3 ಫ್ರೆಂಡ್ಸ್, ಒಂದು ಐಡಿಯಾ, ಕೆಲವೇ ವರ್ಷಗಳಲ್ಲಿ ಬೆಳೆದು ನಿಂತಿತು 150 ಕೋಟಿಯ ಕಂಪನಿ! ನೋಡಿ ಈ ಸಖತ್ ಸ್ಟೋರಿ!
ಮದುವೆ, ಬರ್ಥ್’ಡೇ, ಫ್ಯಾಮಿಲಿ ಪಾರ್ಟಿಗಳಂತಹ ಅನೇಕ ಸಮಾರಂಭಗಳಲ್ಲಿ ಸಾವಿರಾರು ರೂಪಾಯಿಗಳ ಖರ್ಚು, ಮೊದಲು ತೊಟ್ಟ ಡ್ರೆಸ್ ನ್ನೇ ಮತ್ತೆ ವಾಪಸ್ ತೊಟ್ಟಿದ್ದೇನೆ ಎನ್ನುವಂಥ ಭಯ, ಮತ್ತು ಎಲ್ಲಕ್ಕಿಂತ ಸುಂದರವಾಗಿ ಹಾಗೂ ಬೇರೆಯಾಗಿ ಕಾಣುವ ಹಂಬಲ. ಆದರೀಗ ನೀವು ಈ ಪ್ರಕಾರದ ವೆಚ್ಚವನ್ನು ತಪ್ಪಿಸಬಹುದು ಮತ್ತು ಎಲ್ಲದರಲ್ಲೂ ಎಲ್ಲರಕ್ಕಿಂತ ಸಂಪೂರ್ಣ ಭಿನ್ನವಾಗಿ ಕಾಣಬಹುದು. ಇದನ್ನು ಓದಿದ ಮೇಲೆ ನಿಮಗೆ ಆಶ್ಚರ್ಯವೆನಿಸಬಹುದು. ಇದು ಹೇಗೆ ಸಾಧ್ಯ ಎಂಬ ಯೋಚನೆ ಸಹ ನಿಮ್ಮ ಮನದಲ್ಲಿ ಮೂಡಬಹುದು.
ಈ ಪ್ರಕಾರದ ಒಂದು ಕನಸು ನನಸಾಗಿ ಮಾಡಿದ್ದು ಹೇಗೆಂದರೆ, ಮುಂಬಯಿಯ ಐಐಟಿಯ ಪಾಸ್ ಔಟ್ ಸ್ಟುಡೆಂಟ್ಸ್ ಗಳ ವಿಶಿಷ್ಟ ಪ್ರಕಾರದ ಸ್ಟಾರ್ಟ್ ಅಪ್ ಐಡಿಯಾ. ಮೂರು ಸ್ನೇಹಿತರು ಕೂಡಿಕೊಂಡು ಒಂದು ವಿಶಿಷ್ಟ ಪ್ರಕಾರದ ಪ್ಲೇಟ್ ಫಾರ್ಮ್ ತಯಾರಿಸಿದ್ದಾರೆ. ಅಲ್ಲಿ ನಿಮಗೆ ನಿಮ್ಮ ಪಾರ್ಟಿ ಫಂಕ್ಷನ್ ಗಳಲ್ಲಿ ತೊಟ್ಟುಕೊಳ್ಳುವ ಡ್ರೆಸಗಳ ಸಲುವಾಗಿ ಸಾವಿರಾರು ರೂಪಾಯಿ ಖರ್ಚು ಮಾಡುವ ಅವಶ್ಯಕತೆಯೇ ಇಲ್ಲ. ಹೇಗೆಂದರೆ, ಅವರು ‘ಫ್ಲಾಇರಾಬ್’ ಹೆಸರಿನ ಒಂದು ವೆಬ್ಸೈಟ್ ರಚಿಸಿದ್ದಾರೆ. ಅಲ್ಲಿ ಪುರುಷ ಮತ್ತು ಸ್ತ್ರೀಯರಿಗಾಗಿ ಸಾಧಾರಣ ವೆಚ್ಚದಲ್ಲಿ ಡ್ರೆಸ್ ಗಳು ಬಾಡಿಗೆಯಲ್ಲಿ ದೊರೆಯುತ್ತವೆ. ಇಲ್ಲಿಯ ಒಂದು ವಿಶೇಷತೆ ಏನೆಂದರೆ ಮನೀಷ್ ಮಲ್ಹೋತ್ರಾ ರಂತಹ ಅನೇಕ ದಿಗ್ಗಜ ಡಿಸೈನರ್ಸ್’ಗಳ ಬಟ್ಟೆಗಳು ಸಹ ಅತ್ಯಂತ ಅಗ್ಗದ ಬೆಲೆಯಲ್ಲಿ ಬಾಡಿಗೆಗೆ ಕೊಂಡುಕೊಳ್ಳಬಹುದು.

ಭಾರತೀಯ ಪ್ರೌದ್ಧೋಗಿಕ ಸಂಸ್ಥಾನ ಮುಂಬೈಯ ಮೂರು ವಿದ್ಯಾರ್ಥಿಗಳಾದ ಪ್ರಣಯ, ಶ್ರೇಯಾ ಮತ್ತು ತುಷಾರ್ ರು ದಿನಾಲು ತಮ್ಮ ಬಟ್ಟೆಗಳನ್ನು ರೀಪಿಟ್ (ಮತ್ತೆ ಮತ್ತೆ ತೊಟ್ಟುಕೊಳ್ಳುವ) ಸಮಸ್ಯೆಗಳನ್ನು ಎದುರಿಸಿದ್ದಾರೆ. ನಂತರ ಇದರಿಂದ ಮುಕ್ತಿ ಪಡೆಯುವ ಸಲುವಾಗಿ ಮತ್ತು ಜನರಿಗೆ ಇಂಥ ಸಮಸ್ಯೆ ಎದುರಾಗಬಾರದೆಂಬ ಉದ್ದೇಶದಿಂದ ಈ ಪ್ರಕಾರದ ಒಂದು ವಿಶಿಷ್ಟ ಯೋಜನೆಯನ್ನು ಜಾರಿಯಲ್ಲಿ ತಂದಿದ್ದಾರೆ. ಇದರ ಹಿಂದಿರುವ ಬೃಹತ್ ವ್ಯಾಪಾರ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು ‘ಫ್ಲಾಇರಾಬ್’ ಎಂಬ ವೆಬ್ಸೈಟ್ ಮೂಲಕ ಸ್ಟಾರ್ಟ್ ಅಪ್ ಗೆ ಅಡಿಪಾಯ ಹಾಕಿದರು.
ಸಪ್ಟೆಂಬರ್ 2016 ರಲ್ಲಿ ಪ್ರಾರಂಭವಾದ ಈ ವೆಬ್ಸೈಟ್ ಕೇವಲ ಒಂದೇ ವರ್ಷದಲ್ಲಿ ಲಕ್ಷಾಂತರ ಜನರ ಗಮನವನ್ನು ತನ್ನ ಕಡೆಗೆ ಸೆಳೆದುಕೊಳ್ಳಲು ಯಶಸ್ವಿಯಾಯಿತು. ವೆಬ್ಸೈಟ್ ಕ್ಕಿಂತ ಮುಂಚೆ ‘ಫ್ಲಾಇರಾಬ್’ ಒಂದು ಆಪ್ ಮುಖಾಂತರ ಬೆಳಕಿಗೆ ಬಂದಿತ್ತು, ಇದು 2015 ರಲ್ಲಿ ಪ್ರಾರಂಭವಾಗಿತ್ತು. ಈ ವಿಶಿಷ್ಟ ಪ್ರಕಾರದ ಪರಿಕಲ್ಪನೆ ಜನರಿಂದ ಮೆಚ್ಚುಗೆ ಪಡೆದಾಗ ಅದನ್ನು ವೆಬ್ಸೈಟ್ ಮೂಲಕ ಜಾರಿಯಲ್ಲಿ ತಂದರು.

ವಾಸ್ತವವಾಗಿ ವರ್ಷ 2012 ರಲ್ಲಿ ಶ್ರೇಯಾ ಅವರು ಒಂದು ಟ್ರೇನಿಂಗ್ ಸಲುವಾಗಿ ಎಆರ್’ಬಿಎನ್’ಬಿ ಯ ಆಫೀಸಿಗೆ ಹೋಗಿದ್ದರು. ಅಲ್ಲಿ ಹೋಗುವದಕ್ಕಿಂತ ಮುಂಚೆ ಅವರ ತಲೆಯಲ್ಲಿ ಬಾಡಿಗೆಯ ಕುರಿತು ವಿಚಾರ ಬಂದಿತ್ತು, ಒಂದು ದಿವಸದ ಸಲುವಾಗಿ ನಾವು ಆ ವಸ್ತುಗಳನ್ನು ಉಪಯೋಸುವೆವು. ಅಂತಹ ವಸ್ತುಗಳನ್ನು ಕೊಂಡುಕೊಳ್ಳುವ ಸಲುವಾಗಿ ತುಂಬಾ ಖರ್ಚು ಮಾಡಬೇಕಾಗುತ್ತದೆ. ಅಷ್ಟೇ ಅಲ್ಲ ಅವುಗಳನ್ನು ಖರೀದಿ ಮಾಡದೆ ಇರುವದು ಕೂಡಾ ಸಾಧ್ಯವಿಲ್ಲ, ಎಂಬ ವಿಚಾರ ಅವರ ತಲೆಯಲ್ಲಿ ಬಂದಿತ್ತು. ಈ ವಿಚಾರದ ಕುರಿತು ಶ್ರೇಯಾ ತನ್ನ ಸ್ನೇಹಿತರೊಂದಿಗೆ ಚರ್ಚೆ ಮಾಡಿ ಅದಕ್ಕೆ ಫ್ಲಾಯಿರಾಬ್ ಎಂಬ ಹೆಸರು ಇಟ್ಟರು. ಆದರೆ ಸಂಪೂರ್ಣವಾಗಿ ಪ್ರಾರಂಭಿಸುವ ಮೊದಲು, ಅವರು ಪೈಲಟ್ ಪ್ರಾಜೆಕ್ಟ್ ಅನ್ನು ಪ್ರಾರಂಭಿಸಿದರು, ಇದರಲ್ಲಿ ಈ ಮೂವರು ಮಹಿಳೆಯರ ಒಂದು ದೊಡ್ಡ ಗುಂಪು ಮೆಚ್ಚಿದ್ದಾರೆಂದು ಅರಿತುಕೊಂಡರು. ಇಲ್ಲಿಂದ, ಅವರ ಸ್ಥೈರ್ಯ ಹೆಚ್ಚಾಯಿತು ಮತ್ತು ನಂತರ ಅವರು ತಮ್ಮ ವ್ಯವಹಾರಕ್ಕೆ ಹೊಸ ನಿರ್ದೇಶನ ನೀಡಿದರು.

ವೆಬ್ಸೈಟ್ ಮಟ್ಟ ಟೆಕ್ನೋಲೊಜಿ ಯ ಕೆಲಸವೆಲ್ಲ ಅವರ ಟೀಮ್ ಸದಸ್ಯರೇ ಮಾಡಿದರು. ಸದ್ಯದ ಪರಸ್ಥಿತಿಯಲ್ಲಿ ಫ್ಲಾಇರಾಬ್ ನಲ್ಲಿ ಎಂಜಿನಿಯರ್, ಮೆಡಿಕಲ್ ನಂತಹ ಅನೇಕ ಫೀಲ್ಡ್ ನ ಸುಮಾರು 30 ಕ್ಕಿಂತ ಹೆಚ್ಚು ಯುವಕರು ಜೊತೆಗೂಡಿದ್ದಾರೆ. ಅಷ್ಟೇ ಅಲ್ಲ ಈ ಟೀಮ್ ನಲ್ಲಿ ಅಮೆಜಾನ್ ಮತ್ತು ಮತ್ತಿತರ ಅನೇಕ ದೊಡ್ಡ ಕಂಪನಿಗಳನ್ನು ತೊರೆದು ಬಂದ ಯುವಕರೂ ಸಹ ಇದರಲ್ಲಿದ್ದಾರೆ. ಹೂಡಿಕೆದಾರರು ಇವರ ಆಲೋಚನೆಯಲ್ಲಿ ವಿಶ್ವಾಸ ತೋರಿಸುತ್ತ ಇದುವರೆಗೆ ಒಟ್ಟು 35 ಕೋಟಿ ರೂ. ಹೂಡಿಕೆ ಮಾಡಿದ್ದಾರೆ.
ಈ ವೆಬ್ಸೈಟ್ ಬಹಳಷ್ಟು ಕಡಿಮೆ ಸಮಯದಲ್ಲಿಯೇ ಇನ್ನೀತರ ದೊಡ್ಡ ಫಾಷ್ಯನ್ ಬ್ರ್ಯಾಂಡ್ ಕಂಪನಿಗಳಿಗೆ ಮೀರಿಸಿದೆ, ಒಂದು ದಿವಸದಲ್ಲಿ ಸುಮಾರು ಸಾವಿರಕ್ಕಿಂತ ಹೆಚ್ಚು ಜನರು ಫ್ಲಾಇರಾಬ್ ಆಪ್ ಅನ್ನು ಡೌನ್ಲೋಡ ಮಾಡಿಕೊಳ್ಳುತ್ತಿದ್ದಾರೆ. ಈ ವೇದಿಕೆಯ ಜೊತೆಗೆ ಡಿಸೈನರ್ ಮಸಾಬಾ, ಋತು ಕುಮಾರ್ ರಂತಹ ಅನೇಕ ಜನರು ಜೊತೆಗೂಡಿದ್ದಾರೆ. ಆನ್ಲೈನ್ ನಲ್ಲಿ ಯಶಸ್ಸು ಗಳಿಸಿದ ನಂತರ ಅವರು ಸದ್ಯಕ್ಕೆ ಆಫ್’ಲೈನ್ ಸ್ಟೋರ್ಸ್ ಗಳು ಸಹ ತಗೆಯಲು ಪ್ರಾರಂಭಿಸಿದ್ದಾರೆ. ಸದ್ಯಕ್ಕೆ ಇವರ ಸ್ಟೋರ್ಸ್ ಗಳು ದಿಲ್ಲಿ, ಹೈದರಾಬಾದ್, ಮುಂಬೈ ಮತ್ತು ಬೆಂಗಳೂರುನಲ್ಲಿವೆ. ಆದರೆ ಮುಂಬರುವ ದಿನಗಳಲ್ಲಿ ಇವುಗಳನ್ನು ಹೆಚ್ಚಿಸುವ ಯೋಜನೆ ಮಾಡಿದ್ದಾರೆ.

‘ಕೆನ್ಫೋಲಿಯೊಸ್’ ದ ಮಾತುಕತೆಯ ಸಮಯದಲ್ಲಿ ತುಷಾರ್ ಅವರು ಹೇಳಿದ್ದಾರೆ, ” ಸದ್ಯದ ಪರಸ್ಥಿತಿಯಲ್ಲಿ ನಮ್ಮ ಜೊತೆಗೆ 80 ಡಿಸೈನರ್ ಮತ್ತು 300 ಕ್ಕಿಂತ ಹೆಚ್ಚು ಸಪ್ಲಾಯರ್ಸ್ ಇದ್ದಾರೆ. ಇವರ ಹೊರತು ತಿಂಗಳಿಗೆ ಸುಮಾರು 5 ಲಕ್ಷಕ್ಕಿಂತ ಹೆಚ್ಚು ವಿಜಿಟರ್ಸ್ ತಮ್ಮ ವೆಬ್ಸೈಟ್ ಮೇಲೆ ಬರುತ್ತಾರೆ, ಅದರಲ್ಲಿ 5% ಜನರು ಫ್ಲಾಇರಾಬ್ ನ ಡ್ರೆಸ್’ಗಳು ಬಾಡಿಗೆಯ ಸ್ವರೂಪದಲ್ಲಿ ತಗೆದುಕೊಳ್ಳುವರು. ಈ ಸಂಗತಿಯಿಂದ ತಿಂಗಳಿನ ಟರ್ನ್ ಓವರ್ ಸಲೀಸಾಗಿ ಗುರುತಿಸಬಹುದು”.
ಒಂದು ಸಾಧಾರಣವಾದ ವಿಚಾರವನ್ನು ಸ್ಮಾರ್ಟ್ ರೀತಿಯಲ್ಲಿ ಜನರ ಮುಂದೆ ಪ್ರಸ್ತುತ ಪಡಿಸುವ ಮೂಲಕ ಕೋಟ್ಯಂತರ ರೂಪಾಯಿಯ ವ್ಯವಹಾರ ನಡೆಸಬಹುದು. ಶ್ರೇಯಾ ಮತ್ತು ಅವರ ತಂಡದ ಯಶಸ್ಸು ಇದನ್ನು ಸೂಚಿಸುತ್ತದೆ.

ಇದರ ಕುರಿತು ನೀವು ನಿಮ್ಮ ಪ್ರತಿಕ್ರಿಯೆಯನ್ನು ಕಾಮೆಂಟ್ ಬಾಕ್ಸ್ ನಲ್ಲಿ ನೀಡಬಹುದು ಮತ್ತು ಈ ಪೋಸ್ಟ್ ಅವಶ್ಯವಾಗಿ ಶೇರ್ ಮಾಡಿ.