3D ಇಲ್ಯೂಷನ್ ಪೇಂಟಿಂಗ್ ನ ಅದ್ಭುತವಾದ ವಿಡಿಯೋ ನೋಡಿ ದಂಗಾದ ನೆಟ್ಟಿಗರು! ಒಮ್ಮೆ ನೋಡಿ ಸೂಪರ್ ವಿಡಿಯೋ…

ನಮ್ಮ ವಿಚಾರಕ್ಕೆ ವಿರುದ್ಧವಾಗಿ ಮತ್ತು ಆಶ್ಚರ್ಯವನ್ನುಂಟು ಮಾಡುವ ಅನೇಕ ವಿಡಿಯೋ ಮತ್ತು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಯಾವತ್ತೂ ವೈರಲ್ ಆಗುತ್ತಿರುತ್ತವೆ. ಇಂಥ ಕಂಟೆಂಟ್ ಗಳನ್ನು ನೋಡಿದಾಗ ನಮಗೆ ನಮ್ಮ ಕಣ್ಣುಗಳ ಮೇಲೆ ವಿಶ್ವಾಸವಿಡಲು ಸಾಧ್ಯವಾಗುವುದಿಲ್ಲ. ಸದ್ಯ ಇದೇ ರೀತಿಯ ಅದ್ಭುತವಾದ ಮತ್ತು ಅಷ್ಟೇ ಅಚ್ಚರಿಗೊಳಿಸುವ ವಿಡಿಯೋ ಒಂದು ಇಂಟರ್ನೆಟ್ ನಲ್ಲಿ ಕಾಣ ಸಿಗುತ್ತಿದೆ. ಈ ವಿಡಿಯೋ ನೋಡಿದ ನಂತರ ಮೆಟ್ಟಿಲುಗಳ ಮೇಲೆ ಒಂದು ಸಲ ವಿಚಾರ ಮಾಡಿಯೇ ಹೆಜ್ಜೆ ಇಡಬೇಕಾಗುತ್ತದೆ. ಬನ್ನಿ ಅದರ ವಿಶೇಷತೆಯನ್ನು ತಿಳಿದುಕೊಳ್ಳೋಣ.

ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವಾಹ್ ವಾಹ್ ಗಿಟ್ಟಿಸುತ್ತಿರುವ ಈ 3D ಇಲ್ಯೂಷನ್ ವಿಡಿಯೋ ನೆಟ್ಟಿಗರಿಂದ ತುಂಬಾ ಹೊಗಳಿಕೆಯನ್ನು ಪಡೆಯುತ್ತಿದೆ. ಅಷ್ಟೊಂದು ಸೂಪರ್ ವಿಡಿಯೋ ಇದಾಗಿದೆ ಎಂದು ಹೇಳಬಹುದು. ಈ ವಿಡಿಯೋದಲ್ಲಿ ವ್ಯಕ್ತಿಯು ಮನೆಯ ಮುಂದೆ ಸುಂದರವಾಗಿ ಮೆಟ್ಟಿಲುಗಳನ್ನು ತನ್ನ ಕಲೆಯ ಕೌಶಲ್ಯದಿಂದ ತೆಗೆದಿದ್ದಾನೆ. ಅದನ್ನು ನೋಡಿದಾಗ ವ್ಯಕ್ತಿಗೆ ಆಶ್ಚರ್ಯ, ಅಚ್ಚರಿ ಎರಡು ಒತ್ತಟ್ಟಿಗೆ ಉಂಟಾಗುತ್ತವೆ. ಅಷ್ಟೊಂದು ಸಹಜವಾದ ಕಲಾಕೃತಿ ಬರೀ ಒಂದೇ ಒಂದು ಬಣ್ಣದಿಂದ ನಿರ್ಮಿಸಿದ್ದಾನೆ. ಅದು ಒರಿಜಿನಲ್ ಹಾಗೆ.

ವಿಡಿಯೋ ನೋಡಿದ ನಂತರ ನೀವು ಈ ಕಲಾಕಾರನ ವರ್ಣನೆ ಮಾಡುತ್ತೀರಿ. ವಿಡಿಯೋದ ಪ್ರಾರಂಭದಲ್ಲಿ ವ್ಯಕ್ತಿಯೊಬ್ಬ ತನ್ನ ಮನೆಯ ಮುಂದೆ ಕಪ್ಪು ಬಣ್ಣವನ್ನು ಉಪಯೋಗಿಸಿ ಕೆಲವೇ ನಿಮಿಷಗಳಲ್ಲಿ ಮೆಟ್ಟಿಲುಗಳ ನಿರ್ಮಾಣ ಮಾಡುತ್ತಾನೆ. ನಂತರ ಆತನ ಮಗಳು ಆ ಮೆಟ್ಟಿಲುಗಳ ಮೇಲಿಂದ ಜಿಗಿಯುವಾಗ ವ್ಯಕ್ತಿ ಅದರ ಮೇಲೆ ನೀರನ್ನು ಚೆಲ್ಲಿ ಬಿಡುತ್ತಾನೆ. ಇದರಿಂದ ಅದು ಎಷ್ಟೊಂದು ಒರಿಜಿನಲ್ ರೀತಿಯಲ್ಲಿ ತಯಾರಾಗಿದೆ ಎಂಬುದು ತಿಳಿದು ಬರುತ್ತದೆ. ವ್ಯಕ್ತಿ ಅಸಲಿ ಮತ್ತು ನಕಲಿಯ ವ್ಯತ್ಯಾಸ ಗುರುತಿಸಲು ಸುಲಭವಾಗಲಿ ಎಂದು ಈ ಐಡಿಯಾ ಮಾಡಿದ್ದಾನೆ.

ವಿಡಿಯೋ ನೋಡಿ

ಈ ವಿಡಿಯೋದಲ್ಲಿ ಆರ್ಟಿಸ್ಟ್ ನೆಟ್ಟಿಗರ ಮನಸ್ಸನ್ನು ತುಂಬಾ ಸಹಜವಾಗಿ ಗೆದ್ದಿದ್ದಾನೆ. ಈ ವೀಡಿಯೋವನ್ನು ಸೋಷಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಆದ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದೆ. ಪ್ರಸ್ತುತ ವಿಡಿಯೋ ಮಿಲಿಯನ್ ಗಟ್ಟಲೆ ವೀಕ್ಷಣೆಯನ್ನು ಪಡೆದಿದೆ. ಮತ್ತು ಸುಮಾರು 10 ಲಕ್ಷಗಳ ವರೆಗೆ ಲೈಕ್ಸ್ ಗಳನ್ನು ಪಡೆದಿದೆ. ಯೂಸರ್ಸ್ ಗಳಂತೂ ತಮ್ಮ ಕಾಮೆಂಟ್ ಗಳಲ್ಲಿ ಆರ್ಟಿಸ್ಟ್ ನನ್ನು ಹೊಗಳಿಯೇ ಹೊಗಳುತ್ತಿದ್ದಾರೆ.