10/15 ಜನ ಕ್ಯಾಮೆರಾ ಮೆನ್ ಗಳು ಒಟ್ಟಿಗೆ ಕುಳಿತು ವೇಟ್ ಮಾಡಿ ಸೆರೆ ಹಿಡಿದರು ಹಕ್ಕಿಯ ಭವ್ಯ ನೃತ್ಯದ ಅಮೋಘ ದೃಶ್ಯ!

ನಿಸರ್ಗವು ಅನೇಕ ನಿಗೂಢವಾದ ರಹಸ್ಯಗಳಿಂದ ಅಷ್ಟೆ ಕುತೂಹಲಗಳಿಂದ ತುಂಬಿದೆ. ಇಲ್ಲಿ ಹೆಜ್ಜೆ ಹೆಜ್ಜೆಗೂ ಕುತೂಹಲ ಮೈದುಂಬಿ ಕುಳಿತಿದೆ. ಈ ನಿಸರ್ಗದ ಬಗ್ಗೆ ಜೀವನವಿರುವವರೆಗೂ ಅಭ್ಯಾಸ ಮಾಡಿದರೂ ಸಮುದ್ರದಲ್ಲಿಯ ಒಂದು ಹನಿಯಷ್ಟು ಮಾತ್ರ ತಿಳಿದುಕೊಳ್ಳಬಹುದು ಎಂದೆನಿಸುತ್ತದೆ. ಯಾಕೆಂದರೆ, ಅಷ್ಟೊಂದು ಅಚ್ಚರಿಯಿಂದ ತುಂಬಿದ ಈ ಜಗತ್ತು ಮನುಷ್ಯನಿಗೆ ಹೆಜ್ಜೆ ಹೆಜ್ಜೆಗೆ ಆಶ್ಚರ್ಯವನ್ನು ನೀಡುತ್ತದೆ.

ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಗೆ ನಿಸರ್ಗವು ಒಂದು ರೀತಿಯ ನೈಸರ್ಗಿಕ ಕಲೆಯನ್ನು ನೀಡಿದೆ. ತನ್ನಲ್ಲಿರುವ ಈ ಕಲೆಯಿಂದಾಗಿ ಪ್ರತಿಯೊಂದು ಜೀವಿಯು ನೋಡುಗರಿಗೆ ತುಂಬಾ ಸುಂದರವಾಗಿ ಗೋಚರವಾಗುತ್ತದೆ. ಹೀಗೆ ಹೇಳುವ ಕಾರಣವೆನೆಂದರೆ ಇಲ್ಲಿ ನೀಡಿದ ವಿಡಿಯೋ ನೋಡಿ ಗೊತ್ತಾಗುತ್ತದೆ.

ವಿಡಿಯೋದಲ್ಲಿ ಕಂಡು ಬರುವ ದೃಶ್ಯ ನೋಡಿದರೆ, ನೋಡುಗನ ಮೈ ನವಿರೇಳುತ್ತದೆ. ಇಲ್ಲಿ ಒಟ್ಟು 10 ರಿಂದ 15 ಜನ ಫೋಟೋಗ್ರಾಫರ್ ಗಳು ಕೈಯಲ್ಲಿ ಕ್ಯಾಮೆರಾ ಹಿಡಿದು ಒಂದು ಅಮೋಘ ದೃಶ್ಯವನ್ನು ಸೆರೆ ಹಿಡಿಯಲು ಕುಳಿತಿದ್ದಾರೆ. ಅವರು ಮಾಡಿದ ಈ ಅದ್ಭುತ ಶೂಟ್ ತುಂಬಾ ಸುಂದರವಾಗಿದೆ. ಅವರ ಶೂಟ್ ನಲ್ಲಿ ಕಂಡುಬರುವ ಸುಂದರವಾದ ಹಕ್ಕಿಯೊಂದು ಅದ್ಭುತವಾದ ಹಾಗೂ ಅಷ್ಟೇ ಅಮೋಘವಾದ ನೃತ್ಯವನ್ನು ಸಾದರಪಡಿಸಿದೆ. ಹಕ್ಕಿಯ ಈ ದೃಶ್ಯ ನೋಡಲು ಎರಡು ಕಣ್ಣುಗಳು ಸಾಲವು.

ನೋಡಿ ಈ ವಿಶೇಷ ಹಕ್ಕಿಯ ಸ್ಪೆಷಲ್ ಡಾನ್ಸ್…

ಸೋಶಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ gyan_mohanty_photography ಹೆಸರಿನ ಐಡಿಯಿಂದ ಒಂದು ವಿಡಿಯೋ ಶೇರ್ ಮಾಡಲಾಗಿದೆ. ಪ್ರಸ್ತುತ ಈ ವಿಡಿಯೋ ಯೂಸರ್ ಗಳಿಗೆ ಅದ್ಭುತವಾದ ಅಚ್ಚರಿಯನ್ನು ನೀಡುತ್ತಿದೆ. ಈ ವಿಡಿಯೋದಲ್ಲಿ ಕಂಡು ಬರುತ್ತಿರುವ ಸುಂದರ ಹಕ್ಕಿಯೊಂದು ನೋಡುಗರಿಗೆ ಆಶ್ಚರ್ಯ ಚಕಿತವನ್ನಾಗಿ ಮಾಡಿದೆ. ಹೀಗಾಗಿ ಈ ವಿಡಿಯೋ ಇಲ್ಲಿಯವರೆಗೆ ಲಕ್ಷಾವಧಿ ಸಂಖ್ಯೆಯಲ್ಲಿ ವೀಕ್ಷಣೆಯನ್ನು ಪಡೆದಿದೆ.