2020 ರ ವಿಸ್ಮಯ: ನೀರೊನೊಳಗೆ ತನ್ನ ಬೇಟೆ ಹಿಡಿಯಲು ಈಜುವ ಬದಲಾಗಿ ನಡೆದು ಹೋಗುವ ಮೀನು! ನೋಡಿ ಈ Video

ಹಲವು ಬಾರಿ ನಾವು ಎಂತಹ ಚಿತ್ರಗಳನ್ನು ಅಥವಾ ವಸ್ತುಗಳನ್ನು ನೋಡುತ್ತೇವೆ ಎಂದರೆ, ಅವುಗಳನ್ನು ನೋಡಿದಂತಹ ಸಂದರ್ಭದಲ್ಲಿ ಒಂದು ಕ್ಷಣ ನಮ್ಮ ಕಣ್ಣನ್ನು ನಾವು ನಂಬಲು ಸಾಧ್ಯವಾಗುವುದಿಲ್ಲ. ಏಕೆಂದರೆ ಅವು ಸಾಮಾನ್ಯವಾಗಿ ಇರುವುದಿಲ್ಲ. ಅದೇ ರೀತಿ ನಮ್ಮ ಜೀವಜಗತ್ತಿನಲ್ಲಿ ಅದೆಷ್ಟೋ ರೀತಿಯಲ್ಲಿ ವೈವಿಧ್ಯಮಯ ಎನಿಸುವ ಹಾಗೂ ವಿಚಿತ್ರವಾದಂತಹ ಜೀವ ಜಂತುಗಳು ಇದ್ದು ಅವುಗಳನ್ನು ನಾವು ನೋಡಿದಾಗಲೂ ಕೂಡಾ ಇದೆಲ್ಲವೂ ಸಾಧ್ಯವೇ? ಇಂತಹ ಜೀವಿಗಳು ಕೂಡಾ ಇದೆಯೇ? ಎಂದು ನಾವು ಆಶ್ಚರ್ಯವನ್ನು ಪಡುತ್ತೇವೆ. ಒಂದು ವೇಳೆ ನಾವು ಜಲಚರಗಳ ಬಗ್ಗೆ ಮಾತನಾಡುವುದಾದರೆ ನೀರಿನಲ್ಲಿ ವಾಸಿಸುವ ಜೀವಿಗಳು ನೋಡಲು ಬಹಳ ಆಕರ್ಷಕವಾಗಿ, ಆಶ್ಚರ್ಯಕರವಾಗಿ ಹಾಗೂ ಕೆಲವು ಬಾರಿ ಭ ಯವನ್ನು ಕೂಡ ಹುಟ್ಟಿಸುವ ಹಾಗೆ ಇರುತ್ತವೆ. ಇನ್ನು ಮೀನುಗಳ ವಿಷಯಕ್ಕೆ ಬಂದರೆ ಅವುಗಳಲ್ಲಿ ನೋಡಲು ಸುಂದರವಾದ ಅಂತಹ ಅನೇಕ ಜಾತಿಯ ಮೀನುಗಳಿದ್ದರೆ, ಕೆಲವು ಮೀನುಗಳನ್ನು ನೋಡಿದರೆ ಭ ಯ ಕೂಡ ಉಂಟಾಗುತ್ತದೆ.

ಇಲ್ಲೊಬ್ಬ ಒಬ್ಬ ವ್ಯಕ್ತಿಯು ಸಾಗರದ ತಳದಲ್ಲಿ ಒಂದು ವಿಚಿತ್ರವಾದ ಮೀನನ್ನು ನೋಡಿ ಬಹಳ ಆಶ್ಚರ್ಯ ಪಟ್ಟಿದ್ದಾರೆ. ಏಕೆಂದರೆ ಅವರು ನೋಡಿದ್ದು ಈಜುತ್ತಿರುವ ಮೀನನಲ್ಲ, ಬದಲಿಗೆ ನಡೆದು ಹೋಗುತ್ತಿರುವ ಮೀನನ್ನು, ಆದ್ದರಿಂದಲೇ ಅವರು ಅದನ್ನು ಮೊದಲ ಬಾರಿಗೆ ಕಂಡಾಗ ಸಹಜವಾಗಿಯೇ ಆಶ್ಚರ್ಯಚಕಿತರಾಗಿದ್ದಾರೆ. ಸಾಗರ ತಳದಲ್ಲಿ ಹಿಂದಿರುವ ಕಂಡುಬಂದಿರುವ ಈ ವಿಚಿತ್ರವಾದ ಮೀನು ಬಹಳ ನಿಧಾನವಾಗಿ ಚಲಿಸುವುದನ್ನು ಗಮನಿಸಬಹುದು. ಇದು ತನ್ನ ಬೇಟೆಯನ್ನು ಹಿಡಿಯಲು ಈ ರೀತಿ ನಡೆಯುತ್ತದೆ ಎನ್ನಲಾಗಿದ್ದು, ಈ ಮೀನು ಸಾಮಾನ್ಯವಾಗಿ ಏಡಿಗಳನ್ನು ಹಾಗೂ ಸಣ್ಣ ಸಣ್ಣ ಗಳನ್ನು ಮೀನುಗಳನ್ನು ಹಿಡಿದು ತನ್ನ ಆಹಾರವನ್ನಾಗಿ ಮಾಡಿಕೊಳ್ಳುತ್ತದೆ.

ಈ ಮೀನಿನ ಮತ್ತೊಂದು ವಿಶೇಷ ಏನೆಂದರೆ ಅದು ತನ್ನ ರೆಕ್ಕೆಗಳನ್ನು ಕಾಲುಗಳಂತೆ ಬಳಸಿಕೊಂಡು ನಿಧಾನವಾಗಿ ನಡೆಯುವ ಸಾಮರ್ಥ್ಯವನ್ನು ಹೊಂದಿದೆ ಎನ್ನಲಾಗಿದೆ. 2020ರ ಕೊರೊನ ಸಂಕಷ್ಟ ಕಾಲದಲ್ಲಿ ಯಾವುದೇ ಅದ್ಭುತಗಳನ್ನು ನೋಡಲು ಸಾಧ್ಯವಿಲ್ಲ ಎನ್ನುವವರಿಗೆ ಈ ವಿಡಿಯೋ ನಿಜವಾಗಿಯೂ ಕೂಡ ಒಂದು ಅದ್ಭುತದಂತೆ ಕಂಡುಬಂದಿದೆ. ತಮ್ಮ ಜೀವನದ ಬಹುತೇಕ ಕಾಲವನ್ನು ಸಮುದ್ರ ಜೀವಿಗಳ ಅಧ್ಯಯನದಲ್ಲಿ ಕಳೆದಂತಹ ಸಮುದ್ರ ಜೀವಿಗಳ ತಜ್ಞರಾದ 50 ವರ್ಷ ವಯಸ್ಸಿನ ಮಿಕ್ಕಿ ಚಾರ್ಟರಿಸ್ ಅವರು, ಜನಪ್ರಿಯ ಬರಹವಾದ ಕೆರೆಬಿಯನ್ ರೀಫ್ ಲೈಫ್ ನ ಕರ್ತೃ ಕೂಡಾ ಆಗಿದ್ದು, ಅವರು ಈ ಮೀನನ್ನು ಗಮನಿಸಿದ್ದು ಅದರ ಬಗ್ಗೆ ಮಾತನಾಡುತ್ತಾ ಸಮುದ್ರ ಜೀವಿಗಳು ಬಹಳ ವಿಶೇಷ ಹಾಗೂ ವಿಲಕ್ಷಣವಾಗಿರುತ್ತವೆ ಎಂದಿದ್ದಾರೆ.

ತಾನು ಕೂಡಾ ಮೊದಲು ಸಾಗರದ ತಳದಲ್ಲಿ ಈ ಮೀನನ್ನು ನೋಡಿದಾಗ ಅದನ್ನು ಒಂದು ಮೀನಲ್ಲ ಎಂದು ಭಾವಿಸಿದ್ದೆ ಎಂಬುದಾಗಿ ಹೇಳಿದ್ದಾರೆ. ಅನಂತರ ಅವರು ಆ ಮೀನಿನ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಹಂಚಿಕೊಳ್ಳುತ್ತಾ ಈ ಮೀನು ಯಾವಾಗಲೂ ನಡೆಯುವುದಿಲ್ಲ, ಅದು ತನಗೆ ಅಗತ್ಯ ಇದ್ದಾಗ ಮಾತ್ರವೇ ನಡೆಯುತ್ತದೆ. ಇನ್ನುಳಿದಂತೆ ಬೇರೆ ಮೀನುಗಳಂತೆ ಇದು ಕೂಡಾ ಈಜು ಬಲ್ಲದು ಎಂದಿದ್ದಾರೆ‌. ಕಂದುಬಣ್ಣದ ಸ್ಪಂಜಿನ ಉಂಡೆಯಂತೆ ಈ ಮೀನು ಕಾಣುತ್ತದೆ ಎಂದು ಅವರು ಹೇಳಿದ್ದಾರೆ
ಈ ಮೀನನ್ನು ಮೇಲಿನಿಂದ ನೋಡಿದಾಗ ಒಂದು ಕಪ್ಪು ಕಲ್ಲಿನಂತೆ ಕಂಡಿತು. ಆದರೆ ಕೆಳಗಡೆಯಿಂದ ಗಮನಿಸಿದಾಗ ಅದರ ಕೆಂಪು ತುಟಿಗಳು ಕಾಣಿಸಿದವು ಎಂದವರು ತಿಳಿಸಿದ್ದಾರೆ.

ವಿಡಿಯೋ ನೋಡಿ

ಈ ವಿಶೇಷ ಜಾತಿಯ ಮೀನು ಸಾಮಾನ್ಯವಾಗಿ ಸಮುದ್ರಗಳಲ್ಲಿ ಡೈವ್ ಮಾಡುವವರಿಗೆ ಇವು ಕಾಣಿಸುವುದಿಲ್ಲ. ಏಕೆಂದರೆ ಈ ಮೀನುಗಳು ಎಲ್ಲಾ ಕಡೆ ಇರುವುದಿಲ್ಲ. ಅವು ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಮಾತ್ರವೇ ಕಂಡುಬರುತ್ತದೆ ಎಂದು ಹೇಳಿದ್ದಾರೆ ಈ ಹಿರಿಯ ಸಮುದ್ರ ತಜ್ಞರು. ಈ ವಿಶೇಷವಾದ ಮೀನು ನಿಜಕ್ಕೂ ನೋಡಿದಾಗ ಅದೊಂದು ಮೀನು ಎಂದು ಯಾರಿಗೂ ಅನಿಸುವುದಿಲ್ಲ, ಅದಾವುದೋ ಒಂದು ಅನ್ಯ ಸಮುದ್ರ ಜೀವಿ ಎಂದೇ ಅನಿಸುವುದು. ನಿಜಕ್ಕೂ ನಮ್ಮ ಪ್ರಕೃತಿಯೇ ಒಂದು ವಿಸ್ಮಯಗಳ ಆಗರ ಎಂಬುದರಲ್ಲಿ ಎರಡು ಮಾತಿಲ್ಲ.