8 ಲಕ್ಷ ₹ಗಳ ಬಹುಮಾನಕ್ಕಾಗಿ ‘ಬಾಹುಬಲಿ’ ಪ್ಲೇಟ್ ಖಾಲಿ ಮಾಡಲು ಸ್ವೀಕರಿಸಿದನು ಚಾಲೆಂಜ್! ಮುಂದೇನಾಯಿತು ನೋಡಿ ಈ ವೈರಲ್ ವಿಡಿಯೋದಲ್ಲಿ…

ದೆಹಲಿಯ ಕೆನಾಟ್ ಪ್ಲೇಸ್ ನಲ್ಲಿ ಇರುವ ಆರ್ಡರ್ 2.1 ಹೆಸರಿನ ರೆಸ್ಟೋರೆಂಟ್ ನಲ್ಲಿ ‘ಬಾಹುಬಲಿ’ ಥಾಲಿ (ಪ್ಲೇಟ್, ತಟ್ಟೆ) ಖಾಲಿ ಮಾಡುವ ಚಾಲೆಂಜ್ ಇಡಲಾಗಿತ್ತು. ಊಟದ ತಟ್ಟೆಯನ್ನು ಬರೀ ನೋಡಿದರೆನೇ ಭಯ ಆವರಿಸಬೇಕು, ಆ ರೀತಿ ಅಷ್ಟೊಂದು ವಿಧ ವಿಧವಾದ ಆಹಾರ ಪದಾರ್ಥಗಳಿಂದ ಕೂಡಿರತಕ್ಕಂತ ದೊಡ್ಡ ತಟ್ಟೆ ಅದು. ಆದರೆ ಒಬ್ಬನು ಈ ಚಾಲೆಂಜ್ ತನ್ನ ಮಿತ್ರನ ಜೊತೆಗೆ ಸ್ವೀಕರಿಸಿದನು.

ಹೋಟೆಲ್ ಮಾಲೀಕ ಬಾಹುಬಲಿ ಹೆಸರಿನ ದೊಡ್ಡದಾದ ತಟ್ಟೆಯನ್ನು ಬರೀ 40 ನಿಮಿಷಗಳಲ್ಲಿ ಊಟ ಮಾಡಿ ಖಾಲಿ ಮಾಡಿದವರಿಗೆ 8 ಲಕ್ಷ ರೂಪಾಯಿಗಳ ಬಹುಮಾನವನ್ನಿಟ್ಟಿದ್ದಾನೆ. ಫುಡ್ ಬ್ಲಾಗರ್ ರಜನೀಶ್ ಗ್ಯಾನಿ ಈತ ತನ್ನ ಮಿತ್ರನ ಜೊತೆಗೆ ಈ ಚಾಲೆಂಜ್ ಸ್ವೀಕರಿಸಲು ತಯಾರಾದ.

ಹೆಚ್ಚಾಗಿ ತುಂಬಾ ಹಸಿವಾದಾಗ ಹಾಗೂ ಹೊರಗೆ ಊಟ ಮಾಡುವ ಸಂದರ್ಭ ಬಂದಾಗ ಫುಲ್ ಪ್ಲೇಟ್ ಅಥವಾ ಥಾಲಿಯನ್ನೇ ತೆಗೆದುಕೊಳ್ಳುವ ವಿಚಾರ ಮಾಡುತ್ತೇವೆ. ಅದರಲ್ಲಿ ಚಪಾತಿ, ಮೂರು ನಾಲ್ಕು ಪ್ರಕಾರದ ಪಲ್ಲೆ, ಅನ್ನ, ಸಾರು, ಜೊತೆಗೆ ಏನಾದರೂ ಒಂದು ಸ್ವೀಟ್, ಸ್ನಾಕ್ಸ್ ಹಾಗೂ ಸಲಾಡ್ ಹೀಗೆ ಎಲ್ಲ ರೀತಿಯ ಆಹಾರ ಪದಾರ್ಥಗಳು ಒಂದೇ ತಟ್ಟೆಯಲ್ಲಿ ಬರುತ್ತವೆ. ಪೂರ್ಣ ತಟ್ಟೆ ಅಥವಾ ಥಾಲಿ ಹೆಚ್ಚಾಗಿ ಸಂಪೂರ್ಣ ಭಾರತದಲ್ಲಿ ಎಲ್ಲ ಕಡೆಗೂ ಸಿಗುತ್ತದೆ. ಹೊಟ್ಟೆ ತುಂಬ ಊಟ ಮಾಡಿದಾಗ ಸಿಗುವ ಸಮಾಧಾನವು ಬೇರೆಯೇ ಆಗಿರುತ್ತದೆ. ಕೆಲವೊಂದು ಹೋಟೆಲಿನವರು ಗ್ರಾಹಕರನ್ನು ತಮ್ಮ ಕಡೆಗೆ ಹೆಚ್ಚು ಹೆಚ್ಚು ಆಕರ್ಷಿಸುವ ಸಲುವಾಗಿ ಊಟಿನಲ್ಲಿ ಅನೇಕ ರೀತಿಯ ವೈವಿಧ್ಯತೆಯನ್ನು ಫಾಲೋ ಮಾಡುತ್ತಾರೆ. ಇದೇ ರೀತಿಯ ಒಂದು ಐಡಿಯಾ ದೆಹಲಿಯಲ್ಲಿಯ ಹೋಟೆಲ್ ಮಾಲೀಕ ತನ್ನ ಹೊಟೆಲ್ನಲ್ಲಿ ಬಾಹುಬಲಿ ಹೆಸರಿನ ದೊಡ್ಡ ಊಟದ ತಟ್ಟೆಯನ್ನು ಇಟ್ಟಿದ್ದಾನೆ. ಈ ಊಟವನ್ನು ಒಬ್ಬನು ಬಿಡಿ ಇಬ್ಬರು ಕೂಡಿ ಮುಗಿಸುವುದು ಸಹ ಅಸಾಧ್ಯವಾದ ಮಾತಾಗಿದೆ. ಯಾಕೆಂದರೆ ಈ ಜಂಬೂ ತಟ್ಟೆಯನ್ನು ನೋಡಿದಾಗಲೇ ಹಸಿವಿದ್ದರೂ ಹೊಟ್ಟೆ ತುಂಬಿದಂತೆ ಅನುಭವವಾಗುತ್ತದೆ. ಅಷ್ಟೊಂದು ಆಹಾರ ಪದಾರ್ಥಗಳು ಈ ತಟ್ಟೆಯಲ್ಲಿ ಸಮಾವೇಶ ವಾಗಿರುತ್ತದೆ.

ಈ ರೀತಿಯ ಬಾಹುಬಲಿ ತಟ್ಟೆಯನ್ನು ಬರೀ 40 ನಿಮಿಷಗಳಲ್ಲಿ ತನ್ನ ಮಿತ್ರನ ಜೊತೆಗೆ ಖಾಲಿ ಮಾಡುವ ಚಾಲೆಂಜ್ ರಜನೀಶ್ ಸ್ವೀಕರಿಸಿದನು. ಮತ್ತು ಆ ಚಾಲೆಂಜನ್ನು ಪೂರ್ಣ ಸಹ ಮಾಡಿದನು. ಈ ಚಾಲೆಂಜ್ ಪೂರ್ಣ ಮಾಡಿದ ವ್ಯಕ್ತಿಗೆ ಊಟದ ಬಿಲ್ ತುಂಬುವ ಅವಶ್ಯಕತೆ ಇಲ್ಲ. ಆದರೆ ತಟ್ಟೆಯನ್ನು ಸಂಪೂರ್ಣವಾಗಿ ಖಾಲಿ ಮಾಡಿದ್ದಕ್ಕಾಗಿ ಬಹುಮಾನ ನೀಡಲಾಗುತ್ತದೆ. ಬಹುಮಾನ 8 ಲಕ್ಷ ರೂಪಾಯಿಗಳು.

ಫುಡ್ ಬ್ಲಾಗರ್ ರಜನೀಶ್ ಅವರು ಈ ಚಾಲೆಂಜನ್ನು ಯಾವ ರೀತಿಯಾಗಿ ಪೂರ್ಣಗೊಳಿಸಿದ್ದಾರೆ ಎಂಬುದರ ವಿಡಿಯೋ ತಮ್ಮ ಯುಟ್ಯೂಬ್ ಚಾನೆಲ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ. ಈ ವಿಡಿಯೋ ಸದ್ಯ ಚೆನ್ನಾಗಿಯೇ ವೈರಲ್ ಆಗುತ್ತಿದೆ. ಪ್ರಸ್ತುತ ವಿಡಿಯೋದಲ್ಲಿ ಫುಡ್ ಬ್ಲಾಗರ್ ರಜನೀಶ್ ಅವರು ತಮ್ಮ ಮಿತ್ರನ ಜೊತೆಗೆ ಈ ಚಾಲೆಂಜ್ ಹೇಗೆ ಪೂರ್ಣ ಮಾಡಿದ್ದಾರೆ ಎಂಬುದನ್ನು ನೋಡಬಹುದು.

ವಿಡಿಯೋ ನೋಡಿ.

ಹದಿನೈದು ನಿಮಿಷದ ಈ ವಿಡಿಯೋದಲ್ಲಿ ಬಾಹುಬಲಿ ಹೆಸರಿನ ದೊಡ್ಡ ತಟ್ಟೆಯೊಂದು ಕಾಣುತ್ತಿದೆ. ಪ್ರಸ್ತುತ ತಟ್ಟೆಯು ಉತ್ತರ ಭಾರತದ ಅನೇಕ ವಿಧ ವಿಧ ಆಹಾರ ಪದಾರ್ಥಗಳಿಂದ ತುಂಬಿರುವದು ಕಂಡು ಬರುತ್ತದೆ. ಈ ತಟ್ಟೆಯನ್ನು ಲಿಮಿಟೆಡ್ ಟೈಮಿನಲ್ಲಿ ಖಾಲಿ ಮಾಡಲು ಇಬ್ಬರು ಅಕ್ಷರಶಃ ತಟ್ಟೆಯಲ್ಲಿಯ ಆಹಾರವನ್ನು ರಾಕ್ಷಸನ ಗಬಗಬನೆ ತಿನ್ನುತ್ತಿದ್ದಾರೆ.

ವಿಡಿಯೋದ ಕೊನೆಗೆ ತಾವು ಈ ಬಾಹುಬಲಿ ತಟ್ಟೆಯನ್ನು ತಿಂದು ಮುಗಿಸಿದ್ದೇವೆ ಎಂದು ಹೇಳುತ್ತಾರೆ. ಈ ಚಾಲೆಂಜ್ ಪೂರ್ಣ ಮಾಡಿದ್ದಕ್ಕಾಗಿ 8 ಲಕ್ಷ ರೂಪಾಯಿಗಳು ದೊರೆತಿದ್ದನ್ನು ಸಹ ಹೇಳುತ್ತಾರೆ. ಚಾಲೆಂಜ್ ಪೂರ್ಣ ಮಾಡಿದ ನಂತರ ಬಹುಮಾನದ ಸ್ವರೂಪದಲ್ಲಿ ಗೆದ್ದ ಹಣವನ್ನು NGO ಸಂಸ್ಥೆಯೊಂದಕ್ಕೆ ದಾನವಾಗಿ ನೀಡುತ್ತಿದ್ದೇವೆ ಎಂದು ರಜನೀಶ್ ಹೇಳುತ್ತಾರೆ.