10 ನಿಮಿಷಗಳ ಕೆಲಸ ಬರೀ 10 ಸೆಕೆಂಡುಗಳಲ್ಲಿ ನಿರಾಯಾಸವಾಗಿ ಮಾಡಿದ ಮಹಿಳೆಯ ಟ್ಯಾಲೆಂಟ್ ನ ವಿಡಿಯೋ ವೈರಲ್…
ಶಿಕ್ಷಣದ ಗಂಧವಿಲ್ಲದಿದ್ದರೂ ಅಥವಾ ಹೆಚ್ಚು ಶಿಕ್ಷಣ ಪಡೆಯದಿದ್ದರೂ ಬರೀ ಟ್ಯಾಲೆಂಟ್ ಬಲದಿಂದ ಜೀವನದಲ್ಲಿ ಅತ್ಯುಚ್ಚ ಶಿಖರವನ್ನು ತಲುಪಿದ ಮತ್ತು ತಮ್ಮ ಜೀವನವನ್ನಷ್ಟೇ ಅಲ್ಲ ಬೇರೋಬ್ಬರ ಜೀವನಕ್ಕೂ ದಾರಿದೀಪವಾಗುವದರ ಜೊತೆಗೆ ಸಮಾಜಕ್ಕೂ ಸಹ ಉಪಯೋಗಿಯಾದ ಅನೇಕ ಮಹಾನುಭಾವರನ್ನು ಕೇಳಿದ್ದೇವೆ, ನೋಡಿದ್ದೇವೆ.
ವ್ಯಕ್ತಿ ತನಗೆ ಅಭಿರುಚಿ ಇರುವ ಕೆಲಸ ಆಯ್ದುಕೊಂಡು ಅದನ್ನೇ ನಿಷ್ಠೆಯಿಂದ ಮಾಡಬೇಕು, ಇಲ್ಲವಾದರೆ ತಾನು ಮಾಡುವ ಕೆಲಸವನ್ನೇ ತುಂಬಾ ಅಭಿರುಚಿಯಿಂದ ಹಾಗೂ ನಿಷ್ಠೆಯಿಂದ ಮಾಡಬೇಕು. ಅಂದಾಗ ಆ ಕೆಲಸದಲ್ಲಿ ಪ್ರಾವೀಣ್ಯತೆ ಪಡೆಯಲು ಸಾದ್ಯ.
ಕೆಲಸ ಯಾವುದೇ ಇರಲಿ ಆ ಕೆಲಸದ ಮೇಲೆ ಸಂಪೂರ್ಣವಾಗಿ ಶೃದ್ಧೆ ಇರಬೇಕು. ಅಂದಾಗ ಅಲ್ಲಿ ಮನಸ್ಸಿನಿಂದ ಕಾರ್ಯಗಳು ಸಾಧಿಸುತ್ತವೆ. ಹಾಗೂ ಜೊತೆಗೆ ಆ ಕೆಲಸಗಳು ಇನ್ನೊಬ್ಬರನ್ನು ಆಕರ್ಷಿಸುತ್ತವೆ. ಹೋಟೆಲ್ ನಲ್ಲಿ ಮಹಿಳಾ ವೆಟ್ರೆಸ್ ಒಬ್ಬಳು ಟೇಬಲ್ ಕ್ಲಾತ್ ಚೇಂಜ್ ಮಾಡಿದ ಪದ್ಧತಿಯನ್ನು ನೋಡಿದರೆ ನೀವು ಆಶ್ಚರ್ಯ ಪಡುತ್ತೀರಿ. ಈ ಮಹಿಳೆ ತನ್ನ ಕೆಲಸದಲ್ಲಿ ಎಷ್ಟೊಂದು ಪರಿಣಿತಳಾಗಿದ್ದಾಳೆ ಎಂಬುದು ಸ್ಪಷ್ಟವಾಗಿ ಕಂಡು ಬರುತ್ತದೆ. ಬೇರೆ ಯಾರಾದರೂ ಈ ಕೆಲಸ ಮಾಡಿದ್ದಾದರೆ ಕಡಿಮೆ ಎಂದರೆ 10 ನಿಮಿಷಗಳಾದರೂ ಬೇಕಾಗುತ್ತಿತ್ತು. ಆದರೆ ಈ ಮಹಿಳೆ ಅದೇ ಕೆಲಸವನ್ನು ಬರೀ 10 ಕ್ಷಣಗಳಲ್ಲಿ ಮಾಡಿ ಮುಗಿಸಿದ್ದಾಳೆ ಅದು ಸಹ ಆಯಾಸವಾಗದೆ.
ನೋಡಿ ಈ ವಿಡಿಯೋ…
View this post on Instagram