3 ವರ್ಷಗಳಿಂದ ಅಲೆದಾಡುತ್ತಿದ್ದ 70 ವರ್ಷದ ವೃದ್ಧ, ಲಾಕ್ಡೌನ್ ಹಿಂದಿರುಗಿಸಿತು ಆತನ ಸ್ಮರಣಶಕ್ತಿ, ಜೊತೆಗೆ ಕುಟುಂಬವು ಸಿಕ್ಕಿತು!
ನವ ದೆಹಲಿ. :- ಕೊರೊನಾವೈರಸ್ ಸೋಂಕಿನಿಂದಾಗಿ ಮೇ 31 ರವರೆಗೆ ದೇಶದಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ. ಪರಿಣಾಮವಾಗಿ, ಅನೇಕ ಜನರು ತಮ್ಮ ಕುಟುಂಬಗಳಿಂದ ದೂರವಿದ್ದು ಇತರ ನಗರಗಳಲ್ಲಿ ಸಿಲುಕಿಕೊಂಡಿದ್ದಾರೆ. ಅವರೆಲ್ಲರೂ ಪರಸ್ಪರ ಭೇಟಿಯಾಗಲು ಕಾಯುತ್ತಿದ್ದಾರೆ. ಈ ಸಮಯದಲ್ಲಿ ಎಷ್ಟೋ ಜನರು ತಮ್ಮ ಕುಟುಂಬಗಳಿಂದ ದೂರವಿದ್ದಾರೆ. ಆದರೆ ಇಂತಹ ಸಂದರ್ಭದಲ್ಲಿ ಒಂದು ವಿಚಿತ್ರ ಘಟನೆಯೊಂದು ನಡೆದಿದೆ ಅದೇನೆಂದರೆ , ಈ ಲಾಕ್ಡೌನ್ ನಲ್ಲಿ 3 ವರ್ಷಗಳಿಂದ ಮನೆಯಿಂದ ದೂರವಿದ್ದ ಮೈಸೂರಿನ ಬೀದಿಗಳಲ್ಲಿ ಅಲೆದಾಡುತ್ತಿರುವ ವೃದ್ಧೆಯೊಬ್ಬರನ್ನು ಮತ್ತೆ ತಮ್ಮ ಕುಟುಂಬದವರ ಜೊತೆಗೂಡಿಸಿದೆ.
70 ರ ಹರೆಯದ ಕರಮ್ ಸಿಂಗ್ ಅವರೊಂದಿಗೆ ಈ ಘಟನೆ ನಡೆದಿದೆ. ಅಧಿಕಾರಿಗಳ ಪ್ರಕಾರ, ಕರಮ್ ಸಿಂಗ್ ತನ್ನ ಮಗನ ಮದುವೆಗೆ ಹಣ ಸಂಗ್ರಹಿಸಲು ಸುಮಾರು 3 ವರ್ಷಗಳ ಹಿಂದೆ ಉತ್ತರ ಪ್ರದೇಶದ ತನ್ನ ಗ್ರಾಮವನ್ನು ತೊರೆದಿದ್ದರು. ಅವರಿಗೆ ಮೈಸೂರಿಗೆ ಹೋಗುವದಿತ್ತು ಆದರೆ ಅವರು ಗಡಿಬಿಡಿಯಲ್ಲಿ ಬೆಂಗಳೂರಿಗೆ ಹೋಗುವ ರೈಲನ್ನು ಹಿಡಿದರು, ಕೊನೆಗೂ ಹೇಗಾದರೂ ಮಾಡಿ ಮೈಸೂರು ತಲುಪಿದರು.

ಮನೆಯಿಂದ ದೂರವಿರುವುದರಿಂದ, ದೀರ್ಘ ಪ್ರಯಾಣ ಮತ್ತು ಒತ್ತಡವು ಆತನನ್ನು ರೋಗಿಯನ್ನಾಗಿ ಮಾಡಿತು. ಅವನು ತನ್ನ ಸ್ಮರಣೆಯನ್ನು ಕಳೆದುಕೊಂಡನು. ಅವನ ಹಿಂದಿನ ಜೀವನವನ್ನು ನೆನಪಿಸಿಕೊಳ್ಳಲಾಗಲಿಲ್ಲ. ಅವನು ಮೈಸೂರಿನ ಬೀದಿಗಳಲ್ಲಿ ಅಲೆದಾಡಲು ಪ್ರಾರಂಭಿಸಿದನು. ಅಂತಹ ಸಮಯದಲ್ಲಿ ಅವನು ಜನರು ಒದಗಿಸಿದ ಆಹಾರದ ಮೇಲೆ ಬದುಕುಳಿದನು.
ಈಗ ದೇಶದಲ್ಲಿ ಲಾಕ್ಡೌನ್ ಪ್ರಾರಂಭವಾಗಿದ್ದರಿಂದ, ಸ್ಥಳೀಯ ಅಧಿಕಾರಿಗಳು ಮೈಸೂರಿನಲ್ಲಿಯೂ ಲಾಕ್ಡೌನ್ ಜಾರಿಗೊಳಿಸಿ ಪ್ರಶಾಸನದ ನಿಯಮಗಳನ್ನು ಪಾಲನೆ ಮಾಡಬೇಕೆಂದು ಜನರಿಗೆ ತಿಳಿಸಿದರು. ಈ ಸಮಯದಲ್ಲಿ ಕರಮ್ ಸಿಂಗ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವುದು ಅಧಿಕಾರಿಗಳಿಗೆ ಕಂಡು ಬಂದಿತು. ಅವರು ಮಾನಸಿಕವಾಗಿ ಸದೃಡರಾಗಿರಲಿಲ್ಲ. ಅವರ ಬಗ್ಗೆ ಯಾರಿಗೂ ಕೇಳಿದರು ಏನೂ ಗೊತ್ತಿಲ್ಲ ಎಂದು ಹೇಳಿದರು. ಅಂತಹ ಪರಿಸ್ಥಿತಿಯಲ್ಲಿ ಅಧಿಕಾರಿಗಳು ಅವರನ್ನು ನಂಜರಾಜ ಬಹದ್ದೂರ್ ವೃದ್ಧಾಶ್ರಮದಲ್ಲಿ ಇರಿಸಿದರು.
ವೃದ್ಧಾಶ್ರಮದಲ್ಲಿ ಕೆಲವು ಮನೋವೈದ್ಯರು ಅವರಿಗೆ ಚಿಕಿತ್ಸೆ ನೀಡಿದರು. ಪರಿಣಾಮವಾಗಿ, ಅವರ ನೆನಪು ಕ್ರಮೇಣ ಮರಳಲು ಪ್ರಾರಂಭಿಸಿತು. ಅವರು ತಮ್ಮ ಪ್ರದೇಶದ ವಿಳಾಸವನ್ನು ನೀಡಿದರು, ಅದು ಉತ್ತರ ಪ್ರದೇಶದಲ್ಲಿಯ ವಿಳಾಸ ವಾಗಿತ್ತು. ಅಂತಹ ಪರಿಸ್ಥಿತಿಯಲ್ಲಿ ಮೈಸೂರು ಸಿಟಿ ಕಾರ್ಪೊರೇಷನ್ ತನ್ನ ಕುಟುಂಬವನ್ನು ಪೊಲೀಸರ ಮೂಲಕ ಸಂಪರ್ಕಿಸಿದರು ನಡೆದ ಘಟನೆಯನ್ನೆಲ್ಲ ಅವರ ಮಗನಿಗೆ ತಿಳಿಸಿದರು. ಮಕ್ಕಳು ತಮ್ಮ ತಂದೆ ಜೀವಂತವಿಲ್ಲ ಎಂದುಕೊಂಡು ನೋವು ಪಡುತ್ತಿದ್ದ ಮಕ್ಕಳಿಗೆ ಈ ಸುದ್ದಿ ಕೇಳಿ ಎಲ್ಲಿಲ್ಲದ ಸಂತೋಷ ಉಕ್ಕಿ ಬಂದಿತು. ಕರಮ್ ಸಿಂಗ್ ಅವರನ್ನು ಮೈಸೂರಿನಿಂದ ಯುಪಿಗೆ ಕಳುಹಿಸಲು ಕ್ರೆಡಿಟ್ ಐ ಎಂಬ ಸ್ವಯಂಸೇವಾ ಸಂಸ್ಥೆ ವ್ಯವಸ್ಥೆ ಮಾಡುತ್ತಿದೆ.