17 ವರ್ಷದ ನಂತರ ಕಳೆದ ವರ್ಷ ಸುಶಾಂತ್ ತಲೆ ಮುಂಡನಕ್ಕಾಗಿ ಹೋಗಿದ್ದರು ಬಿಹಾರಕ್ಕೆ, ಸಹೋದರನಿದ್ದಾನೆ ಬಿಜೆಪಿಯ MLA.
ಬಿಹಾರದ ಯುವ ಬಾಲಿವುಡ್ ಸಿನಿತಾರೆ ಸುಶಾಂತ್ ಸಿಂಹ ರಾಜಪೂತ್ ಅವರು ಟಿವಿ ಧಾರಾವಾಹಿ ‘ಪವಿತ್ರ ರಿಷ್ತಾ’ ಮುಖಾಂತರ ಮನೋರಂಜನೆಯ ಜಗತ್ತಿನಲ್ಲಿ ಎಂಟ್ರಿ ಮಾಡಿದರು. ನಂತರ ಬಾಲಿವುಡ್ ಪ್ರವೇಶಿಸಿದ ನಂತರ ಮರಳಿ ಹಿಂದೆ ನೋಡಲಿಲ್ಲ.
ಪಟ್ನಾ: ಬಾಲಿವುಡ್ ಹೆಸರಾಂತ ನಟ ಸುಶಾಂತ್ ಸಿಂಹ ರಾಜಪೂತ್ ಅವರ ಆತ್ಮಹತ್ಯೆಯ ಘಟನೆಯಿಂದ ಸಂಪೂರ್ಣ ಬಾಲಿವುಡ್ ತಣ್ಣಗಾಗಿದೆ. ಬಾಲಿವುಡ್ ದ ಯುವತಾರೆ ಮೂಲ ಬಿಹಾರಿನವರಾಗಿದ್ದರು. ಅವರ ಕುಟುಂಬ ಇನ್ನು ಬಿಹಾರದಲ್ಲಿಯೇ ಇರುತ್ತಾರೆ.
ಪಟ್ನಾ ದಲ್ಲಿಯೇ ಶಾಲಾಜೀವನ.

ಸುಶಾಂತ್ ಅವರು 17 ವರ್ಷದ ಕಾಲಾಂತರದಲ್ಲಿ ಕಳೆದ ವರ್ಷ ಬಿಹಾರಕ್ಕೆ ಹೋಗಿದ್ದರು. ಅಲ್ಲಿ ಅವರು ತಮ್ಮ ತಲೆಯನ್ನು ಮುಂಡನಗೊಳಿಸಿದ್ದರು. ಅವರ ಶಾಲಾಜೀವನ ಪಟ್ನಾ ದಲ್ಲಿಯೇ ಪೂರ್ಣವಾಗಿದೆ. ಪಟ್ನಾದ ಹೆಸರಾಂತ ಶಾಲೆಯೊಂದರಲ್ಲಿ ಶಿಕ್ಷಣ ಪಡೆದಿದ್ದಾರೆ. ಅದರ ನಂತರ ಅವರು ಬಾಲಿವುಡ್ ಕಡೆಗೆ ತಮ್ಮ ದೃಷ್ಟಿ ಬೀರಿದರು. ಸುಶಾಂತ್ ಸಿಂಹ ರಾಜಪೂತ್ ಅವರ ದೊಡ್ಡಪ್ಪನ ಮಗ ಬಿಜೆಪಿಯ MLA ಇದ್ದಾರೆ. ಸುಶಾಂತರ ಸಾವಿನ ಸುದ್ದಿ ಕೇಳಿ ಅವರ ಫ್ಯಾನ್ಸ್ ಗಳು ಒಂದು ಕಡೆ ಶ್ರದ್ಧಾಂಜಲಿ ಕೊಡುತ್ತಿದ್ದಾರೆ. ಹಾಗೆಯೇ ಅಭಿಮಾನಿಗಳು ಬಿಹಾರದಲ್ಲಿಯೇ ಅವರ ನಿವಾಸದ ಕಡೆಗೆ ಜಮಾಯಿಸುತ್ತಿದ್ದಾರೆ.
ಈ ಚಿತ್ರಗಳಿಂದ ಆದರು ಫೇಮಸ್!

ಈ ಯುವ ನಟ ಬಾಲಿವುಡ್ ಅಂಗಳದಲ್ಲಿ ಟಿವಿ ಸೀರಿಯಲ್ ಗಳಿಂದ ಬಂದರೂ ನಂತರ ಒಳ್ಳೊಳ್ಳೆಯ ಚಿತ್ರಗಳನ್ನು ತಮ್ಮ ತೆಕ್ಕೆಗೆ ಹಾಕಿಕೊಂಡು ತಾವು ಒಳ್ಳೆಯ ನಟನೆಂದು ಸಾಬೀತು ಮಾಡಿದ್ದರು. ಅವರು ನಟಿಸಿದ M S ಧೋನಿ ಅನ್ ಟೊಲ್ಡ್ ಸ್ಟೋರಿ ಅವರಿಗೆ ಹೆಸರು ತರುವಲ್ಲಿ ಯಶಸ್ವಿಯಾಯಿತು. ಅದರ ಜೊತೆಗೆ ಕೈ ಪೋ ಚೆ, PK, ಕೇದಾರನಾಥ, ಶುದ್ಧ ದೇಸಿ ರೋಮ್ಯಾನ್ಸ್ ಚಿತ್ರಗಳಲ್ಲಿ ತಮ್ಮ ದಮ್ ದಾರ್ ಅಭಿನಯದ ಮೋಡಿ ಮಾಡಿ ತೋರಿಸಿದ್ದಾರೆ. ಇನ್ನು ಕೆಲವು ಚಿತ್ರಗಳು ರೀಲೀಜ್ ಸಹ ಆಗುವದಿವೆ. ಕೆಲವೇ ದಿನಗಳ ಹಿಂದೆ ಸುಶಾಂತ್ ಸಿಂಹ ರಾಜಪೂತ್ ರ ಪೂರ್ವ ಮ್ಯಾನೇಜರ್ ಆತ್ಮಹತ್ಯೆಗೆ ಒಳಗಾಗಿದ್ದಳು, ಅಂದಿನಿಂದ ಅವರು ದುಃಖಿತರಾಗಿದ್ದರು.