500 ರೂ. ಪ್ರತಿ ಕಿಲೋ ಮಾರತವಾಗುತ್ತೆ ಇವರ ಸೀಬೆ ಹಣ್ಣು: ಇಂಜಿನಿಯರಿಂಗ್ ವೃತ್ತಿ ಬಿಟ್ಟು ರೈತನಾದ ವ್ಯಕ್ತಿಯ ಯಶಸ್ಸಿನ ಕಥೆ ಇದು!
ಪೇರಲ ಅಥವಾ ಸೀಬೆಹಣ್ಣು ಅಥವಾ ಚೇಪೆ ಹಣ್ಣು ಎನ್ನುವ ವಿವಿಧ ಹೆಸರುಗಳಿಂದ ಕರೆಯಲ್ಪಡುವ ಸೀಬೆ ಹಣ್ಣು ಎರಡು ಮೂರು ದಿನಗಳು ತಾಜಾವಾಗಿ ಉಳಿಯುವ ಹಣ್ಣು. ಅದಾದ ನಂತರ ಅದು ಒಂದು ರೀತಿಯಲ್ಲಿ ವಾಸನೆ ಬರಲು ತೊಡಗುತ್ತದೆ. ಆಗ ಅದನ್ನು ತಿನ್ನುವುದಿರಲಿ, ಮನೆಯಲ್ಲಿ ಇಟ್ಟುಕೊಳ್ಳುವುದಕ್ಕೆ ಕೂಡಾ ಆಗುವುದಿಲ್ಲ. ಆದರೆ ಇಂತಹದೊಂದು ಹಣ್ಣನ್ನು ಆನ್ ಲೈನ್ ನಲ್ಲಿ ಪ್ರತಿ ಕೆಜಿಗೆ rs.550 ನಿರ್ಧರಿಸಿ, ಮಾರಾಟ ಮಾಡುತ್ತಿರುವ ಇಂಜಿನಿಯರ್ ನಿಂದ ರೈತನಾಗಿ ಬದಲಾಗಿರುವ ನೀರಜ್ ಢಾಂಡಾ ಅವರ ಬಗ್ಗೆ ಯಾರು ತಾನೇ ತಿಳಿಯಲು ಬಯಸುವುದಿಲ್ಲ. ಅಸಂಭವ ಎನ್ನುವ ಕೆಲಸವನ್ನು ಕೂಡಾ ಸಂಭವ ಮಾಡಿರುವ ಇವರು ಇಂಜಿನಿಯರ್ ವೃತ್ತಿಗೆ ವಿದಾಯವನ್ನು ಹೇಳಿ ರೈತನಾಗಿ ಯಶಸ್ಸನ್ನು ಪಡೆದ ದಾರಿಯಂತೂ ಖಂಡಿತ. ಸುಲಭವಾಗಿರಲಿಲ್ಲ.
ರೋಹ್ತಕ್ ನಲ್ಲಿ ಹುಟ್ಟಿ ಬೆಳೆದ ನೀರಜ್ ಅವರು ತಮ್ಮ ಬಾಲ್ಯವನ್ನು ಹಳ್ಳಿಯಲ್ಲೇ ಕಳೆದರು. ಕೃಷಿ ಎಂಬುದು ಅವರ ಕುಟುಂಬದಲ್ಲಿ ಅನುವಂಶಿಕವಾಗಿ ಬಂದಂತಹ ವೃತ್ತಿಯಾಗಿತ್ತು. ಅದರ ಜೊತೆಗೆ ಅವರು ಉನ್ನತ ವ್ಯಾಸಂಗವನ್ನು ಮಾಡಿ ಕಂಪ್ಯೂಟರ್ ಸೈನ್ಸ್ ನಲ್ಲಿ ಎಂಜಿನಿಯರ್ ಪದವಿಯನ್ನು ಪಡೆದುಕೊಂಡಿದ್ದಾರೆ. ನೀರಜ್ ಅವರಿಗೆ ಏನಾದರೂ ವಿಭಿನ್ನವಾಗಿ ಮಾಡಬೇಕೆಂದು ಕುತೂಹಲ ಹಾಗೂ ಆಸಕ್ತಿ ಸದಾ ಇತ್ತು. ಅವರನ್ನು ಯಾರಾದರೂ ಅಪಹಾಸ್ಯ ಮಾಡಿದರೂ ಅವರು ಅದಕ್ಕೆ ಅಷ್ಟಾಗಿ ಗಮನವನ್ನು ನೀಡುತ್ತಿರಲಿಲ್ಲ. ಆದರೆ ಏನಾದರೂ ಮಾಡಬೇಕು ಎಂದು ನಿರ್ಧರಿಸಿದರೆ ಮಾತ್ರ ಅದನ್ನು ಮಾಡುವವರೆಗೂ ಬಿಡುತ್ತಿರಲಿಲ್ಲ. ಇವರು ಏಳನೇ ತರಗತಿಯನ್ನು ಓದುತ್ತಿರುವಾಗ ಹಳೆಯ ಔಷಧಿಯ ಬಾಟಲಿಗಳನ್ನು ಉಪಯೋಗಿಸಿಕೊಂಡು ಒಂದು ಟಾರ್ಚನ್ನು ಕೂಡ ಸಿದ್ಧಪಡಿಸಿದ್ದರಂತೆ.
ಇಂಜಿನಿಯರಿಂಗ್ ಮುಗಿಸಿದ ನಂತರ ಸ್ವಲ್ಪ ದಿನಗಳ ಕಾಲ ಉದ್ಯೋಗವನ್ನು ಮಾಡಿದ ಅವರು ತಮ್ಮ ವೇತನದಲ್ಲಿ ಸ್ವಲ್ಪ ಹಣವನ್ನು ಉಳಿಸಿ ತಮ್ಮ ಊರಿನಿಂದ ಸ್ವಲ್ಪ ದೂರದಲ್ಲಿ ಸಂಗತ್ ಪುರ ಎನ್ನುವಲ್ಲಿ ತಮಗಿದ್ದ ಏಳು ಎಕರೆ ಜಮೀನಿನಲ್ಲಿ ಚೆರ್ರಿ ಯನ್ನು ಬೆಳೆಯುವ ಪ್ರಯತ್ನ ಮಾಡಿದರು. ಆದರೆ ಅವರ ಮೊದಲನೇ ಪ್ರಯತ್ನವು ಯಶಸ್ಸನ್ನು ಪಡೆಯಲಿಲ್ಲ. ಆಗ ಅವರ ಕುಟುಂಬಸ್ಥರು ಕೃಷಿ ನಿನಗೆ ಬೇಡ ಮತ್ತೆ ಉದ್ಯೋಗಕ್ಕೆ ತೆರಳು ಎಂದು ಸಲಹೆಯನ್ನು ನೀಡಿದರು. ಆದರೆ ನೀರಜ್ ಅವರ ಮನದಲ್ಲಿ ಬೇರೆ ಆಲೋಚನೆಗಳು ಓಡುತ್ತಿತ್ತು. ಅವರು ಕಾಯಂಗಂಜ್ ಎನ್ನುವಲ್ಲಿನ ನರ್ಸರಿಯಿಂದ ಸೀಬೆ ಸಸಿಗಳನ್ನು ತಂದು ತಮ್ಮ ಜಮೀನಿನಲ್ಲಿ ನೆಟ್ಟರು ಸೀಬೆ ಹಣ್ಣಿನ ಫಸಲು ಬಹಳ ಚೆನ್ನಾಗಿ ಬಂದಿತು.

ಫಸಲನ್ನು ತೆಗೆದುಕೊಂಡು ಮಾರುಕಟ್ಟೆಗೆ ಹೋದಾಗ ಮಧ್ಯವರ್ತಿಗಳೆಲ್ಲಾ ಒಟ್ಟಿಗೆ ಸೇರಿ ಪ್ರತಿ ಕೆಜಿಗೆ ಏಳು ರೂಪಾಯಿಗಳನ್ನು ನಿರ್ಧರಿಸಿದರು. ಆದರೆ ಇದಕ್ಕೆ ಒಪ್ಪದ ನೀರಜ್ ಅವರು ತಾವೇ ಸೀಬೆ ಹಣ್ಣುಗಳನ್ನು ನಗರ ಮತ್ತು ಪಟ್ಟಣಗಳಿಗೆ ತಂದು,ಕೌಂಟರ್ ಗಳನ್ನು ತೆರೆದು ಮಾರುವ ಮೂಲಕ ಮಾರುಕಟ್ಟೆಗಿಂತ ದುಪ್ಪಟ್ಟು ಬೆಲೆಗೆ ಹಣ್ಣುಗಳನ್ನು ಮಾರಾಟ ಮಾಡಿದರು. ನೀರಜ್ ಅವರ ಕೌಂಟರ್ ಗಳ ಮೂಲಕ ವ್ಯಾಪಾರಿಗಳು ಅವರ ಹೊಲದವರೆಗೆ ತಲುಪಿದರು. ಆದರೆ ಬೇಗ ಹಾಳಾಗುವ ಹಣ್ಣುಗಳನ್ನು ಬಹಳ ಬೇಗ ಮಾರಾಟ ಮಾಡದೇ ಇದ್ದರೆ ಲಾಭ ಗಳಿಸುವುದು ತುಂಬಾ ಕಷ್ಟ ಎಂಬುದನ್ನು ಅರ್ಥ ಮಾಡಿಕೊಂಡರು.
ತಮ್ಮ ಮುಂದಿನ ಪಯಣದಲ್ಲಿ ನೀರಜ್ ತಮ್ಮ ಗಮನವನ್ನು ಛತ್ತೀಸ್ ಘಡದ ಕಡೆಗೆ ತಿರುಗಿಸಿದರು. ಅಲ್ಲಿನ ಒಂದು ನರ್ಸರಿಯಲ್ಲಿ ಥೈಲ್ಯಾಂಡಿನ ಜಂಬೋ ಸೀಬೆ ಕಾಯಿ ಸಸಿಗಳ ಬಗ್ಗೆ ತಿಳಿದುಕೊಂಡು ಅದನ್ನು ತಂದು ತಮ್ಮ ಜಮೀನಿನಲ್ಲಿ ನೆಟ್ಟರು. ಜಂಬೋ ಸೀಬೆ ಹಣ್ಣಿನ ಭರ್ಜರಿ ಫಸಲು ಇವರ ಕೈಗೆ ಬಂದಿತು. ತಮ್ಮ ತೋಟದ ವ್ಯರ್ಥ ಪದಾರ್ಥಗಳಿಂದಲೇ ಅವರು ಜೈವಿಕ ಗೊಬ್ಬರವನ್ನು ತಯಾರಿಸಿ ಬಳಸಿದ್ದ ಪರಿಣಾಮವಾಗಿ ಹಣ್ಣಿನಲ್ಲಿ ಅಲಹಾಬಾದ್ ನ ಸೀಬೆ ಹಣ್ಣಿನ ರುಚಿ ಕೂಡ ಸೇರಿತ್ತು. ಇದಾದ ನಂತರ ಅವರು ಆನ್ ಲೈನ್ ನಲ್ಲಿ ಮಾರಾಟವನ್ನು ಆರಂಭಿಸಿದರು. ತಮ್ಮ ವೆಬ್ ಸೈಟ್ ನಲ್ಲಿ ಆರ್ಡರ್ ತೆಗೆದುಕೊಂಡು ಅದರನ್ನು ಡೆಲಿವರಿ ನೀಡುವವರೆಗೂ ಟ್ರಾಕಿಂಗ್ ಸೌಲಭ್ಯವನ್ನು ಅಳವಡಿಸಿದರು.
ಹಣ್ಣು ಕಿತ್ತ ದಿನದಿಂದ ಗ್ರಾಹಕರಿಗೆ ತಲುಪಿದ ಸಮಯ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿದರು. ಜಂಬೋ ಸೀಬೆಯನ್ನು 36 ಗಂಟೆಗಳಲ್ಲಿ ಗ್ರಾಹಕರಿಗೆ ತಲುಪಿಸುವ ಟಾರ್ಗೆಟ್ ಇಟ್ಟು ಕೊಂಡರು. ಜಂಬೋ ಸೀಬೆಹಣ್ಣಿನ ವಿಶೇಷವೆಂದರೆ ಇದರ ರುಚಿಯು ಸುಮಾರು ಹತ್ತರಿಂದ ಹದಿನೈದು ದಿನಗಳವರೆಗೆ ಹಾಗೆ ಇರುತ್ತದೆ ಎನ್ನಲಾಗಿದೆ. ಹೀಗೆ ಇಂಜಿನಿಯರಿಂದ ರೈತನಾದ ನೀರಜ್ ಅವರು ಹೊಸ ಹೊಸ ಕೃಷಿ ತಂತ್ರಗಳು ಎಲ್ಲರ ಗಮನವನ್ನು ಸೆಳೆಯ ತೊಡಗಿತು.
ಅವರು ಜನಪ್ರಿಯತೆ ಪಡೆದುಕೊಂಡ ನಂತರ ದೂರದೂರದ ಊರುಗಳಿಂದ ಇವರ ಸೀಬೆ ಹಣ್ಣಿನ ತೋಟವನ್ನು ನೋಡಲು ಜನರು ಬರತೊಡಗಿದರು.

ಅನೇಕ ಕೃಷಿ ಆಸಕ್ತರು ಹಾಗೂ ರೈತರು ಇವರಿಂದ ಕೃಷಿಯನ್ನು ಮಾಡಲು ತರಬೇತಿ ಪಡೆಯಲು ಕೂಡಾ ಇಚ್ಚಿಸಿದರು. ಅದೇ ಕಾರಣದಿಂದಲೇ ನೀರಜ್ ಅವರು ತರಬೇತಿಗೂ ಕೂಡ ಅವಧಿಯನ್ನು ನಿರ್ಧರಿಸಿದ್ದು ತರಬೇತಿಗೆ ಇಂತಿಷ್ಟು ಹಣ ಎಂದು ನಿರ್ಧರಿಸಿ ಅದರ ಮೂಲಕವು ಆದಾಯ ಮಾಡುತ್ತಿದ್ದಾರೆ. ಇನ್ನು ಭವಿಷ್ಯದಲ್ಲಿ ಅವರು ಗ್ರೀನ್ ಟೀ, ಆರ್ಗ್ಯಾನಿಕ್ ಬೆಲ್ಲವನ್ನು ಕೂಡ ಆನ್ ಲೈನ್ ಮೂಲಕ ಮಾರಾಟ ಮಾಡಲು ಯೋಜನೆಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ ನೀರಜ್ ತಮ್ಮ ಹೊಸ ಹೊಸ ಕೃಷಿ ತಂತ್ರಗಳ ಮೂಲಕ ಕೃಷಿಯನ್ನು ತಮ್ಮ ಆದಾಯದ ಮೂಲವನ್ನಾಗಿ ಮಾಡಿಕೊಂಡು ಅನೇಕ ಜನ ರೈತರಿಗೆ ಸ್ಫೂರ್ತಿಯಾಗಿದ್ದಾರೆ.