83′ ಚಿತ್ರದ ಸಲವಾಗಿ ಕಪೀಲ್ ದೇವ ತಗೆದುಕೊಂಡ ಮೊತ್ತ ಎಷ್ಟು ಗೊತ್ತಾ? ಕೇಳಿದರೆ ಶಾ#ಕ್ ಆಗುತ್ತಿರಿ!!

ರಣವೀರ್ ಸಿಂಗ್ ಅವರ ’83’ ಈ ಚಿತ್ರ ಡಿಸೆಂಬರ್ 24 ಅಂದರೆ ಇಂದು ಬಿಡುಗಡೆಯಾಗಲಿದೆ.  ಈ ಚಿತ್ರದಲ್ಲಿ ರಣವೀರ್ ಸಿಂಗ್ ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.  ಭಾರತ 1983ರಲ್ಲಿ ಮೊದಲ ಬಾರಿಗೆ ವಿಶ್ವಕಪ್ ಗೆದ್ದಿತ್ತು.  ಈ ಬಾರಿಯ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ಪ್ರದರ್ಶನವನ್ನು ಆಧರಿಸಿ ಚಿತ್ರ ನಿರ್ಮಿಸಲಾಗಿದೆ.  1983 ರ ವಿಶ್ವಕಪ್ ಫೈನಲ್‌ನಲ್ಲಿ ಭಾರತ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿತ್ತು.  ಕಬೀರ್ ಖಾನ್ ನಿರ್ದೇಶನದ ಈ ಚಿತ್ರವು ಭಾರತದ ಐತಿಹಾಸಿಕ ವಿಜಯವನ್ನು ಆಧರಿಸಿದೆ.

ಪ್ರಸ್ತುತ ಚಿತ್ರಪಟದಲ್ಲಿ ಸುನಿಲ್ ಗಾವಸ್ಕರ್ ಅವರ ಪಾತ್ರದಲ್ಲಿ  ತಾಹಿರ್ ರಾಜ್ ಭಾಸಿನ್ ಜತಿನ್ ಸರ್ನಾ ಆಗಿ ಯಶಪಾಲ್ ಶರ್ಮಾ ,ಮೊಹಿಂದರ್ ಅಮರನಾಥ್ ಆಗಿ ಶಕೀಬ್ ಸಲೀಂ,  ರವಿಶಾಸ್ತ್ರಿ ಪಾತ್ರದಲ್ಲಿ ಧೈರ್ಯ ಕರ್ವಾ,  ಮದನ್ ಲಾಲ್ ಪಾತ್ರದಲ್ಲಿ ಹಾರ್ಡಿ ಸಂಧು , ಬಲ್ವಿಂದರ್ ಸಿಂಗ್  ಅವರ ಪಾತ್ರ ಆಮಿ ವೀರ್ಕ್ ,ಸೈಯ್ಯದ್ ಕಿರಮಣಿ ಪಾತ್ರ ಸಾಹಿಲ್ ಕಟ್ಟರ್, ಸಂದೀಪ್ ಪಾಟೀಲ್ ರೋಲ್ ಚಿರಾಗ್ ಪಾಟೀಲ್, ದಿಲೀಪ್ ವಾಂಗ್ಸರ್ಕರ್ ಪಾತ್ರದಲ್ಲಿ ಆದಿನಾಥ್ ಕೊಠಾರೆ, ಕೀರ್ತಿ ಆಜಾದ್ ಪಾತ್ರದಲ್ಲಿ ದಿನಕರ್ ಶರ್ಮಾ ಮತ್ತು ರೋಜರ್ ಬಿನ್ನಿ ಪಾತ್ರದಲ್ಲಿ ನಿಶಾಂತ್ ದಹಿಯಾ ನಟಿಸುತ್ತಿದ್ದಾರೆ.  ಇದಲ್ಲದೇ ತಂಡದ ಮ್ಯಾನೇಜರ್ ಪಿಆರ್ ಮಾನ್ ಸಿಂಗ್ ಪಾತ್ರದಲ್ಲಿ ಪಂಕಜ್ ತ್ರಿಪಾಠಿ ಕಾಣಿಸಿಕೊಳ್ಳಲಿದ್ದಾರೆ.

’83’ ಚಿತ್ರದ ಬಿಡುಗಡೆಗೂ ಮುನ್ನ ನಿರ್ಮಾಪಕರು ಭಾರತೀಯ ಆಟಗಾರರಿಗೆ 15 ಕೋಟಿ ರೂ. ಕೊಟ್ಟಿದ್ದಾರೆ.  Bollywood Hungama.com ವರಿದಿಪ್ರಕಾರ, ಕಪಿಲ್ ದೇವ್ ತಮ್ಮ ಕಥೆಯನ್ನು ಹೇಳಲು 5 ಕೋಟಿ ರೂಪಾಯಿ ಗೌರವಧನವನ್ನು ತೆಗೆದುಕೊಂಡಿದ್ದಾರೆ.  ಮೂಲವು ಬಾಲಿವುಡ್ ಹಂಗಾಮಿಗೆ ತಿಳಿಸಿದ್ದೇನೆಂದರೆ, “ಚಲನಚಿತ್ರವನ್ನು ಮಾಡುವ ಮೊದಲು, ವಿಷಯದ ಹಕ್ಕುಗಳನ್ನು ಮತ್ತು ಆಟಗಾರರ ವೈಯಕ್ತಿಕ ಕಥೆಗಳನ್ನು ಪಡೆಯುವುದು ಅಗತ್ಯವಾಗಿತ್ತು. ಈ ಚಿತ್ರವು ಸತ್ಯ ಘಟನೆಯನ್ನು ಆಧರಿಸಿದೆ.  ಹಾಗಾಗಿ 1983ರ ವಿಶ್ವಕಪ್ ವಿಜೇತ ತಂಡಕ್ಕೆ ನಿರ್ಮಾಪಕರು 15 ಕೋಟಿ ರೂ. ನೀಡಿದ್ದಾರೆ.  ಇದರಲ್ಲಿ ಕಪಿಲ್ ದೇವ್ ಅತ್ಯಧಿಕ ಮೊತ್ತವನ್ನು ಪಡೆದಿದ್ದಾರೆ” ಎಂದು ಹೇಳಲಾಗಿದೆ.

ಈ ಚಿತ್ರ ಈಗಾಗಲೇ ಸುದ್ದಿಯಲ್ಲಿದೆ.  ಒಂದು ವಾರದ ಹಿಂದೆ, ದುಬೈನ ಬುರ್ಜ್ ಖಲೀಫಾದಲ್ಲಿ ’83’ ಚಿತ್ರದ ಟ್ರೇಲರ್ ಅನ್ನು ಪ್ರದರ್ಶಿಸಲಾಯಿತು.  ಈ ಸಂದರ್ಭದಲ್ಲಿ ರಣವೀರ್, ದೀಪಿಕಾ ಪಡುಕೋಣೆ ಮತ್ತು ಕಬೀರ್ ಖಾನ್ ಉಪಸ್ಥಿತರಿದ್ದರು.  ಚಿತ್ರದ ಪ್ರೀಮಿಯರ್ ರೆಡ್ ಸೀ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರಥಮ ಪ್ರದರ್ಶನಗೊಂಡಿತು. ಈ ಸಮಯದಲ್ಲಿ  ರಣವೀರ್ ಹೊರತಾಗಿ, ದೀಪಿಕಾ, ನಿರ್ದೇಶಕ ಕಬೀರ್ ಖಾನ್, ಅವರ ಪತ್ನಿ ಮಿನಿ ಮಾಥುರ್, ಕಪಿಲ್ ದೇವ್ ಮತ್ತು ಅವರ ಪತ್ನಿ ರೋಮಿ ಪ್ರೀಮಿಯರ್‌ನಲ್ಲಿ ಭಾಗವಹಿಸಿದ್ದರು.