9 ನೇಯ ವರ್ಷಕ್ಕೆ ಮನೆ ಬಿಟ್ಟು ಓಡಿ ಬಂದು, ರೈಲಿನಲ್ಲಿ ಭಿಕ್ಷೆ ಬೇಡಿ, ಆಹಾರಕ್ಕಾಗಿ ಮೂಕನಂತೆ ನಟಿಸಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಈ ಬಿಗ್ಬಾಸ್ ಓಟಿಟಿ ಕಂಟಸ್ಟ್!

ಸಾಮಾಜಿಕ ಜಾಲತಾಣ ಒಂದು ಮ್ಯಾಜಿಕ್​ ಇದ್ದಂತೆ. ಇಲ್ಲಿ ಯಾವಾಗ ಏನೂ ಬೇಕಾದರು ಆಗಬಹುದು. ಈ ಜಾಲತಾಣಗಳಲ್ಲಿ ಒಂದೇ ದಿನದಲ್ಲಿ ಯಾರೂ ಬೇಕಾದರು ಫೇಮಸ್​ ಆಗಬಹುದು. ಈ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಈ ಕಾರಣದಿಂದ ಹೆಸರುಗಳಿಸುವ ಶಕ್ತಿ ಇದ್ದರೆ, ಇದಕ್ಕೆ ಅವರ ಹೆಸರನ್ನು ಹಾಳು ಮಾಡುವ ಶಕ್ತಿ ಮಾತ್ರ ಜಾಲತಾಣಕ್ಕೆ ಇದೆ. ಈ ಸಾಮಾಜಿಕ ಜಾಲತಾಣಗಳಲ್ಲಿ ಇಂಥ ಶಕ್ತಿ ಇದ್ದುದರರಿಂದಲೇ ಇಂದು ಪ್ರಸ್ಟಿಯೊಬ್ಬರು ಇದಕ್ಕೆ ಅಂಟಿಕೊಂಡಿದ್ದಾರೆ. ಐದು ನಿಮಿಷವೂ ಸಹ ಇದನ್ನು ಬಿಟ್ಟು ಇರಲು ಸಾಧ್ಯವಿಲ್ಲ.

ನಿನ್ನೆಯಿಂದ ಕನ್ನಡ ಬಿಗ್ಬಾಸ್ OTT ಶೋ ಪ್ರಾರಂಭವಾಗಿದೆ. ಅದರಲ್ಲಿ ಸುಮಾರು 16 ಕಂಟೆಸ್ಟಂಟ್ ಗಳು ಎಂಟ್ರಿ ಮಾಡಿದ್ದಾರೆ. ಅವರಲ್ಲಿ 6 ನೇಯ ಕಂಟೆಸ್ಟಂಟ್ ಆಗಿ ಎಂಟ್ರಿ ಕೊಟ್ಟ ವ್ಯಕ್ತಿ ಎಂದರೆ ಅವರು ಲೋಕೇಶ್. ಇಂದು ನಮ್ಮ ನಿಮ್ಮೆಲ್ಲರನ್ನು ನಗಿಸುವ ಕಾರ್ಯ ಮಾಡುತ್ತಿರುವ ಲೋಕೇಶ ಅವರ ಬಾಳು ಮೊದಲು ಹೇಗಿತ್ತು ಅಂತ ಕೇಳಿದರೆ ನಿಮ್ಮ ಕಣ್ಣಲ್ಲಿ ನೀರು ಬರದೆ ಇರಲಾರವು.

ಲೋಕೇಶ ಅವರು ಸುಮಾರು ಒಂಬತ್ತು ವರ್ಷದವರಿದ್ದಾಗ ಮನೆ ಬಿಟ್ಟು ಓಡಿ ಬೆಂಗಳೂರಿಗೆ ಬಂದವರು. ಅವರು ಮನೆ ಬಿಡಲು ಮುಖ್ಯ ಕಾರಣ ಅವರ ತಂದೆ ಅಂದರೆ ಅವರ ತಂದೆಗೆ ಇವರ ತಾಯಿ ಎರಡನೆಯ ಹೆಂಡತಿ. ತಾಯಿಗೆ ಮಾನಸಿಕ ಖಾಯಿಲೆ ಉಂಟಾದಾಗ ತಂದೆಯವರು ಇವರ ತಾಯಿ ಮತ್ತು ಇವರನ್ನು ಮನೆ ಬಿಟ್ಟು ಕಳುಹಿಸಿದರು.

ಆಗ ಇವರು ಅಲ್ಲಿಂದ ಟ್ರೈನ್ ಹಿಡಿದು ಬೆಂಗಳೂರಿಗೆ ಬಂದರು, ಬೆಂಗಳೂರಿಗೆ ಬಂದ ತಕ್ಷಣ ಏನು ಮಾಡಬೇಕು? ಎಲ್ಲಿ ಇರಬೇಕು? ಏನು ತಿನ್ನಬೇಕು? ಎಂಬ ಪ್ರಶ್ನೆಗಳು ಇವರಿಗೆ ಉದ್ಭವವಾದವು. ಆಗ ಇವರಿಗೆ ದೊಚ್ಚಿದ್ದು ಮಾತ್ರ ಭಿಕ್ಷೆ ಬೇಡುವದು. ಹೌದು ಇವರು ಮೊದಲಿಗೆ ಬೆಂಗಳೂರಿಗೆ ಬಂದಾಗ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದರು. ಹಗಲಿನಲ್ಲಿ ಎಲ್ಲಾದರೂ ಭಿಕ್ಷೆ ಬೇಡಿ ಜೀವನ ನಡೆಸಬಹುದು ಆದರೆ ರಾತ್ರಿ ಎಲ್ಲಿರೋದು? ಎಂಬ ಸಮಸ್ಯೆ ನಿರ್ಮಾಣ ವಾದಗ ಇವರು ದಿನಾಲೂ ರಾತ್ರಿ ಟ್ರೈನ್ ಹತ್ತಿ ಅದರಲ್ಲಿ ಮಲಗಿಕೊಂಡು ಟ್ರೈನ್ ಎಲ್ಲಿಗೆ ಹೋಗುತ್ತೆ ಅಲ್ಲಿಗೆ ಹೋಗೋದು. ಅಂದರೆ ಒಂದು ದಿನ ಮುಂಬೈ ಗೆ ಹೋದರೆ ಮರುದಿನ ಕಲ್ಕತ್ತಾ , ದಿಲ್ಲಿ, ಚೆನ್ನೈ ಹೀಗೆ ಸುತ್ತಾಡುತ್ತ ದಿನ ಕಳೆಯುತ್ತಿದ್ದರು.

ಅಲ್ಲದೆ ಇವರು ಭಿಕ್ಷೆ ನೀಡದೆ ಇರುವಾಗ ಇವರು ಮೂಕನಂತೆ ನಟಿಸಿ ಅವರ ಹತ್ತಿರ ಭಿಕ್ಷೆ ಪಡೆಯುತ್ತಿದ್ದರು. ತದನಂತರ ಇವರು ಪೇಪರ್ ಮಾರುವದು, ಹಾಲು ಹಾಕುವದು ಹೀಗೆ ಹಲವಾರು ಕೆಲಸಗಳನ್ನು ಮಾಡುತ್ತ ತಮ್ಮ ಜೀವನ ನಡೆಸುತ್ತಿದ್ದಾಗ ಇವರನ್ನು ಒಂದು ಎನ್ ಜಿ ಓ ಸಂಸ್ಥೆ ಕರೆದುಕೊಂಡು ಹೋಗಿ ಇವರ ಜೀವನದ ಹೊಣೆಯನ್ನು ಹೊತ್ತಿತ್ತು. ಇವರು ಮುಂದೆ ಚಿಕ್ಕ ಚಿಕ್ಕ ಪಾತ್ರಗಳಲ್ಲಿ ಅಭಿನಯಿಸಿ ಕಲಾರಂಗಕ್ಕೆ ಪದಾರ್ಪಣೆ ಮಾಡಿದರು. ಸದ್ಯಕ್ಕೆ ಅವರು ಕಾಮಿಡಿಯನ್ ಆಗಿ ನಮ್ಮೆಲ್ಲರನ್ನು ನಗುಸುತ್ತದ್ದಾರೆ. ಇವರು ಬಿಗ್ಬಾಸ್ ಓಟಿಟಿ ಯಲ್ಲಿ ನಮ್ಮ ನಿಮ್ಮೆಲ್ಲರನ್ನು ಇನ್ನಷ್ಟು ನಗಿಸಿ ಓಟಿಟಿ ಗೆದ್ದು ಬಿಗ್ಬಾಸ್ ಸೀಸನ್ 9 ಕ್ಕೆ ಎಂಟ್ರಿ ಆಗಲಿ ಎಂದು ಹಾರೈಸೋಣ.