1983 ರ ವಿಶ್ವ ಚಾಂಪಿಯನ್ ಭಾರತದ ಆಟಗಾರರಿಗೆ ಸಿಕ್ಕ ಸಂಬಳ ನೋಡಿ ಅಚ್ಚರಿಪಟ್ಟ ನೆಟ್ಟಿಗರು! ಪೇ ಸ್ಲೀಪ್ ವೈರಲ್!
ರಮೀಜ್ ರಾಜಾ ಪಾಕಿಸ್ತಾನ ತಂಡದ ಆಗಿನ ಮಧ್ಯಮ ಕ್ರಮಾಂಕದ ಭರವಸೆಯ ಆಟಗಾರರಾಗಿದ್ದರು. ಸದ್ಯಕ್ಕೆ tv ಯಲ್ಲಿ ಕ್ರಿಕೆಟ್ ಸಮಾಲೋಚಕರಾಗಿ ಕೆಲಸವನ್ನು ಮಾಡುತ್ತಿದ್ದಾರೆ.
ಇವರು ಮೊನ್ನೇ ಜುಲೈ 26 ರಂದು ಟ್ವೀಟರ್ ನಲ್ಲಿ ಹಳೆಯ ಅಪರೂಪದ ವಿಶೇಷ ದಾಖಲೆಯೊಂದು ಶೇರ್ ಮಾಡಿದ್ದಾರೆ. ಅದೇನೆಂದರೆ, 1983 ರಲ್ಲಿ ಭಾರತ ತಂಡ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿತು. ಆ ತಂಡದಲ್ಲಿದ್ದ ಪ್ರತಿ ಆಟಗಾರರಿಗೆ ದೊರೆತ ಸಂಬಳದ ಪೆ ಸ್ಲೀಪ್ ಅನ್ನು ಶೇರ್ ಮಾಡಿದ್ದಾರೆ.

ಸದ್ಯದ ಸಮಯದಲ್ಲಿ ಕ್ರಿಕೆಟ್ ನಲ್ಲಿ ಹಣದ ಮಹಾಸಗರವೇ ಹರಿಯುತ್ತಿದೆ. ಆಗಿನ ಮತ್ತು ಈಗಿನ ಕಾಲದ ಕ್ರಿಕೆಟಿಗರ ಸಂಬಳ ಹೋಲಿಕೆ ಮಾಡಿದರೆ ಎರಡರಲ್ಲಿ ಅಜಗಜಾಂತರವಾದ ಅಂತರ ಕಂಡು ಬರುವದು. ಈ ಚಿತ್ರದಲ್ಲಿ ಪ್ರತಿ ಆಟಗಾರನಿಗೆ ದೊರೆತ ಸಂಬಳ ಒಟ್ಟು 2100 ₹ ಗಳಷ್ಟಿದೆ.

ಇದರ ಜೊತೆಗೆ ರಮೀಜ್ ಅವರು ಇನ್ನೊಂದು ವಿಷಯ ಹೇಳಿದ್ದಾರೆ. 1986-87 ರಲ್ಲಿ ಅವರು ಸ್ವತಃ ಭಾರತಕ್ಕೆ 5 ಟೆಸ್ಟಗಳನ್ನು ಮತ್ತು 6 ಒನ್ ಡೇ ಮ್ಯಾಚ್ ಗಳನ್ನು ಆಡಲು ಬಂದಿದ್ದರಂತೆ. ಅವರಿಗೆ ಸಿಕ್ಕ ಸಂಬಳದ ಬಗ್ಗೆಯೂ ಹೇಳಿದ್ದಾರೆ. ಆಗ ಅವರಿಗೆ ಒಟ್ಟು 55,000 ₹ ಗಳ ಸಂಬಳ ಸಿಕ್ಕಿತ್ತಂತೆ.

ಸಂಬಳ ಎಷ್ಟೇ ಸಿಗಲಿ ರಮೀಜ್ ಅವರೇ, ಯಾರೂ ಯೋಚಿಸದ ವಿಂಡೀಜ್ ಗೆ ಮಣ್ಣು ಮುಕ್ಕಿಸಿ ವರ್ಲ್ಡ್ ಕಪ್ ಗೆದ್ದ ಸಾಹಸ ಏನು ಕಡಿಮೆ ಇಲ್ಲವೇ ಇಲ್ಲ, ಅಲ್ವಾ?