45 ಮಿಲಿಯನ್ ಜನರನ್ನು ನಗಿಸಿದ Video; ಪರ್ಫೆಕ್ಟ್ ಟೈಮಿಂಗ್ ಅಂದ್ರೆ ಇದಪ್ಪಾ! ಸೂಪರ್ ಫನ್ನಿ ವಿಡಿಯೋ.

ಕೆಲವೊಮ್ಮೆ ಏನೋ ಮಾಡಲು ಹೋಗಿ ಬೇರೆ ಏನೋ ಇನ್ಸಿಡೆಂಟ್ ಗಳು ಅಕಸ್ಮಾತ್ ನಡೆದು ಹೋಗುತ್ತವೆ. ಆಗ ಆ ದೃಶ್ಯಗಳು ನೋಡಲು ತುಂಬಾ ತಮಾಷೆಯಾಗಿರುತ್ತವೆ. ಅಂತ ದೃಶ್ಯಗಳನ್ನು ಮೇಲಿಂದ ಮೇಲೆ ನೋಡಬೇಕೆನಿಸುತ್ತದೆ ಹಾಗೂ ಇನ್ನೊಬ್ಬರಿಗೂ ಶೇರ್ ಮಾಡಿ ನಗಿಸಬೇಕೆನಿಸುತ್ತದೆ. ಇದೇ ರೀತಿ ಫುಟ್ಬಾಲ್ ಗ್ರೌಂಡ್ ನಲ್ಲಿ ನಡೆದ ಒಂದು ವಿಶೇಷ ಪ್ರಸಂಗದ ತಮಾಷೆಯ ವಿಡಿಯೋ ಇಂದು ನಿಮ್ಮ ಮುಂದೆ ತಂದಿದ್ದೇವೆ.

ವಿಡಿಯೋ ದೃಶ್ಯದಲ್ಲಿ ಫುಟ್ಬಾಲ್ ಆಟಗಾರರು ಮೈದಾನದಲ್ಲಿ ಫುಟ್ಬಾಲ್ ಪಂದ್ಯ ತಯಾರಿ ಮಾಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ನಕ್ಕು ನಗಿಸುವ ಘಟನೆಯೊಂದು ಅಲ್ಲಿ ನಡೆದುಹೋಗುತ್ತದೆ. ಇದು ನೋಡಲು ತುಂಬಾ ಮೋಜಿನ ದೃಶ್ಯ ಅನ್ಸುತ್ತೆ. ಆಟಗಾರನೊಬ್ಬ ಮೈದಾನದಲ್ಲಿ ಫುಟ್ಬಾಲ್ ಪ್ರಾಕ್ಟೀಸ್ ಮಾಡುತ್ತಿರುವಾಗ ಚಂಡನ್ನು ಮೇಲಕ್ಕೆ ಹಾರಿಸಿ ತಕ್ಷಣ ಬಾಗಿ ಕುತ್ತಿಗೆಯ ಮೇಲೆ ತೆಗೆದುಕೊಂಡು ನಿಲ್ಲುತ್ತಾನೆ. ಅದೇ ಸಮಯಕ್ಕೆ ಗ್ರೌಂಡ್ ನಲ್ಲಿ ಅಳವಡಿಸಿರುವ ನಳದ ತೊಟ್ಟಿ ಹಠಾತ್ತನೇ ಪ್ರೇಶರ್ ನೊಂದಿಗೆ ನೀರು ಚೆಲ್ಲಲು ಪ್ರಾರಂಭಿಸುತ್ತದೆ. ಈ ದೃಶ್ಯ ಒಂದೆರಡು ಕ್ಷಣಗಳವರೆಗೆ ನೋಡಲು ತುಂಬಾ ವಿಚಿತ್ರ ಹಾಗೂ ಮುಜುಗರ ಉಂಟುಮಾಡುತ್ತದೆ. ಮರುಕ್ಷಣವೇ ಗೊತ್ತಾಗುತ್ತದೆ ಅಲ್ಲಿ ನಡೆದ ಪ್ರಸಂಗವೇನು ಅಂತ. ಈ ದೃಶ್ಯ ನೋಡುವಾಗ ಮಾತ್ರ ತುಂಬಾನೇ ತಮಾಷೆ ಎನಿಸುತ್ತದೆ. ಪ್ರಸ್ತುತ ದೃಶ್ಯ ತನ್ನಂತಾನೆ ನ್ಯಾಚುರಲ್ ಆಗಿ ಚಿತ್ರತವಾಗಿದೆ. ಇದು ಹೀಗೆ ಕಾಣುತ್ತದೆ ಎಂಬ ಕಲ್ಪನೆಯು ಸಹ ಪ್ರಾಕ್ಟೀಸ್ ಮಾಡುವ ಆಟಗಾರರಿಗೆ ಇಲ್ಲ.

ನೋಡಿ ಈ ಫನ್ನಿ ವಿಡಿಯೋ…

 

View this post on Instagram

 

A post shared by GOAL (@goalglobal)

ಪ್ರಸ್ತುತ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಗೋಲ್ ಗ್ಲೋಬಲ್ ಹೆಸರಿನ ಐಡಿ ಇಂದ ಶೇರ್ ಮಾಡಲಾಗಿದೆ. ಈ ತಮಾಷೆಯ ವಿಡಿಯೋ ಇಲ್ಲಿಯವರೆಗೆ 45 ಮಿಲಿಯನ್ ವೀಕ್ಷಣೆಯನ್ನು ಪಡೆದಿದೆ. ಹಾಗೂ 3 ಮಿಲಿಯನ್ ಗಿಂತಲೂ ಹೆಚ್ಚಿಗೆ ಲೈಕ್ಸ್ಗಳನ್ನು ಹೊಂದಿದೆ.