70 ಕೆಜಿ ಬಾಳೆಗೊನೆಯಿಂದಾಗಿ ಮಾಲೀಕನಿಗಾಯಿತು ದೊಡ್ಡ ನಷ್ಟ; ಈಗ ಕಾರ್ಮಿಕನಿಗೆ ಕೊಡಬೇಕಾಗಿದೆ 4 ಕೋಟಿ ರೂಪಾಯಿಗಳ ಪರಿಹಾರ….!
ಕಾರ್ಮಿಕನೊಬ್ಬ ತನ್ನ ಮಾಲೀಕನ ವಿರೋಧದಲ್ಲಿ ಐದು ಲಕ್ಷ ಡಾಲರ್ ಪರಿಹಾರಕ್ಕಾಗಿ ಕೇಸು ದಾಖಲಿಸಿದ್ದಾನೆ. ಈ ಕೇಸನ್ನು ಆಸ್ಟ್ರೇಲಿಯಾದ ಕ್ವೀನ್ಸ್ಲಾಂಡ್ ನಲ್ಲಿ ವಾಸಿಸುವ ರೈತ ಕಾರ್ಮಿಕನೊಬ್ಬನು ದಾಖಲಿಸಿದ್ದಾನೆಂದು ತಿಳಿದುಬಂದಿದೆ.
ಕ್ವೀನ್ಸ್ ಲ್ಯಾಂಡ್ ನಲ್ಲಿಯ ಬಾಳೆಹಣ್ಣಿನ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕ ಬಾಳೆಹಣ್ಣಿನ ಗೊನೆಯನ್ನು ಗಿಡದಿಂದ ಇಳಿಸಲು ಹೋಗಿ ಕೆಳಗೆ ಬಿದ್ದಿದ್ದಾನೆ. ಇದರಿಂದಾಗಿ ಆತನಿಗೆ ಗಾಯವಾಗಿದೆ. ಇದೇ ಒಂದು ಕಾರಣಕ್ಕಾಗಿ ಆತ ತನ್ನ ಮಾಲಿಕನಿಂದ 5 ಲಕ್ಷ ರೂಪಾಯಿಗಳ ಪರಿಹಾರ ಪಡೆದುಕೊಳ್ಳುವುದಕ್ಕಾಗಿ ಕೇಸು ದಾಖಲಿಸಿದ್ದಾನೆ.
ದ ಕೆನ್ಸ್ ಪೋಸ್ಟ್ ನೀಡಿದ ವರದಿಯ ಪ್ರಕಾರ, ಕುಕ್ ಟಾವುನ್ ಹತ್ತಿರ ಒಂದು ತೋಟದಲ್ಲಿ ಬಾಳೆಯ ಗಿಡ ಮತ್ತು ಅದಕ್ಕೆ ಅಂಟಿದ ಬಾಳೆಹಣ್ಣಿನ ಗೊನೆ ಜಾನ್ ಲ್ಯಾಂಗ್ ಬಾಟಮ್ ಹೆಸರಿನ ವ್ಯಕ್ತಿಯ ಮೇಲೆ ಬೀಳುತ್ತದೆ. ಪ್ರಸ್ತುತ ವ್ಯಕ್ತಿಯು ಅದೇ ತೋಟದಲ್ಲಿ ಕಾರ್ಮಿಕನಾಗಿ ಕೆಲಸಮಾಡುತ್ತಿದ್ದ. ಜೂನ್ 2016 ರಲ್ಲಿ ಎಲ್ ಅಂಡ್ ಆರ್ ಕಾಲಿನ್ಸ್ ಅವರ ತೋಟದಲ್ಲಿ ಬಾಳೆಹಣ್ಣಿನ ಕಟಾವು ಮಾಡುವ ಸಂದರ್ಭದಲ್ಲಿ ಗಾಯಗೊಂಡಿದ್ದ.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೋರ್ಟ್ ತನ್ನ ನಿರ್ಣಯವನ್ನು ಈಗ ನೀಡಿದೆ. ಕಾರ್ಮಿಕನು ತನ್ನ ಜೊತೆಗೆ ಮಾಲೀಕ ಬೇಜವಾಬ್ದಾರಿತನದಿಂದ ನಡೆದುಕೊಂಡಿದ್ದಾನೆಂದು ಹೇಳಿದ್ದಾನೆ. ಯಾಕೆಂದರೆ ದೊಡ್ಡ ಗಿಡದಿಂದ ದೊಡ್ಡ ಗೊನೆಯನ್ನು ಯಾವ ರೀತಿ ಇಳಿಸಬೇಕು ಎಂಬುದರ ಬಗ್ಗೆ ಸರಿಯಾದ ತರಬೇತಿ ನೀಡಿರಲಿಲ್ಲ ಎಂದು ಹೇಳುತ್ತಾನೆ.

ಈ ಪ್ರಕರಣಕ್ಕೆ ಅನುಸರಿಸಿ ನ್ಯಾಯಾಧೀಶರಾದ ಕ್ಯಾಥರೀನ್ ಹೋಮ್ಸ್ ಕೋರ್ಟಿನಲ್ಲಿ ಹೀಗೆ ಹೇಳಿದರು, ಬಾಳೆಹಣ್ಣಿನ ಮರ ಸಾಧಾರಣವಾಗಿ ಎತ್ತರವಾಗಿತ್ತು. ಹೀಗಾಗಿ ಆ ಗಿಡದ ಮೇಲಿನ ಗೊನೆಯ ಎತ್ತರದ ಮೇಲೆಯೇ ಇತ್ತು. ಲ್ಯಾಂಗ್ ಬಾಟಮ್ ತನ್ನ ಬಲ ಭುಜದ ಮೇಲೆ ಬಾಳೆಗೊನೆ ಮತ್ತು ಎಡಗೈಯಿಂದ ಮರವನ್ನು ಹಿಡಿದಿದ್ದನು. ಅದೇ ಸಮಯಕ್ಕೆ ಕಾರ್ಮಿಕ ದೇಹದ ಬಲಭಾಗದಿಂದ ಭೂಮಿಯ ಮೇಲೆ ಬಿದ್ದನು. ಈ ಘಟನೆಯ ನಂತರ ಕಾರ್ಮಿಕನಿಗೆ ಆಸ್ಪತ್ರೆಗೆ ದಾಖಲು ಮಾಡಲಾಯಿತು. ತದನಂತರ ಆತ ಕೆಲಸಕ್ಕೆ ಮರಳಿಲ್ಲ.
ಕೋರ್ಟಿನ ಪ್ರಕಾರ ಬಾಳೆಗೊನೆಯ ತೂಕ ಸುಮಾರು 70 ಕಿಲೋ ಇತ್ತು. ಈ ಅಪಘಾತದ ನಂತರ ಆತ ಗಂಭೀರವಾಗಿ ಗಾಯಗೊಂಡಿದ್ದ. ಹೀಗಾಗಿ ಅಂದಿನಿಂದ ಆತ ಕೆಲಸಕ್ಕೆ ಹೋಗಿರಲಿಲ್ಲ. ಹಾಗೂ ಗಂಭೀರ ಗಾಯವಾಗಿದ್ದರಿಂದ ಡಾಕ್ಟರ್ ಕೆಲಸದಿಂದ ಬಿಡುವು ತೆಗೆದುಕೊಳ್ಳಲು ಹೇಳಿದ್ದರು.
ನ್ಯಾಯಮೂರ್ತಿ ಹೋಮ್ಸ್ ಅವರ ಪೀಠವು ಈ ಪ್ರಕರಣದಲ್ಲಿ ತನ್ನ ವಿಚಾರಣೆ ಹೊರಹಾಕಿತು. ಇಲ್ಲಿ ಕಾರ್ಮಿಕನು ಮಾಡಿದ ದಾವೆ ನಿಜವಾಗಿರುವುದು ಕಂಡುಬಂತು. ಹೀಗಾಗಿ ಈಗ ಮಾಲೀಕನಿಗೆ ಗಾಯಗೊಂಡ ತನ್ನ ಕಾರ್ಮಿಕನಿಗೆ ನಷ್ಟ ಮತ್ತು ಪರಿಹಾರ ರೂಪದಲ್ಲಿ 502,740 ಡಾಲರ್ ಎಂದರೆ 3 ಕೋಟಿ 77 ಲಕ್ಷ 15 ಸಾವಿರ 630 ರೂಪಾಯಿಗಳನ್ನು ನೀಡಬೇಕಾಗಿದೆ.