10 ಕಿಮೀ ನಡೆದುಕೊಂಡು ಹೋಗಿ ಸ್ವಂತ ತಂದೆ ವಿರುದ್ಧ ದೂರು ಕೊಟ್ಟ ಪುಟ್ಟ ಪೋರಿ!
ಓಡಿಸಾ ರಾಜ್ಯದಲ್ಲಿ ಹೊಸದೊಂದು ಕೇಸು ವೈರಲ್ ಆಗುತ್ತಿದೆ. ತನ್ನ ಹಕ್ಕುಗಳಿಗಾಗಿ 6 ನೇ ಇಯತ್ತೆಯಲ್ಲಿ ಓದುತ್ತಿರುವ ಹುಡುಗಿಯು ಹತ್ತು ಕಿಲೋಮೀಟರ್ ನಡೆದುಕೊಂಡೇ ಹೋಗಿ ತನ್ನ ತಂದೆಯ ವಿರುದ್ಧವೇ ಕೇಸು ದಾಖಲಿಸಿರುವ ವರದಿಯಾಗಿದೆ.
ಹುಡುಗಿಯು ತಾನು ದಾಖಲಿಸಿರುವ ತಕರಾರಿನಲ್ಲಿ ಮಧ್ಯಾಹ್ನ ಭೋಜನಕ್ಕಾಗಿ ತನಗೆ ದೊರೆಯುವ ಲಾಭವನ್ನು ತನ್ನ ತಂದೆಯು ಪಡೆಯುತ್ತಿರುವುದಾಗಿ ಉಲ್ಲೇಖಿಸಿದ್ದಾಳೆ. ಈ ಬಗ್ಗೆ ತಕರಾರು ದಾಖಲಿಸಲು ಜಿಲ್ಲಾಧಿಕಾರಿ ಕಚೇರಿಗೆ ನಡೆದುಕೊಂಡೆ 10 ಕಿಲೋಮೀಟರ್ ವರೆಗೆ ಹೋಗಿದ್ದಾಳೆ.
ಹುಡುಗಿಯು ಮಾಡಿದ ಲಿಖಿತ ಸ್ವರೂಪದ ತಕರಾರನ್ನು ನೋಡಿ ಜಿಲ್ಲಾಧಿಕಾರಿಯಾದ ಶ್ರೀ ಸಮರ್ಥ್ ವರ್ಮ ಅವರು ಮುಂದಿನ ಲಾಭಾಂಶವನ್ನು ಹುಡುಗಿಯ ಬ್ಯಾಂಕ್ ಖಾತೆಯಲ್ಲಿ ಜಮೆ ಮಾಡಲು ಆದೇಶ ನೀಡಿದ್ದಾರೆ. ಜಿಲ್ಲಾಧಿಕಾರಿಯಾದ ಶ್ರೀ ಸಮರ್ಥ ವರ್ಮಾ ಅವರು ಅಷ್ಟಕ್ಕೆ ನಿಲ್ಲದೆ ಇಲ್ಲಿಯವರೆಗೆ ಹುಡುಗಿಯ ತಂದೆ ತೆಗೆದುಕೊಂಡ ಕಾನೂನು ಬಾಹೀರವಾದ ಹುಡುಗಿಯ ಹಣ ಮತ್ತು ಅಕ್ಕಿಯನ್ನು ಮರಳಿ ದೊರಕಿಸಿ ಕೊಡುವಂತೆ ಆದೇಶ ನೀಡಿದ್ದಾರೆ.
ಲಾಕ್ ಡೌನ್ ಪ್ರಾರಂಭವಾದ ನಂತರ ಸರಕಾರವು ಪ್ರತಿ ವಿದ್ಯಾರ್ಥಿಯ ಖಾತೆಯಲ್ಲಿ ದಿನವೊಂದಕ್ಕೆ 8 ರೂಪಾಯಿಗಳನ್ನು ಕೂಡಿ ಹಾಕುತ್ತಿದೆ. ಒಂದು ವೇಳೆ ವಿದ್ಯಾರ್ಥಿಯ ಹೆಸರಿನಲ್ಲಿ ಖಾತೆ ಇಲ್ಲದೆ ಹೋದರೆ ವಿದ್ಯಾರ್ಥಿಗಳ ಪೋಷಕರ ಖಾತೆಯಲ್ಲಿ ಹಣ ಜಮೆ ಮಾಡುತ್ತಿದೆ. ಇದರ ಜೊತೆಗೆ ಮಧ್ಯಾಹ್ನದ ಭೋಜನದ ಯೋಜನೆಯ ಅಡಿಯಲ್ಲಿ ಪ್ರತಿ ವಿದ್ಯಾರ್ಥಿಗೆ 150 ಗ್ರಾಂ ಅಕ್ಕಿಯನ್ನು ನೀಡಲಾಗುತ್ತಿತ್ತು.

ಹುಡುಗಿಯ ಹೆಸರಿನಲ್ಲಿ ಬ್ಯಾಂಕ್ ಅಕೌಂಟ್ ಇದ್ದರೂ ಹಣ ಮಾತ್ರ ತಂದೆಯ ಅಕೌಂಟ್ ನಲ್ಲಿ ಜಮೆ ಯಾಗುತ್ತಿತ್ತು. ಪ್ರಸ್ತುತ ಹುಡುಗಿಯು ತಂದೆಯ ಜೊತೆಗೆ ಇರುತ್ತಿಲ್ಲವಾದ್ದರಿಂದ ತನ್ನ ಹೆಸರಿಗೆ ನೀಡಿದ ಶಾಲೆಯಲ್ಲಿಯ ಅಕ್ಕಿಯನ್ನು ಸಹಿತ ತಂದೆಯೇ ತೆಗೆದುಕೊಳ್ಳುತ್ತಿದ್ದಾನೆ ಎಂದು ಆರೋಪಿಸಿದ್ದಾಳೆ.
ಹುಡುಗಿಯ ತಾಯಿಯ ನಿಧನವಾದ ನಂತರ ತಂದೆ ಎರಡನೇ ಮದುವೆಯಾಗಿದ್ದಾನೆ. ಹುಡುಗಿ ಸದ್ಯ ತನ್ನ ಸಂಬಂಧಿಕರ ಹತ್ತಿರ ಇರುತ್ತಿದ್ದಾಳೆ.
ಹುಡುಗಿಯ ಸಮಸ್ಯೆಯನ್ನು ಆಲಿಸಿದ ನಂತರ ಜಿಲ್ಲಾಧಿಕಾರಿ ಅವರು ಒಂದು ಹಣ ಮತ್ತು ಅಕ್ಕಿ ಮರುಪಾವತಿಸಲು ಆದೇಶವನ್ನು ತೆಗೆದಿದ್ದಾರೆ. ಹುಡುಗಿಯ ಹಕ್ಕಿನ ಹಣ ಆಕೆಯ ಅಕೌಂಟ್ ನಲ್ಲಿ ಜಮೆ ಮಾಡಲಾಗುತ್ತದೆ ಮತ್ತು ಆಕೆಯ ತಂದೆಯ ಕಡೆಯಿಂದ ಮೊದಲಿನ ಹಣವನ್ನು ವಸೂಲಿ ಮಾಡಲಾಗುವುದು ಎಂದು ಜಿಲ್ಲೆಯ ಶಿಕ್ಷಣಾಧಿಕಾರಿಯವರಾದ ಸಂಜೀವ್ ಸಿಂಗ್ ಅವರು ಮಾಹಿತಿ ನೀಡಿದ್ದಾರೆ. ಇದರ ಹೊರತಾಗಿ ತಂದೆಯು ಮೊದಲು ತೆಗೆದು ಕೊಂಡ ಅಕ್ಕಿಯನ್ನು ಸಹ ಹುಡುಗಿಗೆ ಮರಳಿ ಪಾವತಿಸಲು ಸಂಬಂಧಿತ ಶಾಲೆಯ ಮುಖ್ಯ ಗುರುಗಳಿಗೆ ಆದೇಶ ನೀಡಿದ್ದಾರೆ.