12 ನೇ ಬೋರ್ಡ್ ಎಕ್ಸಾಮಿನಲ್ಲಿ 500 ಹುಡುಗಿಯರ ಮಧ್ಯ ಕುಳ್ಳಿರಿಸಿದರು ಒಬ್ಬನೇ ಹುಡುಗನಿಗೆ! ನರ್ವಸ್ ಆಗಿ ತಪ್ಪಿತು ಪ್ರಜ್ಞೆ. ನೇರ ಆಸ್ಪತ್ರೆಗೆ.
ಸೋಶಿಯಲ್ ಮೀಡಿಯಾದಲ್ಲಿ ಕೆಲವೊಮ್ಮೆ ತುಂಬಾ ವಿಚಿತ್ರ ಫೋಟೋ ಅಥವಾ ವಿಡಿಯೋಗಳು ನೋಡಲು ಸಿಗುತ್ತವೆ. ಇಂಥ ವಿಡಿಯೋಗಳನ್ನು ನೋಡಿದಾಗ ಕೆಲವೊಮ್ಮೆ ನಂಬುವುದು ತುಂಬಾ ಕಷ್ಟವಾಗುತ್ತದೆ.
ಸದ್ಯ ಟ್ವಿಟರ್ ನಲ್ಲಿ ಒಂದು ವಿಡಿಯೋ ಶೇರ್ ಮಾಡಲಾಗಿದೆ. ಈ ವಿಶೇಷ ವಿಡಿಯೋವನ್ನು ನೀವು ನೋಡಿದಾಗ ನಿಮಗೂ ಸಹ ಆಶ್ಚರ್ಯವಾಗುತ್ತದೆ. ಈ ವಿಡಿಯೋವನ್ನು ಟ್ವಿಟರ್ ನಲ್ಲಿ ಪ್ರಕಾಶ್ ಕುಮಾರ್ ಎನ್ನುವವರು ಶೇರ್ ಮಾಡಿದ್ದಾರೆ. ವಿಡಿಯೋದಲ್ಲಿಯ ವಿಷಯ ಕೇಳಿದ ನಂತರ ನಗಬೇಕೋ ಅಳಬೇಕೋ ತಿಳಿಯುತ್ತಿಲ್ಲ.
ವಿಡಿಯೋ ಬಿಹಾರನಲ್ಲಿಯದಿದೆ. ವಿಷಯ ಏನೆಂದರೆ, ಇಲ್ಲಿಯ ಆಸ್ಪತ್ರೆಯಲ್ಲಿ 18 ರ ಹುಡುಗನೊಬ್ಬನನ್ನು ಅಡ್ಮಿಟ್ ಮಾಡಿದ್ದಾರೆ. ಅಡ್ಮಿಟ್ ಆದ ಕಾರಣ ತುಂಬಾ ವಿಚಿತ್ರವೆನಿಸಬಹುದು. ಈ ವಿಡಿಯೋದಲ್ಲಿ ಕಂಡುಬರುವ ಮನೀಶ್ ಶಂಕರ್ ಹೆಸರಿನ ಈ ಹುಡುಗನಿಗೆ 12 ಬೋರ್ಡ್ ಎಕ್ಸಾಮಿನಲ್ಲಿ 500 ಹುಡುಗಿಯರ ಮಧ್ಯದಲ್ಲಿ ಪರೀಕ್ಷೆ ಬರೆಯಲು ಕುಳ್ಳಿರಿಸಿದ್ದಾರೆಂದು ಆತನ ಸೋದರತ್ತೆ ಮೀಡಿಯಾದ ಮುಂದೆ ಹೇಳುತ್ತಿದ್ದಾರೆ.
ನೋಡಿ ಈ ವಿಡಿಯೋ…
अजब-गजब! नालंदा में बिहार बोर्ड 12वीं की परीक्षा के दौरान एक छात्र को 500 लड़कियों के बीच बैठा दिया गया. नतीजा देखिए- लड़का बेहोश हो गया. नर्वस होकर गिर गया. परीक्षार्थी मनीष शंकर को अस्पताल लाना पड़ा…नालंदा से अमृतेश की रिपोर्ट.Edited by @iajeetkumar pic.twitter.com/cJTmaLcfmi
— Prakash Kumar (@kumarprakash4u) February 1, 2023
ಮನೀಶ್ ಶಂಕರ್ 500 ಹುಡುಗಿಯರ ಮಧ್ಯದಲ್ಲಿ ಕುಳಿತ ಕಾರಣದಿಂದಾಗಿ ನರ್ವಸ್ ಆಗಿದ್ದಾನೆ. ಹಾಗೂ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿದ್ದಾನೆ. ನಂತರ ಈ ಮನಿಶ್ ಶಂಕರ್ ಗೆ ಆಸ್ಪತ್ರೆಯಲ್ಲಿ ಭರ್ತಿ ಮಾಡಲಾಯಿತು. ಹುಡುಗನ ಸೋದರತ್ತೆ ಆಸ್ಪತ್ರೆಯಲ್ಲಿ ಕುಳಿತು ಹೇಳುವ ಪ್ರಕಾರ, ಮನಿಶ್ ಶಂಕರ್ ಗೆ ಶಾಲೆಯವರು ಒಂದು ರೀತಿಯ ಸಜೆ ನೀಡಿದ್ದಾರೆಂದು ತಿಳಿದು ಬರುತ್ತಿದೆ ಎನ್ನುತ್ತಿದ್ದಾರೆ.
ಏನೇ ಆಗಲಿ ಹುಡುಗನ ಆರೋಗ್ಯ ಸದ್ಯ ಚೆನ್ನಾಗಿದೆ, ಮತ್ತು ಮನಿಷ್ ಶಂಕರ್ ನ ಸೋದರತ್ತೆ ಹೇಳುವ ಪ್ರಕಾರ, ಈ ವಿಷಯದಲ್ಲಿ ಎಷ್ಟು ಸತ್ಯ ಹಾಗೂ ಎಷ್ಟು ಸುಳ್ಳು ಎಂಬುದು ಇನ್ನು ತಿಳಿದು ಬಂದಿಲ್ಲ, ಹಾಗೂ ಮನೀಶ್ ನ ಶಾಲೆಯವರು ಇಲ್ಲಿಯವರೆಗೆ ಯಾವುದೇ ರೀತಿಯ ಹೇಳಿಕೆ ನೀಡಿಲ್ಲ.