30 ಲಕ್ಷ ₹ ಗಳ ಐಷಾರಾಮಿ ಕಾರು ಬರೀ 50 ಸಾವಿರ ₹ ಗಳಲ್ಲಿ ತಂದನು ಮನೆಗೆ, ಈ ವ್ಯಕ್ತಿಯ ಕಥೆ ಕೇಳಿದರೆ ತಲೆ ತಿರುಗುತ್ತೆ…
ದುಬಾರಿ ಗಾಡಿಯಲ್ಲಿ ಸುತ್ತಾಡಬೇಕು, ತಮ್ಮ ಕಡೆಗೂ ದೊಡ್ಡ ದೊಡ್ಡ ಬ್ರಾಂಡ್ಗಳ ವಾಹನಗಳು ಇರಬೇಕು ಎಂಬ ಕನಸು, ಆಸೆ ಅನೇಕರದ್ದಾಗಿರುತ್ತದೆ. ಈ ಕನಸುಗಳನ್ನು ಪೂರ್ಣಗೊಳಿಸಿಕೊಳ್ಳಲು ಒಬ್ಬೊಬ್ಬರು ತಮ್ಮ ಸಂಪೂರ್ಣ ಜೀವನವನ್ನೆ ವ್ಯಯಿಸುತ್ತಾರೆ. ಆದರೂ ಅವರಿಗೆ ಇಂಥ ಐಶಾರಾಮಿ ಕಾರುಗಳನ್ನು ಖರೀದಿಸುವದಾಗುವದಿಲ್ಲ. ಆದರೆ ಮಹಾರಾಷ್ಟ್ರದ ಪುಣೆಯ ನಿವಾಸಿಯಾದ ತರುಣನೊಬ್ಬ 50 ಸಾವಿರ ರೂಪಾಯಿಗಳಲ್ಲಿ ಟೊಯೊಟಾ ಫಾರ್ಚುನರ್ ಐಷಾರಾಮಿ ಕಾರನ್ನು ಮನೆಗೆ ತೆಗೆದುಕೊಂಡು ಬಂದಿದ್ದಾನೆ. ಈ ಕಾರನ್ನು ಮನೆಗೆ ತರಲು ತರುಣ ಮಾಡಿದ ಕಥೆ ಕೇಳಿ ಪೊಲೀಸರ ತಲೆಯು ಸಹ ಗಿರ್ರ ಗಿರ್ರ ಅಂತ ಗಿರಕಿ ಹೊಡೆಯುತ್ತದೆ.
ಸಂಪೂರ್ಣ ಘಟನೆಯ ಬಗ್ಗೆ ಹೇಳಬೇಕಾದರೆ ಪುಣೆ ಜಿಲ್ಲೆಯ ದೌಂಡ ತಾಲೂಕಿನ ನಿವಾಸಿಯಾದ ಒಬ್ಬ ದೊಡ್ಡ ರೈತನು ಕೆಲವೇ ದಿವಸಗಳ ಹಿಂದೆ ಐಷಾರಾಮಿ ಫಾರ್ಚುನರ್ ಕಾರನ್ನು ಖರೀದಿಸಿದ್ದನು. ನಂತರ ತನ್ನ ವೈಯಕ್ತಿಕ ಕಾರಣಗಳಿಂದಾಗಿ ಖರೀದಿಸಿದ ಆ ಕಾರನ್ನು ಮಾರಾಟಕ್ಕೆ ತೆಗೆದನು. ಆ ಕಾರಣ ಖರೀದಿಸಲು ಒಬ್ಬ ಗ್ರಾಹಕನು 12 ಲಕ್ಷ ರೂಪಾಯಿಗಳಿಗೆ ವ್ಯವಹಾರ ಮುಗಿಸಿದನು. ಅದಕ್ಕಾಗಿ 2 ಲಕ್ಷ ರೂಪಾಯಿಗಳನ್ನು ಮುಂಗಡವಾಗಿ ನೀಡಬೇಕೆಂದು ನಿಶ್ಚಯವಾಯಿತು. ಆದರೆ ಈ ಮಾರಾಟ ಪ್ರಸ್ತುತ ರೈತನಿಗೆ ಮಾತ್ರ ತುಂಬಾ ದುಬಾರಿಯಾಗಿ ಪರಿಣಮಿಸಿತು. ಈ ವ್ಯವಹಾರದಲ್ಲಿ ಗಾಡಿಯ ಜೊತೆಗೆ ಹಣವೂ ಸಿಗದೇ ಹೋಯಿತು.

ಈ ವ್ಯವಹಾರವನ್ನು ಮಾಡಿದ ತರುಣ ಆರೋಪಿಯು 2 ಲಕ್ಷ ರೂಪಾಯಿಗಳ ಬದಲಾಗಿ ಬರೀ 50 ಸಾವಿರ ರೂಪಾಯಿಗಳನ್ನು ರೈತನಿಗೆ ನೀಡಿ ಉಳಿದ ಹಣವನ್ನು ಹಂತಹಂತವಾಗಿ ನೀಡುವುದಾಗಿ ಹೇಳಿದ. ಗಾಡಿಯ ಮಾಲೀಕನಾದ ರೈತನಿಗೆ ತನ್ನ ವಿಶ್ವಾಸದ ಬಲೆಯಲ್ಲಿ ಸಿಲುಕಿಸಿ ಗಾಡಿಯನ್ನೂ ಸಹ ತನ್ನ ಹೆಸರಿಗೆ ಮಾಡಿಸಿಕೊಂಡು ಬರಿ 50 ಸಾವಿರ ರೂಪಾಯಿಗಳಲ್ಲಿ ಕಾರನ್ನು ಮನೆಯ ಮುಂದೆ ತಂದು ನಿಲ್ಲಿಸಿ ಕೊಂಡಿದ್ದಾನೆ. ತದನಂತರ 50 ಸಾವಿರ ರೂಪಾಯಿಗಳಲ್ಲಿ ಖರೀದಿಸಿದ ಫಾರ್ಚುನರ್ ಕಾರಿನ ಒಂದೇ ಒಂದು ಕಂತನ್ನು ಸಹ ತುಂಬಲು ಆರೋಪಿಯ ನಿರಾಕರಿಸಿದ್ದಾನೆ. ಹೀಗಾಗಿ ಆ ರೈತ 11 ಲಕ್ಷ 50 ರೂಪಾಯಿಗಳ ಮೋಸ ಹೋಗಿದ್ದಾನೆ.
ಸದ್ಯ ಈ ಪ್ರಕರಣದಲ್ಲಿ ದೌಂಡ್ ತಾಲೂಕಿನ ದೇವುಳಗಾವ್ ನಿವಾಸಿಯಾದ ಸುರೇಶ್ ಜಾಚಕ್ ಅವರ ಹೇಳಿಕೆಯ ಮೇರೆಗೆ ಪೊಲೀಸರು ಸಂಪತ್ ದತ್ತು ಖಾರತೊಡೆ ಇವರ ವಿರೋಧದಲ್ಲಿ ಕೇಸನ್ನು ದಾಖಲಿಸಿದ್ದಾರೆ. ಈ ಘಟನೆಯ ಸಂಪೂರ್ಣ ತನಿಖೆ ಪೊಲೀಸರು ಮಾಡುತ್ತಿದ್ದಾರೆ.