6G ಬಂದ್ಮೇಲೆ No ಸ್ಮಾರ್ಟ್ ಫೋನ್? Nokia CEO ನುಡಿದರು ಭವಿಷ್ಯ! 2030 ರಲ್ಲಿ ಜನರ ಕೆಲಸಗಳು ಹೀಗೆ ನಡೆಯುತ್ತವೆ.
ಫೋನ್ ನಿಂದ ಮೊಬೈಲ್ ಫೋನ್, ಮತ್ತೆ ಸ್ಮಾರ್ಟ್ ಫೋನ್ ವರೆಗಿನ ಪ್ರವಾಸ ಹೀಗೆಯೇ ಸಾಗುತ್ತಾ ನಡೆದು ಬಂದಿದೆ. ಮಾತನಾಡುವ ಸಲುವಾಗಿ ತಯಾರಿಸಲಾದ ಈ ಡಿವೈಸ್ ಈಗ ಹೆಚ್ಚು ಕಡಿಮೆ ಎಲ್ಲ ಕೆಲಸಗಳಿಗೂ ಉಪಯೋಗವಾಗುತ್ತಿದೆ. ಈಗ ಈ ಸ್ಮಾರ್ಟ್ ಫೋನ್ ಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿವೆ. ಆದರೆ ಒಂದು ಅಂದಾಜಿನ ಪ್ರಕಾರ ಈ ಸ್ಮಾರ್ಟ್ ಫೋನುಗಳು ಬಹು ಬೇಗನೆ ಇತಿಹಾಸದ ಪುಟದಲ್ಲಿ ಸೇರಲಿವೆಯಂತೆ.
ಕಳೆದ 15-20 ವರ್ಷಗಳ ಹಿಂದೆ ಈ ಸ್ಮಾರ್ಟ್ ಫೋನ್ ಗಳನ್ನು ಕೈಯಲ್ಲಿ ಹೀಗೆ ಈ ರೀತಿಯಾಗಿ ತೆಗೆದುಕೊಂಡು ತಿರುಗಾಡುತ್ತೇವೆ ಎಂಬುದು ಬರೀ ಒಂದು ಕನಸಾಗಿತ್ತು ಅಷ್ಟೇ. ಸ್ಮಾರ್ಟ್ ಫೋನ್ ನಲ್ಲಿ ಆಗುತ್ತಿರುವ ವೇಗದ ವಿಕಾಸದಿಂದಾಗಿ ಇದರ ಭವಿಷ್ಯದ ಮೇಲೆಯೇ ಪ್ರಶ್ನೆ ಚಿಹ್ನೆ ನಿರ್ಮಾವಾಗಿದೆ.
Nokia ದ CEO ನುಡಿದರು ಭವಿಷ್ಯ...
Nokia ದ CEO Pekka Lundmark ಅವರು ಹೇಳುವ ಪ್ರಕಾರ ವರ್ಷ 2030 ವರೆಗೆ 6G ಟೆಕ್ನಾಲಜಿ ಶುರು ಆಗಿರುತ್ತದೆ. ಆದರೆ ಆ ವೇಳೆಗೆ ಸ್ಮಾರ್ಟ್ ಫೋನ್ ಗಳು ಕೈಯಲ್ಲಿ ಇರುವದಿಲ್ಲ. ಅವರು ಈ ಮಾತನ್ನು ದಾವೋಸ್ ನಲ್ಲಿ ನಡೆಯುತ್ತಿರುವ World Economic Forum ನಲ್ಲಿ ಹೇಳುತ್ತಿದ್ದರು. Pekka Lundmark ಅವರು ಕಮರ್ಷಿಯಲ್ ಮಾರ್ಕೆಟ್ ನಲ್ಲಿ 2030 ವರೆಗೆ 6G ಯ ಎಂಟ್ರಿ ಆಗುತ್ತದೆ ಎಂಬ ಮಾತನ್ನೂ ಹೇಳಿದರು.
6G ಬರುವ ಮೊದಲೇ ಜನರು ಸ್ಮಾರ್ಟ್ ಫೋನ್ ನ ಬದಲಾಗಿ ಸ್ಮಾರ್ಟ್ ಗ್ಲಾಸ್ ಮತ್ತು ಬೇರೆ ಡಿವೈಸ್ ನ್ನು ಯೂಸ್ ಮಾಡುತ್ತಿರುವರು. ಈಗ ಯೂಸ್ ಮಾಡುತ್ತಿರುವ ಈ ಸ್ಮಾರ್ಟ್ ಫೋನ್ ಗಳು ಆ ಸಮಯದಲ್ಲಿ ಇರುವದಿಲ್ಲ. ಇವುಗಳಲ್ಲಿ ಅನೇಕ ವಸ್ತುಗಳು ನೇರ ನಮ್ಮ ಬಾಡಿಯಲ್ಲಿಯೇ ದೊರೆಯುತ್ತವಂತೆ.
ಎಲಾನ್ ಮಸ್ಕ್ ಅವರ ಕಂಪನಿ ಮಾಡುತ್ತಿದೆ ಇದರ ಮೇಲೆ ಕೆಲಸ…
Lundmark ಅವರು ಯಾವ ಡಿವೈಸ್ ಬಗ್ಗೆ ಮಾತನಾಡುತ್ತಿದ್ದಾರೆ ಎಂಬುದನ್ನು ಮಾತ್ರ ಹೇಳಿಲ್ಲ. ಎಲಾನ್ ಮಸ್ಕ್ ಅವರ Neuralink ತರಹದ ಕಂಪನಿ ಬ್ರೇನ್ ಕಂಪ್ಯೂಟರ್ ಇಂಟರ್ ಫೇಸ್ ವಿಕಸಿತ ಮಾಡುತ್ತಿದೆ.
ಕಳೆದ ವರ್ಷ ಏಪ್ರಿಲ್ ನಲ್ಲಿ ಮಸ್ಕ್ ಅವರು ಒಂದು ಫುಟೆಜ್ ರಿಲೀಸ್ ಮಾಡಿ ಇದರ ಡೆಮೊ ನೀಡಿದ್ದರು. ಆ ವಿಡಿಯೋದಲ್ಲಿ ಒಂದು ಮೇಲ್ ಮಕಾಕ್ (ಆಫ್ರಿಕನ್ ಮಂಗ) ನ ಮೆದುಳಿನಲ್ಲಿ ಚಿಪ್ ಅಳವಡಿಸಲಾಗಿತ್ತು ಮತ್ತು ಅದು ಮೈಂಡ್ ಪಾಂಗ್ ಪ್ಲೇ ಮಾಡುತ್ತಿತ್ತು.
ಮಂಗನಿಗೆ ಜಾಯ್ ಸ್ಟಿಕ್ ಮಾಡಲು ಟ್ರೆಂಡ್ ಮಾಡಲಾಗಿತ್ತು. ಆದರೆ ಈ ಟೆಸ್ಟ್ ಮಾಡುವಾಗ ಅದಕ್ಕೆ ಅನ್ ಪ್ಲಗ್ ಇಡಲಾಗಿತ್ತು. ಮಕಾಕ್ (ಮಂಗ) ತನ್ನ ಮೈಂಡ್ ನಿಂದ ಪ್ಯಾಡಲ್ ಗೆ ಕಂಟ್ರೋಲ್ ಮಾಡುತ್ತಿತ್ತು. ಆದರೆ ಜಾಯಸ್ಟಿಕ್ ಸಹಾಯದಿಂದ ನಾನು ಹೀಗೆ ಮಾಡುತ್ತಿದ್ದೇನೆಂದು ಮಂಗಕ್ಕೆ ಎನಿಸುತ್ತಿತ್ತು.
ಎಲ್ಲಿಯವರೆಗೆ ಆಗುವುದು 6G
6G ಗೆ ಅನುಗುಣವಾಗಿ ಇನ್ನೂ ಅನೇಕ ವಿಷಯಗಳು ಕ್ಲಿಯರ್ ಆಗಬೇಕಾಗಿದೆ. ಅದರಲ್ಲೂ ಭಾರತ ಈಗಷ್ಟೇ 5G ಲಾಂಚಿಂಗ್ ಮಾಡುವ ತಯಾರಿಯಲ್ಲಿದೆ. ಇದಕ್ಕಾಗಿ ಪ್ರಧಾನಮಂತ್ರಿ ಮೋದಿ ಅವರು ಒಂದು ಟಾಸ್ಕ್ ಫೋರ್ಸ್ ತಯಾರಿಸಿದ್ದಾರೆ. ಈ ವರ್ಷದ ಕೊನೆಯವರೆಗೆ ಭಾರತದಲ್ಲಿ ನಮಗೆ 5G ಟೆಕ್ನಾಲಜಿ ನೋಡಲು ಮತ್ತು ಅನುಭವಿಸಲು ಸಿಗುತ್ತದೆ.