12 ವರ್ಷದ ಹುಡುಗ ಕಾಡಿನಲ್ಲಿ ಸುತ್ತಾಡಲು ಹೋದಾಗ ಇದ್ದಕ್ಕಿದ್ದಂತೆ ಕರಡಿ ಬೆನ್ನಟ್ಟಲು ಪ್ರಾರಂಭಿಸಿತು! ಆನಂತರ ಏನಾಯಿತು ನೋಡಿದ ಎಲ್ಲರಿಗೂ ಆಶ್ಚರ್ಯ! ವಿಡಿಯೋ ನೋಡಿ

ಅರಣ್ಯದಲ್ಲಿ ಸುತ್ತಾಡಲು ಹೋದ 12 ವರ್ಷದ ಹುಡುಗನಿಗೆ ಆಕಸ್ಮಿಕ ಕರಡಿ ಹಿಂಬಾಲಿಸುತ್ತಿರುವ ವಿಡಿಯೋ ವೈರಲ್! ಮುಂದೇನಾಯಿತು ನೋಡಿ.

ಸೋಶಿಯಲ್ ಮಿಡಿಯಾದಲ್ಲಿ 12 ವರ್ಷದ ಹುಡುಗನ ಒಂದು ವಿಡಿಯೋ ಸಖತ್ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಒಂದು ಹುಡುಗ ಅರಣ್ಯದಲ್ಲಿ ಬೆಟ್ಟದಿಂದ ಇಳಿದು ಬರುತ್ತಿದ್ದಾನೆ, ಅದೇ ಸಮಯಕ್ಕೆ ಸರಿಯಾಗಿ ಒಮ್ಮೆಲೇ ಆತನನ್ನು ದೊಡ್ಡದಾದ ಕರಡಿಯೊಂದು ಹಿಂಬಾಲಿಸುತ್ತಿರುವದು ಗಮನಕ್ಕೆ ಬಂದಿದೆ. ಹುಡುಗನ ಹೆಸರು ಎಲೆಸೆಂಡ್ರೋ ಇದ್ದು ಈತ ಇಟಲಿಯ ನಿವಾಸಿಯಾಗಿದ್ದಾನೆ. ಈತ ತನ್ನ ಕುಟುಂಬದ ಜೊತೆಗೆ ಉತ್ತರ ಇಟಲಿಯ ಟ್ರೆಂಟಿನೊ ಬೆಟ್ಟಗಳ ಸಾಲಿನಲ್ಲಿ ನಡೆದುಕೊಂಡೇ ಪ್ರವಾಸಕ್ಕೆ ಹೋದಾಗ ಈ ಘಟನೆ ಸಂಭವಿಸಿದೆ. ಡೇಲಿ ಮೇಲ್ ಪ್ರಕಟಿಸಿದ ವೃತ್ತದ ಪ್ರಕಾರ ಈತ ಪ್ರಾಣಿಪ್ರೇಮಿಯಾಗಿದ್ದಾನೆ.

ವೈರಲ್ ವಿಡಿಯೋದಲ್ಲಿ ಕಾಣುವ ಹಾಗೆ ವಿಡಿಯೋ ಶೂಟ್ ಮಾಡುವ ವ್ಯಕ್ತಿ ಎಲೆಸೆಂಡ್ರೋನಿಗೆ, ನಿನ್ನ ಹಿಂದೆ ಒಂದು ಕರಡಿ ಇದ್ದು ಅದು ನಿನ್ನನ್ನು ಹಿಂಬಾಲಿಸುತ್ತಿದೆ ಎಂದು ಹೇಳಿದರು. ಆಗ ಹುಡುಗ ಸ್ವಲ್ಪವೂ ಹೆದರದೆ ಪರಿಸ್ಥಿತಿಯನ್ನು ಸರಳವಾಗಿ ನಿಭಾಯಿಸಿಕೊಂಡಿದ್ದಾನೆ. ಎಲೆಸೆಂಡ್ರೋ ಸಾವಕಾಶವಾಗಿ ಬೆಟ್ಟದ ಇಳಿಜಾರಿನಿಂದ ಸ್ವಲ್ಪವೂ ಅಂಜದೆ ಬರುತ್ತಾನೆ, ಕರಡಿ ಆತನ ಹಿಂದೆ ಬಂದು ಮತ್ತೆ ಸ್ವಲ್ಪ ನಿಲ್ಲುತ್ತದೆ. ಆದರೆ ಹುಡುಗ ಮಾತ್ರ ಸುರಕ್ಷಿತವಾಗಿ ಅಲ್ಲಿಂದ ಕಳಚಿಕೊಳ್ಳುತ್ತಾನೆ.

ಡೇಲಿ ಮೇಲ್ ಪ್ರಕಾರ ಎಲೆಸೆಂಡ್ರೋ ಕರಡಿಗಳ ಬಗ್ಗೆ ಅಭ್ಯಾಸ ಮಾಡುತ್ತಾನೆ. ಮನುಷ್ಯನ ಸಮೀಪ ಬಂದಾಗ ಅವುಗಳ ವ್ಯವಹಾರ ಹೇಗಿರುತ್ತೆ ಎಂಬುದರ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇದೆಯಂತೆ.

ಎಲೆಸೆಂಡ್ರೋನ ಚಿಕ್ಕಪ್ಪ ಲೋಕಲ್ ನ್ಯೂಜ್ ಪೇಪರ ನಲ್ಲಿ ಕೊಟ್ಟ ಸಂದರ್ಶನದ ಪ್ರಕಾರ ಕರಡಿಯ ಆಕಸ್ಮಿಕ ಎಂಟ್ರಿಯಿಂದ ನಿಜವಾಗಿಯೇ ನಾವೆಲ್ಲ ಹೆದರಿದ್ದೆವು ಹಾಗೂ ನಮ್ಮ ಸುತ್ತಮುತ್ತ ಕೆಲವೇ ಜನರಿದ್ದರು. ಎಲೆಸೆಂಡ್ರೋ ನಮ್ಮ ಸಾಮಾನುಗಳನ್ನು ಅಣಿಮಾಡಲು ನಮ್ಮಿಂದ ಕೆಲವೇ ಮೀಟರ್ ಗಳಷ್ಟು ದೂರ ಹೋದಾಗ ಈ ಘಟನೆ ನಡೆಯಿತು. ಸಹಜವಾಗಿಯೇ ನಾವೆಲ್ಲ ತುಂಬಾ ಹೆದರಿ ಬಿಟ್ಟಿದ್ದೆವು, ಆದರೆ ಎಲೆಸೆಂಡ್ರೋ ಮಾತ್ರ ಶಾಂತವಾಗಿಯೇ ಇದ್ದನು.

ಪ್ರಸ್ತುತ ಘಟನೆಯ ಬಗ್ಗೆ ಎಲೆಸೆಂಡ್ರೋ ಹೀಗೆ ಹೇಳುತ್ತಾನೆ. ‘ಅಲ್ಲಿಂದ ನಾನು ಬೇಗ ಬದಿಗೆ ಸರಿಯುವದು ಆವಶ್ಯಕವಾಗಿತ್ತು, ಕಾರಣ ಕರಡಿಗೆ ತಾನು ಗಂಡಾಂತರದಲ್ಲಿದ್ದೀನಿ ಎಂಬ ಭಾವನೆ ಬರುವದು ಬೇಡವಾಗಿತ್ತು. ನಾನು ಅದರ ಕಣ್ಣುಗಳನ್ನು ಸ್ವಲ್ಪವೂ ನೋಡಲಿಲ್ಲ. ಕರಡಿಗೆ ನಾನು ಅದರ ಶತ್ರು ಅಲ್ಲ ಎಂಬ ಭಾವನೆ ಬಂದಿತು’.