6 ತಿಂಗಳ ಮಗು ಹಸಿವಿನಿಂದ ಅಳುತ್ತಿರುವದನ್ನು ಕಂಡ ಸ್ಟೇಶನ್ ನಲ್ಲಿಯ CRPF ಜವಾನ್ ಓಡುತ್ತ, ಚಲಿಸುತ್ತಿರುವ ರೈಲಿನಲ್ಲಿಯೇ ಪೂರೈಸಿದ ಹಾಲನ್ನು! ಕೃತಜ್ಞತೆ ಸಲ್ಲಿಸಿದ ತಾಯಿ!!
ಲಾಕ್ ಡೌನ್ ಕಾರಣದಿಂದ ದಿನಬೆಳಗಾದರೆ ವಲಸಿಗರು ಪಡುತ್ತಿರುವ ನಾನಾ ರೀತಿಯ ಕಷ್ಟಗಳು
ಸೋಶಿಯಲ್ ಮಿಡಿಯಾದ ಮಾಧ್ಯಮಗಳಿಂದ ನಮ್ಮ ಮುಂದೆ ಫೋಟೋ, ವಿಡಿಯೋ ಮುಖಾಂತರ ಬಂದೆ ಬರುತ್ತಿವೆ. ಅದರಲ್ಲೇ ಒಂದು ಘಟನೆ ವೈರಲ್ ಆಗಿದೆ, ಚಲಿಸುತ್ತಿರುವ ರೈಲಿನಲ್ಲಿ ಮಗುವೊಂದು ಹಸಿದು ಅಳುತ್ತಿರುವದನ್ನು ನೋಡಲಾಗದೆ CRPF ಜವಾನನು ಓಡುತ್ತ ರೈಲನ್ನು ಹಿಂಬಾಲಿಸಿ ಮಗುವಿನ ತಾಯಿಗೆ ಹಾಲಿನ ಪ್ಯಾಕೆಟನ್ನು ಮುಟ್ಟಿಸಿದ್ದಾನೆ.
ಕೆಲವೇ ದಿನಗಳ ಹಿಂದೆ ಬೆಳಗಾವಿಯಿಂದ ಗೋರಖಪೂರ್ ಸಲುವಾಗಿ ಶ್ರಮಿಕ ಟ್ರೆನ್ ಹೋಗುತ್ತಿತ್ತು. ರೈಲಿನಲ್ಲಿದ್ದ ಪ್ರವಾಸಿ ಮಹಿಳೆ ಸಾಫಿಯಾ ತನ್ನ ಮಗುವಿಗೆ ಹಾಲು ತೆಗೆದುಕೊಳ್ಳುವದನ್ನು ಮರೆತಳು. ದಾರಿಯಲ್ಲಿ ರೈಲು ನಿಂತಾಗ ಯಾವುದಾದರೂ ಸ್ಟೇಶನ್ ನಲ್ಲಿ ತೆಗೆದುಕೊಂಡರಾಯಿತು ಎಂದು ತಿಳಿದು ಸುಮ್ಮನಾದಳು, ಆದರೆ ದಾರಿ ಮಧ್ಯದಲ್ಲಿ ಎಲ್ಲಿಯೂ ಹಾಲು ದೊರೆಯಲಿಲ್ಲ.

ಮಗು ಹಸಿವಿನಿಂದ ಒದ್ದಾಡುತ್ತಿರುವಾಗ ಸಾಫಿಯಾ ತನ್ನ ಕಂದನಿಗೆ ಬೇರೆ ದಾರಿ ಕಾಣದೆ ನೀರಿನಲ್ಲಿ ಬಿಸ್ಕಿತ್ ಮುಳಿಗಿಸಿ ತಿನ್ನಿಸುತ್ತಿದ್ದಳು. ಸ್ವಲ್ಪ ಸಮಯದ ನಂತರ ರೈಲು ಭೋಪಾಲ್ ತಲುಪಿದ ನಂತರ ಸಾಫೀಯಾ ಹಾಲಿಗಾಗಿ ಒಂದೇ ಸಮನೆ ಮೊರೆ ಇಡುತ್ತಿರುವ ದೃಶ್ಯ ಸ್ಟೇಶನ್ ನಲ್ಲಿ ಡ್ಯೂಟಿ ಮಾಡುತ್ತಿರುವ CRPF ಜವಾನ್ ಇಂದರ್ ನ ಕಣ್ಣಿಗೆ ಬಿತ್ತು. ಜವಾನನು ತಕ್ಷಣ ಮಹಿಳೆಯ ಮಗುವಿಗಾಗಿ ಹಾಲಿನ ವ್ಯವಸ್ಥೆ ಮಾಡಿ ತರುವಷ್ಟರಲ್ಲಿಯೇ ರೈಲು ಚಲಿಸಲು ಪ್ರಾರಂಭವಾಗಿತ್ತು. ರೈಲಿನ ವೇಗದ ಜೊತೆಗೆ ಆತನು ಓಡಲು ಪ್ರಾರಂಭಿಸಿದನು. ಆತನ ಒಂದು ಕೈಯಲ್ಲಿ ರೈಫಲ್ ಮತ್ತು ಇನ್ನೊಂದು ಕೈಯಲ್ಲಿ ಹಾಲಿನ ಪ್ಯಾಕೆಟ್ ಹಿಡಿದು ಹೇಗೋ ಸಾಫಿಯಾಳ ಕೈಯಲ್ಲಿ ಹಾಲನ್ನು ಮುಟ್ಟಿಸಿದನು.
ಮುಂದೆ ಗೋರಖಪುರ್ ತಲುಪಿ ಸಾಫಿಯಾಳು CRPF ಜವಾನ್ ಇಂದರ್ ನ ಪತ್ತೆ ಹಚ್ಚಿ ಆತನ ಮೊಬೈಲ್ ನಂಬರಿಗೆ ಧನ್ಯವಾದಗಳು ಎಂಬ ಸಂದೇಶವನ್ನು ಕಳಿಸಿದ್ದಾಳೆ. ಅಷ್ಟೇ ಅಲ್ಲ ಒಂದು ವಿಡಿಯೋ ಮುಖಾಂತರ ಜವಾನನನಿಗೆ ಕೃತಜ್ಞತೆಯನ್ನು ಸಹಿತ ಅರ್ಪಿಸಿದ್ದಾಳೆ. ಅದರಲ್ಲಿ ಇಂದರ್ ಭಾಯಿ ನೀವು ನಮ್ಮ ನಿಜವಾದ ಹೀರೊ ಇದ್ದೀರಿ. ರೇಲ್ವೆ ಪ್ಲಾಟಫಾರ್ಮ್ ನಲ್ಲಿ ಓಡುತ್ತ ಹೋಗಿ ಹಾಲನ್ನು ಕೊಟ್ಟ ದೃಶ್ಯ CCTV ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅದನ್ನು ನೋಡಿ ಎಲ್ಲರೂ ಆತನನ್ನು ಕೊಂಡಾಡುತ್ತಿದ್ದಾರೆ.