7 ವರ್ಷದ ಹುಡುಗಿ ನೇರವಾಗಿ ಪೊಲೀಸ್ ಠಾಣೆಗೆ ತಲುಪಿ, ಅವಳು ಹೇಳಿದ್ದನ್ನು ಕೇಳಿ ಆಘಾತಕ್ಕೊಳಗಾದ ಪೊಲೀಸರು!

ಕಳೆದ ತಿಂಗಳು 28 ನೇ ತಾರೀಖಿನಂದು ಏಳು ವರ್ಷದ ಪುಟ್ಟ ಬಾಲಕಿ ಪೊಲೀಸ್ ಸ್ಟೇಷನ್ ಗೆ ಹೋಗಿ, ಅವರಿಗೆ ಒಂದು ವಿಷಯವನ್ನು ತಿಳಿಸಿದಳು. ಅದನ್ನು ಕೇಳಿ ಅಲ್ಲಿದ್ದ ಪೊಲೀಸ ಅಧಿಕಾರಿಗಳು ಧೀಗ್ಭ್ರಮೆಗೊಂಡರು. ಹುಡುಗಿ ನೀಡಿದ ಮಾಹಿತಿಯನ್ನು ಕೇಳಿ ಅಲ್ಲಿ ಡ್ಯೂಟಿ ಮೇಲಿದ್ದ ಪೊಲೀಸ ಅಧಿಕಾರಿಗಳು ಆಕೆಯ ಮಾಹಿತಿ ಮೇರೆಗೆ ತಪಾಸಣೆ ನಡೆಸಿದಾಗ ಅವಳು ಹೇಳಿದ್ದು ನಿಜವೆಂದು ತಿಳಿದು ಬಂದಿತು.

ಆಂಧ್ರಪ್ರದೇಶದ ನೆಲ್ಲೂರ್ ಎಂಬ ಜಿಲ್ಲೆಯಲ್ಲಿ ಗೋಟಾಲಪಾಲೆಂ ಎಂಬ ಒಂದೂರಿದೆ. ಆ ಊರಿನಲ್ಲಿ ಸುಭಾಷಿಣಿ , ಆಕೆಯ ಗಂಡ ಬುಡಬುಕ್ಕಮ್ ನ ಜೊತೆಗೆ ವಾಸವಾಗಿದ್ದಳು. ಆಕೆಯ ಪತಿ ದಿನಾಂಕ 27 ರಂದು ತುಂಬಾ ಮದ್ಯ ಕುಡಿದುಕೊಂಡು ಮನೆಗೆ ಬಂದಿದ್ದನು. ಯಾವುದೋ ಒಂದು ಕಾರಣದಿಂದ ಅವರಿಬ್ಬರ ನಡುವೆ ಜಗಳ ಪ್ರಾರಂಭವಾಯಿತು. ಹೀಗೆ ಒಬ್ಬರಿಗೊಬ್ಬರು ಬೈದಾಡುತ್ತಿರುವಾಗ ನಶೆಯಲ್ಲಿದ್ದ ಪತಿ ತನ್ನ ಪತ್ನಿ ಶುಭಾಷಿಣಿಯನ್ನು ಹೊಡೆಯಲು ಪ್ರಾರಂಭ ಮಾಡಿದನು ಆಗ ಅವನ ಹೊಡೆತದಿಂದ ಆಕೆಯ ಪತ್ನಿ ಜ್ಞಾನ ತಪ್ಪಿ ಕೆಳಗಡೆ ಬಿದ್ದಳು.

ಮದ್ಯದ ಅಮಲಿನಲ್ಲಿದ್ದ ಪತಿಯು ಆಕೆಯು ಕೆಳಗೆ ಬಿದ್ದದನ್ನು ಕಂಡು ತುಂಬಾ ಹೆದರಿದ ಅವಳು ಸತ್ತೇ ಹೋಗಿದ್ದಾಳೆಂದು ಮನೆಯ ಬದಿಗೆ ಒಂದು ತಗ್ಗನ್ನು ಅಗೆದು ಅದರಲ್ಲಿ ಜೀವಂತವಿದ್ದ ಹೆಂಡತಿಯ ಶರೀರವನ್ನು ಮುಚ್ಚಿ ಅದರ ಮೇಲೆ ಮಣ್ಣು ಹಾಕಿದನು. ಇದನ್ನೆಲ್ಲಾ ಅವರ ಏಳು ವರ್ಷದ ಪುಟ್ಟ ಬಾಲಕಿ ನೋಡುತ್ತಿದ್ದಳು. ಅದನ್ನು ಕಂಡು ಆತ ಅವಳನ್ನು “ನೀನು ಯಾರಿಗಾದರೂ ಈ ವಿಷಯ ಹೇಳಿದರೆ ನಿನ್ನನ್ನೂ ಹೀಗೆ ಮಾಡುವೆ ” ಎಂದು ಹೆದರಿಸಿದನು. ತದನಂತರ ಆತನು ಮಾಡಿದ್ದು ಅಪರಾಧವೆಂದು ಅನಿಸಿ ಮಗಳನ್ನು ಮನೆಯಲ್ಲಿಯೇ ಬಿಟ್ಟು ಪರಾರಿಯಾದನು.

ತಂದೆ-ತಾಯಿ ಇಬ್ಬರನ್ನು ಕಳೆದಕೊಂಡ ಪುಟ್ಟ ಬಾಲಕಿಗೆ ಏನು ಮಾಡಬೇಕೆಂದು ತೋಚದಂತಾಯಿತು. ಆಗ ಅವಳು ಧೈರ್ಯ ಗಟ್ಟಿಮಾಡಿ ಅಲ್ಲಿಯೇ ಇದ್ದ ಪೊಲೀಸ್ ಸ್ಟೇಷನ್ ಗೆ ಹೋಗಿ ನಡೆದ ಘಟನೆ ಸವಿಸ್ತಾರವಾಗಿ ವಿವರಿಸಿದಳು. ಮೊದಲು ಮಗುವಿನ ಹೇಳಿಕೆಯನ್ನು ಪೊಲೀಸರು ನಂಬಲಿಲ್ಲ. ಆದರೆ ಮಗುವಿಗೆ ನಿನ್ನ ತಾಯಿಯನ್ನು ಹೂತ ಸ್ಥಳ ತೋರಿಸುವಿಯಾ ಎಂದು ಕೇಳಿದಾಗ ಮಗು ತನ್ನ ಮನೆಯ ಬದಿಯಲ್ಲಿದ್ದ ಆ ಮಣ್ಣು ಮುಚ್ಚಿದ ಸ್ಥಳ ತೋರಿಸಿದಳು. ಪೊಲೀಸ್ ಅಧಿಕಾರಿಗಳು ಅದನ್ನು ಅಗೆಯಲು ಪ್ರಾರಂಭಿಸಿದರು. ಕೆಲವು ನಿಮಿಷಗಳ ನಂತರ ಅದರಲ್ಲಿ ಆ ಪುಟ್ಟ ಕಂದಮ್ಮನ ತಾಯಿಯ ಮೃತ ದೇಹ ದೊರಕಿತು. ಆಗ ಪೊಲೀಸರು ಮಗು ಹೇಳಿದ್ದು ನಿಜ ಎಂದು ತಿಳಿದರು. ಸದ್ಯಕ್ಕೆ ಪೊಲೀಸರು ಶುಭಾಷಿಣಿಯ ಪತಿಯ ಶೋಧನೆಯ ಕಾರ್ಯ ನಡೆಸುತ್ತಿದ್ದಾರೆ. ಈ ಪುಟ್ಟ ಬಾಲಕಿಯ ಸಾಹಸ ಧೈರ್ಯಕ್ಕೆ ಪೊಲೀಸ್ ಅಧಿಕಾರಿಗಳು ಹೊಗಳಿದ್ದಾರೆ.