2 ವರ್ಷದ ಬಾಲಕನ ಮೇಲೆ ಹರಿದ ಬೈಕ್, ಆದರೆ ಅಲ್ಲಿ ನಡೆದಿದ್ದು ಮಾತ್ರ ಪವಾಡವೋ ಅಥವಾ ಅದೃಷ್ಟವೋ ನೋಡುಗರಿಗೆ ಮಾತ್ರ ಶಾ ಕ್ ಆಗುತ್ತದೆ

ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡರೆ ಸಾವಿರ ವರ್ಷ ಆಯಸ್ಸು ಎನ್ನುವ ಗಾದೆ ಮಾತನ್ನು ನಾವೆಲ್ಲರೂ ಕೇಳಿಯೇ ಇದ್ದೇವೆ. ಮಹಾರಾಷ್ಟ್ರದ ಬೀಡ್ ಎಂಬಲ್ಲಿ ಈ ಮಾತು ಅಕ್ಷರಶಃ ಸತ್ಯ ಎನ್ನುವಂತಹ ಘಟನೆಯೊಂದು ನಡೆದಿದೆ. ಬೀಡ್ ನ ಮಾದಲ್ ಮೋಹಿ ಎನ್ನುವ ಹಳ್ಳಿಯೊಂದರ ನಿವಾಸಿಯಾಗಿರುವ ಸುರೇಶ್ ಭೋಪ್ಲೆ ಅವರ ಎರಡು ವರ್ಷದ ಮಗ ಆಯುಷ್ ಭೋಪ್ಲೆ ಜೊತೆ ಇದೇ ಏಪ್ರಿಕ್ ಮೂರರಂದು ನಡೆದಂತಹ ಒಂದು ಘಟನೆಯ ಬಗ್ಗೆ ತಿಳಿದರೆ, ವೈರಲ್ ಆಗಿರುವ ಆ ದೃಶ್ಯದ ವಿಡಿಯೋವನ್ನು ನೋಡಿದರೆ ಒಂದು ಕ್ಷಣ ಮೈ ಝುಮ್ಮೆನ್ನುವಂತೆ ಅನಿಸುವುದು ಮಾತ್ರವೇ ಅಲ್ಲದೇ ಎದೆಯಲ್ಲಿ ಒಂದು ನಡುಕ ಹುಟ್ಟಿಸುವಂತಹ ಸನ್ನಿವೇಶವು ಅದಾಗಿದೆ ಎನಿಸುತ್ತದೆ. ಅಲ್ಲದೇ ಈ ಘಟನೆಯು ಪ್ರತಿಯೊಬ್ಬ ತಂದೆ ತಾಯಿಗೆ ಒಂದು ಅತ್ಯುತ್ತಮ ಸಂದೇಶವನ್ನು ಕೂಡಾ ನೀಡುತ್ತಿದೆ ಎಂದರೆ ತಪ್ಪಾಗಲಾರದು.

ಆ ದಿನ ಬೆಳಿಗ್ಗೆ ಎರಡು ವರ್ಷದ ಬಾಲಕ ಆಯುಷ್ ತನ್ನ ಅಜ್ಜಿಯೊಂದಿಗೆ ಮನೆಯಿಂದ ಹೊರಗೆ ರಸ್ತೆಯಲ್ಲಿ ನಡೆಯುತ್ತಿದ್ದಾನೆ. ಹಾಗೆ ನಡೆದು ಹೋಗುತ್ತಿರುವ ವೇಳೆಯಲ್ಲಿ ಅವರ ಅಜ್ಜಿ ಅಂಗಡಿಯಲ್ಲಿ ತಿನ್ನಲು ಏನಾದರೂ ತೆಗೆದುಕೋ ಎಂದು ಆಯುಷ್ ಕೈಗೆ ಹಣವನ್ನು ನೀಡಿದ್ದಾರೆ. ಆದರೆ ಅಜ್ಜಿ ಕೂಡಾ ರಸ್ತೆಯಲ್ಲಿ ಯಾವುದಾದರೂ ವಾಹನಗಳು ಬರುತ್ತಿವೆಯಾ? ಎನ್ನುವುದನ್ನು ಗಮನಿಸಿಯೇ ಇಲ್ಲ.‌
ಪುಟ್ಟ ಬಾಲಕ ಕೈಗೆ ಕಾಸು ಬಂದು ಕೂಡಲೇ ಬಹಳ ಆಸೆಯಿಂದ ತನಗೆ ಬೇಕಾದ ತಿನಿಸನ್ನು ಕೊಂಡು ತಿನ್ನಲು ರಸ್ತೆ ಇನ್ನೊಂದು ಬದಿಯಲ್ಲಿ ಇದ್ದಂತಹ ಅಂಗಡಿಯ ಕಡೆಗೆ ಓಡಿ ಹೋಗಿದ್ದಾನೆ. ಪುಟಾಣಿ ಮಕ್ಕಳಿಗೆ ತಿಂಡಿ ತೆಗೆದು ಕೋ ಎಂದಾಗ ಅವರಲ್ಲಿ ಖುಷಿ, ಉತ್ಸಾಹ ಸಹಜವಾಗಿಯೇ ಇರುತ್ತದೆ.

ಹಾಗೇ ಆಯುಷ್ ಕೂಡಾ ಅಜ್ಜಿ ಕಾಸು ಕೊಟ್ಟಾಗ ಅಂಗಡಿಗೆ ಹೋಗುವ ಖುಷಿಯಲ್ಲಿ ರಸ್ತೆಯನ್ನು ದಾಟುವಾಗ ರಸ್ತೆಯಲ್ಲಿ ಎರಡೂ ಬದಿಯಿಂದ ಬರುವ ವಾಹನಗಳ ಬಗ್ಗೆ ಗಮನ ನೀಡಿಲ್ಲ. ರಸ್ತೆಯ ಎರಡು ಬದಿಗಳಲ್ಲಿ ಒಂದು ಸಲ ನೋಡದೆ ಅಂಗಡಿಯ ಕಡೆಗೆ ನುಗ್ಗುವ ಭರದಲ್ಲಿ ರಸ್ತೆಯಲ್ಲಿ ಬರುತ್ತಿದ್ದ ಬೈಕೊಂದರ ಮುಂದೆ ಓಡಿ ಹೋಗಿದ್ದಾನೆ. ಬಾಲಕನು ಬರುವುದನ್ನು ನಿರೀಕ್ಷೆ ಮಾಡದ ಬೈಕ್ ಸವಾರ ವೇಗವಾಗಿ ಬಂದಿದ್ದು, ಆಯುಷ್ ಬೈಕಿಗೆ ತಗುಲಿ ಕೆಳಗೆ ಬಿದ್ದಿದ್ದಾನೆ. ಅಷ್ಟೇ ಅಲ್ಲ ಬೈಕ್ ನ ಕೆಳಗೆ ಬಂದು ಬಿಟ್ಟಿದ್ದಾನೆ, ಬೈಕ್ ನ 2 ಚಕ್ರಗಳೂ ಆತನ ಮೇಲೆ ಹತ್ತಿಸಿಕೊಂಡು ಮುಂದೆ ಬಂದಿದೆ. ಆದರೆ ದೇವರ ದಯೆ ಹಾಗೂ ಬಾಲಕನ ಅದೃಷ್ಟ ಎನ್ನುವಂತೆ ಆಯುಷ್ ಗೆ ಏನೂ ಆಗಿಲ್ಲ.

ಬೈಕ್ ಆತನ ಮೇಲಿಂದ ಮುಂದೆ ಹೋದ ಮೇಲೆ ಆ ಪುಟ್ಟ ಬಾಲಕ ಮತ್ತೆ ಎದ್ದು ನಿಂತಿದ್ದಾನೆ. ಸುತ್ತ ಮುತ್ತ ಇದ್ದಂತಹ ಜನರು ಸಹಾ ಓಡಿ ಬಂದಿದ್ದಾರೆ. ಇದಾದ ನಂತರ ಆ ತಂ ಕಕ್ಕೆ ಒಳಗಾದ ಆಯುಷ್ ನ ತಂದೆ ತಾಯಿ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ಮಗುವನ್ನು ಸಂಪೂರ್ಣವಾಗಿ ಪರೀಕ್ಷಿಸಿದ ವೈದ್ಯರು ಮಗುವಿಗೆ ಏನು ಸಮಸ್ಯೆ ಆಗಿಲ್ಲ ಎಂದು ಹೇಳಿದ ನಂತರವೇ ಆ ಬಾಲಕನ ತಂದೆ ತಾಯಿ ನಿರಾಳವಾಗಿದ್ದಾರೆ. ಆಯುಷ್ ಅದೃಷ್ಟ ಚೆನ್ನಾಗಿತ್ತು ಆತನಿಗೆ ಯಾವುದೇ ಪ್ರಾಣಾಪಾಯ ಸಂಭವಿಸಲಿಲ್ಲ ಆದರೆ ಈ ಘಟನೆಯು ಪೋಷಕರಿಗೆ ಒಂದು ಪಾಠ ವಾಗುವ ಅವಶ್ಯಕತೆ ಇದೆ. ರಸ್ತೆಯಲ್ಲಿ ಸಂಚರಿಸುವಾಗ ಮಕ್ಕಳ ಸುರಕ್ಷತೆಗೆ ಹೆಚ್ಚಿನ ಗಮನ ನೀಡಬೇಕು ಎನ್ನುವ ವಿಷಯವನ್ನು ಮನದಟ್ಟು ಮಾಡಿಸಿದೆ.

ವಿಡಿಯೋ ನೋಡಿ

ಮಕ್ಕಳೊಡನೆ ರಸ್ತೆಗಿಳಿದಾಗ ಅದರಲ್ಲೂ ವಿಶೇಷವಾಗಿ ಪುಟ್ಟ ಮಕ್ಕಳು ಜೊತೆಗಿರುವಾಗ ಅವರನ್ನು ಯಾವುದೇ ಕಾರಣಕ್ಕೂ ಕೂಡಾ ಒಂಟಿಯಾಗಿ ರಸ್ತೆಯ ಮೇಲೆ ಬಿಡಬಾರದು, ರಸ್ತೆ ದಾಟುವಾಗ ಮಕ್ಕಳಿಗಿಂತ ಮೊದಲು ಪೋಷಕರು ರಸ್ತೆಯಲ್ಲಿ ಯಾವುದೇ ವಾಹನಗಳು ಬರುತ್ತಿದೆಯೋ, ಇಲ್ಲವೋ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕು. ಅದಕ್ಕಿಂತ ಉತ್ತಮವೆಂದರೆ ಮಕ್ಕಳ ಕೈ ಹಿಡಿದುಕೊಂಡು ಅವರ ಜೊತೆ ತಾವೇ ರಸ್ತೆಯನ್ನು ದಾಟಿದರೆ ಅದು ಸುರಕ್ಷತೆಯ ದೃಷ್ಟಿಯಿಂದ ಬಹಳಷ್ಟು ಒಳ್ಳೆಯದು ಎಂದು ಹೇಳಬಹುದು.