1009 ಸಲ ವಿಫಲತೆ ಬಂದರೂ 65 ನೇ ವಯಸ್ಸಿಗೆ ಶುರು ಮಾಡಿದ ಬ್ಯುಸಿನೆಸ್ ನಿಂದ ಯಶಸ್ವಿ ಕಂಡ ವ್ಯಕ್ತಿ ಇವರು! ಈಗ ಜಗತ್ತೇ ಸಲ್ಯೂಟ್ ಹೇಳುತ್ತೆ!

ಯಾವುದೇ ವ್ಯವಸಾಯ ಪ್ರಾರಂಭಿಸಲು ಮೊದಲು ಬೇಕು ಹಣ. ಈ ಹಣದ ಜೊತೆಗೆ ಹದಿ ಹರೆಯದ ವಯಸ್ಸು ಬೇಕು ಎಂದರೆ ಶುದ್ಧ ತಪ್ಪು. ಯಾಕೆಂದರೆ ವ್ಯವಸಾಯ ಪ್ರಾರಂಭಿಸಲು ಯೌವ್ವನವೇ ಬೇಕು ಅಂತಲ್ಲ, ಮಾಡಿಯೇ ತೀರುತ್ತೇನೆ ಎಂಬ ಹುಮ್ಮಸ್ಸು ಛಲ ಮನುಷ್ಯನಲ್ಲಿ ಬೇಕು, ಇದು ತುಂಬಾ ಮುಖ್ಯ ಅಂದಾಗ ವ್ಯವಸಾಯದಲ್ಲಿ ಯಶಸ್ಸು ಕಾಣಲು ಸಾಧ್ಯ. ಆದರೆ ಇಲ್ಲಿ ಒಬ್ಬರು ವ್ಯಕ್ತಿ ತಮ್ಮ 60 ವಯಸ್ಸು ದಾಟಿದ ಮೇಲೆ ವ್ಯವಸಾಯ ಶುರು ಮಾಡಿ ಅದರಲ್ಲಿ ಯಶಸ್ಸು ಕಂಡ ಸುಂದರ ನೈಜ ಕಥೆ ಈ ಲೇಖನದಲ್ಲಿ ತಂದಿದ್ದೇವೆ, ನೋಡಿ ಮತ್ತು ಒಮ್ಮೆ ಓದಿ.

ವ್ಯಕ್ತಿಯ ಹೆಸರು ಕರ್ನಲ್ ಸ್ಯಾಂಡರ್ಸ್ (Colonel Sanders).ನಿಮಗೆ ಗೊತ್ತಿದೆಯೇ ಇಲ್ಲವೋ ಇವರೇ KFC ಚಿಕನ್ ಫೌಂಡರ್. ಇವರ ಕಥೆ ನಿಜವಾಗಿಯೂ ಒಂದು ಚಲನಚಿತ್ರದಲ್ಲಿ ಹಣೆಯುವ ಕಥೆಯ ಹಾಗಿದೆ. ಚಿತ್ರದ ನಾಯಕ ಏನೇ ವಿಚಾರ ಮಾಡಲಿ ಅದನ್ನು ಮಾಡಿಯೇ ತಿರುತ್ತಾನಲ್ಲ ಹಾಗೆ. ಯಾವುದೇ ಒಂದು ಕೆಲಸಕ್ಕೆ ಎಷ್ಟೇ ಅಡತಡೆಗಳು ಬರಲಿ, ಅಪಯಶ ಬರಲಿ, ನಟನಿಗೆ ಮಾತ್ರ ಕೊನೆಗೆ ಯಶಸ್ಸು ಕಟ್ಟಿಟ್ಟ ಬುತ್ತಿ ಹಾಗೆ.

ವಾಸ್ತವಿಕವಾಗಿ ಅರವತ್ತು ದಾಟಿದ ಮೇಲೆ ನಮ್ಮ ಕಡೆಗೆ ಅರಳು ಮರಳು ಎನ್ನುತ್ತಾರೆ. ವ್ಯಕ್ತಿಯ ವೇಗವು ಮಂದವಾಗುತ್ತದೆ. ಆದರೆ ಕರ್ನಲ್ ಸ್ಯಾಂಡರ್ಸ್ ಅವರು ತಮ್ಮ 65 ವಯಸ್ಸಿನ ನಂತರ ವ್ಯವಸಾಯವನ್ನು ಶುರುಮಾಡಿದರು. ನೋಡನೋಡುತ್ತ ಚಿಕನ್ ಪ್ರೇಮಿಗಳ ಚಿಕನ್ ತಿನ್ನುವ ಪದ್ಧತಿಯನ್ನೇ ಬದಲಿಸಿಬಿಟ್ಟರು. ಇವರ ತರ್ಕ, ಕೆಲಸ ಮಾಡುವ ಪದ್ಧತಿ ಮತ್ತು 65ನೇ ವಯಸ್ಸಿನಲ್ಲಿಯ ಹುಮ್ಮಸ್ಸು ನೋಡಿದರೆ ಬೇಂದ್ರೆಯವರು ಹೇಳಿದ ‘ಮರಳಿ ಅರಳು’ ಎನ್ನುವ ಮಾತನ್ನು ಚಾಚೂತಪ್ಪದೆ ಪಾಲಿಸಿದ್ದಾರೆನೋ ಎನಿಸುತ್ತದೆ.

ಕರ್ನಲ್ ಸ್ಯಾಂಡರ್ಸ್ ಅವರು ಶುರುಮಾಡಿದ ಈ ವ್ಯವಸಾಯ ನಿಧಾನವಾಗಿ ಬೆಳೆದು KFC ಹೆಸರಿನಿಂದ ಇಂದು ಜಗತ್ತಿನ ತುಂಬೆಲ್ಲ ಪ್ರಸಿದ್ಧಿ ಪಡೆದಿದೆ. ಇದು ಕರ್ನಲ್ ಸ್ಯಾಂಡರ್ಸ್ ಅವರು ತಮ್ಮ 65ನೇ ವಯಸ್ಸಿನಲ್ಲಿ ಶುರು ಮಾಡಿದ ವ್ಯವಸಾಯ ವಾಗಿದೆ.

ಸ್ಯಾಂಡರ್ಸ್ ಅವರ ಬಗ್ಗೆ ಹೇಳುವುದಾದರೆ ಇವರು ಚಿಕ್ಕವರಿರುವಾಗಲೇ ಇವರ ತಂದೆ ತೀರಿಕೊಂಡರು. 1906 ರಲ್ಲಿ ಹದಿನಾರನೇ ವರ್ಷಕ್ಕೆ ಸೇನೆಯಲ್ಲಿ ವಯಸ್ಸಿನ ಸುಳ್ಳು ದಾಖಲೆಯನ್ನು ನೀಡಿ ಭರ್ತಿಯಾದರು. ಇದಾದ ಒಂದು ವರ್ಷದಲ್ಲಿ ಅವರು ಸೇನೆಯಿಂದ ಹೊರಬಿದ್ದರು. ಮುಂದೆ 20ನೇ ವರ್ಷಕ್ಕೆ ಅವರ ಹೆಂಡತಿಯು ಮಕ್ಕಳನ್ನು ತೆಗೆದುಕೊಂಡು ಸ್ಯಾಂಡರ್ಸ್ ಅವರಿಗೆ ಒಬ್ಬಂಟಿಗನನ್ನಾಗಿ ಬಿಟ್ಟುಹೋದಳು.

ಈ ಮಧ್ಯೆ ತಮ್ಮ ಉಪಜೀವನ ಸಾಗಿಸುವ ಸಲುವಾಗಿ ಸ್ಯಾಂಡರ್ಸ್ ಅವರು ಅನೇಕ ಕೆಲಸಗಳನ್ನು ಮಾಡಿದರು. ಇವುಗಳಲ್ಲಿ ಟೈಯರ್ ಗಳನ್ನು ಮಾರುವುದು, ಮೋಟಾರ್ ನಡೆಸುವುದು, ಎಂಜಿನ್ ನಡೆಸುವುದು ಹೀಗೆ ಅನೇಕ ಚಿಕ್ಕಪುಟ್ಟ ಕೆಲಸಗಳನ್ನು ಮಾಡತೊಡಗಿದರು. ಇವುಗಳೆಲ್ಲ ಮಾಡಿದ ನಂತರ ಮುಂದೆ ಕೆಂಟುಕಿ ಪಟ್ಟಣದಲ್ಲಿ ಕಾರ್ಬಿನ್ ಪರಿಸರದಲ್ಲಿಯ ಸರ್ವಿಸ್ ಸ್ಟೇಷನ್ ನಲ್ಲಿ ಕುಕಿಂಗ್ ಕೆಲಸ ದೊರೆಯಿತು.

ಸ್ಯಾಂಡರ್ಸ್ ಅವರು ಮಾಡಿದ ವಿವಿಧ ಪದಾರ್ಥಗಳು ಅಲ್ಲಿಯ ಜನರಿಗೆ ತುಂಬಾ ಹಿಡಿಸಿದವು. ಹೀಗಾಗಿ ಆ ಸರ್ವಿಸ್ ಸ್ಟೇಷನ್ ಹೊಟೆಲ್ ನಲ್ಲಿ ಬದಲಾಯಿತು. ಸ್ಯಾಂಡರ್ಸ್ ಅವರು ಅಡುಗೆ ಮಾಡುವಾಗ ವಿವಿಧ ರೀತಿಯ ಪ್ರಯೋಗಗಳನ್ನು ಮಾಡುತ್ತಿದ್ದರು. ಇದರಿಂದ ಹೊಸ ಹೊಸ ಪಾಕ ಕೃತಿಗಳ ಬಗ್ಗೆ ತಿಳಿದುಕೊಳ್ಳಲು ಆರಂಭಿಸಿದರು. ಹೀಗೆ ಮಾಡುತ್ತಾ 1939 ರಲ್ಲಿ ಚಿಕನ್ ನಲ್ಲಿ ಹೊಸ ಪದ್ಧತಿಯ ಡಿಶ್ ತಯಾರಿಸಿದರು.

65ನೇ ವರ್ಷಕ್ಕೆ ಅವರು ರಿಟೈರ್ ಆದರು. ಸರಕಾರ ಅವರಿಗೆ 105 ಡಾಲರ್ ಗಳ ಚೆಕ್ ಕೊಟ್ಟರು. ಆಗ ಒಂದು ಮರದ ಕೆಳಗೆ ಕುಳಿತು ತನ್ನ ಕಡೆ ಇರುವ ಹಣದ ಬಗ್ಗೆ ವಿಚಾರ ಮಾಡುತ್ತಿದ್ದರು. ತನ್ನ ಹತ್ತಿರವಿರುವ ಈ ಹಣ ಅವರ ದೃಷ್ಟಿಯಲ್ಲಿ ಏನು ಇಲ್ಲ ಎಂಬಂತೆ ಆಗಿತ್ತು. ಆದರೆ ಅವರ ಹತ್ತಿರ ಪಾಕಕಲೆ ಇತ್ತು. ಇದರಿಂದ ಅವರು ಮನಸ್ಸಿಗೆ ಹೇಳಿಕೊಂಡರು, ಆಯುಷ್ಯವು ಇನ್ನು ತುಂಬಾ ಜಾಸ್ತಿ ಇದೆ ಆದ್ದರಿಂದ ಏನಾದರೂ ಹೊಸದೊಂದು ವ್ಯವಸಾಯವನ್ನು ಶುರು ಮಾಡಲೇಬೇಕು ಎಂದು ನಿಶ್ಚಯಿಸಿದರು.

ಸ್ಯಾಂಡರ್ಸ್ ಅವರು ತಮ್ಮ ಚೆಕ್ ನಲ್ಲಿಂದ 87 ಡಾಲರ್ಗಳನ್ನು ತೆಗೆದು ಅದರಿಂದ ಮನೆಮನೆಗೆ ಹೋಗಿ ಫ್ರೈಡ್ ಚಿಕನ್ ಮಾರಲು ಶುರುಮಾಡಿದರು. ತಮ್ಮ ಪರಿಸರದಲ್ಲಿ ಎಲ್ಲ ರೆಸ್ಟೋರೆಂಟ್ ಗಳಲ್ಲಿ ಅವಕಾಶವನ್ನು ಬೇಡಿದರು. ಆದರೆ ಯಾರೂ ಅವರನ್ನು ತಮ್ಮ ಹತ್ತಿರ ತೆಗೆದುಕೊಳ್ಳಲಿಲ್ಲ. ಸುಮಾರು 1009 ಬಾರಿ ಅವರು ಬೇಡ ಎನ್ನುವ ಶಬ್ದವನ್ನು ಕೇಳಿದರು. ಇಷ್ಟೊಂದು ಸಲ ಬೇಡ ಎನ್ನುವ ಶಬ್ದವನ್ನು ಸೆಂಡರ್ಸ್ ಅವರು ಶಾಂತ ಮನಸ್ಸಿನಿಂದ ಕೇಳಿದರು ಮತ್ತೆ ಇನ್ನೊಂದು ಬಾರಿ ಎನ್ನುತ್ತಾ ಕೆಲಸ ಶುರು ಮಾಡುತ್ತಿದ್ದರು. ಕೊನೆಗೂ ಒಬ್ಬ ಹೋಟೆಲ್ ಮಾಲಿಕ ಅವರನ್ನು ಸ್ವಾಗತಿಸಿದ. ಪೆಟ್ ಹರ್ಮನ್ ಹೆಸರಿನ ಮಾಲೀಕ ತನ್ನ ಸ್ವಂತದ ಹೊಟೆಲ್ ನಲ್ಲಿ ಸ್ಯಾಂಡರ್ಸ್ ಜೊತೆಗೆ ಪಾಲುದಾರಿಕೆ ಮಾಡಿಕೊಳ್ಳಲು ಒಪ್ಪಿದನು. ಮತ್ತು ಚಿಕನ್ ಗೆ ಕೆಂಟುಕಿ ಫ್ರೈಡ್ ಚಿಕನ್ ಎಂದು ನಾಮಕರಣ ಮಾಡಿದರು.

ಆ ನಂತರ ಸ್ಯಾಂಡರ್ಸ್ ಅವರು ಎಂದಿಗೂ ಹೊರಳಿ ಹಿಂದೆ ನೋಡುವ ಸಮಸ್ಯೆ ಬರಲಿಲ್ಲ. 1964 ರ ವರೆಗೆ ಅಮೆರಿಕದ 600 ಕಿಂತ ಹೆಚ್ಚು ಹೋಟೆಲ್ ಗಳಲ್ಲಿ KFC ಚಿಕನ್ ಮಾರಲಾಗುತ್ತಿತ್ತು.

ಕಂಪನಿ ಯಾವಾಗ ಜನಪ್ರಿಯತೆಯನ್ನು ಪಡೆಯಿತು ಆಗ ಸ್ಯಾಂಡರ್ಸ್ ಅವರು ಕಂಪನಿಯ ಮಾಲೀಕತ್ವದ ಹಕ್ಕನ್ನು 1965 ರಲ್ಲಿ ಎರಡು ಮಿಲಿಯನ್ ಡಾಲರ್ ಗೆ ವಿಕ್ರಿ ಮಾಡಿದರು. ಅಲ್ಲಿಂದ ಅವರು KFC ಬ್ರಾಂಡ್ ಅಂಬಾಸಿಡರ್ ಆಗಿ ಉಳಿದರು. KFC ಯ ಲೋಗೋದ ಮೇಲೂ ಅವರದೇ ಮುಖ ಹೊಳೆಯುತ್ತಿರುವುದು ಈಗಲೂ ಕಂಡುಬರುತ್ತದೆ. ಸ್ಯಾಂಡರ್ಸ್ ಅವರು ತಮ್ಮ 88 ನೇ ವಯಸ್ಸಿಗೆ ಅರಬ್ ಪತಿ ಯಾಗಿದ್ದರು.

ಸ್ಯಾಂಡರ್ಸ್ ಅವರು ಕೆನಡಾದಲ್ಲಿರುವ ತಮ್ಮ ರೆಸ್ಟೋರೆಂಟ್ ನ್ನು ತಮ್ಮ ಮಾಲಿಕತ್ವದಲ್ಲಿಯೇ ಇಟ್ಟುಕೊಂಡರು. ಹಾಗೆ ಆಯುಷ್ಯಪೂರ್ತಿ 75000 ಡಾಲರ್ಸ್ಲ ಗಳನ್ನು ನೀಡುವ ಕರಾರನ್ನು ಸಹ ಆ ಸಮಯದಲ್ಲಿ ಮಾಡಲಾಯಿತು. ವಯಸ್ಸಿನ ಅರವತ್ತರ ನಂತರ ಈ ರೀತಿಯಾಗಿ ಯಶಸ್ಸಿನ ಶಿಖರದ ಮೇಲೆ ಸ್ಯಾಂಡರ್ಸ್ ಅವರು ಏರಿದರು ಎಂದರೆ ಯಾರಿಗೂ ಅಷ್ಟು ಬೇಗ ವಿಶ್ವಾಸ ಮೂಡಲಿಕ್ಕಿಲ್ಲ. ಅಂದರೆ ಸ್ಯಾಂಡರ್ಸ್ ಅವರು ಇದನ್ನು ಮಾಡಿ ತೋರಿಸಿದರು.

ವ್ಯಕ್ತಿಗೆ ಒಂದುವೇಳೆ ಇಳಿ ವಯಸ್ಸಿನಲ್ಲಿ ಅಥವಾ ವಯಸ್ಸಿನ ಯಾವುದೇ ಘಟ್ಟದಲ್ಲಿ ಏನು ಮಾಡಲು ಸಾಧ್ಯವಾಗದಿದ್ದಾಗ ಸ್ಯಾಂಡರ್ಸ್ ಅವರ ಸಾಧನೆಯ ಕಥೆಯನ್ನು ಒಂದು ಸಲ ಓದಲೇಬೇಕು. ಇವರ ಸಾಧನೆ ನಿಜವಾಗಿಯೂ ಒಂದು ಹೊಸ ಶಕ್ತಿಯನ್ನು ಊರ್ಜೆಯನ್ನು ನೀಡುತ್ತದೆ. ಮೊದಲ ಬಾರಿಗೆ ಯಶಸ್ಸು ಬರುತ್ತದೆ ಅಂತ ಅಲ್ಲ. ಮಾಡುವ ಕೆಲಸಗಳಲ್ಲಿ ಸೋಲು ಬಂದೇ ಬರುತ್ತವೆ. ಅವುಗಳನ್ನು ನುಂಗಿ ಪಚನ ಮಾಡುವಂಥ ಶಕ್ತಿ ನಾವು ಹೊಂದಿರಬೇಕಾಗುತ್ತದೆ. ಇದು KFC ಮಾಲೀಕ ಸ್ಯಾಂಡರ್ಸ್ ಅವರು ತಿಳಿಸಿ ಕೊಟ್ಟರು.