65 ರ ವೃದ್ಧ ಅಪ್ಪರ್ ಶಾಟ್ ಹೊಡೆದು ಯುವಕರೂ ನಾಚಿವಂತೆ ಮಿಂಚಿನ ವೇಗದಲ್ಲಿ 2 ರನ್ಗಳನ್ನು ಬಾಚಿದ ಸೂಪರ್ ಮ್ಯಾನ್! ನೋಡಿ ಈ ವಿಡಿಯೋ…
ಹೆಚ್ಚುವರಿ ವೃದ್ಧ ಜನರಿಂದ ವಯಸ್ಸಾದಂತೆ ನಮ್ಮಿಂದ ಏನು ಆಗುವುದಿಲ್ಲ, ನಮ್ಮದು ಎಲ್ಲವೂ ಮುಗಿದು ಹೋಯಿತು ಎಂಬ ಮಾತುಗಳೇ ಹೆಚ್ಚಾಗಿ ಕೇಳಿ ಬರುತ್ತವೆ.
ಅದಕ್ಕೆ ವಿರುದ್ಧವಾಗಿ ಕೆಲವರಿಗೆ ವಯಸ್ಸು ಬರೀ ನಂಬರ್ ಅಷ್ಟೇ ಎಂದೇ ಹೇಳಬಹುದು. ಅವರೆಂದಿಗೂ ವೃದ್ಧಾಪ್ಯದ ಬಗ್ಗೆ ರಾಜಿ ಮಾಡಿಕೊಳ್ಳುವದೇ ಇಲ್ಲ. ಅಂತವರು ಇಳಿವಯಸ್ಸಿನಲ್ಲಿಯೂ ಪುಟಿಯುವ ಚೆಂಡಿನಂತೆ ಸದಾ ಉತ್ಸಾಹಿಗಳಾಗಿರುತ್ತಾರೆ ಎನ್ನುವುದಕ್ಕೆ ಉತ್ಸಾಹದ ಚಿಲುಮೆಯಾಗಿರುವ ವೃದ್ಧ ವ್ಯಕ್ತಿಯ ಕ್ರಿಕೆಟ್ ಆಡುವ ದೃಶ್ಯದ ವಿಡಿಯೋ ಒಂದನ್ನು ನಿಮಗಾಗಿ ತಂದಿದ್ದೇವೆ.
ಈ ವಿಡಿಯೋದಲ್ಲಿ ಯುವಕರೆಲ್ಲರೂ ಕೂಡಿ ಆಡುತ್ತಿರುವಾಗ ಅವರ ಮಧ್ಯದಲ್ಲಿ 65 ವರ್ಷದ ವೃದ್ಧನೊಬ್ಬ ಬ್ಯಾಟ್ ಮಾಡುತ್ತಿದ್ದಾರೆ. ಅವರು ಬ್ಯಾಟ್ ಮಾಡುವಾಗ ಅಲ್ಲಿಯೇ ಯಾರೋ ಒಬ್ಬರು ಅವರ ಆಟದ ಹಾಗೂ ಆಟದಲ್ಲಿ ತೋರಿಸುತ್ತಿರುವ ಉತ್ಸಾಹದ ವಿಡಿಯೋ ಮಾಡಿಕೊಂಡಿದ್ದಾರೆ. ಈ ವಿಡಿಯೋವನ್ನು ಅವರು ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಿದ್ದಾರೆ. ವಿಡಿಯೋದಲ್ಲಿ ಮರಾಠಿ ಭಾಷೆಯಾಡುತ್ತಿರುವದು ಕೇಳಿಬರುತ್ತಿದೆ.
ಆಟಗಾರರೆಲ್ಲರೂ ಕೂಡಿ ಓಲ್ಡ್ ಮ್ಯಾನ್ ಗೆ ಪ್ರೇರೇಪಿಸುತ್ತಿರುವಾಗ ವೃದ್ಧ ಬ್ಯಾಟ್ಸ್ಮನ್ ಆಫ್ ಸೈಡ್ ಗೆ ಶಾಟ್ ಹೊಡೆದು ಪುಟಿಯುವ ಚೆಂಡಿನಂತೆ ಜಿಗಿಯುತ್ತಾ ಓಡಿ ಹೋಗಿ 2 ರನ್ನುಗಳನ್ನು ಪೂರೈಸುವ ದೃಶ್ಯ ನೋಡಿದಾಗ ತರುಣರು ಸಹ ನಾಚಬೇಕು.
ನೋಡಿ ಈ ವೃದ್ಧನ ಕ್ರಿಕೆಟ್ ಆಡುವ ಉತ್ಸಾಹ ಮತ್ತು ಪ್ಯಾಶನ್…