20 ವರ್ಷಗಳ ಕಾಲ ಸೆರೆಯಲ್ಲಿದ್ದ ಹೆಣ್ಣು ಆಮೆ, ಬಿಡುಗಡೆ ಆಗುತ್ತಲೇ ಮರಿಗಳಿಗಾಗಿ 37 ಸಾವಿರ ಕಿಮೀ ಪ್ರಯಾಣ ಮಾಡಿತು!
ಮನುಷ್ಯರಂತೆ ಪ್ರಾಣಿಗಳು ಸಹಾ ತಾವು ಹಾಗೂ ತಮ್ಮ ಮರಿಗಳು ವಾಸಿಸಲು ಒಂದು ಸುರಕ್ಷಿತ ಎನಿಸುವ ತಾಣದಲ್ಲಿ ಇರಲು, ಜೀವನವನ್ನು ನಡೆಸಲು ಬಯಸುತ್ತವೆ. ಸಮುದ್ರಗಳಲ್ಲಿನ ಜಲಚರಗಳ ವಿಷಯ ಬಂದಾಗ ತನ್ನ ವರ್ತನೆಯಿಂದಲೇ ಬಹಳ ಶಾಂತ ಸ್ವಭಾವವನ್ನು ಹೊಂದಿದೆಯೆಂದು ಹೇಳಲಾಗುವ ಆಮೆ ಸಹಜವಾಗಿಯೇ ತನ್ನ ಈ ಮೃದು ಸ್ವಭಾವದಿಂದಲೇ ಎಲ್ಲರನ್ನೂ ತನ್ನ ಕಡೆಗೆ ಆಕರ್ಷಿಸುತ್ತದೆ. ಆದರೆ ಇಂತಹ ನಿಷ್ಕಪಟ ಮತ್ತು ಶಾಂತ ಸ್ವಭಾವದ ಜೀವಿಯ ಜೀವಕ್ಕೂ ಕುತ್ತು ಎದುರಾಗಿರುವಂತೆ ಕಂಡು ಬರುತ್ತಿದೆ. ಏಕೆಂದರೆ ಕಳೆದ ಕೆಲವು ವರ್ಷಗಳಿಂದ ಅವುಗಳನ್ನು ದೊಡ್ಡ ಪ್ರಮಾಣದಲ್ಲಿ ಬೇಟೆಯಾಡುವ ಚಟುವಟಿಕೆಗಳು ನಡೆಯುತ್ತಿವೆ. ಹೀಗೆ ಅಪಾಯಕ್ಕೆ ಸಿಲುಕಿರುವ ಆಮೆಗಳನ್ನು ಸಂರಕ್ಷಿಸುವ ಸಲುವಾಗಿ ಜಗತ್ತಿನ ಎಲ್ಲಾ ದೇಶಗಳಲ್ಲಿಯೂ ಸಹಾ ವಿವಿಧ ರೀತಿಯ ಅಭಿಯಾನಗಳನ್ನು ನಡೆಸಲಾಗುತ್ತಿದೆ.
ಇತ್ತೀಚಿಗೆ ಕೆಲವು ದಿನಗಳಿಂದಲೂ ಸಹಾ ಸೋಶಿಯಲ್ ಮೀಡಿಯಾಗಳಲ್ಲಿ ಯೋಶಿ ಎನ್ನುವ ಒಂದು ಹೆಣ್ಣು ಆಮೆಯ ಕಥೆ ದೊಡ್ಡ ಸುದ್ದಿಯಾಗಿದೆ. ಎಲ್ಲೆಲ್ಲೂ ಈ ಆಮೆಯ ವಿಚಾರಗಳು ಎಲ್ಲರ ಗಮನವನ್ನು ಸೆಳೆದಿವೆ. ಏಕೆ ಈ ಆಮೆಯ ವಿಚಾರ ಇಷ್ಟು ಜನಜನಿತವಾಗಿದೆ ಎನ್ನುವುದಾದರೆ, ಕೆಲವು ವರ್ಷಗಳ ಕಾಲ ಈ ಆಮೆ ಸಮುದ್ರದಲ್ಲಿ ಸುಮಾರು 37 ಸಾವಿರ ಕಿಲೋಮೀಟರ್ ಪ್ರಯಾಣವನ್ನು ಮಾಡುವ ಮೂಲಕ ತನಗೆ ಒಂದು ಸುರಕ್ಷಿತವಾದ ಮನೆ ಹುಡುಕಿತು. ಈ ಸರಳ,ಶಾಂತಚಿತ್ತವಾದ, ಸಾಧಾರಣ ಆಮೆಯು ಮಾಡಿದ ಅಸಾಧಾರಣ ಪ್ರಯತ್ನದ ಕಥೆಯು ಇದೀಗ ಪ್ರತಿಯೊಬ್ಬರಿಗೂ ಸಹಾ ಒಂದು ಸ್ಫೂರ್ತಿಯನ್ನು ನೀಡುತ್ತಿದೆ.

ಯೋಶಿ ಹೆಸರಿನ ಈ ಹೆಣ್ಣು ಆಮೆಯು ಪತ್ತೆಯಾದಾಗ ಅದರ ಪರಿಸ್ಥಿತಿ ಚೆನ್ನಾಗಿರಲಿಲ್ಲ. ಅದು ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆಗ ಅದರ ಈ ದು ಸ್ಥಿ ತಿ ಕಂಡ ಪ್ರಾಣಿ ಪ್ರಿಯರು ಅದನ್ನು ನೋಡಿ ಆ ಆಮೆಗೆ ಅಗತ್ಯವಿರುವ ಚಿಕಿತ್ಸೆಯನ್ನು ಕೊಡಿಸಿದ್ದು ಮಾತ್ರವೇ ಅಲ್ಲದೇ ಅದು ಸಂಪೂರ್ಣವಾಗಿ ಆರೋಗ್ಯವಾಗಿ ಚೇತರಿಸಿಕೊಳ್ಳುವವರೆಗೆ ಅದನ್ನು ಚೆನ್ನಾಗಿ ನೋಡಿಕೊಂಡರು ಹಾಗೂ ಅದೇ ಸಮಯದಲ್ಲಿ ಆ ಆ ಆಮೆಯ ದೇಹದ ಮೇಲೆ ಸ್ಯಾಟಲೈಟ್ ಟ್ಯಾಗ್ ಅನ್ನು ಸಹ ಅಳವಡಿಸಲಾಯಿತು, ಏಕೆಂದರೆ ಇದರಿಂದ ಆ ಆಮೆಯ ಪ್ರಜಾತಿಯ ಬಗೆಗಿನ ಇನ್ನಷ್ಟು ಹೆಚ್ಚಿನ ಮಾಹಿತಿ ಸಿಗುತ್ತದೆ ಎನ್ನುವುದು ಅವರ ಉದ್ದೇಶವಾಗಿತ್ತು.
ಈ ಆಮೆಯನ್ನು 20 ವರ್ಷಗಳ ಕಾಲ ಅದರ ಆರೋಗ್ಯದ ದೃಷ್ಟಿಯಿಂದ ಸೆರೆಯಲ್ಲಿಟ್ಟ ನಂತರ, ಅಂತಿಮವಾಗಿ ಅದನ್ನು ಬಿಡುಗಡೆ ಮಾಡಲಾಯಿತು. ಬಿಡುಗಡೆಯಾದ ನಂತರ, ಆಮೆ ತನ್ನ ಮನೆಯನ್ನು ಹುಡುಕಲಾರಂಭಿಸಿತು ಮತ್ತು ಈ ಕಾರಣಕ್ಕಾಗಿ ಅದು ಪ್ರಯಾಣ ಮಾಡುತ್ತಾ ಪ್ರಪಂಚದ ಸುಮಾರು ಅರ್ಧದಷ್ಟು ಭಾಗವನ್ನು ಕ್ರಮಿಸಿತು. ಹೌದು ಈ ಆಮೆ ಬರೋಬ್ಬರಿ 37 ಸಾವಿರ ಕಿಲೋಮೀಟರ್ ಪ್ರಯಾಣಿಸಿದ ಕಥೆಯನ್ನು ಕೇಳಿದಾಗ ಜನರು ಆಶ್ಚರ್ಯಚಕಿತರಾಗಿದ್ದಾರೆ. ಈ ಆಮೆಯ ಬಗ್ಗೆ, ಜೀವ ಶಾಸ್ತ್ರಜ್ಞರು ಹೇಳುವ ವಿಷಯ ಏನೆಂದರೆ, ಯೋಶಿ ಹೆಸರಿನ ಈ ಹೆಣ್ಣು ಆಮೆ, ಸುಮಾರು 180 ಕೆಜಿ ತೂಕವನ್ನು ಹೊಂದಿತ್ತು. ವಾಸ್ತವವಾಗಿ, ಇದು ತನಗಾಗಿ ಒಂದು ಸುರಕ್ಷತೆವಾದ ವಾಸ ಸ್ಥಳವನ್ನು ಹುಡುಕುತ್ತಿತ್ತು.
ಒಂದು ಸುರಕ್ಷಿತ ಸ್ಥಾನ ದೊರೆತ ಮೇಲೆ ಅಲ್ಲಿ ಅದು ತನ್ನ ಮರಿಗಳಿಗೆ ಜನ್ಮ ನೀಡಬಹುದು ಮತ್ತು ಅವುಗಳನ್ನು ಪೋಷಿಸಬಹುದು ಎಂದು ನಿರ್ಧರಿಸಿದ್ದರಿಂದ ಅದು 37 ಸಾವಿರ ಕಿಲೋಮೀಟರ್‌ಗಳಷ್ಟು ದೀರ್ಘ ಪ್ರಯಾಣವನ್ನು ಮಾಡಿತು. ಆಮೆಯು ತನ್ನ ಈ ಪ್ರಯಾಣವನ್ನು ಆಫ್ರಿಕಾದಿಂದ ಆರಂಭಿಸಿ ಆಸ್ಟ್ರೇಲಿಯಾದಲ್ಲಿ ಕೊನೆಗೊಳಿಸಿತು ಎಂದಿರುವ ವಿಜ್ಞಾನಿಗಳು, ನಾವು ಈ ಜೀವಿಗಳು ಇಷ್ಟು ದೂರವನ್ನು ಏಕೆ ಮತ್ತು ಹೇಗೆ ಕ್ರಮಿಸುತ್ತವೆ ಎನ್ನುವ ವಿಷಯದ ವಾಸ್ತವವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ. ಈಗ ದೊಡ್ಡ ಸುದ್ದಿಯಾಗಿರುವ ಯೋಶಿ ಆಮೆಯ ಬಗ್ಗೆ ಐಎಫ್ಎಸ್ ಅಧಿಕಾರಿ ಪ್ರವೀಣ್ ಕಸ್ವಾನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿಯನ್ನು ಹಂಚಿಕೊಂಡು ಅದು ವೈರಲ್ ಆಗಿದೆ.
Incredible journey of a loggerhead turtle to locate its home. This is Yoshi & she just traveled 37000 kms from Africa to Australia probably to find here nesting grounds. Also incredible to observe how these creatures move to such a length & why we need to protect nesting grounds. pic.twitter.com/P9Fqb2j0wF
— Parveen Kaswan (@ParveenKaswan) March 11, 2020
ಅವರು ತಮ್ಮ ಪೋಸ್ಟ್‌ನಲ್ಲಿ ಹೀಗೆ ಬರೆದಿದ್ದಾರೆ, ‘ಆಮೆಯು ತನಗಾಗಿ ಒಂದು ಮನೆ ಹುಡುಕಲು ಮಾಡಿದಂತಹ ನಂಬಲಾಗದ ಪ್ರಯಾಣ. ಇದು ಯೋಶಿ, ಅವಳು ತನ್ನ ಗೂಡುಕಟ್ಟುವ ಸಲುವಾಗಿ ನೆಲೆಯನ್ನು ಹುಡುಕಲು ಆಫ್ರಿಕಾದಿಂದ ಆಸ್ಟ್ರೇಲಿಯಾಕ್ಕೆ ಸುಮಾರು 37000 ಕಿಲೋಮೀಟರ್ ಪ್ರಯಾಣಿಸಿದಳು. ಈ ಜೀವಿಗಳು ಹೇಗೆ ಇಷ್ಟು ಉದ್ದಕ್ಕೆ ಹೋಗುತ್ತವೆ ಎನ್ನುವುದನ್ನು ಅರ್ಥ ಮಾಡಿಕೊಂಡು ಅವುಗಳು ಗೂಡು ಕಟ್ಟುವ ಜಾಗವನ್ನು ಏಕೆ ರಕ್ಷಿಸಬೇಕು?’ ಎಂಬುದನ್ನು ತಿಳಿಯಬೇಕು ಎಂದು ಹೇಳಿದ್ದಾರೆ. ಅವರು ಹಾಗೆ ಮಾತು ಮುಂದುವರೆಸಿ ಇನ್ನಷ್ಟು ವಿಚಾರಗಳನ್ನು ಹೇಳಿದ್ದಾರೆ.
ಯೋಶಿಯನ್ನು ಇಪ್ಪತ್ತು ವರ್ಷಗಳ ಕಾಲ ಸೆರೆಯಲ್ಲಿ ಇಡಲಾಯಿತು ಏಕೆಂದರೆ ಅವಳು ಗಾಯಗೊಂಡಿದ್ದಳು. ನಂತರ ಅವುಗಳ ಚಿಕಿತ್ಸೆ ಬಗ್ಗೆ ತಿಳಿದಿರುವ ಪರಿಣಿತರು ಅವಳಿಗೆ ಪರಿಪೂರ್ಣ ಆರೋಗ್ಯವನ್ನು ಮರಳಿ ಪಡೆಯಲು, ಹೊಸ ಚೈತನ್ಯ ಮೂಡಿಸಲು ಸಹಾಯ ಮಾಡಿದರು. ಅಲ್ಲದೇ ಒಂದು ಸ್ಯಾಟಲೈಟ್ ಟ್ಯಾಗ್ ಅನ್ನು ಅದಕ್ಕೆ ಜೋಡಿಸಲಾಗಿದ್ದು, ಸಂಶೋಧಕರು ಅವಳನ್ನು ಬಿಡುಗಡೆ ಮಾಡಿದರು ಮತ್ತು ಸಾಗರದಲ್ಲಿ ಅವಳ ಪ್ರಯಾಣವನ್ನು ಸಹಾ ಗಮನಿಸಲಾಯಿತು. ಆ ಸಂದರ್ಭದಲ್ಲಿ ಅವಳು ಒಮ್ಮೆ ಹೋಗಿದ್ದ ಜಾಗಕ್ಕೆ ಮತ್ತೆ ಹೋದಳು, ಅದೇ ಅವಳ ಮನೆ!! ಎಂದು ಬರೆದಿದ್ದು,ಈ ಪೋಸ್ಟ್ ಅನ್ನು ಅನೇಕ ಜನರು ಶೇರ್ ಮಾಡಿಕೊಂಡಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಈ ವಿಶಿಷ್ಟ ಹಾಗೂ ಅಪರೂಪದ ಆಮೆಗಳನ್ನು ಬೇಟೆಯಾಡುವ ಪ್ರಕರಣಗಳು ಹೆಚ್ಚಾಗಿರುವುದು ಮಾತ್ರವೇ ಅಲ್ಲದೇ ಇವುಗಳ ಕಳ್ಳಸಾಗಾಣಿಕೆದಾರರಿಂದಾಗಿ, ಹಳದಿ ಆಮೆಗಳು ಅಳಿವಿನಂಚಿನಲ್ಲಿರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಜೀವಶಾಸ್ತ್ರಜ್ಞರು, ಆಮೆಗಳನ್ನು ಎರಡು ವಿಶೇಷ ಕಾರಣಗಳಿಗಾಗಿ ಬೇಟೆಯಾಡಲಾಗುತ್ತದೆ, ಮೊದಲನೆಯದಾಗಿ ಅನೇಕರಿಗೆ ಆಮೆ ಮಾಂಸವನ್ನು ತಿನ್ನುವ ಅಭ್ಯಾಸವಿದೆ ಮತ್ತು ಎರಡನೆಯದಾಗಿ ಅವುಗಳ ಹೆಚ್ಚುತ್ತಿರುವ ವ್ಯಾಪಾರ,ಬೇಡಿಕೆ ಹಾಗೂ ಬೆಲೆ ಎಂದಿದ್ದಾರೆ.

ಆಮೆಗಳ ಮಾಂಸವನ್ನು ಸೇವನೆ ಮಾಡಿದರೆ ಅದರಿಂದ ದೇಹದ ಶಕ್ತಿಯು ಹೆಚ್ಚಾಗುತ್ತದೆ ಮತ್ತು ನಮ್ಮ ದೇಹವು ಅನೇಕ ರೋಗಗಳಿಂದ ಮುಕ್ತವಾಗುತ್ತದೆ, ರೋಗ ನಿರೋಧಕ ಶಕ್ತಿಯನ್ನು ಅದು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ. ಈ ಎಲ್ಲಾ ಕಾರಣಗಳಿಂದಾಗಿಯೇ ಆಮೆಗಳ ಮಾಂಸಕ್ಕೆ ಬೇಡಿಕೆ ಹಾಗೂ ಬೆಲೆಯು ಹೆಚ್ಚಿದ್ದು, ಅವುಗಳ ಕಳ್ಳಸಾಗಣೆ ಪ್ರಕರಣಗಳು ಹೆಚ್ಚುತ್ತಿದ್ದು ಇದನ್ನು ನಿಲ್ಲಿಸಬೇಕಾಗಿರುವುದು ಅನಿವಾರ್ಯ ಎನಿಸಿದೆ. ಏಕೆಂದರೆ ಈ ಅಮೂಲ್ಯ ಜೀವಿಗಳನ್ನು ಈಗ ಉಳಿಸದೇ ಹೋದಲ್ಲಿ ಅವುಗಳನ್ನು ಮುಂದೆ ಪುಸ್ತಕಗಳಲ್ಲಿ, ಫೋಟೋ ಮತ್ತು ವೀಡಿಯೋ ಗಳಲ್ಲಿ ಮಾತ್ರವೇ ನೋಡಬೇಕಾಗುತ್ತದೆ.