35 ವರ್ಷದ ಯುವಕನ ಮನಸ್ಸಾಯಿತು 80 ವರ್ಷದ ಅಜ್ಜಿಯ ಮೇಲೆ; ಫೇಸ್ಬುಕ್ ನಲ್ಲಾದ ಪ್ರೀತಿಗಾಗಿ ತನ್ನ ಧರ್ಮವನ್ನೇ ಬದಲಾಯಿಸಿಕೊಂಡ ಅಜ್ಜಿ!

ಪ್ರೀತಿಗೆ ವಯಸ್ಸಿಲ್ಲ ಎಂಬ ಮಾತಿಗೆ ಇಲ್ಲಿಯವರೆಗೆ ನಾವು ಅನೇಕ ಉದಾಹರಣೆಗಳನ್ನು ಕೇಳಿದ್ದೇವೆ ಮತ್ತು ನೋಡಿದ್ದೇವೆ. ಕಾಲ ಬದಲಾದಂತೆ ಪ್ರೇಮಿಗಳ ಪ್ರೀತಿಯಾಗುವ ಪ್ಲಾಟ್ಫಾರ್ಮ್ ಸಹಿತ ಬದಲಾಗಿದೆ. ಸದ್ಯ ಎಷ್ಟೋ ಹೊಸ ಸಂಬಂಧಗಳು ಸೋಶಿಯಲ್ ಮೀಡಿಯಾಗಳ ಮುಖಾಂತರ ಬೆಸೆಯುತ್ತಿವೆ. ಈ ಲೇಖನದಲ್ಲಿ ಇಂತಹದೇ ಒಂದು ಹೊಸದಾದ ಪ್ರೇಮ್ ಕಹಾನಿಯನ್ನು ನೀವು ಓದಲಿದ್ದೀರಿ.

ಈ ಕತೆ ಕೇಳಿದಾಗ ಮೊದಲು ನಿಮಗೇಕೆ ಯಾರಿಗೂ ವಿಶ್ವಾಸ ಕೊಡುವುದಿಲ್ಲ. ಆದರೆ ಇದು ನಿಜವಾಗಿದೆ. 35 ವರ್ಷದ ಯುವಕನೊಬ್ಬನಿಗೆ 80 ವರ್ಷದ ಅಜ್ಜಿಯ ಜೊತೆಗೆ ಫೇಸ್ಬುಕ್ ಮುಖಾಂತರ ಪ್ರೀತಿಯಾಗಿದೆ. ಮಹಿಳೆಯು ಹೇಳುವ ಹಾಗೆ, ಹಣ ಅಥವಾ ಸಂಪತ್ತು ಈ ಪ್ರೀತಿಯಲ್ಲಿ ನಮಗೆ ಯಾವುದೂ ಸಂಬಂಧವಿಲ್ಲ. ಬರೀ ನಮ್ಮಿಬ್ಬರ ಮನಸ್ಸುಗಳು ಒಂದಾದವು ಅಷ್ಟೇ.

ಕಳೆದ ವರ್ಷ ಮೊಹಮ್ಮದ್ ಅಹಮದ್ ಇಬ್ರಾಹಿಂ 34 ವರ್ಷದ ಯುವಕನ ಜೊತೆಗೆ 80 ವರ್ಷದ ಐರಿಷ್ ಜೋನ್ಸ್ ಹೆಸರಿನ ವೃದ್ಧೆಯ ಭೇಟಿ ಫೇಸ್ಬುಕ್ ಮುಖಾಂತರ ಆಯ್ತು. ಯುವಕ ಈಜಿಪ್ಟ್ ದೇಶದವನಾಗಿದ್ದು ಐರಿಸ್ ಬ್ರಿಟನ್ ದವಳಾಗಿದ್ದಾಳೆ. ಫೇಸ್ಬುಕ್ ಭೇಟಿಯಾದ ನಂತರ ಐರಿಶ್ ಳು ತನ್ನ ಪ್ರಿಯಕರನಿಗೆ ಭೇಟಿಯಾಗಲು ಈಜಿಪ್ಟಿಗೆ ಬಂದಳು.

ಅಲ್ ವತನ್ ಹೆಸರಿನ ನ್ಯೂಸ್ ರಿಪೋರ್ಟ್ ಪ್ರಕಾರ ಇವರಿಬ್ಬರು ಈಗ ಮದುವೆಯಾಗಿದ್ದಾರೆ. ಐರಿಶ್ ಳು ಹೇಳುವ ಪ್ರಕಾರ, ಬಹಳ ದಿನಗಳ ನಂತರ ನಾನು ಲೈಂಗಿಕ ಜೀವನದಲ್ಲಿ ತುಂಬಾ ಸಂತುಷ್ಟಳಾಗಿದ್ದೇನೆ ಎನ್ನುತ್ತಾಳೆ. ಆದರೆ ಮೊಹಮ್ಮದ್ ಹೇಳುತ್ತಾನೆ ನಾವು ಮದುವೆಯಾಗಿ ತುಂಬಾ ಚೆನ್ನಾಗಿದ್ದೇವೆ ಮತ್ತು ಈ ಮದುವೆಯ ಸಂಬಂಧದಿಂದ ಆಕೆಗೆ ಯಾವುದೇ ರೀತಿಯ ಹಣ ಮತ್ತು ಆಸ್ತಿ ಬೇಡ ಮತ್ತು ನನಗೆ ಬ್ರಿಟನ್ನಿನ್ನ ನಾಗರಿಕತ್ವ.

ಈ ಮದುವೆ ಈಜಿಪ್ತಿನಲ್ಲಿ ಆಗಿದ್ದು ಐರಿಶ್ ಳು ಇಸ್ಲಾಂ ಧರ್ಮ ಸ್ವೀಕಾರ ಮಾಡಿದ್ದಾಳೆ. ಮದುವೆಯ ಮೊದಲು ಇಬ್ಬರು ಈ ವಿಷಯವನ್ನು ತುಂಬಾ ಗುಪ್ತವಾಗಿ ಇಟ್ಟಿದ್ದರು.

ಮಹಮ್ಮದ ಹೇಳುವ ಪ್ರಕಾರ, ಫೇಸ್ಬುಕ್ನಲ್ಲಿ ಪ್ರೀತಿ ಆದನಂತರ ಮೊಟ್ಟಮೊದಲ ಬಾರಿಗೆ ನನ್ನನ್ನು ಭೇಟಿಯಾಗಲು ಆಕೆ ಈಜಿಪ್ಟಿಗೆ ಬಂದಾಗ ಗೊತ್ತಾಯ್ತು ಆಕೆ ನನ್ನನ್ನು ಎಷ್ಟೊಂದು ಪ್ರೀತಿ ಮಾಡುತ್ತಾಳೆಂದು. ನಿಜವಾಗಿಯೂ ನಾನು ತುಂಬಾ ಅದೃಷ್ಟವಂತನಿದ್ದೇನೆ.

ಮಹಮ್ಮದ್ ಮೊದಲು ಈಜಿಪ್ತಿನ ಕೈರೋ ಪಟ್ಟಣದಲ್ಲಿದ್ದು ವೆಲ್ಡಿಂಗ್ ಇನ್ಸ್ಪೆಕ್ಟರ್ ನ ಕೆಲಸ ಮಾಡುತ್ತಿದ್ದನು. ಐರಿಶ್ ಳು ಈಜಿಪ್ಟಿಗೆ ಬಂದನಂತರ ಮಹಮ್ಮದ್ ಈ ಕೆಲಸವನ್ನು ಬಿಟ್ಟುಬಿಟ್ಟ. ಈಗ ಮಹಮ್ಮದ್ ಐರಿಶ್ ಳ ಜೊತೆಗೆ ತನ್ನ ಕುಟುಂಬದವರೊಂದಿಗೆ ಇರುತ್ತಿದ್ದಾನೆ.

ಐರಿಶ್ ಳು ಮೊದಲು ಬ್ರಿಟನ್ನಿನಲ್ಲಿ ಇದ್ದಾಗ 20 ಸಾವಿರದವರೆಗೆ ಸರ್ಕಾರಿ ಬತ್ತೆ ದೊರೆಯುತ್ತಿತ್ತು. ಇವರ ಎರಡು ಕೋಟಿ ರೂಪಾಯಿ ಬೆಲೆಯ ಬಂಗಲೆ ಇದೆ. ಆದರೆ ಇದನ್ನೆಲ್ಲವನ್ನು ಬಿಟ್ಟು ಐರಿಷ್ ಮಾತ್ರ ಮಹಮ್ಮದ್ ಜೊತೆಗೆ ಇರುತ್ತೇನೆಂದು ಆಸೆ ವ್ಯಕ್ತ ಮಾಡಿದ್ದಾಳೆ.