6,6,6,6,6,6! ಒಂದೇ ಓವರ್ ನಲ್ಲಿ 6 ಸಿಕ್ಸ್ ಬಾರಿಸಿದ ಪೋಲಾರ್ಡ್! ನೋಡಿ Video
ಗುರುವಾರ ನಡೆದಂತಹ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿ ಒಂದರಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ನಾಯಕರಾದ ಕಿರೋನ್ ಪೊರ್ಲಾಡ್ ಅವರು ಒಂದು ಹೊಸ ದಾಖಲೆಯನ್ನು ಸೃಷ್ಟಿ ಮಾಡಿದ್ದಾರೆ. ಕ್ರಿಕೆಟ್ ಪಂದ್ಯಾವಳಿಯಲ್ಲಿ ಅವರು ಆರು ಬಾಲ್ ಗಳಿಗೆ ಆರು ಸಿಕ್ಸರ್ ಗಳನ್ನು ಹೊಡೆಯುವ ಮೂಲಕ ಕ್ರಿಕೆಟ್ ನಲ್ಲಿ ತನ್ನದೇ ಆದಂತಹ ಹೊಸ ಇತಿಹಾಸವನ್ನು ಸೃಷ್ಟಿ ಮಾಡುವ ಮೂಲಕ, ವಿಶ್ವ ಕ್ರಿಕೆಟ್ ಅಭಿಮಾನಿಗಳ ಗಮನವನ್ನು ತನ್ನತ್ತ ಸೆಳೆದಿದ್ದಾರೆ. ಪೊಲಾರ್ಡ್ ಗಿಂತ ಮೊದಲು ಇಂತಹದೊಂದು ದಾಖಲೆಯನ್ನು ಕ್ರಿಕೆಟ್ ಆಟಗಾರ ಯುವರಾಜ್ ಸಿಂಗ್ ಹಾಗೂ ಹರ್ಷೆಲ್ ಗಿಬ್ಸ್ ಅವರು ತಮ್ಮದಾಗಿಸಿಕೊಂಡಿದ್ದರು. ಆದರೆ ಪೊಲಾರ್ಡ್ ಈಗ ಅಂತಹ ಒಂದು ದಾಖಲೆಯನ್ನು ಬರೆದ ಮೊದಲ ವೆಸ್ಟ್ ಇಂಡೀಸ್ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಅವರು ಪಂದ್ಯದ ಆರನೇ ಓವರ್ ನಲ್ಲಿ ಶ್ರೀಲಂಕಾದ ಬೌಲರ್ ಅಕಿಲಾ ಧನಂಜಯ್ ಅವರ ಬೌಲಿಂಗ್ ನಲ್ಲಿ 6 ಬಾಲ್ ಗಳಿಗೆ ಆರು ಸಿಕ್ಸರ್ ಗಳನ್ನು ಹೊಡೆಯುವ ಮೂಲಕ 36 ರನ್ ಗಳನ್ನು ಗಳಿಸಿದ್ದಾರೆ. ಪಂದ್ಯದಲ್ಲಿ ವೆಸ್ಟ್ಇಂಡೀಸ್ 132 ರನ್ ಗುರಿಯನ್ನು ಬೆನ್ನಟ್ಟಿ ಹೊರಟಿತ್ತು.
ಇದೇ ಪಂದ್ಯಾವಳಿಯಲ್ಲಿ ಅಖಿಲಾ ಧನಂಜಯ್ ಅವರು ಹ್ಯಾಟ್ರಿಕ್ ಪಡೆದುಕೊಂಡಿದ್ದಾರೆ. ತಮ್ಮ ಬೌಲಿಂಗ್ ನಲ್ಲಿ ಅವರು ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಎವಿನ್ ಲೂಯಿಸ್ , ಕ್ರಿಸ್ ಗೇಲ್ ಹಾಗೂ ನಿಕೋಲಸ್ ಪೂರನ್ ಅವರ ವಿಕೆಟ್ ಪಡೆಯುವ ಮೂಲಕ, ತನ್ನ ನಾಲ್ಕು ಓವರ್‌ಗಳ ಬೌಲಿಂಗ್ ನಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ 62 ರನ್ ಗಳನ್ನು ಮಾಡಲು ಅವಕಾಶ ನೀಡಿದ್ದಾರೆ. ಆದರೆ ಇನ್ನೂ 41 ಎಸೆತಗಳು ಬಾಕಿ ಉಳಿದಿರುವಾಗಲೇ ವೆಸ್ಟ್ ಇಂಡೀಸ್ ತಂಡವು ನಾಲ್ಕು ವಿಕೆಟ್ ಗಳಿಂದ ಪಂದ್ಯವನ್ನು ಗೆದ್ದುಕೊಂಡಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಗೆ ಇಳಿದಿದ್ದ ಶ್ರೀಲಂಕಾ ತಂಡವು ಪತುಮ್ ನಿಸಾಂಕಾ ಮತ್ತು ನಿರೋಷನ್ ಡಿಕ್ವೆಲಾ ಅವರ ಸಹಾಯದಿಂದ ಶ್ರೀಲಂಕಾ 131 ರನ್ ಗಳಿಸಿತ್ತು.
You will never have a better Mastercard Priceless Moment than this one! 👌🏾 @KieronPollard55 became the 1st West Indian to hit 6 sixes in a T20I over!#WIvSL #MastercardPricelessMoment #MenInMaroon pic.twitter.com/YOGItXOY8H
— Windies Cricket (@windiescricket) March 4, 2021
2017ರಲ್ಲಿ ನಡೆದಂತಹ ಟಿ-ಟ್ವೆಂಟಿ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತದ ಕ್ರಿಕೆಟ್ ಆಟಗಾರ ಯುವರಾಜ್ ಸಿಂಗ್ ಅವರು ಇಂಗ್ಲೆಂಡ್ ನ ಆಟಗಾರ ಸ್ಟುವರ್ಟ್ ಬ್ರಾಡ್ ಅವರ ಬೌಲಿಂಗ್ ನಲ್ಲಿ 6 ಬಾಲುಗಳಿಗೆ 6 ಸಿಕ್ಸ್ ಗಳನ್ನು ಹೊಡೆಯುವ ಮೂಲಕ ದಾಖಲೆಯನ್ನು ಬರೆದಿದ್ದರು. ಅದಕ್ಕಿಂತ ಮೊದಲು ಅಂದರೆ 2007 ರಲ್ಲಿ ಹರ್ಷೆಲ್ ಗಿಬ್ಸ್ ದಕ್ಷಿಣ ಆಫ್ರಿಕಾ ಮತ್ತು ನೆದರ್ಲಂಡ್ಸ್ ವಿಶ್ವಕಪ್ ಪಂದ್ಯಾವಳಿಯ ವೇಳೆಯಲ್ಲಿ 6 ಬಾಲುಗಳಿಗೆ ಆರು ಸಿಕ್ಸರ್ ಗಳನ್ನು ಹೊಡೆಯುವ ಮೂಲಕ ದಾಖಲೆಯನ್ನು ನಿರ್ಮಿಸಿದ್ದರು. ಅಲ್ಲದೇ ಒಂದೇ ಓವರ್ ನಲ್ಲಿ ಎಲ್ಲಾ ಆರು ಬಾಲ್ ಗಳಿಗೂ ಆರು ಸಿಕ್ಸರ್ ಗಳನ್ನು ಹೊಡೆದ ಮೊದಲ ಆಟಗಾರ ಹರ್ಷೆಲ್ ಗಿಬ್ಸ್ ಎನ್ನುವುದು ಅವರ ಹೆಗ್ಗಳಿಕೆಯಾಗಿದೆ.
ಪೊಲಾರ್ಡ್ ಮಾತನಾಡುತ್ತಾ, “ಒಂದು ತಂಡವಾಗಿ ನಾವು ಕ್ರಿಕೆಟ್ ಪಂದ್ಯವನ್ನು ಗೆಲ್ಲಬೇಕು, ಕ್ರಿಕೆಟ್ ಸರಣಿಯನ್ನು ಗೆಲ್ಲಬೇಕು. ಏಕೆಂದರೆ ನಾವು ಈ ಪ್ರತಿಭೆಗೆ ರಕ್ತವನ್ನು ನೀಡಬೇಕು ಹಾಗೂ ರಕ್ತವನ್ನು ನೀಡಬೇಕಾಗುತ್ತದೆ. ಆದ್ದರಿಂದಲೇ ನಾವು ಒಂದು ಸಮತೋಲನವನ್ನು ಕಾಪಾಡಿಕೊಳ್ಳಬೇಕು. (ಯುವಕರು ಮತ್ತು ಅನುಭವಿಗಳ ನಡುವೆ) ನಾವು ಟಿ 20 ಪಂದ್ಯಗಳನ್ನು ಗೆಲ್ಲಲು ಪ್ರಾರಂಭಿಸಬೇಕು. ನಾವು ಗೆಲುವನ್ನು ನಮ್ಮ ಅಭ್ಯಾಸವನ್ನಾಗಿ ಮಾಡಿಕೊಳ್ಳಬೇಕು ಎಂದು ಹೇಳುವ ಮೂಲಕ ತಮ್ಮ ಕ್ರಿಕೆಟ್ ತಂಡಕ್ಕೆ ಪ್ರೇರಣೆ ಹಾಗೂ ಸ್ಫೂರ್ತಿಯನ್ನು ನೀಡಿದ್ದಾರೆ.
ಯುವರಾಜ್ ಸಿಂಗ್ ಇಂಗ್ಲೆಂಡ್ ಜೊತೆಗೆ ೬ ಸಿಕ್ಸ್ ಹೊಡೆದ ವೀಡಿಯೊ
ಹರ್ಷಲ್ ಗಿಬ್ಸ್ ನೆದರ್ಲ್ಯಾಂಡ್ ಜೊತೆಗೆ ೬ ಸಿಕ್ಸ್ ಹೊಡೆದ ವೀಡಿಯೊ