6 ಎಂಜಿನ್, 295 ವ್ಯಾಗನ್ ಗಳ 3.5 km ಉದ್ದದ ಗೂಡ್ಸ್ ಟ್ರೈನ್ ನೋಡಿ ಆಶ್ಚರ್ಯ ವ್ಯಕ್ತ ಮಾಡಿದ ಆನಂದ್ ಮಹೀಂದ್ರ! ಶೇರ್ ಮಾಡಿದರು Video.
ಮಹೀಂದ್ರ ಗ್ರೂಪ್ ನ ಚೇರ್ಮನ್ ಸೋಷಿಯಲ್ ಮೀಡಿಯಾದಲ್ಲಿ ಸದಾ ಪ್ರೇರಣೆಯಿಂದ ತುಂಬಿದ ಮಹತ್ವದ ಕಂಟೆಂಟ್ ಗಳನ್ನು ಹಾಗೂ ಅಷ್ಟೇ ತಮಾಷೆಯ ವಿಷಯಗಳನ್ನು ಶೇರ್ ಮಾಡುತ್ತಿರುತ್ತಾರೆ. ಈಗಲೂ ಅವರು ಶೇರ್ ಮಾಡಿದ ವಿಶೇಷ ವಿಡಿಯೋ ಒಂದು ಎಲ್ಲರ ಗಮನ ಸೆಳೆಯುತ್ತಿದೆ. 18 ಆಗಸ್ಟ್ ಗೆ ಸೂಪರ್ ವಾಸುಕಿ ಟ್ರೈನ್ ನ ವಿಡಿಯೋ ಒಂದು ತಮ್ಮ ಅಕೌಂಟ್ ನಿಂದ ಶೇರ್ ಮಾಡಿದ್ದಾರೆ. ಇದು ಭಾರತದ ಎಲ್ಲಕ್ಕೂ ಉದ್ದವಾದ ಹಾಗೂ ಭಾರವಾದ ಗೂಡ್ಸ್ ವಾಹನವೆಂದು ಪರಿಗಣಿಸಲಾಯಿತು. ಆಗಸ್ಟ್ 15 ರಂದು ಇದರ ಪರೀಕ್ಷೆ ಮಾಡಲಾಯಿತು. ಸದ್ಯ ಇದರದೇ ವಿಡಿಯೋ ಭರ್ಜರಿಯಾಗಿ ವೈರಲ್ ಆಗುತ್ತಿದೆ.
ಆನಂದ್ ಮಹೀಂದ್ರಾ ಅವರು ತಮ್ಮ ಟ್ವಿಟರ್ ಅಕೌಂಟ್ ನಿಂದ ಸೂಪರ್ ವಾಸುಕಿಯ ಟ್ರೈನ್ ಶೇರ್ ಮಾಡಿದ್ದಾರೆ. ಈ ಚಿಕ್ಕ ವಿಡಿಯೋ ಕ್ಲಿಪ್ ನಲ್ಲಿ 3.5 ಕಿಲೋಮೀಟರ್ ಉದ್ದದ ಟ್ರೈನ್ ಕೊಠಾರಿ ರೋಡ್ ಸ್ಟೇಷನ್ ನಿಂದ ಪಾಸ್ ಆಗುತ್ತಿರುವದು ಕಂಡು ಬರುತ್ತಿದೆ. ಪ್ರಸ್ತುತ ಈ ಗೂಡ್ಸ್ ಟ್ರೈನಿಗೆ 6 ಎಂಜಿನ್ ಮತ್ತು 295 ವ್ಯಾಗನ್‌ಗಳು ಜೋಡಿಸಲಾಗಿದೆ. ಈ ಟ್ರೈನಿನ ಒಟ್ಟು ಭಾರ 25,962 ಟನ್ ಆಗಿದೆ.
ನೋಡಿ ಈ ವಿಡಿಯೋ…
Amazing. Like India’s growth story. Never-ending… https://t.co/HDhHwoTdjn
— anand mahindra (@anandmahindra) August 18, 2022
ಆನಂದ್ ಮಹೀಂದ್ರಾ ಅವರು ಕ್ಲಿಪ್ ಶೇರ್ ಮಾಡುತ್ತಾ, “ಅದ್ಭುತ ಭಾರತದ ವಿಕಾಸರಥದ ಹಾಗೆ, ಎಂದಿಗೂ ಮುಗಿಯುವುದಿಲ್ಲ” ಎಂದಿದ್ದಾರೆ. ಆನ್ಲೈನ್ ಶೇರ್ ಮಾಡಿದ ನಂತರ ಈ ವಿಡಿಯೋ ಇಲ್ಲಿಯವರೆಗೆ ಲಕ್ಷಾವಧಿ ಜನರು ವೀಕ್ಷಿಸಿದ್ದಾರೆ. ನೋಡಿದ ಜನರು ಸಹ ಸೂಪರ್ ಪ್ರಭಾವಿತರಾಗಿ ಕಮೆಂಟ್ ಸೆಕ್ಷನ್ನಲ್ಲಿ ಹೆಚ್ಚಾಗಿ ಧನಾತ್ಮಕ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.