5 ₹ ಪ್ಯಾಕೆಟ್ ಮಾರಿ 850 ಕೋಟಿಯ ಬಿಜಿನೆಸ್, ಲಘು ಉದ್ಯೋಗದಿಂದ ವಿದೇಶಿ ಬ್ರಾಂಡ್ ಗಳಿಗೆ ಮಣ್ಣುಮುಕ್ಕಿಸಿದ ತ್ರಿವಳಿಗಳು.

ಚಟಪಟಾ ಟೇಸ್ಟಿ ಫುಡ್ ಗಳ ಕ್ಷೇತ್ರದಲ್ಲಿ ಲೋಕಲ್ ಬ್ರಾಂಡ್ ಗಳು ಸ್ವಾದ ಅಥವಾ ರುಚಿಯಲ್ಲಿ ಜನರ ಮನಗೆಲ್ಲುವದರೊಂದಿಗೆ ಕೋಟ್ಯಾವಧಿ ರೂಪಾಯಿಗಳ ಹೂಡಿಕೆಯೊಂದಿಗೆ ಫಾರಿನ್ ಬ್ರಾಂಡ್ ಗಳಿಗೆ ಸೈಡ್ ಹೊಡೆದು ಹಣ ಗಳಿಸುವದರಲ್ಲಿ ನಾಗಾಲೋಟದಿಂದ ಮುನ್ನುಗ್ಗುತ್ತಿವೆ.

ಇವತ್ತು ನಾವು ಚರ್ಚೆ ಮಾಡುವ ಕಂಪನಿ ಹೆಸರು ಯಾರಿಗೂ ಗೊತ್ತಿರಲಿಕ್ಕಿಲ್ಲ. ಆದರೆ ಈ ಕಂಪನಿ ಇಲ್ಲಿಯವರೆಗೆ 850 ಕೋಟಿ ₹ ಗಳ ಟರ್ನಓವರ್ ಮಾಡುತ್ತಿದೆ.

ಮಧ್ಯಪ್ರದೇಶದ ಇಂದೂರ್ ಪಟ್ಟಣದಲ್ಲಿಯ ನಿವಾಸಿ ಈ ಸ್ನ್ಯಾಕ್ಸ್ ಫುಡ್ ತಯಾರಿಸುವಾಗ ಆತನಿಗೂ ಸಹ ಗೊತ್ತಿರಲಿಲ್ಲ ತನ್ನ ಈ ಕಂಪನಿ ಒಂದು ದಿನ ಈ ರೀತಿ ಅಗ್ರಪಟ್ಟದಲ್ಲಿ ಕೂಡುತ್ತದೆ ಎಂದು.

2003 ರಲ್ಲಿ ಅಮಿತ್ ಕುಮಾತ್, ಅಪೂರ್ವ ಕುಮಾತ್ ಇಬ್ಬರೂ ತಮ್ಮ ಮಿತ್ರನಾದ ಅರವಿಂದ್ ಮೇಹತಾ ನೋಡಗೂಡಿ ಕಂಪನಿಯ ಶುಭಾರಂಭ ಮಾಡಿದರು. ಇಂದು ಈ ಕಂಪನಿ ದೇಶದಲ್ಲಿ ನಾಲ್ಕು ಕಾರಖಾನೆಗಳೊಂದಿಗೆ 24 ರಾಜ್ಯಗಳಲ್ಲಿ 168 ಸ್ಟೋಅರ್ ಹೌಸ್ ಮತ್ತು 2900 ವಿತರಕರಿಂದ ಕೂಡಿದ ವಿಶಾಲವಾದ ನೆಟ್ವರ್ಕ್ ಹಬ್ಬಿದೆ.

ಒಂದು ಸ್ನ್ಯಾಕ್ಸ್ ಕಂಪನಿಯಲ್ಲಿ 10 ವರ್ಷಗಳವರೆಗೆ ಕೆಲಸ ಮಾಡಿದ ಮೇಲೆ, ಅಮಿತ್ 2001 ರಲ್ಲಿ ಸ್ವಂತ ಉದ್ಯೋಗವನ್ನು ಪ್ರಾರಂಭಿಸುವ ಮನಸ್ಸು ಮಾಡಿ ಒಂದು ರಸಾಯನ ನಿರ್ಮಾಣ ಮಾಡುವ ಕೆಲಸಕ್ಕೆ ಕೈ ಹಾಕಿ 6 ಕೋಟಿ ₹ ಗಳ ಸಾಲ ಮಾಡಿಕೊಂಡು ನಂತರ ಕಂಪನಿಗೆ ಬೀಗ ಜಡಿದನು. ಸಾಲದ ಕೆಟ್ಟ ದಿನಗಳನ್ನು ತಳ್ಳುತ್ತಾ ಸಂಬಂಧಿಕರಿಂದ ಹಣದ ವ್ಯವಸ್ಥೆ ಮಾಡಿ ಸಾಲಗಾರರಿಗೆ ಕೊಟ್ಟನು. ಈ ಅನುಭವದಿಂದ ಅಮಿತ್ ತನ್ನ ಕೂಡಿಟ್ಟ ಬಂಡವಾಳದ ಜೊತೆಗೆ ವ್ಯಾಪಾರದ ಕ್ಷೇತ್ರದಲ್ಲಿ ತನ್ನ ಸಮ್ಮಾನವನ್ನು ಕಳೆದುಕೊಂಡನು. ಆದರೆ ತನ್ನ ಮನಸ್ಸಿನಲ್ಲಿಯೇ ದೊಡ್ಡ ಬಿಜನೆಸ್ ಮನ್ ಆಗುವ ಕನಸಿಗೆ ಮಾತ್ರ ಧಕ್ಕೆಯಾಗಗೊಡಲಿಲ್ಲ. ಮುಂದೆ ಅಪೂರ್ವ ಮತ್ತು ಅರವಿಂದ್ ರ ಜೊತೆಗೆ ಸೇರಿ 2002 ರಲ್ಲಿ ‘ನಮಕಿನ್’ ಕ್ಷೇತ್ರದಲ್ಲಿ ವ್ಯವಸಾಯ ಮಾಡುವ ಯೋಚನೆ ಮಾಡಿ ಮನೆಯವರನ್ನು ಕಾಡಿ ಬೇಡಿ 15 ಲಕ್ಷ ₹ ಗಳನ್ನು ಪಡೆದು ‘ಪ್ರತಾಪ್’ ಸ್ನ್ಯಾಕ್ಸ್ ಹೆಸರಿನ ಕಂಪನಿ ಪ್ರಾರಂಭಿಸಿದರು.

ತಮ್ಮ ಕಾರ್ಯ ಶುರು ಮಾಡಲು ಮೊದಲು ಲೋಕಲ್ ನಲ್ಲಿ ಖಾದ್ಯ ಸಂಸ್ಕರಣ ಮತ್ತು ನಿರ್ಮಾಣದ ಸಹಯೋಗದಲ್ಲಿ ರಿಂಗ್ ಸ್ನ್ಯಾಕ್ಸ್ ತಯಾರಿಸಲು ಒಟ್ಟು 20,000 ಸಾವಿರ ಬಾಕ್ಸ್ ಗಳ ಆರ್ಡರ್ ಕೊಟ್ಟರು. ಮೊದಮೊದಲು ಹಣದ ಅಭಾವದಿಂದ ಉಪಕರಣಗಳು ಕಡಿಮೆ ಮತ್ತು ಯಂತ್ರಗಳ ವ್ಯವಸ್ಥಾಪನೆಗೆ ಜಾಗ ಸಹಿತ ಕಡಿಮೆ ಇತ್ತು. ಹೀಗಾಗಿ ಮೊದಲ ವರ್ಷ 22 ಲಕ್ಷ ₹ ಗಳ ಆದಾಯವಾಯಿತು. 2 ನೇ ವರ್ಷ ಈ ಲಾಭ ಬೆಳೆದು 1 ಕೋಟಿ ₹ ಹೆಚ್ಚಿತು, ಮೂರನೆಯ ವರ್ಷ ಆದಾಯ 7 ₹ ಕೋಟಿ ದಾಟಿತು.

ಹೀಗೆ ಸ್ವಲ್ಪ ಸ್ವಲ್ಪ ಕಂಪನಿಯನ್ನು ಬೆಳೆಸುತ್ತ 2011 ರಲ್ಲಿ ಕಂಪನಿ ಯಲೊ ಡೈಮಂಡ್ ಹೆಸರಿನಲ್ಲಿ ಪ್ರಸ್ತುತ ಮಾಡಿದರು. ಈಗ ಕಂಪನಿಯ ಒಟ್ಟು ಟರ್ನ್ ಓವರ್ 850 ಕೋಟಿ ₹ ದಾಟಿದೆ.