99% ಫೇಲ್! ಚಾಲೆಂಜ್ ಗೆ ರೆಡಿನಾ? ಚಿತ್ರ ಜೂಮ್ ಮಾಡಿ ನೋಡಬಹುದು; ಈ ಒಣ ಮರದಲ್ಲಿ ಎಷ್ಟು ಜನ ರಾಷ್ಟ್ರನಾಯಕರು ಅಡಗಿದ್ದಾರೆಂದು ಹೇಳಲು ಸಾಧ್ಯವೇ..?
ಸೋಶಿಯಲ್ ಮೀಡಿಯಾದಲ್ಲಿ ಬುದ್ಧಿಗೆ ಚಾಲನೆ ನೀಡುವ ಅನೇಕ ಪ್ರಕಾರದ ಚಿತ್ರಗಳು ಆಗಾಗ ವೈರಲ್ ಆಗುತ್ತಿರುತ್ತವೆ. ಇಂಥ ಚಿತ್ರಗಳ ಉತ್ತರವನ್ನು ಹುಡುಕುವುದರಲ್ಲಿ ನೇಟಿಜನ್ಸ್ ಗಳು ಹಿಂದೆ ಬೀಳುವುದಿಲ್ಲ. ಈ ರೀತಿಯ ಪ್ರಶ್ನೆಗಳಿಗೆ ಉತ್ತರ ಹುಡುಕಲು ನೇಟಿಜನ್ಸ್ ಗಳಿಗೆ ಬೇಕಾಗಿರುವುದು ಸಂಯಮ ಮತ್ತು ಸೂಕ್ಷ್ಮದೃಷ್ಟಿ.
ಈ ರೀತಿಯ ಚಿತ್ರಗಳಲ್ಲಿ ಕಣ್ಣಿಗೆ ಎಲ್ಲವೂ ಸಹಜವಾಗಿ ಕಂಡರೂ ಸಹ ಎಷ್ಟೋ ಸಲ ಉತ್ತರಗಳು ತಪ್ಪಾಗುತ್ತವೆ. ಸಂಯಮದಿಂದ ಮತ್ತು ಸೂಕ್ಷ್ಮವಾಗಿ ಗಮನಿಸುವವರು ಮಾತ್ರ ಇಂಥ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ಶೋಧಿಸುತ್ತಾರೆ. ಈ ರೀತಿಯ ಆಟಗಳನ್ನು ಆಡುವುದು ತುಂಬಾ ಜನರಿಗೆ ಇಷ್ಟವಾಗುತ್ತದೆ. ಇದರಿಂದ ಮಾನಸಿಕ ಒತ್ತಡ ಕಡಿಮೆಯಾಗುವುದರ ಜೊತೆಗೆ ಬೇಸರಿಕೆಯು ಸಹ ಕಳೆದು ಹೋಗುತ್ತದೆ.
ಪ್ರಸ್ತುತ ಚಿತ್ರದಲ್ಲಿ ನೀವು ಒಂದು ಒಣದಾದ ಮರವನ್ನು ನೋಡಬಹುದು. ನೋಡಲು ಇದು ಒಣ ಮರದಂತೆ ಕಾಣುತ್ತಿದ್ದರೂ ಈ ಮರದ ರೆಂಬೆ ಕೊಂಬೆಗಳಲ್ಲಿ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ರಾಷ್ಟ್ರನಾಯಕರ ಭಾವಚಿತ್ರಗಳು ಅಡಗಿವೆ. ನಿಜವಾಗಿಯೂ ಇದೊಂದು ಅದ್ಭುತವಾದ ಕಲಾಕೃತಿಯಾಗಿದೆ. ಮಿತ್ರರೇ ಈ ಚಿತ್ರದಲ್ಲಿ ಅಥವಾ ಮರದ ರೆಂಬೆ ಕೊಂಬೆಗಳಲ್ಲಿ ಎಷ್ಟು ಜನ ನಮ್ಮ ರಾಷ್ಟ್ರ ನಾಯಕರು ನಿಮ್ಮ ಕಣ್ಣಿಗೆ ಗೋಚರಿಸುತ್ತಿದ್ದಾರೆ ಎಂಬುದು ಹೇಳಲು ಸಾಧ್ಯವೇ? ನೀವು ಈ ಚಾಲೆಂಜ್ ಸ್ವೀಕರಿಸುವದಾದರೆ ಟ್ರೈ ಮಾಡಿ ನೋಡೋಣ.

ಈ ಚಿತ್ರದಲ್ಲಿ ಕಂಡುಬರುವ ರಾಷ್ಟ್ರನಾಯಕರ ಸಂಖ್ಯೆ ಜೊತೆಗೆ ಅವರ ಹೆಸರು ಸಹ ಕಮೆಂಟ್ ಮಾಡಬಹುದು. ಒಂದು ವೇಳೆ ನೀವೂ ಈ ಚಾಲೆಂಜ್ ಪೂರ್ಣ ಮಾಡಿದ್ದೇ ಆದರೆ ನಿಮ್ಮ ಉತ್ತರ ಸರಿ ಅಥವಾ ತಪ್ಪು ಎಂದು ತಿಳಿಯಲು ಕೆಳಗೆ ಸರಿಯಾದ ಉತ್ತರವನ್ನು ನೀಡಿದ್ದೇವೆ. ನಿಮ್ಮ ಉತ್ತರ ಅದರ ಜೊತೆಗೆ ಪರಾಮರ್ಷಿಸಿ ನೋಡಬಹುದು. ಈ ಚಿತ್ರದಲ್ಲಿ ಒಟ್ಟು 10 ಜನ ರಾಷ್ಟ್ರನಾಯಕರಿದ್ದಾರೆ. ಅವರ ಹೆಸರು ಈ ಕೆಳಗಿನಂತಿವೆ.
ಉತ್ತರ ಈ ಫೋಟೋದಲ್ಲಿ ನೋಡಿ…

- ರಾಜೀವ್ ಗಾಂಧಿ
- ಇಂದಿರಾಗಾಂಧಿ
- ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್
- ಭಗತ್ ಸಿಂಗ್
- ಸುಭಾಷ್ ಚಂದ್ರ ಬೋಸ್
- ಖಾನ್ ಅಬ್ದುಲ್ ಗಫಾರ್ ಖಾನ್
- ಮಹಾತ್ಮ ಗಾಂಧಿ
- ಲೋಕಮಾನ್ಯ ತಿಲಕ್
- ಜವಾಹರ್ಲಾಲ್ ನೆಹರು
- ಲಾಲ್ ಬಹದ್ದೂರ್ ಶಾಸ್ತ್ರಿ