23 ಫ್ರೆಂಡ್ಸ್ ಜೊತೆ ಡಿನರ್ ಮಾಡಲು ಹೋದ ಪ್ರೇಯಸಿ, 2 ಲಕ್ಷದ ಬಿಲ್ ನೋಡಿ ಪರಾರಿಯಾದ ಪ್ರೇಮಿ!
ಪ್ರೇಮಿಗಳು ಅಂದರೆ ಈಗಿನ ಕಾಲದಲ್ಲಿ ಹೊಟೇಲ್ ರೆಸ್ಟೋರೆಂಟ್, ಸಿನಿಮಾ ಹೀಗೆ ಅಲ್ಲಿ ಇಲ್ಲಿ ಸುತ್ತುವುದು ಸಾಮಾನ್ಯ ಹಾಗೂ ಇಲ್ಲಿ ಅನೇಕ ಸಂದರ್ಭಗಳಲ್ಲಿ ಹುಡುಗನೇ ತನ್ನ ಪ್ರೇಯಸಿಗೆ ಬೇಕಾದ್ದನ್ನೆಲ್ಲಾ ಕೊಡಿಸುವುದು ಮಾತ್ರವೇ ಅಲ್ಲದೇ ಹೊಟೇಲ್ ಮತ್ತು ರೆಸ್ಟೋರೆಂಟ್ ಬಿಲ್ ಗಳನ್ನು ಕೂಡಾ ಪಾವತಿಸುವುದು ಉಂಟು. ನಾವು ಸಿನಿಮಾಗಳಲ್ಲಿ ಕೂಡಾ ಇಂತದ್ದನ್ನು ನೋಡಿಯೇ ಇದ್ದೇವೆ. ಬಾಯ್ ಫ್ರೆಂಡ್ ನ ಪರ್ಸ್ ಪೂರ್ತಿ ಖಾಲಿ ಆಗೋವರೆಗೂ ಕೂಡಾ ಶಾಪಿಂಗ್ ಮಾಡೋ ಹುಡುಗಿಯರನ್ನು. ರಿಯಲ್ ಲೈಫ್ ನಲ್ಲಿ ಕೂಡಾ ಅದೆಷ್ಟೋ ಜನ ಹುಡುಗರು ತಮ್ಮ ಹುಡುಗಿಯ ಫೋನ್ ರೀಚಾರ್ಜ್ ನಿಂದ ಹಿಡಿದು ಹೊರಗೆ ಎಲ್ಲಾ ಖರ್ಚನ್ನು ಕೂಡಾ ಭರಿಸ್ತಾ ಇರ್ತಾರೆ. ಕೆಲವೊಂದು ಸಲ ಅಂತ ಹುಡುಗಿಯ ಫ್ರೆಂಡ್ಸ್ ಗೂ ಕೂಡಾ ಖರ್ಚು ಮಾಡೋದು ಉಂಟು.
ಇಂತದ್ದೇ ಒಂದು ಘಟನೆ ಚೀನಾದಲ್ಲಿ ಕೂಡಾ ನಡೆದಿದ್ದು ಇಲ್ಲಿ ಏನು ನಡೆಯಿತು ಅನ್ನೋದು ಮಾತ್ರ ಬಹಳ ಆಸಕ್ತಿಕರ ಆಗಿರೋದು ಮಾತ್ರವೇ ಅಲ್ಲದೇ ಇದು ಕೂಡಾ ಯಾವುದೇ ಸಿನಿಮಾ ಅಥವಾ ಸೀರಿಯಲ್ ನ ಕಥೆಗಿಂತ ಕಡಿಮೆ ಏನಿಲ್ಲ ಅಂತಾನೇ ನಾವು ಹೇಳಬಹುದು. ಹಾಗಾದ್ರೆ ಆ ಘಟನೆ ಏನು? ಇಷ್ಟಕ್ಕೂ ಅಲ್ಲಿ ಪ್ರೇಮಿಗಳ ನಡುವೆ ನಡೆದಿದ್ದು ಆದ್ರೂ ಏನು? ಅಂತ ತಿಳಿಯೋ ಕುತೂಹಲ ಈಗಾಗಲೇ ನಿಮಗೆ ಮೂಡಿರಬಹುದು. ಬನ್ನಿ ಹಾಗಾದ್ರೆ ಇನ್ನು ತಡ ಮಾಡೋದು ಬೇಡ, ಚೀನಾದ ಆ ಒಂದು ರೆಸ್ಟೋರೆಂಟ್ ನಲ್ಲಿ ನಡೆದ ಆ ವಿಚಿತ್ರ ಘಟನೆಯ ಬಗ್ಗೆ ನಾವು ಕೂಡಾ ತಿಳಿದು ನಾವು ಕೂಡಾ ಒಂದು ಸಲ ನಕ್ಕು ಬಿಡೋಣ.
ಲಿಯು ಎನ್ನುವ ಯುವಕನೊಬ್ಬ ತನ್ನ ಪ್ರೇಮಿಗೆ ಒಂದು ದುಬಾರಿ ರೆಸ್ಟೋರೆಂಟ್ ನಲ್ಲಿ ಟ್ರೀಟ್ ಕೊಡೋ ಪ್ಲಾನ್ ಮಾಡಿ ಆಕೆಗೆ ಬರೋಕೆ ಹೇಳಿದ್ದಾನೆ. ಆದರೆ ಅವನ ಪ್ರೇಯಸಿ ತನ್ನ ಬಾಯ್ ಫ್ರೆಂಡ್ ಎಷ್ಟು ಉದಾರಿ ಅನ್ನೋದನ್ನ ತನ್ನ ಫ್ರೆಂಡ್ಸ್ ಮುಂದೆ ತೋರಿಸಿಕೊಳ್ಳಬೇಕು ಅಂತ ಲಿಯು ಹೇಳಿದ ರೆಸ್ಟೋರೆಂಟ್ ಗೆ ತಾನೊಬ್ಬಳೇ ಬರದೆ ತನ್ನ ಜೊತೆ ಒಬ್ಬರು ಇಬ್ಬರೂ ಅಲ್ಲ ಬದಲಿಗೆ ಬರೋಬ್ಬರಿ ತನ್ನ 23 ಜನ ಫ್ರೆಂಡ್ಸ್ ನ ಕರ್ಕೊಂಡು ಬಂದಿದ್ದಾಳೆ. ಸರಿ ಅವರು ರೆಸ್ಟೋರೆಂಟ್ ಗೆ ಬಂದ ಮೇಲೂ ವಿಷಯ ಏನೂ ಹದಗೆಟ್ಟಿರಲಿಲ್ಲ ಎಲ್ಲಾ ಸರಿಯಾಗಿಯೇ ಇತ್ತು. ಆದರೆ ಯಾವಾಗ ಲಿಯುನ ಗೆಳತಿಯ ಸ್ನೇಹಿತರು ತಮ್ಮ ಆರ್ಡರ್ ನೀಡೋಕೆ ಆರಂಭ ಮಾಡಿದ್ರೋ ಆಗ ಲಿಯು ಎದೆ ಬಡಿತ ಜಾಸ್ತಿ ಆಗಿದೆ.

ಎಲ್ಲರೂ ಕೂಡಾ ಡಿನ್ನರ್ ಮಾಡಿ ಮುಗಿಸಿದ ನಂತರ ಬಂದಿದೆ ಬಿಲ್, ಆ ಬಿಲ್ ಮೊತ್ತ 19,800 ಯುವಾನ್ ಅಂದರೆ ನಮ್ಮ ಭಾರತದ ಕರೆನ್ಸಿ ಪ್ರಕಾರ ಅದು 2 ಲಕ್ಷ 17 ಸಾವಿರದ 828 ರೂಪಾಯಿಗಳು. ಯಾವಾಗ ಬಿಲ್ ಈ ಮಟ್ಟದಲ್ಲಿ ಬಂತೋ ಅದನ್ನು ನೋಡಿ ಲಿಯು ಕಂಗಾಲಾಗಿದ್ದಾನೆ. ಬಿಲ್ ಪಾವತಿ ಮಾಡೋಕೆ ಆಗದೆ ಅಲ್ಲಿಂದ ಪರಾರಿಯಾಗಿದ್ದಾನೆ. ಲಿಯು ನ ಪ್ರೇಯಸಿ ಬಿಲ್ ಪಾವತಿ ಮಾಡೋದಕ್ಕೆ ತನ್ನ ಪ್ರೇಮಿ ಎಲ್ಲಿ ಹೋದ ಅಂತ ಅವನನ್ನು ಕಾಂಟಾಕ್ಟ್ ಮಾಡೋಕೆ ಟ್ರೈ ಮಾಡಿದ್ದಾಳೆ ಆದರೆ ಅವನು ಸಿಕ್ಕಿಲ್ಲ. ಆಗ ಆ ಯುವತಿ ಬೇರೆ ದಾರಿ ಕಾಣದೇ ಪೋಲಿಸರಿಗೆ ಲಿಯು ಕಾಣೆಯಾಗಿರುವ ಬಗ್ಗೆ ದೂ ರನ್ನು ನೀಡಿದ್ದಾಳೆ.
ಪೋಲಿಸರು ಲಿಯುವನ್ನು ಪತ್ತೆ ಹಚ್ಚಿ ಹುಡುಕಿದ ಮೇಲೆ ಲಿಯು ತಾನು ಎಲ್ಲಾ ಬಿಲ್ ಪಾವತಿ ಮಾಡುವುದಿಲ್ಲ, ಬೇಕಾದರೆ ಎರಡು ಟೇಬಲ್ ನ ಬಿಲ್ ಮಾತ್ರ ನೀಡುತ್ತೇನೆ ಎಂದಿದ್ದಾನೆ. ಆಮೇಲೆ ಆತ ಎರಡು ಟೇಬಲ್ ನ ಬಿಲ್ ಮಾತ್ರ ಕೊಟ್ಟಿದ್ದು, ಉಳಿದ ಮೊತ್ತ ಅಂದರೆ ಸುಮಾರು 15,402 ಯುವಾನ್ ಅಂದರೆ ಒಂದು ಲಕ್ಷ 69 ಸಾವಿರದ 444 ರೂಪಾಯಿಗಳನ್ನು ಯುವತಿಯೇ ಪಾವತಿ ಮಾಡಬೇಕಾಯಿತು ಎನ್ನಲಾಗಿದೆ. ತನ್ನ ಪ್ರೇಮಿಯ ಉದಾರತೆ ಎಲ್ಲರಿಗೂ ತಿಳಿಸಲು ಸರ್ಪ್ರೈಸ್ ನೀಡಲು ಹೋಗಿ ತಾನೇ ದಂ ಡ ವನ್ನು ತೆರುವಂತಾಗಿದೆ.