ವಯಸ್ಸು ಇದೊಂದು ಬರಿ ಸಂಖ್ಯೆ ಅಷ್ಟೇ, 50 ಕೆಜಿ ತೂಕದ ಬಂಡೆಗಲ್ಲನ್ನು ಆಟಿಕೆಯಂತೆ ಎತ್ತಿ ತೂರಾಡಿದ 70 ರ ಪ್ರಾಯದ ವ್ಯಕ್ತಿ!!

ಇಂದಿನ ಯಾಂತ್ರಿಕ ಜೀವನ, ಆತಂತ್ರಜೀವನ ಶೈಲಿಗೆ ಸುಸೂತ್ರತೆ ತರುವ ನಿಟ್ಟಿನಲ್ಲಿ ಯೋಗ-ಆಸನ ಪ್ರಾಣಾಯಾಮಗಳು ಮುಖ್ಯ ಪಾತ್ರವಾಹಿಸುತ್ತವೆ. ಆಡುವ ವಯಸ್ಸಿನ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಒತ್ತಡದ ಬಲೆಯಲ್ಲಿ ಓಡಾಡುವ ಬಿಡುವಿಲ್ಲದ ಮನಸ್ಸು, ಶರೀರ ಒದ್ದಾಡುತ್ತಿದೆ. ಆದ್ದರಿಂದ ದೇಹ ಬಲಿಶಾಲಿಯಾಗಿರಬೇಕು. ಮನಸ್ಸನ್ನು ಹಗುರವಾಗಿಡಲು, ಆತ್ಮಬಲವನ್ನು ಗಟ್ಟಿಮುಟ್ಟು ಮಾಡಲು ಯೋಗಾಸನ, ಪ್ರಾಣಾಯಾಮದ ಜೊತೆಗೆ ಕಸರತ್ತು ಪ್ರತಿನಿತ್ಯಮಾಡುವದು ಅವಶ್ಯಕವಾಗಿದೆ.

ಪ್ರತಿಯೊಬ್ಬರ ಶರೀರ ಸದೃಢವಾಗಿರಲು ದಿನನಿತ್ಯ ಯೋಗಾಸನ, ಪ್ರಾಣಾಯಾಮ ಮತ್ತು ವ್ಯಾಯಾಮ ಮಾಡುವದಕ್ಕೆ ತುಂಬಾ ಆದ್ಯತೆ ನೀಡಬೇಕು. ಕಸರತ್ತು ವ್ಯಾಯಾಮ ಮಾಡುವದರಿಂದ ನಮ್ಮ ಶರೀರದಲ್ಲಿ ಆನೆಯ ಬಳ ಬರುತ್ತದೆ. ಹಿಂದಿನ ಕಾಲದ ಜನರು ಹೊಟ್ಟೆ ತುಂಬ ಊಟ ಮಾಡಿ ಮೈತುಂಬ ಕೆಲಸ ಮಾಡುತ್ತಿದ್ದರು ಹೀಗಾಗಿ ಅವರ ಶರೀರಕ್ಕೆ ಯಾವುದೇ ತೊಂದರೆ ಬರುತ್ತಿದ್ದಿಲ್ಲ. ಆದರೆ ಇಂದಿನ ಜನರ ಶರೀರ ತುಂಬಾ ಹದಗೆಟ್ಟುತ್ತಿದೆ ಏಕೆಂದರೆ ಫಾಸ್ಟ್ ಫುಡ್, ರಾಸಾಯನಿಕ ಮಿಶ್ರಿತ ಆಹಾರ ಮತ್ತು ವ್ಯಾಯಾಮ ಮಾಡದೆ ಇರುವದು. ಇದರಿಂದಾಗಿ ಇಂದು ಮಾನವನು ಅನೇಕ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾನೆ. ಅಲ್ಲದೆ ನಿಸರ್ಗದಲ್ಲಿ ಹೊಸ ಹೊಸ ರೋಗಗಳ ಉದ್ಭವ ವಾಗುತ್ತಿವೆ.

ಸದ್ಯಕ್ಕೂ ಸಹ ವಯಸ್ಸಾದ ವ್ಯಕ್ತಿಗಳು ಇಂದಿನ ತರುಣರಿಗಿಂತ ತುಂಬಾ ಶಕ್ತಿಯುಳ್ಳವರಾಗಿದ್ದಾರೆ ಎಂಬುದಕ್ಕೆ ಈ ವಿಡಿಯೋನೇ ಸಾಕ್ಷಿ. ಪ್ರಸ್ತುತ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ., ಒಂದು ಕಸರತ್ತು ಮಾಡುವ ಸ್ಥಳದಲ್ಲಿ ಒಬ್ಬ 70 ರ ಪ್ರಾಯದ ವ್ಯಕ್ತಿ ಬಂದು ಅಲ್ಲಿದ್ದ 50 ಕೆಜಿ ತೂಕದ ಬಂಡೆಯನ್ನು ಆತೆಗೆಯಂತೆ ಎತ್ತಿ ಅದನ್ನು ಒಂದು ಬದಿಯಿಂದ ಮತ್ತೊಂದು ಬದಿಗೆ ಈ ರೀತಿಯಾಗಿ ಹೊರಳಾಡಿಸಿ ಬಂಡೆಯನ್ನು ಎಸೆಯುತ್ತಾನೆ. ಅದನ್ನು ಕಂಡು ಅಲ್ಲಿದ್ದ ಎಲ್ಲ ಯುವಕರು ಆಶ್ಚರ್ಯ ಪಡುತ್ತಾರೆ. ಏಕೆಂದರೆ ತಮಗೆ ಬರೀ ಮೇಲಕ್ಕೂ ಎತ್ತಲಾಗದ ಬಂಡೆಗಲ್ಲನ್ನು ತನ್ನ ಬಲದಿಂದ ಆಟೆಗೆಯಂತೆ ಹೇಗೆ ಎಸೆದನು ಎಂಬ ವಿಚಾರ ಅವರ ಮನದಲ್ಲಿ ಮಾಡುತ್ತ ನಿಲ್ಲುತ್ತಾರೆ. ಈ ವಿಡಿಯೋ ನೋಡಿದಾಗ ವಯಸ್ಸು ಇದೊಂದು ಸಂಖ್ಯೆ ಅಷ್ಟೇ ಬಲವಿದ್ದರೆ ಎಷ್ಟೇ ಪ್ರಾಯದ ವ್ಯಕ್ತಿ ಏನನ್ನು ಸಹ ಮಾಡಬಹುದು ಎಂದು ತಿಳಿದು ಬರುತ್ತದೆ.

ವಿಡಿಯೋ ನೋಡಿ

 

View this post on Instagram

 

A post shared by Pratyay Singh (@gyanindianjori)

ಪ್ರಸ್ತುತ ವಿಡಿಯೋವನ್ನು ಇನ್ಸ್ಟಾಗ್ರಾಮ್ gyanindiajori ನಲ್ಲಿ ಎಂಬ ಹೆಸರಿನ ಖಾತೆಯ ಮೂಲಕ ಶೇರ್ ಮಾಡಲಾಗಿದೆ. ಇದುವರೆಗೆ ಸುಮಾರು ಐದು ಲಕ್ಷಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ ಅಲ್ಲದೆ ಐವತ್ತು ಸಾವಿರಕ್ಕೂ ಹೆಚ್ಚು ಜನರು ಲೈಕ್ಸ್ ಮಾಡಿದ್ದಾರೆ.