5 ಸಾವಿರ ರೂಪಾಯಿಯಲ್ಲಿ ಮನೆಗೆ ತನ್ನಿ ಈ-ಸೈಕಲ್; ಹೊಸ ಈ-ಸೈಕಲ್ ಲಾಂಚ್ ಮಾಡಿದ ಹೀರೊ

ಸೈಕಲ್ ಹೆಸರು ಕೇಳುವುದೇ ತಡ ಮನಸ್ಸು ಬಾಲ್ಯ ಜೀವನಕ್ಕೆ ಹೋಗಿ ಬಿಡುತ್ತದೆ. 1 ರೂಪಾಯಿ 2 ರೂಪಾಯಿಗಳನ್ನು ಕೊಟ್ಟು ಸೈಕಲ್ ಅಂಗಡಿಯಿಂದ ಸೈಕಲ್ ಬಾಡಿಗೆ ಪಡೆದು ಗೆಳೆಯರ ಜೊತೆಗೆ ಎದ್ದು, ಬಿದ್ದು, ಕಾಡಿ, ಬೇಡಿ, ಜಗಳಾಡಿ ಸೈಕಲ್ ಕಲಿತ ಆ ಸುಂದರ ದಿನಗಳು….ಮನಸಿಗೆ ಮುದ ನೀಡಿ ನಿಜಕ್ಕೂ ಭಾವುಕನನ್ನಾಗಿ ಮಾಡಿ ಬಿಡುತ್ತದೆ.

ಸೈಕಲ್ ನಲ್ಲಿ ನಿಜಕ್ಕೂ ಆರೋಗ್ಯ ಅಡಗಿದೆ. ವಯಸ್ಸಿನ ಜೊತೆಗೆ ಕಾಲದ ಜೊತೆಗೆ ಸೈಕಲ್ ಸಹ ನಮ್ಮಿಂದ ದೂರವಾಯಿತು. ಈಗ ಸೈಕಲ್ ಮೇಲೆ ನಡೆದರೆ ಒಂದು ರೀತಿಯ ಮುಜುಗರ ಎನಿಸುವುದು.

ಒಂದು ಮಾಹಿತಿಯ ಪ್ರಕಾರ ಜನ ಮತ್ತೆ ನಿಧಾನವಾಗಿ ಸೈಕಲ್ ಕಡೆಗೆ ತಿರುಗುತ್ತಿದ್ದಾರೆ. ಇದರಿಂದ ಮುಖ್ಯವಾಗಿ ಆರೋಗ್ಯದಲ್ಲಿ ಅದ್ಭುತವಾದ ಒಳ್ಳೆಯ ಬದಲಾವಣೆಗಳು ಕಂಡು ಬರುತ್ತವೆ.

ಆರೋಗ್ಯಕ್ಕೆ ಮಹತ್ವ ನೀಡುವ ಜನರ ಅವಶ್ಯಕತೆಯ ಬಗ್ಗೆ ವಿಚಾರಮಾಡಿ ಸೈಕಲ್ ಕಂಪನಿಗಳು ಈಗ ಅನೇಕ ವಿನೂತನ ಮಾಡೆಲ್ ಗಳನ್ನು ಬಜಾರಕ್ಕೆ ತರುತ್ತಿವೆ.

ಅದೇ ಪ್ರಕಾರ ಈಗ ಹೀರೋ ಸೈಕಲ್ ನ ಇ-ಸೈಕಲ್ ವಿಭಾಗದ ಹೀರೋ ಲೆಕ್ಟ್ರೋ ಕಂಪನಿಯು ತನ್ನ ಹೊಸದಾದ ಸ್ಮಾರ್ಟ್ ಇಲೆಕ್ಟ್ರಿಕ್ ಸೈಕಲ್ ನ್ನು ಭಾರತದಲ್ಲಿ ಪರಿಚಯಿಸಿದೆ. ಕಂಪನಿಯು ಇದರ ಬೆಲೆ 49 ಸಾವಿರ ನಿಗದಿ ಪಡಿಸಿದೆ. ಆದರೆ ಬುಕಿಂಗ್ ಮಾಡಲು ಬೇಕು ಬರೀ 5 ಸಾವಿರ ರೂಪಾಯಿಗಳು. ಸದ್ಯ ಈ ಸೈಕಲ್ ನಿಮಗೆ ಎರಡು ಬಣ್ಣಗಳಲ್ಲಿ ದೊರೆಯಲಿದೆ. ಒಂದು ಕೆಂಪು ಮತ್ತು ಕಪ್ಪು ಹಾಗೂ ಇನ್ನೊಂದು ಕಪ್ಪು ಮತ್ತು ಹಳದಿ ಬಣ್ಣದಲ್ಲಿ.

ಈ ಇ-ಸೈಕಲ್ ನಲ್ಲಿ ಯುಎಸ್ ಬಿ ಚಾರ್ಜಿಂಗ್ ಪೋರ್ಟ್, ಬ್ಲೂಟೂತ್ ಕನೆಕ್ಟಿವಿಟಿ, ಐ ಸ್ಮಾರ್ಟ್ ಆಪ್ ಸೌಲಭ್ಯಗಳಿವೆ. ಇದರ ಜೊತೆಗೆ 7 ಸ್ಪೀಡ್ ಸೆಟ್ ಅಪ್ ಸಹಿತ ನೀಡಲಾಗಿದೆ. ಬ್ರೇಕ್ ಸಲುವಾಗಿ ಎರಡು ವ್ಹೀಲ್ ಗಳಿಗೆ 160 ಮಿಮಿ ಯ ಡಿಸ್ಕ್ ಬ್ರೇಕ್ ಕೊಡಲಾಗಿದೆ.

ಈ ಸೈಕಲ್ ನಲ್ಲಿ ಒಂದು ಬ್ಯಾಟರಿಯನ್ನು ನೀಡಲಾಗಿದೆ. ಇದರ ಮುಖಾಂತರ 60 ಕಿ.ಮಿ ವರೆಗೆ ಪ್ರವಾಸ ಮಾಡಬಹುದಾಗಿದೆ. ಖಾಲಿಯಾದ ಬ್ಯಾಟರಿ ಮತ್ತೊಮ್ಮೆ ಸಂಪೂರ್ಣವಾಗಿ ಚಾರ್ಜ್ ಆಗಲು 6 ಗಂಟೆಗಳನ್ನು ತೆಗೆದುಕೊಳ್ಳುವುದು.

F 6 IE- ಸೈಕಲ್ ಎಂದು ಇದಕ್ಕೆ ಹೆಸರಿಸಲಾಗಿದೆ.