2.3 ಸೇಕೆಂಡಿನಲ್ಲಿ ತೆಗೆದುಕೊಳ್ಳುತ್ತದೆ 100 kmph ಸ್ಪೀಡ್! ಬರೀ ಒಬ್ಬನೇ ಭಾರತೀಯನ ಕಡೆಗೆ ಇದೆ ಜಗತ್ತಿನ ಅತ್ಯಂತ ದುಬಾರಿ ಈ ವಂಡರ್ ಕಾರು! ಯಾರೀತ? ಆತ ಮಾಡುವ ಕೆಲಸವೇನು?
ಪ್ರತಿಯೊಬ್ಬ ವ್ಯಕ್ತಿ ತನ್ನ ಕಡೆಗೆ ಒಂದು ಕಾರು ಇರಬೇಕು ಎಂಬ ಆಸೆಯನ್ನು ಹೊಂದಿಯೇ ಹೊಂದಿರುತ್ತಾನೆ. ಆದರೆ ಈ ಕನಸು ನನಸಾಗಿಸಿ ಕೊಳ್ಳಲು ಎಲ್ಲರಿಗೂ ಸಾಧ್ಯವಿಲ್ಲ. ಹಣವಿದ್ದವರಿಗಂತೂ ಬೇರೆ ಬೇರೆ ಕಾರುಗಳ ಕಲೆಕ್ಷನ್ ಮಾಡುವ ಹುಚ್ಚು ಇರುತ್ತದೆ. ಉದಾಹರಣೆಗೆ ನಾವು ಅನೇಕ ಕಾರುಗಳನ್ನು ಹೊಂದಿರುವ ಎಷ್ಟೋ ಕ್ರಿಕೆಟ್ ಆಟಗಾರರನ್ನು ಮತ್ತು ಬಾಲಿವುಡ್ ನಟರನ್ನು ನೋಡಿದ್ದೇವೆ ಮತ್ತು ಕೇಳಿದ್ದೇವೆ. ಅದರಲ್ಲೂ ಸ್ಪೋರ್ಟ್ಸ್ ಕಾರುಗಳ ಹುಚ್ಚು ಬೇರೆಯೇ ಆಗಿದೆ. ಈ ಕಾರುಗಳು ತುಂಬಾ ದುಬಾರಿಯೂ ಹೌದು. ಈ ರೀತಿಯ ದುಬಾರಿಯಾದ ಕಾರುಗಳು ಬೆರಳಣಿಕೆಯಷ್ಟು ವ್ಯಕ್ತಿಗಳೇ ಉಪಯೋಗಿಸುವರು.
ಈಗ ಒಂದು ರಿಪೋರ್ಟ್ ಪ್ರಕಾರ ಭಾರತೀಯ ನಾಗರಿಕರಾದ ಮಯೂರ್ ಶ್ರೀ ಹೆಸರಿನ ವ್ಯಕ್ತಿಯ ಕಡೆಗೆ ತುಂಬಾ ದುಬಾರಿಯಾದ ಬುಗಾಟಿ ಶಿರಾನ್ ಸೂಪರ್ ಕಾರ್ ಇದೆ ಎಂದು ತಿಳಿದು ಬಂದಿದೆ. ಈ ಕಾರಿನ ಬೆಲೆ 21 ಕೋಟಿ ರೂಪಾಯಿಗಳೆಂದು ಹೇಳಲಾಗುತ್ತಿದೆ. ಈ ಕಾರಿನ ಹೊರತಾಗಿ ಮಯೂರ್ ಶ್ರೀ ಅವರ ಹತ್ತಿರ ಇನ್ನೂ ಅನೇಕ ದುಬಾರಿ ಕಾರುಗಳ ಕಲೆಕ್ಷನ್ ಇದೆ ಎಂದು ಹೇಳಲಾಗಿದೆ. ಅವುಗಳಲ್ಲಿ ಲ್ಯಾಂಬಾರ್ಗಿನಿ, ಎಸ್ಟನ್ ಮಾರ್ಟಿನ್, ಪಾರ್ಶ್, ಮೆಕ್ಲೇರೆನ್, ರೋಲ್ಸ್ ರಾಯ್ಸ್ ಕಾರುಗಳಿವೆ. ಮಯೂರ್ ಶ್ರೀ ಅವರು ರಿಯಲ್ ಎಸ್ಟೇಟ್ ಬಿಸಿನೆಸ್ ಮಾಡುತ್ತಾರೆ. ಮಯೂರ್ ಶ್ರೀ ಅವರಿಗೆ ಈ ಕಾರನ್ನು ಅವರ ತಂದೆಯ ಕಡೆಯಿಂದ ಗಿಫ್ಟ್ ರೂಪದಲ್ಲಿ ದೊರಕಿದೆ.
ಈ ಕಾರಿನ ವೈಶಿಷ್ಠ್ಯಗಳು ನೋಡಿ…
ಬುಗಾಟಿ ಶೀರಾನ್ ಈ ಕಾರು ಜಗತ್ತಿನ ಎಲ್ಲಕ್ಕೂ ವೇಗದ ಕಾರ್ ಎಂದು ಪರಿಗಣಿಸಲಾಗಿದೆ. ಜಗತ್ತಿನ ತುಂಬಾ ಈ ಕಾರಿನ ಬರೀ 100 ಯುನಿಟ್ಸ್ ಗಳನ್ನು ತಯಾರು ಮಾಡಲಾಗಿದೆಯಂತೆ. ಇದರ ಬೆಲೆ ಎಲ್ಲ ಕಾರುಗಳಿಗಿಂತ ಹೆಚ್ಚಾಗಿದೆ. ಈ ಕಾರಿನಲ್ಲಿ ಶಕ್ತಿಯುತ 8.0 ಲೀಟರ್ ಕ್ವಾಡ್ ಟರ್ಬೊ W 16 ಎಂಜಿನ್ ಇದ್ದು ಇದು 1479 Bhp ಮತ್ತು 1600 Nm ಪೀಕ್ ಟಾರ್ಕ್ ತಯಾರಿಸುತ್ತದೆ.
ಬುಗಾಟಿ ಶಿರೋನ್ ಕಾರಿನ ಟಾಪ್ ಸ್ಪೀಡ್ 420 ಕಿಮೀ ಪ್ರತಿ ಗಂಟೆಗೆ ಇದ್ದು 0-100 ಕಿಮೀ ಪ್ರತಿ ಗಂಟೆಯ ವೇಗ ಕೇವಲ 2.3 ಸೇಕೆಂಡಿನಲ್ಲಿಯೇ ತೆಗೆದುಕೊಳ್ಳುತ್ತದೆ. ವೇಗ ಮತ್ತು ಬೆಲೆಗೆ ತಕ್ಕಂತೆ ಈ ಕಾರಿನಲ್ಲಿ ಭಾರಿ ಸೇಫ್ಟಿ ಫೀಚರ್ಸ್ ಗಳನ್ನು ಅಳವಡಿಸಲಾಗಿದೆ.