2.59 ಲಕ್ಷಕ್ಕೆ ಪ್ರತಿ ಕಿಲೋ ಮಾರಾಟವಾಗುವ ಸಮುದ್ರ ಸೌತೆ: ಭಾರತ ಮತ್ತು ಶ್ರೀಲಂಕಾದಲ್ಲಿ ಎಗ್ಗಿಲ್ಲದೇ ನಡೆದಿದೆ ಈ ವಿಶೇಷ ಜೀವಿಯ ಬೇ ಟೆ ಕಳ್ಳ ಸಾಗಾಣಿಕೆ

ಭಾರತ ಮತ್ತು ಶ್ರೀಲಂಕಾದ ನಡುವೆ ಇರುವ ಗಲ್ಫ್ ಆಫ್ ಮನ್ನಾರ್ ಜಲಸಂಧಿಯಲ್ಲಿ ಒಂದು ವಿಶೇಷವಾದ ಸಮುದ್ರಜೀವಿ ಕಂಡುಬರುತ್ತದೆ. ಈ ಜೀವಿಯನ್ನು ಪ್ರತಿ ಕಿಲೋ ಗ್ರಾಂ ಗೆ 2.59 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತದೆ. ಹೀಗೆ ದೊಡ್ಡ ಮೊತ್ತದ ಹಣಕ್ಕೆ ಈ ಪ್ರಾಣಿಯು ಮಾರಾಟ ಆಗುವ ಕಾರಣದಿಂದಲೇ ದಕ್ಷಿಣ ಭಾರತ ಹಾಗೂ ಶ್ರೀಲಂಕಾದಲ್ಲಿ ಈ ಈ ಜೀವಿಯನ್ನು ಬೇಟೆಯಾಡಲಾಗುತ್ತಿದ್ದು, ಅವುಗಳ ಬೇಟೆಯು ಎಗ್ಗಿಲ್ಲದೇ ಸಾಗಿದೆ. ಅಲ್ಲದೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಈ ಜೀವಿಯ ಕಳ್ಳಸಾಗಣಿಕೆ ಸಹಾ ನಡೆಯುತ್ತಿದೆ. ಆದ್ದರಿಂದಲೇ ಈ ಜೀವಿಯ ಬೆಲೆಯು ಈಗ ಚಿನ್ನಕ್ಕೆ ಸಮಾನ ಎನ್ನಲಾಗುತ್ತದೆ. ಈ ವಿಶೇಷ ಜೀವಿಯನ್ನು ಸಮುದ್ರ ಸೌತೆ ಎಂದು ಕರೆಯಲಾಗುತ್ತದೆ. ಈ ಜೀವಿಯನ್ನು ಕಾಮೋತ್ತೇಜಕ ಔಷಧಿಗಳಲ್ಲಿ ಬಳಸಲಾಗುತ್ತದೆ. ಇದಲ್ಲದೇ ಕ್ಯಾನ್ಸರ್‌ನ ಚಿಕಿತ್ಸೆಯಲ್ಲಿ, ಸೌಂದರ್ಯ ವರ್ಧಕಗಳಲ್ಲಿ, ವಿಶೇಷ ಎಣ್ಣೆ ಹಾಗೂ ಕ್ರೀಮ್ ಗಳ ತಯಾರಿಕೆಯಲ್ಲಿಯೂ ಇದನ್ನು ಬಳಸಲಾಗುತ್ತದೆ. ಇಂತಹ ವಿಶೇಷ ಜೀವಿಯ ಕೆಲವು ಆಸಕ್ತಿಕರ ವಿಷಯಗಳನ್ನು ನಾವೀಗ ತಿಳಿಯೋಣ ಬನ್ನಿ.

ಶ್ರೀಲಂಕಾದ ಜಾಫ್ನಾದಲ್ಲಿ ವಾಸಿಸುವ ಮೂವತ್ತೊಂದು ವರ್ಷದ ಮೀನುಗಾರ ಆಂಥೋನಿ ವಿಗ್ರಾಡೋ ಈ ಜಲಸಂಧಿಯಲ್ಲಿ ನೀರಿಗೆ ಹಾರುತ್ತಾರೆ. ಅವರು ಸಮುದ್ರದ ಆಡಿಯಿಂದ ವಿಶಿಷ್ಟವಾದ ಹಾಗೂ ಅಮೂಲ್ಯವಾದ ನಿಧಿಯನ್ನು ಹೊರಗೆ ತರುವ ಪ್ರಯತ್ನವನ್ನು ಮಾಡುತ್ತಾರೆ. ಅದರಿಂದ ತನ್ನ ಕಳೆದ 12 ವರ್ಷಗಳ ಗಳಿಕೆಗೆ ಸಮಾನವಾದ ಹಣವನ್ನು ಪಡೆಯಬಹುದು ಎಂದು ಆಶಿಸುತ್ತಾರೆ. ಆದರೆ ಅವರ ಆಸೆ ಆಸೆಯಾಗಿಯೇ ಉಳಿಯುತ್ತದೆ ಹೊರತು ನಿಜವಾಗುವುದಿಲ್ಲ. ಏಕೆಂದರೆ ಸುಮಾರು 10 ಗಂಟೆಗಳ ಶ್ರಮದ ಅನಂತರ ಬೆರಳೆಣಿಕೆಯಷ್ಟು ಸಮುದ್ರ ಸೌತೆ ಗಳನ್ನು ಸಂಗ್ರಹಿಸಿ ಹೊರಗಡೆ ಬರುತ್ತಾರೆ. ಅವರು ಶ್ರೀಲಂಕಾ ಮತ್ತು ದಕ್ಷಿಣ ಭಾರತದ ಗಡಿಯಲ್ಲಿರುವ ಸಮುದ್ರ ಕಿನಾರೆಗಳಲ್ಲಿ ಬೇರೆ ದೇಶಗಳ ಮೀನುಗಾರರು ಸಮುದ್ರ ಸೌತೆಗಳನ್ನು ಕಳ್ಳಸಾಗಾಣಿಕೆ ಮಾಡುತ್ತಿರುವ ಕಾರಣ ತಮಗೆ ಅವು ಸಿಗುತ್ತಿಲ್ಲವೆಂದು ಬಹಳ ನಿರಾಶೆಯಿಂದ ಹೇಳುತ್ತಾರೆ. ಅಲ್ಲದೇ ಇಂತಹ ಕಳ್ಳ ಸಾಗಾಣಿಕೆಯಿಂದ ಇವರ ಆದಾಯದ ಮೇಲೆ ಬಹಳ ಕೆ ಟ್ಟ ಪರಿಣಾಮವೇ ಉಂಟಾಗಿದೆ ಎಂದು ಹೇಳಿಕೊಂಡಿದ್ದಾರೆ.

ಸಮುದ್ರ ಸೌತೆಯು ಎಕಿನೊಡರ್ಮ್ ಜೀವಿಯಾಗಿದ್ದು ಇದು ಟ್ಯೂಬ್ ನ ಆಕಾರದಲ್ಲಿರುತ್ತದೆ. ಈ ಟ್ಯೂಬ್ ಸೌತೆ ಕಾಯಿಯಂತೆ ಕಾಣುವುದರಿಂದ ಇದಕ್ಕೆ ಸಮುದ್ರ ಸೌತೆ ಎಂದು ಹೆಸರನ್ನು ನೀಡಲಾಗಿದೆ. ಈ ಜೀವಿಯ ದೇಹವು ಬಹಳ ಮೃದುವಾಗಿದ್ದು ಸಮುದ್ರದ ಪರಿಸರದಲ್ಲಿ ಇದು ಬಹಳ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ಮರಳಿನಲ್ಲಿ ಹೂತು ಹೋಗಿರುವಂತಹ ಜೀವಿಗಳನ್ನು ತಿನ್ನುವ ಸಮುದ್ರ ಸೌತೆಗಳು ನಂತರ ಪೋಷಕಾಂಶಗಳನ್ನು ಮರುಬಳಕೆ ಮಾಡುತ್ತವೆ. ಸಮುದ್ರ ಸೌತೆಗಳ ಮಲದಿಂದ ಸಾರಜನಕ, ಅಮೋನಿಯ ಮತ್ತು ಕ್ಯಾಲ್ಸಿಯಂ ಗಳು ಬಿಡುಗಡೆಯಾಗುತ್ತದೆ. ಇವು ಹವಳದ ದಿಬ್ಬಗಳಿಗೆ ಬಹಳಷ್ಟು ಸಹಾಯಕಾರಿಯಾಗಿದೆ. ಅಲ್ಲದೇ ಮಾನವನ ಚಟುವಟಿಕೆಗಳಿಂದ ಸಮುದ್ರದ ನೀರಿನಲ್ಲಿ ಏರುತ್ತಿರುವ ಆಮ್ಲಗಳ ಪ್ರಮಾಣವನ್ನು ಸಹಾ ಸಮುದ್ರ ಸೌತೆಗಳು ಕಡಿಮೆ ಮಾಡುತ್ತವೆ ಎನ್ನಲಾಗಿದೆ.

ಸಮುದ್ರ ಸೌತೆ ಗಳಿಗೆ ಚೀನಾ ಮತ್ತು ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ಬಹಳಷ್ಟು ಬೇಡಿಕೆ ಇದೆ. ಇದನ್ನು ಕಾಮೋತ್ತೇಜಕ ಔಷಧಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆಯಲ್ಲದೇ, ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ಸಮುದ್ರ ಸೌತೆಗಳನ್ನು ಆಹಾರವಾಗಿ ಬಳಸಲಾಗುವುದು. ಈ ಆಹಾರಕ್ಕೆ ಬಹಳಷ್ಟು ಬೇಡಿಕೆ ಇದೆ ಎನ್ನಲಾಗಿದೆ. ಕಳೆದ 41 ವರ್ಷಗಳಲ್ಲಿ ಸಮುದ್ರ ಸೌತೆಯ ಬೆಲೆಯೂ 50 ಪಟ್ಟು ಹೆಚ್ಚಾಗಿದೆ. 1980 ರಲ್ಲಿ ಇದರ ಬೆಲೆಯು ಪ್ರತಿ ಕಿಲೋ ಗ್ರಾಂ ಗೆ 5180 ರೂಪಾಯಿಗಳಾಗಿತ್ತು, ಈಗ ಅದು ಹೆಚ್ಚಾಗಿ 20,750 ರೂಪಾಯಿಗಳಿಗೆ ತಲುಪಿದೆ. ಕೆಲವು ವಿಶೇಷ ಜಾತಿಯ ಸಮುದ್ರ ಸೌತೆಗಳಿಗೆ 2.59 ಲಕ್ಷ ರೂಪಾಯಿಗಳನ್ನು ಪ್ರತಿ ಕಿಲೋಗೆ ನೀಡಲಾಗುತ್ತಿದೆ. ಆದ್ದರಿಂದಲೇ ಇಂತಹ ವಿಶೇಷ ಜಾತಿಯ ಸಮುದ್ರ ಸೌತೆಗಳನ್ನು ಬೇಟೆಯಾಡಿ ಕಳ್ಳ ಸಾಗಾಣಿಕೆ ಮಾಡಲಾಗುತ್ತಿದೆ.

ಕಳೆದ ಕೆಲವು ವರ್ಷಗಳಿಂದಲೂ ಭಾರತ ಮತ್ತು ಶ್ರೀಲಂಕಾದ ನಡುವೆ ಇರುವ ಮನ್ನಾರ್ ಜಲಸಂಧಿಯಲ್ಲಿ ಈ ಸಮುದ್ರ ಸೌತೆಗಳ ಬೇಟೆಯು ತೀವ್ರವಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇವುಗಳ ಸಂಖ್ಯೆಯಲ್ಲಿ ಶೇಕಡ 60 ರಷ್ಟು ಕುಸಿತ ಕಂಡುಬಂದಿದೆ ಈ ವಿಶೇಷ ಪ್ರಾಣಿಗಳನ್ನು ಅಂತರ ರಾಷ್ಟ್ರೀಯಮಟ್ಟದಲ್ಲಿ ಕೆಲವು ಕಂಪನಿಗಳು ಖರೀದಿಸುತ್ತಿದ್ದು, ಬ್ಲಾಕ್ ಮಾರ್ಕೆಟಿಂಗ್ ಮಾಡಲು ಕೂಡಾ ಕೆಲವು ವ್ಯಕ್ತಿಗಳು ಇದ್ದಾರೆ ಎನ್ನಲಾಗಿದೆ. ಪ್ರಸ್ತುತ ಶ್ರೀಲಂಕಾ ಸಮುದ್ರ ಸೌತೆ ಕಳ್ಳಸಾಗಾಣಿಕೆಯ ಮುಖ್ಯ ನೆಲೆಯಾಗಿದೆ. ಇಲ್ಲಿ ವಾಸಿಸುವ ಸುಮಾರು ಹತ್ತು ಸಾವಿರ ಕುಟುಂಬಗಳಿಗೆ ಸಮುದ್ರ ಸೌತೆಗಳ ಕಳ್ಳ ಸಾಗಾಣಿಕೆ ಯಿಂದಾಗಿ ಅವರ ಆದಾಯದಲ್ಲಿ ಕುಸಿತ ಕಂಡುಬಂದಿದೆ.

ಪರಿಸರ ತಜ್ಞರು ಹಾಗೂ ವಿಜ್ಞಾನಿಗಳು ಸಮುದ್ರ ಸೌತೆಗಳ ನಿರ್ಮೂಲನೆಯಿಂದ ಸಮುದ್ರದ ಪರಿಸರದಲ್ಲಿ ಏರುಪೇರು ಉಂಟಾಗುತ್ತದೆ ಎಂದು ಹೇಳಿದ್ದಾರೆ. ಇದು ನಿಲ್ಲದೇ ಹೋದರೆ ಮುಂದೆ ಇದರಿಂದ ಸಾಕಷ್ಟು ಹಾನಿ ಉಂಟಾಗಲಿದೆ ಎನ್ನುವ ಎಚ್ಚರಿಕೆಯನ್ನು ನೀಡಿದ್ದಾರೆ. ಭಾರತ 2001ರಿಂದಲೇ ಇಂತಹ ಜೀವಿಗಳನ್ನು ಬೇಟೆಯಾಡುವುದನ್ನು ನಿಷೇಧ ಮಾಡಿದೆ. ಆದರೆ ಶ್ರೀಲಂಕಾ ಸಮುದ್ರ ಜೀವಿಗಳನ್ನು ರಫ್ತು ಮಾಡುವ ಉದ್ಯಮಗಳಿಗೆ ಈ ವಿಷಯದಲ್ಲಿ ಪರವಾನಗಿಯನ್ನು ನೀಡಿದೆ. ಕಳೆದ ವರ್ಷ ಆಗಸ್ಟ್ ನಲ್ಲಿ ಸಾವಿರ ಕಿಲೋಗ್ರಾಂ ತೂಕದ ಸಮುದ್ರ ಸೌತೆಗಳನ್ನು ಕಳ್ಳ ಸಾಗಾಣಿಕೆ ಮಾಡುತ್ತಿದ್ದ ತಂಡವೊಂದನ್ನು ಭಾರತೀಯ ಕೋಸ್ಟ್ ಗಾರ್ಡ್ ಗಳು ಬಂಧಿಸಿದ್ದರು.

ಈ ಕಳ್ಳ ಸಾಗಾಣಿಕೆಯಲ್ಲಿ ತಂಡದಿಂದ ಸುಮಾರು 5.18 ಕೋಟಿ ರೂಪಾಯಿಗಳ ಮೌಲ್ಯದ ಸಮುದ್ರ ಸೌತೆಯನ್ನು ವಶಪಡಿಸಿಕೊಳ್ಳಲಾಗಿತ್ತು. ಓಶನ್ ಏಶಿಯಾದ ಪ್ರಕಾರ ಜಪಾನ್, ಜಾಂಜಿಬಾರ್, ಶ್ರೀಲಂಕಾ, ತಾಂಜೇನಿಯಾ, ಚೀನಾ, ಭಾರತ ಮತ್ತು ಶ್ರೀಲಂಕಾ ಸೇರಿದಂತೆ ಏಷ್ಯಾದ ದೇಶಗಳಲ್ಲಿ ಇವುಗಳ ಕಳ್ಳಸಾಗಾಣಿಕೆ ನಡೆಯುತ್ತಿದೆ. ಲಕ್ಷದ್ವೀಪದ ಮೀನುಗಾರರಿಗೆ ಸಮುದ್ರ ಸೌತೆಯ ಪ್ರಾಮುಖ್ಯತೆ ತಿಳಿದಿದ್ದು, ಅವರು ಇವುಗಳ ಕಳ್ಳಸಾಗಾಣಿಕೆಯ ವಿಷಯ ತಿಳಿಯುತ್ತಿದ್ದಂತೆ ಕೋಸ್ಟ್ ಗಾರ್ಡ್ ಅಥವಾ ಪೊಲೀಸರಿಗೆ ದೂರನ್ನೂ ನೀಡುವ ಮೂಲಕ ಅವುಗಳನ್ನು ರಕ್ಷಣೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಸಮುದ್ರ ಸೌತೆ ಗಳು ಗಾತ್ರದಲ್ಲಿ ಹತ್ತರಿಂದ ಮೂವತ್ತು ಸೆಂಟಿಮೀಟರ್ ಇರುತ್ತವೆ. ಒಂದು ವಿಶೇಷ ಜಾತಿಯ ಸಮುದ್ರ ಸೌತೆ ಮಾತ್ರ ಮೂರು ಮೀಟರ್ ನಷ್ಟು ದೊಡ್ಡದಾಗಿರುತ್ತದೆ. ಇವುಗಳನ್ನು ಬೇಟೆಯಾಡಲು ಹೋದಾಗ ಇವು ಹಿಡಿತದಿಂದ ತಪ್ಪಿಸಿಕೊಳ್ಳಲು ನೀರಿನೊಳಗೆ ಒಂದು ಕಿಲೋಮೀಟರ್ ನಷ್ಟು ಉದ್ದವಾದ ಡೈವ್ ಹಾಕುವ ಸಾಮರ್ಥ್ಯವನ್ನು ಹೊಂದಿರುತ್ತವೆ.

ಸಮುದ್ರ ಸೌತೆಗಳು ಎರಡು ಕಡೆ ಉಸಿರಾಟ ನಡೆಸುತ್ತವೆ.‌ ಒಂದು ಮೂಗಿನ ಕಡೆಯಿಂದ, ಇನ್ನೊಂದು ಅವುಗಳ ಜನನಾಂಗಗಳ ಕಡೆಯಿಂದ. ಸಮುದ್ರ ಸೌತೆಗಳು ನಿಜಕ್ಕೂ ವಿಶೇಷ ಜೀವಿಗಳಾಗಿದ್ದು, ಸಮುದ್ರದ ಪರಿಸರದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಲು ಇವುಗಳ ಇರುವಿಕೆಯು ಅನಿವಾರ್ಯವಾಗಿದೆ. ಆದರೆ ಮನುಷ್ಯ ತನ್ನ ದುರಾಸೆಗಾಗಿ ವಿಶೇಷವಾದ ಈ ಜೀವಿಗಳನ್ನು ಕೊ ಲ್ಲು ತ್ತಿದ್ದು ಪರಿಸರದ ನಾಶಕ್ಕೆ ಹಾಗೂ ಸಮುದ್ರ ಪ್ರದೇಶಗಳಲ್ಲಿ ವಿಪರೀತ ಪರಿಸ್ಥಿತಿಗಳ ಉದ್ಭವಕ್ಕೆ ಕಾರಣರಾಗುತ್ತಿದ್ದಾನೆ.