53 ಮಿಲಿಯನ್ ವ್ಯೂವ್ಸ್! ಸೈಕಲ್ ಮೇಲೆ ಈ ಲೇಡಿಯ ಸ್ಟಂಟ್ ನೋಡಲು ಸ್ವಲ್ಪ ಸಮಯ & ನೆಟ್ ಖರ್ಚಾದರೂ ಪರ್ವಾಗಿಲ್ಲ; ಅದ್ಭುತವಾಗಿದೆ ನೋಡಿ.
ಜಗತ್ತಿನಲ್ಲಿ ಸಾಕಷ್ಟು ಜನ ಹೀಗೂ ಇದ್ದಾರೆ, ಅವರ ಹತ್ತಿರ ಟ್ಯಾಲೆಂಟ್ ಗೆ ಏನೂ ಕಮ್ಮಿ ಇಲ್ಲ. ಈ ಟ್ಯಾಲೆಂಟ್ ಮೇಲೆಯೇ ಇಡೀ ಜಗತ್ತಿನ ಗಮನವನ್ನು ತಮ್ಮ ಕಡೆಗೆ ಸೆಳೆಯುವಂಥ ಶಕ್ತಿ ಅವರು ಹೊಂದಿರುತ್ತಾರೆ. ಮೊದಲಿನ ಕಾಲದಲ್ಲಿ ಟ್ಯಾಲೆಂಟ್ ಇರುವ ವ್ಯಕ್ತಿಗಳಿಗೆ ಸರಿಯಾದ ಪ್ಲಾಟ್ ಫಾರ್ಮ್ ದೊರೆಯದ ಕಾರಣ ಪ್ರಸಿದ್ಧಿ ಪಡೆಯದೆ ಅವರು ಜಗತ್ತಿಗೆ ಪರಿಚಿತರಾಗದೆ ಎಲೆಮರೆಯ ಕಾಯಿಯಾಗಿ ಉಳಿಯುತ್ತಿದ್ದರು. ಆದರೆ ಈಗ ಹಾಗಲ್ಲ, ಇಂದಿನ ಸೋಶಿಯಲ್ ಮೀಡಿಯಾ ಜಾಲದಲ್ಲಿ ಟ್ಯಾಲೆಂಟ್ ಇರುವ ವ್ಯಕ್ತಿ ಜಗತ್ತಿಗೆ ನೊಡನೋಡುವಷ್ಟರಲ್ಲಿಯೇ ಚಿರಪರಿಚಿತನಾಗಿ ಬಿಡುತ್ತಾನೆ. ಒಂದೇ ರಾತ್ರಿಯಲ್ಲಿ ಸ್ಟಾರ್ ಆಗಿಯೂ ಮೆರೆಯುತ್ತಾರೆ.
ಈಗ ಮಹಿಳೆಯೊಬ್ಬಳು ಇದೇ ರೀತಿ ತನ್ನಲ್ಲಿರುವ ಟ್ಯಾಲೆಂಟ್ ಪ್ರದರ್ಶಿಸಿ ಇಡೀ ಜಗತ್ತಿಗೆ ಪರಿಚಯವಾಗಿದ್ದಾಳೆ. ಈಕೆಯು ಸೈಕಲ್ ಮೇಲೆ ಮಾಡಿದ ಸ್ಟಂಟ್ ನಿಜಕ್ಕೂ ಒಂದು ಸಹಜವಾಗಿ ಅಂದರೆ ತುಂಬಾ ಸಹಜವಾಗಿ ಆಡಿದ ಆಟವಾಗಿದೆ. ಆದರೆ ನೋಡುಗರಿಗೆ ಅದು ಬಾಯಿಯಲ್ಲಿ ಬೆರಳು ಕಚ್ಚುವ ಹಾಗಿದೆ.
ಆಕೆಯ ಈ ಅದ್ಭುತ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಕೆಲವೊಂದು ವಿಡಿಯೋಗಳನ್ನು ಮೇಲಿಂದ ಮೇಲೆ ನೋಡಬೇಕು ಎನ್ನಿಸುತ್ತದೆ. ಆ ರೀತಿಯ ವಿಡಿಯೋ ಇದಾಗಿದೆ. ಸಂಪೂರ್ಣ ದೇಹದ ಭಾರವನ್ನು ಸೈಕಲ್ ಮೇಲಿಟ್ಟು ಪ್ರಸ್ತುತ ಮಹಿಳೆ ತುಂಬಾ ಸಹಜವಾಗಿ ಬ್ಯಾಲೆನ್ಸ್ ಮಾಡುತ್ತ ಆಟ ಆಡುತ್ತಿದ್ದಾಳೆ. ಆಟ ಆಡುತ್ತ ಆಡುತ್ತ ಸೈಕಲ್ ಮೇಲೆ ಒಂದೊಂದು ಕರಾಮತ್ತನ್ನು ಹಂತ ಹಂತವಾಗಿ ಮಾಡುತ್ತಾ ಮುಂದೆ ಮುಂದೆ ಹೋಗುವಾಗ ನೋಡುಗರ ಉಸಿರು ಬಿಗಿಯುತ್ತದೆ. ಅವಳು ಆಡುವ ಆಟದ ವರ್ಣನೆಯನ್ನು ಮಾಡುವುದಕ್ಕಿಂತ ನೇರ ವೀಡಿಯೋ ನೋಡುವುದೇ ಒಳ್ಳೆಯದು.
ನೋಡಿ ಈ ವಿಡಿಯೋ…
ಈ ಮಹಿಳೆಯು ಸೈಕಲ್ ಮೇಲಿನ ಅದ್ಭುತ ಬ್ಯಾಲೆನ್ಸ್ ನ ಆಟದ ವಿಡಿಯೋ ನೇಟಿಜನ್ಸ್ ಗಳು ಬಾಯಿ ತುಂಬಾ ಹೊಗಳಿದ್ದಾರೆ. ಜೊತೆಗೆ ಆಕೆಯ ಬ್ಯಾಲೆನ್ಸ್ ಮತ್ತು ಕರಾಮತ್ತಿಗೆ ನೇಟಿಜನ್ಸ್ ಗಳು ಮಂತ್ರಮುಗ್ಧರಾಗಿದ್ದಾರೆ. ಯೂಟ್ಯೂಬ್ ನಲ್ಲಿ ಈ ವಿಡಿಯೋವನ್ನು ಇಲ್ಲಿಯವರೆಗೆ 53 ಮಿಲಿಯನ್ ಜನ ನೋಡಿದ್ದಾರೆ.