ಐದು ಭಾಷೆಗಳಲ್ಲಿ ಬರಲಿದೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಯವರ ಲೈಫ್ ಆಫ್ ಚಾರ್ಲಿ!

ಏನಾದರೂ ವಿಶೇಷ ಇಟ್ಟುಕೊಂಡೇ ಸಿನೆಮಾ ಮಾಡುವ ರಕ್ಷಿತ್ ಶೆಟ್ಟಿ, ಕಿರಿಕ್ ಪಾರ್ಟಿ, ಅವನೇ ಶ್ರೀಮನ್ನಾರಾಯಣ ಚಿತ್ರಗಳ ಬಳಿಕ 777 ಚಾರ್ಲಿ ಎಂಬ ಚಿತ್ರ ಮಾಡುತ್ತಿದ್ದಾರೆ. ಹಿಂದಿನ ಚಿತ್ರಗಳಿಗೆ ಸಿಕ್ಕ ಭರ್ಜರಿ ಯಶಸ್ಸು ಇಲ್ಲೂ ದೊರೆಯಲಿದೆ ಎಂಬುದು ಅವರ ಅಭಿಮಾನಿಗಳ ನಿರೀಕ್ಷೆ. ರಕ್ಷಿತ್ ಶೆಟ್ಟಿ ಸುಮ್ಸುಮ್ನೆ ಸಿನೆಮಾ ಮಾಡುವವರಲ್ಲ, ಅವರು ಆಯ್ದುಕೊಳ್ಳುವ ಕಥೆ ಕೂಡ ತುಂಬಾ ವಿಶಿಷ್ಟವಾಗಿರುತ್ತವೆ.

ಕಳೆದ ಎರಡೂ ಯಶಸ್ವಿ ಚಿತ್ರಗಳಲ್ಲಿ ಅವರ ಸಂಭಾಷಣೆ ಎಷ್ಟು ಸ್ಪೆಶಲ್ ಇರುತ್ತದೆ ಎಂಬುದು ಸಾಬೀತಾಗಿದೆ. ಈಗ 777 ಚಾರ್ಲಿಯಲ್ಲೂ ಅವರು ಡಿಫ್ರೆಂಟ್ ಕಥೆ ಆರಿಸಿಕೊಂಡಿದ್ದು, ಮುದ್ದು ಶ್ವಾನ ಚಾರ್ಲಿಯ ಬಗ್ಗೆ ಹೆಣೆದ ಕಥೆ ಇದು. ಅವರ ಚಿತ್ರಗಳಲ್ಲಿ ಯಾವಾಗಲೂ ಜನರನ್ನು ಸೆಳೆಯುವುದು ಅವರ ಡೈಲಾಗ್ ಹಾಗೂ ಡೈಲಾಗ್ ಡಿಲೆವರಿ ಟೈಮಿಂಗ್.

ಈ ಚಿತ್ರದಲ್ಲೂ ಅವರ ಸ್ಪೆಶಲ್ ಸಂಭಾಷಣೆ ಇರಲಿದೆಯಾ ಎಂಬುದು ಪ್ರಶ್ನೆ. ಕಿರಣ್ ರಾಜ್ ಎಂಬುವವರು ಇದರ ನಿರ್ದೇಶಕರಾಗಿದ್ದು, ರಕ್ಷಿತ್ ತಂಡಕ್ಕೆ ಅವರು ಮ್ಯಾಚ್ ಅಗುತ್ತಾರಾ ನೋಡಬೇಕು. ಮುಂದಿನ ತಿಂಗಳು ಆರನೇ ತಾರಿಖಿಗೆ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬ ಇದ್ದು, ಅವತ್ತೇ ‘777 ಚಾರ್ಲಿ’ ಯ ಟೀಸರ್ ಲೈಫ್ ಆಫ್ ಚಾರ್ಲಿ ಬಿಡುಗಡೆಯಾಗಲಿದೆ‌.

ವಿಶೇಷವೆಂದರೆ ಈ ಟೀಸರ್ ಒಟ್ಟು ಐದು ಭಾಷೆಗಳಲ್ಲಿ ಜನರ ಮುಂದೆ ಬರಲಿದೆ. ರಕ್ಷಿತ್ ಶೆಟ್ಟಿಯವರೇ ಹೇಳಿಕೊಂಡಿರುವ ಪ್ರಕಾರ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಟೀಸರ್ ಬಿಡುಗಡೆಯಾಗುವುದು. ತಮ್ಮ ಫೇಸ್ಬುಕ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ರಕ್ಷಿತ್ ಶೆಟ್ಟಿ, ಚಿತ್ರದ ಟೀಸರ್ ಕುರಿತು ವಿವರ ನೀಡಿದ್ದಾರೆ‌.

ಕೊರೋನ ಕಾಟ ನಿಂತರೆ ಇದೇ ವರ್ಷ 777 ಚಾರ್ಲಿ ತೆರೆ ಮೇಲೆ ಬರಲಿದೆ. ಈಗಾಗಲೇ ಚಿತ್ರದ ಶೂಟಿಂಗ್ ಹಾಗೂ ಡಬ್ಬಿಂಗ್ ಮುಗಿದ್ದಿದ್ದು, ಪೋಸ್ಟ್ ಪ್ರೊಡಕ್ಸನ್ ನಲ್ಲಿ ತಂಡ ಬೀಜಿಯಾಗಿದೆ‌. ಸಿಂಪಲ್ ಸ್ಟಾರ್ ರಕ್ಷಿತ್ ರವರ ಈ ಚಿತ್ರ ಕಿರಿಕ್ ಪಾರ್ಟಿಯಂತೆ ಯಶಸ್ಸು ಕಾಣಲಿ ಎಂದು ಹಾರೈಸುವಾ.
-Team Infotrend