಸಬಹುದಾಗಿದೆ. ಆದರೆ ಶ್ರೀಗಂಧದ ವ್ಯವಸಾಯ ಹೇಗೆ ಮಾಡುವುದು ಎನ್ನುವುದು ನಿಮಗೆ ತಿಳಿದಿದೆಯೇ?? ಇದರಿಂದ ಎಷ್ಟು ಆದಾಯ ಗಳಿಸಬಹುದು ಎನ್ನುವ ಮಾಹಿತಿ ನಿಮಗಿದೆಯೇ? ಈ ಲೇಖನದ ಮೂಲಕ ನೀವು ಶ್ರೀಗಂಧದ ಕುರಿತಾಗ ಅನೇಕ ಮಹತ್ವದ ವಿಷಯಗಳನ್ನು ಇಂದು ತಿಳಿದುಕೊಳ್ಳುವಿರಿ.

ಹರಿಯಾಣದ ಘರೋಂಡಾದಲ್ಲಿ ಒಬ್ಬ ರೈತನು ತಮ್ಮ ಜಮೀನಿನಲ್ಲಿ ಶ್ರೀಗಂಧದ ಕೃಷಿಯನ್ನು ಮಾಡುತ್ತಿದ್ದಾರೆ. ಅವರು ತೇವಾಂಶ ಉಳ್ಳ ಭೂಮಿಯಲ್ಲಿ ಶ್ರೀಗಂಧದ ಮರಗಳನ್ನು ಬೆಳೆಸುತ್ತಿದ್ದು ಅವು ನಿಧಾನವಾಗಿ ಬೆಳೆಯುತ್ತಿವೆ. ಈ ರೈತ ಹೇಳುವ ಹಾಗೆ ಶ್ರೀಗಂಧದ ಮರಗಳು ಬೆಳೆದು ಸಿದ್ಧವಾಗಲು 12 ವರ್ಷಗಳ ಕಾಲಾವಧಿ ಬೇಕಾಗುತ್ತದೆ ಎಂದಿದ್ದಾರೆ. ಒಂದು ಶ್ರೀಗಂಧದ ಮರವನ್ನು ಬೆಳೆಯುವುದರಿಂದಲೇ ಸುಮಾರು 5-6 ಲಕ್ಷ ರೂಪಾಯಿಗಳನ್ನು ಗಳಿಸಬಹುದು ಎನ್ನುತ್ತಾರೆ. ಒಂದು ಎಕರೆ ಪ್ರದೇಶದಲ್ಲಿ ಒಟ್ಟು 600 ಶ್ರೀಗಂಧದ ಮರಗಳನ್ನು ಬೆಳೆಸಬಹುದು ಹಾಗೂ 12 ವರ್ಷಗಳ ನಂತರ ಅವುಗಳಿಂದ 30 ಲಕ್ಷ ರೂಪಾಯಿಗಳನ್ನು ಗಳಿಸಬಹುದು ಎನ್ನುತ್ತಾರೆ. ಅವರು ಕಳೆದ ಮೂರು ವರ್ಷಗಳಿಂದ ಈ ಕೃಷಿಯನ್ನು ಮಾಡುತ್ತಿದ್ದು, ಬೇರೆಯವರಿಂದಲೂ ಮಾಡಿಸುತ್ತಿದ್ದಾರೆ ಎನ್ನಲಾಗಿದೆ.

ಜಮೀನಿನಲ್ಲಿ ಶ್ರೀಗಂಧವನ್ನು ನೆಡಲು ಅವುಗಳ ಸಸಿಗಳ ಅಗತ್ಯ ಇರುತ್ತದೆ. ಈ ಸಸಿಗಳ ಬೆಲೆ ಕೂಡಾ ದುಬಾರಿಯಾಗಿರುತ್ತಾರೆ. ಆದರೆ ದೊಡ್ಡ ಪ್ರಮಾಣದಲ್ಲಿ ಖರೀದಿ ಮಾಡಿದರೆ ಅವು 400 ರಿಂದ 500 ರೂ.ಗಳಿಗೆ ದೊರೆಯುತ್ತದೆ. ಶ್ರೀಗಂಧದ ಮರಗಳನ್ನು ಬೆಳೆಸುವುದಾದರೆ ಅದರ ಜೊತೆಗೆ ಹೋಸ್ಟ್ ಮರಗಳನ್ನು ಕೂಡಾ ಬೆಳೆಸಲೇಬೇಕು ಎನ್ನುತ್ತಾರೆ ರೈತರು. ಇವು ಕೂಡಾ ಒಂದು ರೀತಿಯ ಸಸ್ಯವಾಗಿದ್ದು ಶ್ರೀಗಂಧದ ಮರದ ಜೊತೆಯಲ್ಲಿಯೇ ಬೆಳೆಯಲಾಗುತ್ತದೆ. ಈ ಗಿಡವು ಸತ್ತರೆ ಶ್ರೀಗಂಧದ ಮರ ಕೂಡಾ ಸಾಯುತ್ತದೆ ಎನ್ನುತ್ತಾರೆ.‌ ಒಂದು ಎಕರೆ ಜಮೀನಿನಲ್ಲಿ 600 ಶ್ರೀಗಂಧದ ಮರಗಳನ್ನು ನೆಟ್ಟರೆ ಅದರೊಂದಿಗೆ 300 ಹೋಸ್ಟ್ ಸಸಿಗಳನ್ನು ಕೂಡಾ ನಡೆಬೇಕಾಗುತ್ತದೆ.

ಶ್ರೀಗಂಧದ ಸಸ್ಯಕ್ಕೆ ಹೆಚ್ಚಿನ ನೀರಿನ ಅಗತ್ಯವಿಲ್ಲ, ಆದ್ದರಿಂದಲೇ ಇದನ್ನು ನೀರು ನಿಲ್ಲುವಂತಹ ಪ್ರದೇಶದಲ್ಲಿ ಶ್ರೀಗಂಧದ ಕೃಷಿಯನ್ನು ಮಾಡಲು ಸಾಧ್ಯವಾಗುವುದಿಲ್ಲ. ಹಾಗೇನಾದರೂ ಮಾಡಿದರೆ ಸಸಿಗಳು ಕೊಳೆತು ಹೋಗುವ ಸಾಧ್ಯತೆಗಳಿರುತ್ತವೆ. ಇವುಗಳ ಮಾರಾಟವನ್ನು ಸರ್ಕಾರದ ವತಿಯಿಂದ ಮಾಡಲಾಗುತ್ತದೆ ಹಾಗೂ ಇಲ್ಲಿ ಖಾಸಗಿ ಏಜನ್ಸಿಗಳ ಯಾವುದೇ ಪಾತ್ರವೂ ಕೂಡಾ ಇರುವುದಿಲ್ಲ.‌ ಖಾಸಗಿ ಏಜನ್ಸಿಗಳು ಶ್ರೀಗಂಧವನ್ನು ರಫ್ತು ಮಾಡುವಂತಿಲ್ಲ. ಇದನ್ನು ಕೇವಲ ಸರ್ಕಾರವೇ ನಿರ್ವಹಣೆ ಮಾಡುವುದು ಎನ್ನಲಾಗಿದೆ. ಶ್ರೀಗಂಧದ ಮರಗಳು ಬೆಳೆದು ಸಿದ್ಧವಾದ ಮೇಲೆ ಇದರ ಮಾಹಿತಿಯನ್ನು ಅರಣ್ಯ ಇಲಾಖೆಗೆ ನೀಡಬೇಕಾಗುತ್ತದೆ. ಅವರ ನಿರ್ದೇಶನದಂತೆ ಮರಗಳನ್ನು ಕತ್ತರಿಸಲಾಗುತ್ತದೆ.

ಶ್ರೀಗಂಧದ ಮರವು ವಿಶ್ವದ ದುಬಾರಿ ಮರಗಳ ಜಾತಿಗೆ ಸೇರಿದೆ. ಈ ಮರದ ಒಂದು ಕೆಜಿ ಕಟ್ಟಿಗೆಯ ಬೆಲೆ 27 ಸಾವಿರ ರೂ.ಗಳು ಎನ್ನಲಾಗಿದ್ದು, ಒಂದು ಮರದಿಂದ ಸುಮಾರು 15 ರಿಂದ 20 ಕಿಲೋ ಕಟ್ಟಿಗೆಗಳು ಸಿಗುವುದು ಹಾಗೂ ಸುಮಾರು 6 ಲಕ್ಷ ರೂಪಾಯಿಗಳ ವರೆಗೆ ಗಳಿಸಬಹುದು. ಒಂದೂವರೆ ವರ್ಷದವರೆಗೆ ಶ್ರೀಗಂಧದ ಸಸಿಯನ್ನು ನೆಡಲು ಉಪಯುಕ್ತ ಎನ್ನಲಾಗಿದ್ದು, ಇದು ಆ ವೇಳೆಗೆ ಎರಡೂ ವರೆ ಅಡಿಗಳಷ್ಟು ಬೆಳೆದಿರುತ್ತದೆ. ಇದನ್ನು ಯಾವ ಕಾಲದಲ್ಲಾದರೂ ನೆಡಬಹುದು. ಆದರೆ ಚಳಿಗಾಲದಲ್ಲಿ ನೆಡಲು ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಲಾಗುತ್ತದೆ. ಈ ಸಸಿಯ ಮೇಲೆ ನೀರು ಹರಿಯದಂತೆ ಎಚ್ಚರ ವಹಿಸಲಾಗುವುದು. ಈ ಗಿಡಕ್ಕೆ ವಾರ ಒಂದಕ್ಕೆ ಸುಮಾರು ಎರಡರಿಂದ ಮೂರು ಲೀಟರ್ ನೀರಿನ ಅವಶ್ಯಕತೆಯಷ್ಟೇ ಇರುತ್ತದೆ ಎನ್ನಲಾಗಿದೆ.

ಶ್ರೀಗಂಧದ ಮರದ ಮೇಲೆ ಹಾವುಗಳು ಹರಿದಾಡುತ್ತವೆ ಎನ್ನುವುದು ಕೇವಲ ಒಂದು ಗಾಳಿ ಮಾತು ಎನ್ನಲಾಗಿದ್ದು, ಕಳ್ಳತನವನ್ನು ತಡೆಯಲು ಇಂತಹ ಮಾತು ಹೇಳಲಾಗುತ್ತದೆ ಎನ್ನುತ್ತಾರೆ. ಇನ್ನು ಎಂಟು ವರ್ಷದವರೆಗೆ ಈ ಮರದಲ್ಲಿ ಯಾವುದೇ ಸುಗಂಧ ಹೊಮ್ಮುವುದಿಲ್ಲ ಎನ್ನಲಾಗಿದೆ. ಅನಂತರ ಅಂದರೆ 8 ವರ್ಷದಿಂದ 12-15 ವರ್ಷಗಳವರೆಗೆ ಮರಗಳ ಸೂಕ್ತ ಮೇಲ್ವಿಚಾರಣೆ ಹಾಗೂ ರಕ್ಷಣೆಯನ್ನು ಮಾಡಲೇಬೇಕಾಗುತ್ತದೆ. ಶ್ರೀಗಂಧದ ಕೃಷಿಯ ಜೊತೆಗೆ ಇತರೆ ಬೆಳೆಗಳನ್ನು ಕೂಡಾ ಬೆಳೆಯಬಹುದು. ಆದರೆ ಕಬ್ಬು ಮತ್ತು ಭತ್ತವನ್ನು ಬೆಳೆಯಬಾರದು ಎನ್ನಲಾಗಿದೆ. ಮರಗಳನ್ನು 20 ಅಡಿ ದೂರದಲ್ಲಿ ನೆಟ್ಟು ಇತರೆ ಬೆಳೆಗಳನ್ನು ಬೆಳೆಯಬಹುದು ಎನ್ನಲಾಗಿದ್ದು ಈ ಮರಗಳು ಪೇರಲ ಮರದಂತೆ ಬೆಳೆಯುತ್ತದೆ ಆದರೆ ಅದರ ಕೊಂಬೆಗಳು ಚಿಕ್ಕದಾಗಿರುತ್ತವೆ.

ಶ್ರೀಗಂಧದ ಮರದ ಕಡ್ಡಿಗಳು ನಿಧಾನಗತಿಯಲ್ಲಿ ಪಕ್ವವಾಗುತ್ತವೆ. ಹಾಗೆ ಅವು ನಿರ್ದಿಷ್ಟ ಹಂತವನ್ನು ತಲುಪಿದ ನಂತರ ಅವುಗಳಿಂದ ಸುಗಂಧವು ಹೊರಹೊಮ್ಮಲು ಆರಂಭಿಸುತ್ತದೆ. ಸುಗಂಧ ಬರಲಾರಂಭಿಸಿದೆಯೆಂದರೆ ಅದರ ತೂಕ ಹೆಚ್ಚುತ್ತಿದೆಯೆಂದು ಅರ್ಥ. ಶ್ರೀಗಂಧದದಲ್ಲಿ ಕೆಂಪು ಶ್ರೀಗಂಧ ಹಾಗೂ ಬಿಳಿ ಶ್ರೀಗಂಧ ಎನ್ನುವ ಎರಡು ಪ್ರಬೇಧಗಳಿವೆ ಎನ್ನಲಾಗಿದೆ. ಭಾರತದಲ್ಲಿ ಹೆಚ್ಚಾಗಿ ಬಿಳಿಯ ಶ್ರೀಗಂಧದ ಕೃಷಿ ನಡೆಯುತ್ತದೆ. ಏಕೆಂದರೆ ಇಲ್ಲಿನ ಮಣ್ಣು ಅದಕ್ಕೆ ಸೂಕ್ತವಾಗಿದೆ ಎನ್ನಲಾಗಿದೆ. ಶ್ರೀಗಂಧದ ಕೃಷಿಯು 5° ಯಿಂದ 46° ಉಷ್ಣಾಂಶದ ಪ್ರದೇಶದಲ್ಲಿ ಕೂಡಾ ಮಾಡಬಹುದಾಗಿದೆ.