9 ನೇ ತರಗತಿಯಲ್ಲಿ ಡ್ಯಾನ್ಸ್ ಮಾಡುತ್ತಾ ಮಾಡುತ್ತಾ ನೇರವಾಗಿ ಸಿನಿಮಾಗೆ ಆಯ್ಕೆಯಾದ ನಟಿ; ಏಯರ್ ಪೋರ್ಟ್ ನಲ್ಲಿ ಮಾಡುತ್ತಿದ್ದರು ಸ್ನಾನ….
ಸಣ್ಣ ಪರದೆಯ ಅತ್ಯಂತ ಜನಪ್ರಿಯ ಶೋ ಎಂದೇ ಹೆಸರಾದ ‘ದಿ ಕಪಿಲ್ ಶರ್ಮಾ ಶೋ’ ನಲ್ಲಿ ಅನೇಕ ಪ್ರಸಿದ್ಧ ವ್ಯಕ್ತಿಗಳು ಮತ್ತು ಸೆಲೆಬ್ರಿಟಿಗಳು ಬರುತ್ತಾರೆ. ಯಾವುದೇ ಸೆಲೆಬ್ರಿಟಿ ಇಲ್ಲಿಗೆ ಬಂದಾಗಲೆಲ್ಲಾ ಅವರು ಖಂಡಿತವಾಗಿಯೂ ತಮ್ಮ ಜೀವನದ ಕೆಲವು ರಹಸ್ಯಗಳು, ಹಿಂದಿನ ಸಂಗತಿಗಳು ಮತ್ತು ನೆನಪುಗಳ ಬಗ್ಗೆ ಮೆಲಕು ಹಾಕುತ್ತಾರೆ. ಈ ವಾರದಲ್ಲಿ ಪ್ರಸಿದ್ಧ ಬಾಲಿವುಡ್ ನಟಿ ಕೂಡ ಈ ಪ್ರಸಿದ್ಧ ಟಿವಿ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದರು.
ನಾವು ಹೇಳುತ್ತೀರುವದು ಪ್ರಸಿದ್ಧ ಬಾಲಿವುಡ್ನ ಸುಂದರ ನಟಿ ಜಯಪ್ರದಾ ಬಗ್ಗೆ. ಮೊನ್ನೆ ನಡೆದ ಕಪಿಲ್ ಶರ್ಮಾ ಶೋನಲ್ಲಿ ಪ್ರಮುಖ ಅತಿಥಿಗಳಾಗಿ ಆಗಮಿಸಿ ಅವರು ತಮ್ಮ ಜೀವನದಲ್ಲಿಯ ಕೆಲವು ಸಂಗತಿಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇದು ಜಯಪ್ರದ ಅಭಿಮಾನಿಗಳಿಗೆ ಸಹ ತಿಳಿದಿಲ್ಲದಿರಬಹುದು. ಅಂದಿನ ಸಮಯದಲ್ಲಿ ಇವರಿಗೆ ಮೊದಲ ಚಿತ್ರಕ್ಕೆ ಕೇವಲ 10 ರೂ. ಸಿಕ್ಕಿತ್ತಂತೆ. ಇದು ತನ್ನ ಮೊದಲ ಪ್ರಾಜೆಕ್ಟ್ ಎಂದು ಹೇಳಿದರು. ಅಲ್ಲದೆ ಅವರು ತೆಲುಗು ಚಿತ್ರದ ಮುಖಾಂತರ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ ಎಂದು ತಿಳಿಸಿದರು.

ಚಿತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿದ್ದು ಹೇಗೆ:
ಜಯಾ ಅವರ ಚಿತ್ರದ ಪ್ರವಾಸ ಶಾಲೆಯಿಂದಲೇ ಪ್ರಾರಂಭವಾಯಿತು. ಇವರು 9 ನೆ ತರಗತಿಯಲ್ಲಿ ಕಲಿಯುತ್ತಿರುವಾಗ ಆ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡಿದ್ದರು. ಅದೇ ಸಮಯದಲ್ಲಿ ಒಬ್ಬ ತೆಲಗು ಚಿತ್ರದ ನಿರ್ದೇಶಕರು ಆ ಕಾರ್ಯಕ್ರಮಕ್ಕೆ ಪ್ರೇಕ್ಷಕರಾಗಿ ಬಂದು ಕಾರ್ಯಕ್ರಮದ ವೀಕ್ಷಣೆ ಮಾಡುತ್ತಿದ್ದರು.
ಆ ನಿರ್ದೇಶಕರು ಜಯಾ ಅವರ ಡ್ಯಾನ್ಸ್ ನೋಡಿ ತುಂಬಾ ಪ್ರಭಾವಿತರಾದರು. ಅಷ್ಟೇ ಅಲ್ಲ ಆ ಡ್ಯಾನ್ಸ್ ನೋಡಿ ಜಯಾ ಅವರಿಗೆ ತಮ್ಮ ಚಿತ್ರದಲ್ಲಿ ಒಬ್ಬ ನಟಿಯಾಗಿ 5 ನಿಮಿಷಗಳ ಸಲುವಾಗಿ ಡ್ಯಾನ್ಸ್ ಮಾಡಬೇಕು ಎಂಬ ಆಫರ್ ಸಹ ನೀಡಿದರು. ಅಲ್ಲಿಂದಲೇ ಶುರುವಾಯಿತು ನೋಡಿ ಇವರ ಚಿತ್ರರಂಗದ ಪ್ರವಾಸ. ಒಬ್ಬ ಶಾಲೆಯ ಹುಡುಗಿ ನಟಿಯಾಗುವದಕ್ಕೆ ಕೇವಲ ಅವರ ಡ್ಯಾನ್ಸ್ ಕಾರಣ. ಅವರ ನಿಜವಾದ ಹೆಸರು ಲಲೀತಾ ರಾಣಿ ಇದೆ.

ವಿಮಾನನಿಲ್ದಾಣದಲ್ಲಿ ಸ್ನಾನ ಮಾಡುತ್ತಿದ್ದರು:- ಜಯಾಪ್ರದ ಅವರು ಅಂದಿನ ದಿನಗಳಲ್ಲಿ ಹಿಂದಿ ಮತ್ತು ತೆಲಗು ಎರಡು ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದರು. ಆದುದರಿಂದ ಅವರು ತುಂಬಾ ಬ್ಯುಸಿಯಾಗಿರುತ್ತಿದ್ದರು. ಇಂತಹ ಸಮಯದಲ್ಲಿ ಅವರು ವಿಮಾನ ನಿಲ್ದಾಣದಲ್ಲಿಯೇ ಸ್ನಾನ ಮಾಡುತ್ತಿದ್ದರು ಅಷ್ಟೇ ಅಲ್ಲ ಮೇಕ್ ಅಪ್ ಕೂಡಾ ವಿಮಾನದಲ್ಲಿಯೇ ಮಾಡಿಕೊಳ್ಳುತ್ತಿದ್ದರು. ಅವರ ಹೇಳಿಕೆಯ ಪ್ರಕಾರ, ಅಂದಿನ ಸಮಯದಲ್ಲಿ ಇವರು ದಿವಸದಲ್ಲಿ 5 ಶಿಫ್ಟ್ ಪ್ರಕಾರ ಕೆಲಸ ಮಾಡುತ್ತಿದ್ದರಂತೆ. ಚಿತ್ರರಂಗದ 30 ವರ್ಷದ ಪ್ರವಾಸದಲ್ಲಿ ಇವರು 8 ಭಾಷೆಗಳಲ್ಲಿ ಸುಮಾರು 300 ಚಿತ್ರಗಳಲ್ಲಿ ನಟಿಸಿದ್ದಾರೆ.
ರಾಜಕೀಯದಲ್ಲಿಯ ಜಯಾಪ್ರದ:-

ಇವರ ರಾಜಕೀಯ ಪ್ರವಾಸದ ಕುರಿತು ಹೇಳುವದಾದರೆ ಇಲ್ಲಿಯೂ ಕೂಡಾ ಅವರು ಯಶಸ್ಸು ಕಂಡಿದ್ದಾರೆ. 2004 ರಿಂದ 2014 ರ ವರೆಗೆ ಉತ್ತರಪ್ರದೇಶದ ರಾಮಪುರ್ ಸಿಟಿಯಿಂದ ಸಂಸದೆಯಾಗಿ ಕಾರ್ಯ ಮಾಡಿದ್ದಾರೆ. ಜಯಾಪ್ರದ ಅವರ ಮೇಲೆ ಸಮಾ#ಜವಾದಿ ಪಕ್ಷದ ಮುಖಂಡರಾದ ಆಝಮ್ ಖಾನ್ ಅವರು ಟೀ#ಕೆ ಮಾಡಿದ್ದರು ಆಗ ಈ ಕುರಿತು ತುಂಬಾ ಚರ್ಚೆ ಉಂಟಾಯಿತು.

ಜಯಾ ಇವರು ಜನ್ಮ ಏಪ್ರಿಲ್ 1962 ರಲ್ಲಿ ಆಂಧ್ರಪ್ರದೇಶದ ರಾಜಾಮುಂಧರಾ ಜೆಲ್ಲೆಯಲ್ಲಿ ಆಗಿದೆ. ಇವರ ತಂದೆ ಶ್ರೀ ಕೃಷ್ಣರಾವ ಇವರು ತೆಲಗು ಚಿತ್ರದ
ಆರ್ಥಿಕ ಸಲಹೆಗಾರರಾಗಿದ್ದರು. ಜಯಪ್ರದ ಇವರು ಇಂದಿಗೂ ಕೂಡಾ ಅನೇಕ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರ ನಟನೆ ಹಾಗೂ ಅವರ ಸಾಮಾಜಿಕ ಕಾರ್ಯದಿಂದ ಒಬ್ಬ ಯಶಸ್ವೀ ವ್ಯಕ್ತಿಯಾಗಿ ಜೀವನ ನಡೆಸುತ್ತಿದ್ದಾರೆ.