1986 ರಲ್ಲಿ ಕೇವಲ ಇಷ್ಟೇ ₹ ಗಳಿಗೆ ಖರೀದಿಸಬಹುದಿತ್ತು Bullet 350cc, ವೈರಲ್ ಬಿಲ್ ನೋಡಿ ಆಶ್ಚರ್ಯ ವ್ಯಕ್ತಪಡಿಸಿದ ನೆಟ್ಟಿಗರು!

ಇಂಟರ್ನೆಟ್ ನಲ್ಲಿ ಶೇರ್ ಆಗದೆ ಇರುವ ಯಾವುದೇ ವಿಷಯವಿಲ್ಲ. ಇಲ್ಲಿ ಎಲ್ಲ ವಿಷಯಗಳಿಗೆ ಸಂಬಂಧಿಸಿದ ಕಂಟೆಂಟ್ ಎಲ್ಲರಿಗೂ ಸಿಕ್ಕೇ ಸಿಗುತ್ತದೆ. ಈಗ ಹೆಚ್ಚು ಕಡಿಮೆ ಎಲ್ಲರ ಪ್ರೀತಿಗೆ ಪಾತ್ರವಾಗಿರುವ ರಾಯಲ್ ಎನ್ಫೀಲ್ಡ್ (ಬುಲೆಟ್) ಮೋಟಾರ್ ಸೈಕಲ್ ನ ಬಿಲ್ ಒಂದು ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿ ವೈರಲ್ ಆಗುತ್ತಿದೆ. ಈ ಬೈಕ್ ಮೊದಲಿನಿಂದ ಈವರೆಗೂ ಯಾರ ಹತ್ತಿರ ಇರುತ್ತದೆ ಅವರದೊಂದು ಸ್ಟೇಟಸ್ ಬೇರೆಯೇ ಆಗಿರುತ್ತದೆ. ಸದ್ಯ ಈ ಮೋಟಾರ್ ಸೈಕಲ್ ನ ಬೆಲೆ ಎರಡುವರೆ ಲಕ್ಷಕ್ಕೂ ಮೀರಿದೆ. ಆದರೆ ಒಂದು ಸಮಯದಲ್ಲಿ ಈ ಮೋಟಾರ್ ಸೈಕಲ್ ಬೆಲೆ ಕೇವಲ 18 ರಿಂದ 19 ಸಾವಿರದ ಆಸುಪಾಸಿನಲ್ಲಿತ್ತು.

ಇದನ್ನು ಕೇಳಿ ನಿಮಗೂ ಆಶ್ಚರ್ಯವಾಯಿತಲ್ಲ? ಒಂದು ವೇಳೆ ನಂಬಲು ಅಸಾಧ್ಯವಾಗುತ್ತಿದ್ದರೆ 1986 ರಲ್ಲಿಯ ಒಂದು ಬಿಲ್ ಸದ್ಯಕ್ಕೆ ಇಂಟರ್ನೆಟ್ ನಲ್ಲಿ ವೈರಲ್ ಆಗುತ್ತಿದೆ. ಈ ಬಿಲ್ ನಲ್ಲಿ ಬುಲೆಟ್ 350 cc ಬೆಲೆ ಕೇವಲ 18,700 ರೂಪಾಯಿಗಳು ಬರೆದದ್ದನ್ನು ನೋಡಬಹುದು. ಸದ್ಯ ಈ ಮೋಟಾರ್ ಸೈಕಲ್ ನ ಪ್ರಾರಂಭದ ಬೆಲೆ 1.60 ಲಕ್ಷ ರೂಪಾಯಿಗಳಿಂದ ಶುರುವಾಗುತ್ತದೆ.

ಪ್ರಸ್ತುತ ಇಲ್ಲಿರುವ ಬಿಲ್ 23 ಜನವರಿ 1986 ರಲ್ಲಿಯದಿದೆ. ಇದು ಜಾರ್ಖಂಡ್ ನ ಕೊಠಾರಿ ಮಾರ್ಕೆಟ್ ನಲ್ಲಿರುವ ಅಧಿಕೃತ ಡೀಲರ್ ಅವರದೆಂದು ಹೇಳಲಾಗುತ್ತಿದೆ. ಬಿಲ್ ಪ್ರಕಾರ, ಆ ಸಮಯದಲ್ಲಿ 350 cc ಬುಲೆಟ್ ಮೋಟಾರ್ ಸೈಕಲ್ ಆನ್ ರೋಡ್ ಬೆಲೆ 18800 ರೂಪಾಯಿಗಳಷ್ಟಿತ್ತು. ಡಿಸ್ಕೌಂಟ್ ನಂತರ ಆ ಬೆಲೆಯಲ್ಲಿ ನೂರು ರೂಪಾಯಿಗಳಷ್ಟು ಕಡಿಮೆ ಮಾಡಿ 18700 ಗೆ ಮಾರಾಟ ಮಾಡಲಾಗಿದೆ.

 

View this post on Instagram

 

A post shared by Being Royal (@royalenfield_4567k)

ರಾಯಲ್ ಎನ್ಫೀಲ್ಡ್ ಬುಲೆಟ್ ಈ ಫೋಟೋವನ್ನು instagram ನಲ್ಲಿ royalenfield_4567k 13 ಡಿಸೆಂಬರ್ ನಂದು ಪೋಸ್ಟ್ ಮಾಡಲಾಗಿದೆ. ಕ್ಯಾಪ್ಷನ್ನಲ್ಲಿ 1986 ರಲ್ಲಿ ರಾಯಲ್ ಎನ್ಫೀಲ್ಡ್ 350 cc ಎನ್ನಲಾಗಿದೆ. ಪ್ರಸ್ತುತ ಪೋಸ್ಟ್ ಗೆ ಇಲ್ಲಿಯವರೆಗೆ 22,000ಕ್ಕೂ ಹೆಚ್ಚು ಲೈಕ್ಸ್ ಗಳು ದೊರಕಿವೆ.