1965 ರ ಯುದ್ಧದಲ್ಲಿ ತನ್ನೆಲ್ಲ ಸಂಪತ್ತನ್ನು ದಾನ ಮಾಡಿದ ಈ ದೇಶಪ್ರೇಮಿ ಈಗ ವಾಸಿಸುತ್ತಿದ್ದಾನೆ ಗುಡಿಸಲಲ್ಲಿ.

ಒಂದು ವ್ಯಕ್ತಿ ತನ್ನೆಲ್ಲ ಸಂಪತ್ತನ್ನು 1965 ಯುದ್ಧದಲ್ಲಿ ಸರಕಾರಕ್ಕೆ ದಾನ ಮಾಡಿದ. ತನ್ನ ಅಮ್ಮನ ಕೈಯಲ್ಲಿ ಬಂಗಾರದ ಬಳೆಗಳನ್ನು ಸಹಿತ ದೇಶಕ್ಕಾಗಿ ಅರ್ಪಿಸಿದನು.

ಭಾರತದ ವೀರಭೂಮಿ ಎಂದೇ ಪರಿಚಿತವಾದ ಬುಂದೇಲಖಂಡದ ನಿವಾಸಿಯೊಬ್ಬನ ಸತ್ಯಕಥೆ ಇದು. ಈ ಬುಂದೇಲಖಂಡ ಎಂದರೆ ವೀರವನಿತೆ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಮತ್ತು ಪೃಥ್ವಿರಾಜ್ ಚೌಹಾಣ್ ಇವರು ಜನಿಸಿದ ಭೂಮಿ. ಇಲ್ಲಿಯೇ ಜನಿಸಿದ ಮೋಹನ್ ಕುಶಾವಹ ಸರ್ಕಾರಕ್ಕೆ ನೀಡಿದ ದಾನದ ಬಗ್ಗೆ ಕೇಳಿದರೆ ನಿಜಕ್ಕೂ ಹೆಮ್ಮೆ ಎನಿಸುತ್ತದೆ.

ದೇಶಕ್ಕಾಗಿ ಜೀವಿಸುವ ದೇಶಕ್ಕಾಗಿ ವೀರ ಮರಣವನ್ನು ತ್ಯಜಿಸುವ ಸುಪುತ್ರರು ಭಾರತದಲ್ಲಿ ಕಡಿಮೆಯಿಲ್ಲ.
ತನಗಾಗಿ ತಮ್ಮ ಮನೆ ಕುಟುಂಬಕ್ಕಾಗಿ ಎಲ್ಲರೂ ಜೀವಿಸುತ್ತಾರೆ ಆದ್ರೆ ದೇಶಕ್ಕಾಗಿ ಜೀವಿಸುವರು ಈ ಮೋಹನ್ ಲಾಲ್ ನಂತಹವರು ಕಡಿಮೆ. 1965 ರ ಯುದ್ಧದಲ್ಲಿ ತನ್ನೆಲ್ಲ ಸಂಪತ್ತನ್ನು ದಾನ ಮಾಡಿದ ಮೇಲೆ ತಾಯಿಯ ಬಂಗಾರದ ಬಳೆಗಳನ್ನು ಸಹಿತ ಕೊಟ್ಟ ಮಹಾತ್ಮ. ಈಗ 80 ವರ್ಷದ ವಯಸ್ಸಿನಲ್ಲಿಯೂ ಯಾರಿಗೆ ಭಾರವಾಗದೆ ಒಂದು ಪುಟ್ಟ ಗುಡಿಸಲಲ್ಲಿ ಸ್ವಾಭಿಮಾನದ ಬದುಕನ್ನು ಬದುಕುತ್ತಿದ್ದಾನೆ. ಸ್ವಲ್ಪ ಬೇಸರದ ಸಂಗತಿ ಎಂದರೆ ಸರಕಾರ ಈತನ ಕಡೆಗೆ ಗಮನ ಹರಿಸಿ ಆತನ ಬಡತನದ ಬದುಕಿಗೆ ಅಂತ್ಯ ಹಾಡಿ ಬದುಕುಳಿದ ದಿನಗಳು ನೆಮ್ಮದಿಯಾಗಿ ಕಳೆಯಲು ಸಹಾಯ ಮಾಡಬೇಕು ಎಂದು ಸ್ಥಾನಿಕರ ಬೇಡಿಕೆಯಾಗಿದೆ.