7 ವರ್ಷದ ಮಗುವನ್ನು ಡಾಕ್ಟರ್ ಮೃ ತ ಘೋಷಿಸಿದರು, ತಾಯಿ ಮಗುವನ್ನು ತಬ್ಬಿಕೊಂಡು ಅಳುತ್ತಿದ್ದಳು, ಆಗ ಅಲ್ಲಿ ನಡೆದ ಘಟನೆಯನ್ನು ತಿಳಿದರೆ ಕಣ್ಣೀರು ಬರುತ್ತದೆ…!
ಹುಟ್ಟು ಮತ್ತು ಸಾವು ಎರಡೂ ಮೇಲಿನವನ ಕೈಯಲ್ಲಿದೆ ಎಂದು ಹೇಳಲಾಗುತ್ತದೆ. ಆತನ ಇಚ್ಛೆಯ ಹೊರತು ನಾವು ಈ ಭೂಮಿಯಲ್ಲಿ ಹುಟ್ಟಲಾರೆವು ಮತ್ತು ಸತ್ತು ಸ್ವರ್ಗಕ್ಕೆ ಹೋಗಲಾರೆವು. ಅಲ್ಲದೆ ಕನ್ನಡದಲ್ಲಿ ಒಂದು ಗಾದೆ ಮಾತು ಸಹ ಇದೆ. ಅದೇನೆಂದರೆ ‘ದೇವರ ಕರುಣೆ ಇಲ್ಲದೆ ಒಂದು ಹುಲ್ಲು ಕಡ್ಡಿ ಸಹ ಅಲುಗಾಡದು’ ಅಂತ. ಇಲ್ಲಿ ಎಲ್ಲದಕ್ಕೂ ದೇವರು ಇದ್ದೆ ಇರುತ್ತಾನೆ.
ಇದರರ್ಥ ದೇವರ ನೆರಳು ಯಾರ ಮೇಲೆ ಇದ್ದಿರುತ್ತದೆಯೋ ಅವರಿಗೆ ಯಾರೂ ಸಹ ಹಾನಿ ಮಾಡಲಾರರು. ಇಂದು ನಾವು ಹರ್ಯಾಣದ ಬಹದ್ದೂರ್‌ಗಢದಲ್ಲಿ ನಡೆದ ಅಂತಹ ಒಂದು ಪವಾಡದ ಬಗ್ಗೆ ಹೇಳಲಿದ್ದೇವೆ. ಇಲ್ಲಿ 7 ವರ್ಷದ ಬಾಲಕ ತನ್ನ ಪ್ರಾಣ ಕಳೆದುಕೊಂಡು ಮತ್ತೆ ಜೀವಂತ ವಾಗಿದ್ದಾನೆ. ಆತನು ಬದುಕುಳಿಯುವದಕ್ಕೆ ಕಾರಣ ಆತನ ಅಜ್ಜಿಗೆ ಸಲ್ಲುತ್ತದೆ . ಏಕೆಂದರೆ ಅಜ್ಜಿಗೆ ತನ್ನ ಸತ್ತ ಮೊಮ್ಮಗನ ಮುಖವನ್ನು ಕೊನೆಯ ಬಾರಿ ನೋಡುವದಿತ್ತು.
ಅಜ್ಜಿಯ ಒತ್ತಾಯದ ಮೇರೆಗೆ, ಬಾಲಕನನ್ನು ಆಸ್ಪತ್ರೆಯಿಂದ ಸ್ಮಶಾನದ ಕರೆದೊಯ್ಯುವ ಬದಲು ಆತನನ್ನು ಮನೆಗೆ ತಗೆದುಕೊಂಡು ಹೋದರು. ಆದರೆ ಮನೆಯಲ್ಲಿ ನಡೆಯುತು ಒಂದು ಪವಾಡ. ಈ ಪವಾಡ ಸದೃಶ ಘಟನೆ ಇದೀಗ ದೇಶ-ವಿದೇಶಗಳಲ್ಲಿ ಪ್ರಮುಖ ಸುದ್ದಿಗಳ ಭಾಗವಾಗಿದೆ. ಈ ಸಂಪೂರ್ಣ ವಿಷಯದ ಬಗ್ಗೆ ನಿಮಗೆ ವಿವರವಾದ ಮಾಹಿತಿಯನ್ನು ನೀಡಲಿದ್ದೇವೆ.
7 ವರ್ಷದ ಕುನಾಲ್ ಹರಿಯಾಣದ ಬಹದ್ದೂರ್ ಗಡ್ ಫೋರ್ಟ್ ಮೊಹಲ್ಲಾದಲ್ಲಿ ವಾಸಿಸುತ್ತಿದ್ದನು. ತಂದೆ ಹಿತೇಶ್ ಬಟ್ಟೆ ಅಂಗಡಿ ನಡೆಸುತ್ತಿದ್ದರು. ಕೆಲ ಸಮಯದ ಹಿಂದೆ ಕುನಾಲ್‌ಗೆ ಟೈಫಾಯಿಡ್ ಬಂದಿತ್ತು ಇದರಿಂದ ಆತನ ಸ್ಥಿತಿ ತುಂಬಾ ಹದಗೆಟ್ಟಿತ್ತು. ಹೀಗಿರುವಾಗ ಮನೆಯವರು ಅವನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು.
ಆದರೆ, ಸ್ಥಳೀಯ ಆಸ್ಪತ್ರೆಯಲ್ಲಿ ಅವನು ಚೇತರಿಸಿಕೊಳ್ಳಲಿಲ್ಲ, ನಂತರ ಅವನನ್ನು ದೆಹಲಿಗೆ ಕರೆದೊಯ್ಯಲಾಯಿತು. ದೆಹಲಿಯ ಆಸ್ಪತ್ರೆಯಲ್ಲಿ ಕೆಲಕಾಲ ಚಿಕಿತ್ಸೆ ನೀಡಲಾಯಿತು ಆದರೂ ಸಹ ಆತನ ಆರೋಗ್ಯದಲ್ಲಿ ಚೇತರಿಸಿಕೊಳ್ಳಲಿಲ್ಲ. ತದನಂತರ ಆತನ ಉಸಿರಾಟ ಬಹುತೇಕ ನಿಂತು ಹೋಗಿತು. ಹೀಗಿರುವಾಗ ಮನೆಯವರು ಆತ ಸಾವನೊಪ್ಪಿದ್ದಾನೆ ಎಂದು ಭಾವಿಸಿ ಮನೆಗೆ ಕರೆತಂದರು.
ಮಗುವಿನ ಸಾವಿನ ಸುದ್ದಿ ಕೇಳಿ ಮನೆಯವರು ಅಳಲು ಶುರು ಮಾಡಿದರು. ಕುಟುಂಬಸ್ಥರು ಆತನ ಶರೀರ ಐಸ್ ನಲ್ಲಿಡುವ ವ್ಯವಸ್ಥೆ ಮಾಡತೊಡಗಿದರು. ಅಲ್ಲದೆ ಸ್ಮಶಾನ ಭೂಮಿಯ ಶೋಧ ಸಹ ಮಾಡಿದರು. ಮಗುವಿನ ತಾಯಿ ತುಂಬಾನೇ ಅಳುತ್ತಿದ್ದಳು. ಅಳುವಾಗ ಮಗುವನ್ನು ಜೀವಂತ ವಾಗುವಂತೆ ಆತನಿಗೆ ಕೂಗಿ ಹೇಳುತ್ತಿದ್ದಳು. ಆದರೆ ಮುಂದೆ ನಡೆದ ಘಟನೆ ತಿಳಿದರೆ ಕಣ್ಣೀರು ಬರುತ್ತೆ.
ಕಿಲಾ ಮೊಹಲ್ಲಾದ ನಿವಾಸಿ ವಿಜಯ್ ಶರ್ಮಾ ಅವರ ಮೊಮ್ಮಗ ಕುನಾಲ್ ಶರ್ಮಾ ಅವರು ಮೇ 2 ರಂದು ಟೈಫಾಯಿಡ್‌ನಿಂದ ಸಾವನ್ನಪ್ಪಿದ್ದಾರೆ ಎಂದು ದೆಹಲಿ ವೈದ್ಯರು ಘೋಷಿಸಿದರು ಮತ್ತು ಶವವನ್ನು ಪ್ಯಾಕ್ ಮಾಡಿ ಮಗುವಿನ ತಂದೆ ಹಿತೇಶ್ ಮತ್ತು ತಾಯಿ ಜಾನ್ವಿಯವರಿಗೆ ಹಸ್ತಾಂತರಿಸಿದರು.
ಕುನಾಲ್‌ನ ಮಾವನ ಮನೆಯಲ್ಲಿ ಅವನನ್ನು ಅಂತ್ಯಸಂಸ್ಕಾರ ಮಾಡಲಾಗುವುದು ಎಂದು ನಿರ್ಧರಿಸಲಾಯಿತು, ಆದರೆ ಅಜ್ಜಿ ತನ್ನ ಮೊಮ್ಮಗನ ಮುಖ ನೋಡಬೇಕು ಎಂದು ಆಗ್ರಹ ಮಾಡಿದಳು. ಹೀಗಾಗಿ ಕುನಾಲ್ ತಂದೆ ಈತನ ಶವವನ್ನು ಮರಳಿ ಮನೆಗೆ ತಗೆದುಕೊಂಡು ಹೋದನು. ಕುನಾಲ್‌ನ ಮುಖವನ್ನು ನೋಡಬೇಕೆಂದು ಅಜ್ಜಿಯು ಒತ್ತಾಯಿಸದಿದ್ದರೆ, ಕುನಾಲ್‌ನ ಅಂತ್ಯಕ್ರಿಯೆ ನಡೆದಿರುತ್ತಿತು.
ದೈವ ಇಚ್ಛೆಯೋ ಏನು ಎಂಬುದು ಗೊತ್ತಿಲ್ಲ ಯಾವಾಗ ಮಗುವಿನ ಮೃತ ದೇಹ ಮನೆಯಲ್ಲಿ ತರುತ್ತಾರೆಯೋ ಆಗ ಅಜ್ಜಿ ಹಾಗೂ ಆತನ ತಾಯಿ ಮತ್ತು ಅಕ್ಕ ಎಲ್ಲರೂ ಕೂಡಿಕೊಂಡು ಗೋಳೋ ಅಂತ ಅಳಲು ಶುರು ಮಾಡಿದರು. ಅದೇ ಸಂದರ್ಭದಲ್ಲಿ ತಾಯಿ ಅಲ್ಲಿದ್ದ ಮಗುವಿನ ಶರೀರವನ್ನು ತಬ್ಬಿಕೊಂಡು ಮಗು ನೀ ಎದ್ದೇಳು ಅಂತ ಹೀಗೆ ಹತ್ತಾರು ಸಾರಿ ಹೇಳುತ್ತಾ ಅಳುತ್ತಾಳೆ. ದೇವರು ಈ ತಾಯಿಯ ಕೂಗು ಕೇಳಿದ ವೇನು ಗೊತ್ತಿಲ್ಲ. ಹೀಗಿರುವಾಗ ಪ್ಯಾಕ್ ಮಾಡಿದ ಶವದಿಂದ ಉಸಿರಾಟದ ಧ್ವನಿ ಬರಲು ಶುರು ವಾಗುತ್ತದೆ. ಆಗ ತಂದೆ ಅದರ ಮೇಲೆ ಹೋದಿಸಿದ್ದ ಚಾದರ್ ತಗೆಯುತ್ತಾನೆ. ಆಗ ಮಗುವಿನ ಶ್ವಾಸ ನಡೆಯುತ್ತಿರುತ್ತದೆ ಇಂದನ್ನು ಕಂಡು ಖುಷಿಯಾಗಿ ಆತನು ಮತ್ತೆ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾನೆ. ಸದ್ಯಕ್ಕೆ ಮಗುವಿನ ಪರಸ್ಥಿತಿ ಚೆನ್ನಾಗಿದೆ.
ಅದಕ್ಕೆ ಹೇಳೋದು ತಾಯಿ ಏನನ್ನು ಸಹ ಸಾಧಿಸಬಲ್ಲಳು ಅಂತ. ತಾಯಿಯ ಪ್ರೀತಿಯ ಮುಂದೆ ಭಗವಂತನು ಸಹ ಶರಣಾಗುತ್ತಾನೆ. ಸತ್ತ ತನ್ನ ಮಗುವನ್ನು ಬದುಕಿಸುವ ಶಕ್ತಿ ಕೇವಲ ತಾಯಿಗೆ ಮಾತ್ರ ವಿದೆ.