40 ವರ್ಷದವರಾಗಿದ್ದರೂ ಧೋನಿ ಮಾಡುತ್ತಾರೆ ಈ ಕೆಲಸ ತುಂಬಾ ಸಹಜವಾಗಿ, ಕೆ ಎಲ್ ರಾಹುಲ್ ಹೀಗೆ ಹೊಗಳುತ್ತಾರೆ…
ಈ ವರ್ಷದ ಐಪಿಎಲ್ ಟ್ರೋಫಿ ಮಹೇಂದ್ರ ಸಿಂಗ್ ಧೋನಿಯವರ ಚೆನ್ನೈ ಸೂಪರ್ ಕಿಂಗ್ಸ್ ತನ್ನ ಮುಡಿಗೇರಿಸಿತು. ಚೆನ್ನೈ ನಾಲ್ಕು ಬಾರಿ ಈ ಟ್ರೋಫಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು. ಇನ್ನು ಮಹೇಂದ್ರ ಸಿಂಗ್ ಧೋನಿಯವರು ಮುಂದಿನ ವರ್ಷದ ಐಪಿಎಲ್ ಆಡುತ್ತಾರೋ ಅಥವಾ ಇಲ್ಲ ಎಂಬ ಬಗ್ಗೆ ಪ್ರಶ್ನೆ ಚಿಹ್ನೆ ನಿರ್ಮಾಣವಾಗಿದೆ.
ಸದ್ಯ ಅವರು ಟೀಮ್ ಇಂಡಿಯಾದ ಮಾರ್ಗದರ್ಶಕರಾಗಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. ಧೋನಿಯವರ ಉಪಸ್ಥಿತಿ ಭಾರತೀಯ ತಂಡಕ್ಕೆ ಪ್ರೇರಣೆಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ವಿಷಯದ ಮೇಲೆ ಅನೇಕ ಕ್ರಿಕೆಟ್ ತಜ್ಞರು ತಮ್ಮ ತಮ್ಮ ವಿಚಾರಗಳನ್ನು ವ್ಯಕ್ತ ಮಾಡುತ್ತಿದ್ದಾರೆ.
ಭಾರತ ತಂಡದ ಬಿರುಸಿನ ಓಪನರ್ ಆಟಗಾರ ಕೆ ಎಲ್ ರಾಹುಲ್ ಅವರು ಇಂಗ್ಲೆಂಡ್ ವಿರುದ್ಧದ ಪ್ರಾಕ್ಟೀಸ್ ಪಂದ್ಯದಲ್ಲಿ ಅರ್ಧ ಶತಕ ಬಾರಿಸಿದ ನಂತರ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯವರನ್ನು ಬಾಯಿತುಂಬಾ ಹೊಗಳಿದ್ದಾರೆ.
ತಮ್ಮ ಹೊಗಳಿಕೆಯ ಮಾತುಗಳಲ್ಲಿ ರಾಹುಲ್ ಹೀಗೆ ಹೇಳುತ್ತಾರೆ, ಮಹೇಂದ್ರ ಸಿಂಗ್ ಧೋನಿ ಈಗಲೂ ಸಹ ಸ್ಫೋಟಕ ಬ್ಯಾಟಿಂಗ್ ಮಾಡಬಲ್ಲರು, ತಂಡದಲ್ಲಿಯ ಯುವ ಮತ್ತು ಬಲಿಷ್ಠ ಬ್ಯಾಟ್ಸ್ಮನ್ ಗಳಿಗಿಂತಲೂ ದೂರ ಹಾಗೂ ಜೋರಾದ ಹೊಡೆತಗಳನ್ನು ಹೊಡೆಯಬಲ್ಲರು.

ಒಂದು ಕಾರ್ಯಕ್ರಮದ ಸಂದರ್ಭದಲ್ಲಿ ಕೆ ಎಲ್ ರಾಹುಲ್ ಅವರು ಧೋನಿಯವರ ಬಗ್ಗೆ ಹೀಗೂ ಹೇಳುತ್ತಾರೆ, ಮಾಹಿ ನಮ್ಮವರಲ್ಲಿ ಯಾರಿಗೂ ಕಠಿಣ ಸ್ಪರ್ಧೆಯನ್ನು ನೀಡಬಲ್ಲರು, ಅವರಲ್ಲಿ ಚಂಡನ್ನು ಅತಿವೇಗವಾಗಿ ಹೊಡೆಯುವಂಥ ಶಕ್ತಿಯಿದೆ. ಅವರು ತುಂಬಾ ಬಲಿಷ್ಠರಾಗಿರುವದರ ಜೊತೆಗೆ ವಿಕೆಟ್ ಮಧ್ಯದಲ್ಲಿ ವೇಗವಾಗಿಯೂ ಧಾವಿಸುತ್ತಾರೆ ಎನ್ನುತ್ತಾರೆ.
ಎಂಎಸ್ ಟೀಮ್ ಇಂಡಿಯಾದ ಮಾರ್ಗದರ್ಶಕರಾಗಿದ್ದರಿಂದ ರಾಹುಲ್ ಅವರು ಸಂತೋಷಪಡಿಸುತ್ತಾರೆ. ತಂಡದಲ್ಲಿ ಅವರ ಪುನರಾಗಮನ ನಿಶ್ಚಿತವಾಗಿ ಒಳ್ಳೆಯದು, ಕಾರಣ ನಾವೆಲ್ಲರೂ ಅವರ ನಾಯಕತ್ವದಲ್ಲಿ ಆಡಿದವರಾಗಿದ್ದೇವೆ. ಅವರು ನಾಯಕರಾಗಿದ್ದಾಗಲೂ ನಾವು ಅವರ ಕಡೆಗೆ ಮಾರ್ಗದರ್ಶಕರೆಂದೇ ನೋಡುತ್ತಿದ್ದೇವು. ಅವರು ನಾಯಕರಾಗಿದ್ದಾಗ ಡ್ರೆಸ್ಸಿಂಗ್ ರೂಮ್ನಲ್ಲಿ ಪ್ರತಿಯೊಬ್ಬರು ಅವರಿಗೆ ತುಂಬಾ ಗೌರವವನ್ನು ನೀಡುತ್ತಿದ್ದರು ಎನ್ನುತ್ತಾರೆ ರಾಹುಲ್.
ನಮಗಂತೂ 2021ರ ಐಪಿಎಲ್ ಮಹೇಂದ್ರ ಸಿಂಗ್ ಧೋನಿಯವರ ಕೊನೆಯ ಪಂದ್ಯ ಎಂದು ಎನಿಸುತ್ತಿಲ್ಲ. ಅವರ ಫಿಟ್ನೆಸ್ ತುಂಬಾ ಚೆನ್ನಾಗಿದೆ ಎಂದು ಹೊಗಳುತ್ತಾರೆ ರಾಹುಲ್.