ವೆಸ್ಟ್ ಇಂಡೀಸ್ ನ 18 ವರ್ಷದ ಈ ಲೇಡಿ ಕ್ರಿಕೆಟರ್ ತನ್ನ ಸೌಂದರ್ಯದಿಂದ ಹಚ್ಚಿದಳು ಜಗತ್ತಿಗೆ ಹುಚ್ಚು!
ಜನವರಿ 14 ರಿಂದ ದಕ್ಷಿಣ ಆಫ್ರಿಕಾದಲ್ಲಿ ICC ವರ್ಲ್ಡ್ ಕಪ್ (UNDER 19) ಯುವತಿಯರ t -20 ಪಂದ್ಯಗಳು ಜೋರಾಗಿ ನಡೆದಿವೆ. ಈ ಸ್ಪರ್ಧೆಯಲ್ಲಿ ಜಗತ್ತಿನ 16 ತಂಡಗಳು ಭಾಗವಹಿಸಿದ್ದು ಒಟ್ಟು 41 ಪಂದ್ಯಗಳು ನಡೆಯಲಿವೆ. ಈ ಸ್ಪರ್ಧೆಯ ಕೊನೆಯ ಅಂದರೆ ಫೈನಲ್ ಪಂದ್ಯ ಜನವರಿ 29 ರಂದು ನಡೆಯಲಿದೆ. ಇಲ್ಲಿ ಭಾರತ ಶೇಫಾಲಿ ವರ್ಮಾಳ ನೇತೃತ್ವದಲ್ಲಿ ಎರಡು ಗೆಲುವುಗಳನ್ನು ದಾಖಲಿಸಿ ಮೊದಲ ನಂಬರ್ ನಲ್ಲಿ ಭರ್ಜರಿಯಾಗಿ ಸ್ಥಾನ ಪಡೆದಿದೆ.
ಪ್ರಸ್ತುತ ಸ್ಪರ್ಧೆಯಲ್ಲಿ ವೆಸ್ಟ್ ಇಂಡೀಸ್ ತಂಡವು ಸಹ ಗಮನ ಸೆಳೆಯುವ ಆಟ ಪ್ರದರ್ಶನ ಮಾಡಿದೆ. ಆದರೆ ಇಲ್ಲಿ ವೆಸ್ಟ್ ಇಂಡೀಸ್ ನ ಆಟಗಾರ್ತಿಯೊಬ್ಬಳ ಚರ್ಚೆ ಮಾತ್ರ ಜೋರಾಗಿ ನಡೆದಿದೆ. ಈಕೆ ತನ್ನ ಸೌಂದರ್ಯದಿಂದ ಎಲ್ಲರಿಗೂ ಹುಚ್ಚು ಹಿಡಿಸಿದ್ದಾಳೆ.

ಈ ಆಟಗಾರಳ ಹೆಸರು ಶುನೆಲೆ ಸಾವ್ (Shunelle Sawh). ಈ ಆಟಗಾರ್ತಿ 18 ವರ್ಷದವಳಾಗಿದ್ದು ಈಕೆ ಗ್ರೌಂಡ್ ನಲ್ಲಿ ಇಳಿದಂದಿನಿಂದ ಸೋಷಿಯಲ್ ಮೀಡಿಯಾದಲ್ಲಿ ಆಕೆಯ ಸೌಂದರ್ಯದ ಬಗ್ಗೆ ಚರ್ಚೆ ನಡೆಯುತ್ತಿದೆ. ಈಕೆ ತ್ರಿನಿದಾದ್ ಅಂಡ್ ಟೋಬೆಗೋ ನಿವಾಸಿಯಾಗಿದ್ದಾಳೆ. ಈಕೆಗೆ ಮೊದಲಿನಿಂದಲೂ ಕ್ರಿಕೆಟ್ ಬಗ್ಗೆ ತುಂಬಾ ಆಸಕ್ತಿ ಇತ್ತು. ಹೀಗಾಗಿ ಸ್ವಂತ ಬಲದಿಂದ ತಂಡದಲ್ಲಿ ಸ್ಥಾನ ಗಿಟ್ಟಿಸಿದಳು. ಸದ್ಯ ಶುನೆಲೆ ತನ್ನ ತಂಡಕ್ಕಾಗಿ ವಿಕೆಟ್ ಕೀಪರ್, ಬ್ಯಾಟಿಂಗ್ ಜವಾಬ್ದಾರಿಯನ್ನು ಪೂರೈಸುತ್ತಿದ್ದಾಳೆ.

ಮಹಿಳೆಯರ ಅಂಡರ್ 19 ವರ್ಲ್ಡ್ ಕಪ್ ಸ್ಪರ್ಧೆಯನ್ನು ಐಸಿಸಿ ಮೊದಲ ಬಾರಿಗೆ ಆಯೋಜನ ಮಾಡಿದೆ. ಐಸಿಸಿ ತೆಗೆದುಕೊಂಡ ಈ ನಿರ್ಣಯದ ಬಗ್ಗೆ ಸಚಿನ್ ತೆಂಡೂಲ್ಕರ್ ಸಹ ಆನಂದ ವ್ಯಕ್ತ ಪಡಿಸಿದ್ದಾರೆ.