2021 ರ ಒಳಗೆ ಕೊರೊನಾ ಲಸಿಕೆ ಬರೋದು ಅಸಾಧ್ಯ! ವಿಜ್ಞಾನ ಮತ್ತು ತಂತ್ರಜ್ಞಾನ ಮಂತ್ರಾಲಯದ ದಾವೆ!
ಭಾರತದಲ್ಲಿ ಈ ವರ್ಷ ಕೊರೊನ ಲಸಿಕೆ ತಯಾರಾಗುವದು ಅಸಾಧ್ಯವೆಂದು ಖುದ್ದು ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಅಧಿಕಾರಿಯೇ ಹೇಳಿದ್ದಾರೆ. (Ministry of Science and Technology on Corona Vaccine).
ನವದೆಹಲಿ: ಭಾರತೀಯ ವೈದ್ಯಕೀಯ ಸಂಶೋಧನ ಪರಿಷತ್ (ICMR) 15 ಆಗಸ್ಟ್ ವರೆಗೆ ಲಸಿಕೆ ಮಾರ್ಕೆಟ್ಟಿನಲ್ಲಿ ಉಪಲಬ್ಧವಾಗುವದೆಂದು ದಾವೆ ಮಾಡಿದ್ದಾರೆ. Ministry of Science and Technology on Corona Vaccine). ಆದರೆ ವಿಜ್ಞಾನ ಮತ್ತು ತಂತ್ರಜ್ಞಾನದವರು ಹೇಳುವ ಪ್ರಕಾರ ಈ ಲಸಿಕೆ ತಯಾರಾಗಲು 2021 ವರ್ಷ ಉದಯಿಸುವದು ಎಂದು ದಾವೆ ಮಾಡಿದ್ದಾರೆ. ಅದಕ್ಕಿಂತ ಮೊದಲು ಭಾರತದಲ್ಲಿ 2021 ರ ಮೊದಲು ಕೊರೊನ ಲಸಿಕೆ ಬರುವದು ಸಾಧ್ಯವಿಲ್ಲವೆಂದು, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ. Ministry of Science and Technology on Corona Vaccine).
ಕೊರೊನಾದ ಮೇಲೆ ಜಗತ್ತಿನಲ್ಲಿ ಇಲ್ಲಿಯವರೆಗೆ 140 ಲಸಿಕೆಗಳನ್ನು ತಯಾರಿಸಲಾಗಿದೆ. ಇದರಲ್ಲಿ 11 ಲಸಿಕೆಗಳು ಮಾನವನ ಪರೀಕ್ಷೆಗೆ ತಯಾರಾಗಿವೆ. ವಿಶೇಷವೆಂದರೆ ಈ 11 ಲಸಿಕೆಗಳಲ್ಲಿ 2 ಲಸಿಕೆಗಳು ಭಾರತದಲ್ಲಿ ತಯಾರಾಗಿವೆ. ಆದರೂ ಸಹಿತ ಈ ವರ್ಷ ಕೊನೆಯವರೆಗೆ ಕೊರೊನಾದ ಲಸಿಕೆ ಸಿದ್ಧಪಡಿಸಿ ಮಾರ್ಕೆಟ್ಟಿಗೆ ಬರುವದು ಕಠಿಣವಾಗಿದೆ, ಎಂದು ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಕಡೆಯಿಂದ ಹೇಳಲಾಗಿದೆ.

ಭಾರತದಲ್ಲಿ ಸುಮಾರು ಆರು ಕಂಪನಿಗಳು ಕೊರೊನಾದ ಮೇಲೆ ಲಸಿಕೆಯನ್ನು ಕಂಡು ಹಿಡಿಯುವ ಕೆಲಸ ಮಾಡುತ್ತಿವೆ. ದೇಶದಲ್ಲಿ ಎರಡು ಲಸಿಕೆ ತಯಾರಾಗಿವೆ. ಇದರಲ್ಲಿ ಒಂದು ICMR ಮತ್ತು ಇನ್ನೊಂದು ಭಾರತ ಬಾಯೊಟೆಕ್ ಕಂಪನಿಯವರ ಸಂಯುಕ್ತ ಪ್ರಯತ್ನದಿಂದ ತಯಾರಿಸಲಾಗಿದೆ. ಈ ಲಸಿಕೆಯ ಹೆಸರು ‘ಕೋವ್ಯಾಕ್ಸಿನ್’ ಹೀಗಿದೆ. ಈ ಲಸಿಕೆಗೆ ಮಾನವನ ಪರೀಕ್ಷೆಯ ಸಲುವಾಗಿ ಸರಕಾರದ ಮಾನ್ಯತೆಯೂ ದೊರಕಿದೆ. ಹಾಗೆಯೇ ‘ಜಾಯಡಸ್ ಕ್ಯಾಡಿಲಾ’ ಕಂಪೆನಿಯೂ ಸಹಿತ ಲಸಿಕೆ ತಯಾರಿಸಿದೆ. ಎಂಬ ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಕೊಟ್ಟಿದೆ.
140 ಲಸಿಕೆಗಳಲ್ಲಿ 11 ಲಸಿಕೆಗಳು ಪರೀಕ್ಷೆಗಾಗಿ ತಯಾರಾಗಿವೆ, ಇದೊಂದು ಸಮಾಧಾನಕರವಾದ ವಿಷಯವಾಗಿದೆ. ಇದು ಕೊರೊನದ ಮೇಲೆ ವಿಜಯ ಸಾಧಿಸಲು ಆಶೆಯ ಕಿರಣವಾಗಿದೆ ಎಂದು ಸಹ ಹೇಳಿದ್ದಾರೆ.
ಒಂದು ಲಸಿಕೆ ಮಾರ್ಕೆಟ್ಟಿಗೆ ಬರಬೇಕಾದರೆ ಅದರ ಹಿಂದೆ ದೊಡ್ಡದಾದ ಪ್ರಕ್ರಿಯೆ ಇದೆ. ಆ ಲಸಿಕೆಯ ಅನೇಕ ಪ್ರಕಾರದ ಕ್ಲಿನಿಕಲ್ ಟ್ರಾಯಲ್ ಮಾಡಬೇಕಾಗುತ್ತದೆ. ಈ ಎಲ್ಲ ಕಾರಣಗಳಿಂದಾಗಿ ಈ ವರ್ಷದ ಕೊನೆಯವರೆಗೆ ಕೊರೊನದ ಲಸಿಕೆ ಉಪಲಬ್ಧವಾಗುವದು ಕಠಿಣ ಎಂದು ಹೇಳುತ್ತಾರೆ.
ಜಗತ್ತಿನ ಎಲ್ಲ ವೈಜ್ಞಾನಿಕರು ಕೊರೊನದ ಮೇಲೆ ಔಷಧವನ್ನು ಹುಡುಕಲು ಹಗಲು ರಾತ್ರಿ ಪ್ರಯತ್ನ ಪಡುತ್ತಿದ್ದಾರೆ. ಇಷ್ಟಾದರೂ ಸಾರ್ವಜನಿಕ ಸ್ತರದ ಮೇಲೆ ಉಪಯೋಗಿಸುವಂಥ ಒಂದು ಲಸಿಕೆಯೂ ಇನ್ನುವರೆಗೆ ನಿರ್ಮಾಣವಾಗಿಲ್ಲ. ಇಲ್ಲಿಯವರೆಗೆ ಅನೇಕ ಲಸಿಕೆಗಳು ವಿಕಸಿತವಾಗಿದ್ದು ಅವುಗಳ ಪರೀಕ್ಷೆ ಮಾನವರ ಮೇಲೆ ನಡದೇ ಇದೆ. ಇವುಗಳಲ್ಲಿ ಕೆಲವು ಲಸಿಕೆಗಳ ಒಳ್ಳೆಯ ಉಪಯೋಗ ಆಗುತ್ತಿರುವದು ಪ್ರಾಥಮಿಕ ಸ್ವರೂಪದಲ್ಲಿ ನಿದರ್ಶನಕ್ಕೆ ಬಂದಿದೆ.