10,000 ಕೋಣೆಗಳಿರುವ ಈ ಹೋಟೆಲಿಗೆ ಕಳೆದ 72 ವರ್ಷಗಳಲ್ಲಿ ಒಬ್ಬ ಗ್ರಾಹಕನೂ ಲಭಿಸಿಲ್ಲ!

ದುರ್ದೈವವು ಯಾವಾಗ ಎಲ್ಲಿ, ಹೇಗೆ, ವಕ್ಕರಿಸುವದು ಹೇಳಲಿಕ್ಕೆ ಸಾಧ್ಯವಿಲ್ಲ. ಜಗತ್ತಿನಲ್ಲಿ ಅನೇಕ ಸ್ಥಳಗಳು, ಅನೇಕ ವಾಸ್ತುಗಳು ತುಂಬಾ ಭವ್ಯವಾಗಿ, ದಿವ್ಯವಾಗಿ, ಮನಮೋಹಕವಾಗಿದ್ದರೂ ಹಿಂದೆಯಾದ ಯಾವುದೋ ಘಟನೆಗಳ ಕಾರಣದಿಂದ ಇಂದಿಗೂ ಬಿಕೋ ಎನ್ನುತ್ತಿವೆ. ಜನರು ಅಂಥ ವಾಸ್ತುಗಳನ್ನು ನೋಡಲು, ಅಥವಾ ಅಲ್ಲಿ ತಿರುಗಾಡಲು, ಸುತ್ತಾಡಲು ಹೋಗುವುದೇ ಇಲ್ಲ. ಇಲ್ಲಿ ಉಲ್ಲೇಖಿಸುತ್ತಿರುವ ‘ಪ್ರೊರಾ’ ಹೆಸರಿನ ಒಂದು ಹೋಟೆಲ್ ಕಳೆದ ಏಳು ದಶಕಗಳಿಂದ ಗ್ರಾಹಕರ ಬರುವಿಗಾಗಿ ಕಾಯುತ್ತ ನಿಂತಿದೆ.

ಇಲ್ಲಿ ಮಾಹಿತಿಯನ್ನು ನೀಡುತ್ತಿರುವ ಹೋಟೆಲ್ ಬಗ್ಗೆ ನಂಬಬೇಕೊ ಬಿಡಬೇಕೋ ಎಂಬ ಕಟ್ಟು ಕಥೆಗಳು ತುಂಬಾ ಜಾರಿಯಲ್ಲಿವೆ. ಯಾಕೆಂದರೆ ಈ ಹೋಟೆಲಿಗೆ ಸಂಬಂಧಿಸಿದಂತೆ ಅನೇಕ ರಹಸ್ಯಗಳಿವೆ. ಕೆಲವರು ನಂಬಿದರೆ ಕೆಲವರು ಸುಳ್ಳು ಎಂದು ತಿಳಿಯುತ್ತಾರೆ. ಕಾರಣ ಆ ಬಗ್ಗೆ ಯಾವುದೇ ಸಾಕ್ಷ್ಯಧಾರಗಳಿಲ್ಲ. ಇಷ್ಟೆಲ್ಲ ಇದ್ದರೂ ಜನ ಮಾತ್ರ ಇದರ ಬಗ್ಗೆ ಆಕರ್ಷಣೆ ಹೊಂದಿಲ್ಲ.

ಇಂಥ ಬೃಹತ್ ಹೋಟೆಲು ಬಾಲ್ಟಿಕ್ ಸಮುದ್ರದ ದಡದಲ್ಲಿ ಜರ್ಮನ್ ಆಯ್ ಲ್ಯಾಂಡ್ ರುಗೆನ್ ನಲ್ಲಿದೆ. ಇದಕ್ಕೆ ಬೃಹತ್ ಎನ್ನುವ ಹಿಂದಿನ ಕಾರಣ ಏನೆಂದರೆ, ಈ ಹೋಟೆಲಿನಲ್ಲಿ ಒಟ್ಟು 10,000 ಕೋಣೆಗಳಿವೆ. ಇಷ್ಟಿದ್ದರೂ ಹೋಟೆಲಿಗೆ ಯಾವ ಶಾಪ ತಟ್ಟಿದೆಯೋ ಏನೋ ಒಬ್ಬರು ಗಿರಾಕಿಗಳು ಇತ್ತ ಕಡೆಗೆ ಹಾಯುವುದಿಲ್ಲ.

ಈ ಹೋಟೆಲಿನ ಬಗ್ಗೆ ಇನ್ನೊಂದು ಮಹತ್ವದ ಮಾಹಿತಿ ಎಂದರೆ ಜಗತ್ತಿನ ಸರ್ವಾಧಿಕಾರಿ ರಾಜರಲ್ಲಿ ಒಬ್ಬನಾದ ‘ನಾಜಿ’ ತಯಾರಿಸಿದ ಈ ಹೊಟೇಲು ಇದಾಗಿದೆ. ನಾಜಿಯು ಈ ಹೊಟೇಲನ್ನು ಸುಮಾರು 1936 ರಿಂದ 1939 ರ ಕಾಲಘಟ್ಟದಲ್ಲಿ ತಯಾರಿಸಿದ್ದಾನೆ.

ನಾಜಿಯು ಈ ಹೊಟೇಲನ್ನು ತಯಾರಿಸಿದ ಹಿಂದಿನ ಕಾರಣವು ಸಹಿತ ಅಷ್ಟೇ ರೋಚಕವಾಗಿದೆ. ಜರ್ಮನಿಯ ಈ ರಾಜ ತನ್ನ ಸರ್ವಾಧಿಕಾರಿಗೆ ಪ್ರಸಿದ್ಧನಾಗಿದ್ದನು. ಈತ ತನ್ನ ಜೀವನದ ಸುಮಧುರ ಕ್ಷಣಗಳನ್ನು ಅನುಭವಿಸಲಿಕ್ಕಾಗಿ ಹಾಗೂ ಅದರ ಜೊತೆಗೆ ದೇಶದ ಮೇಲಿನ ತನ್ನ ವರ್ಚಸ್ವವನ್ನು ಶಾಶ್ವತವಾಗಿ ಉಳಿಸಿಕೊಳ್ಳುವುದಕ್ಕಾಗಿ ತಯಾರಿಸಿದ್ದನು. ಜರ್ಮನ್ ಕೆಲಸಗಾರರು ತಮ್ಮ ಬಿಡುವಿನ ಸಮಯವನ್ನು ಈ ಹೋಟೆಲಿನಲ್ಲಿ ತೆಗೆಯುವುದಕ್ಕೆ ಅದೇ ಸಂದರ್ಭದಲ್ಲಿ ನಾಜಿ ತನ್ನ ವಿಚಾರಧಾರೆಯಲ್ಲಿ ಅವರಿಗೂ ಶಾಮೀಲು ಮಾಡಿಕೊಳ್ಳುವ ಉದ್ದೇಶವನ್ನು ಮುಂದಿಟ್ಟುಕೊಂಡು ಈ ಹೊಟೇಲನ್ನು ತಯಾರಿಸಲಾಗಿತ್ತು.

ಈ ಹೋಟೆಲ್ ಸಮುದ್ರದ ಬೀಚ್ ನಿಂದ 150 ಮೀಟರ್ ಅಂತರದಲ್ಲಿದೆ. ಈ ಕಾಂಪ್ಲೆಕ್ಸ್ ನಲ್ಲಿ 8 ಬೇರೆ ಬೇರೆ ಕಟ್ಟಡಗಳಿವೆ. ಅವುಗಳ ಅಗಲ ಒಟ್ಟು 4.5 ಕಿಲೋಮೀಟರ್ ಇದೆ.

1990 ರಲ್ಲಿ ಜರ್ಮನಿಯ ಏಕೀಕರಣವಾದ ನಂತರ ಇಲ್ಲಿಯವರೆಗೆ ಈ ಬ್ರಹತ್ ಹೋಟೆಲ್ ಖಾಲಿಯೇ ಇದೆ. ಹೋಟೆಲಿನ ನಿರ್ಮಿತಿಯಾಗಿ 70 ವರ್ಷಗಳು ಕಳೆದಿವೆ. ಸಾಗರದ ಕರಾವಳಿಯಲ್ಲಿ ನಿಂತಿರುವ ಹೊಟೇಲಿನ ಪ್ರತಿಯೊಂದು ಕೋಣೆಯಿಂದ ಸಮುದ್ರದ ವಿಹಂಗಮ ನೋಟವನ್ನು ಕಾಣಬಹುದು.

ಇನ್ನು ಈ ಹೋಟೆಲಿನಲ್ಲಿರುವ ಸೌಲಭ್ಯಗಳ ಬಗ್ಗೆ ಹೇಳುವುದಾದರೆ, ಚಲನಚಿತ್ರ ಮಂದಿರ, ಸ್ವಿಮ್ಮಿಂಗ್ ಪೂಲ್ ಮತ್ತು ಕಾರ್ಯಕ್ರಮಗಳಿಗಾಗಿ ದೊಡ್ಡ ದೊಡ್ಡ ಹಾಲ್ ಗಳು ಹೀಗೆ ಎಲ್ಲಾ ಸೌಲಭ್ಯಗಳಿಂದ ಕೂಡಿಕೊಂಡಿದೆ.

ಯುದ್ಧದ ಸಂದರ್ಭದಲ್ಲಿ ಹುಂಬರ್ಗ್ ನ ಅನೇಕ ಜನರು ಇಲ್ಲಿ ವಾಸ್ತವ್ಯಕ್ಕೆ ಬಂದಿದ್ದರು. ಯುದ್ಧದ ನಂತರ ‘ಪ್ರೋರಾ’ ಹೊಟೇಲಿನ ಉಪಯೋಗವನ್ನು ಪೂರ್ವ ಜರ್ಮನಿಯ ಸೈನ್ಯವು ಸೈನಿಕರ ಔಟ್ ಪೋಸ್ಟ್ ಸಲುವಾಗಿ ಉಪಯೋಗಿಸಿದರು.

ಗ್ರಾಹಕರೇ ಬರದ ಕಾರಣ ಮತ್ತು ವ್ಯವಸ್ಥೆಯೂ ಇಲ್ಲದ ಕಾರಣ ಹೊಟೇಲಿನ ಸದ್ಯದ ಪರಿಸ್ಥಿತಿ ತುಂಬಾನೇ ಹದಗೆಟ್ಟು ಹೋಗಿದೆ. ಈಗ ಒಂದು ವೇಳೆ ಗ್ರಾಹಕರು ಹೋಗಬೇಕೆಂದರೂ ಅಲ್ಲಿಯ ಹೊಟೇಲಿನ ಅವಸ್ಥೆಯನ್ನು ನೋಡಿ ಯಾರು ನಿಲ್ಲಲಾರರು. ಹೊಟೇಲಿನ ನವೀಕರಣ ಆಗದ ಹೊರತು ಗ್ರಾಹಕರು ಅಲ್ಲಿ ಹೆಜ್ಜೆ ಇಡುವುದು ಅಸಾಧ್ಯ.

ಈ ಹೋಟೆಲಿನ ತಯಾರಿಕೆಯಲ್ಲಿ ಜರ್ಮನಿ ದೇಶದ ಅತಿ ದೊಡ್ಡ ಕಂಪನಿಯ ಸಹ ಭಾಗವಿತ್ತು. ಇಂಥ ದೊಡ್ಡದಾದ ಬೃಹತ್ ಕಟ್ಟಡವನ್ನು ನಿರ್ಮಿಸುವುದಕ್ಕಾಗಿ 9 ಸಾವಿರ ಕೆಲಸಗಾರರು ಶ್ರಮಪಟ್ಟರು. ಎರಡನೆಯ ಮಹಾಯುದ್ಧದ ನಂತರ ಪ್ರೋರಾ ಹೊಟೇಲಿನ ಕೆಲಸವನ್ನು ತಾತ್ಕಾಲಿಕವಾಗಿ ನಿಲ್ಲಿಸಿ ಕೆಲಸಗಾರರನ್ನು ಶಸ್ತ್ರಗಳನ್ನು ತಯಾರಿಸುವ ಕಾರ್ಖಾನೆಗೆ ರವಾನಿಸಲಾಯಿತು. ಹೀಗಾಗಿ ಈ ಪ್ರೊಜೆಕ್ಟ್ ಆಗ ಅರ್ಧಕ್ಕೆ ನಿಂತಿತು. ಸದ್ಯದ ಸಮಯದಲ್ಲಿಯಂತೂ ಈ ಹೊಟೇಲಿನ ಅವಸ್ಥೆಯು ತುಂಬಾ ದುರವಸ್ಥೆಯಲ್ಲಿದೆ.

ಇಷ್ಟಾದರೂ ಸರಕಾರ ಈ ಹೋಟೆಲ್ ನ್ನು ಯಾವುದಾದರೂ ಖಾಸಗಿ ಹೂಡಿಕೆದಾರರಿಗೆ ಕೊಟ್ಟು ಭವ್ಯವಾದ ರೆಸಾರ್ಟ್ ನಲ್ಲಿ ಬದಲಿಸುವ ವಿಚಾರ ನಡೆದಿದೆ. ಯಾಕೆಂದರೆ ಈ ಸ್ಥಳ ಸುಂದರವಾದ ಸಮುದ್ರ ತೀರವನ್ನು ಹೊಂದಿರುವದರಿಂದ ಅನೇಕ ಡೆವಲಪರ್ಸ್ ಗಳು ಹಾಲಿಡೇ ಅಪಾರ್ಟ್ ಮೆಂಟ್ ತಯಾರಿಸುವ ಯೋಚನೆಯಲ್ಲಿ ಇದ್ದಾರಂತೆ.

70 ವರ್ಷಗಳಾದರೂ ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿರುವ ಈ ಹೋಟೆಲವು ರೆಸಾರ್ಟ್ ಅಥವಾ ದೊಡ್ಡ ದೊಡ್ಡ ಅಪಾರ್ಟ್ ಮೇಂಟ್ ಗಳಲ್ಲಿ ಬದಲಾವಣೆ ಮಾಡಿದಾಗಲಾದರೂ ಜನರು ಬರುತ್ತಾರೋ ಅಥವಾ ಇಲ್ಲ ಕಾದು ನೋಡಬೇಕಷ್ಟೇ.