ಮದುವೆಯಾದ ಕೇವಲ 40 ದಿನಗಳಲ್ಲಿ ಸೈನ್ಯದಲ್ಲಿದ್ದ ಪತಿ ಹುತಾತ್ಮನಾದ, ಇಂದು ಸ್ವತಃ ಸೈನ್ಯದಲ್ಲಿ ಅಧಿಕಾರಿಯಾಗಲು ಹೊರಟ ಪತ್ನಿ!

ನಮ್ಮ ದೇಶದ ಬಹುತೇಕ ಹುಡುಗಿಯರು ತಮ್ಮ ಕುಟುಂಬ ಸದಸ್ಯರ ಮಾತನ್ನು ಕೇಳುತ್ತಾ ತಮ್ಮ ಜೀವನವನ್ನು ಕಳೆಯುತ್ತಾರೆ. ಮದುವೆಗೆ ಮುನ್ನ ತನ್ನ ತವರು ಮನೆಯಲ್ಲಿ ಇರುವವರೆಗೆ ಮಾತ್ರ ಇಲ್ಲಿನ ಸದಸ್ಯರ ಮಾತನ್ನು ಪಾಲಿಸುತ್ತಾರೆ. ತವರು ಮನೆಯಲ್ಲಿ ಏನೇ ಆಸೆ ಪಟ್ಟರೂ ಸಹ ಅಲ್ಲಿಯ ಸದಸ್ಯರು “ಗಂಡನ ಮನೆಗೆ ಹೋದಾಗ ನಿನ್ನ ಪ್ರತಿಯೊಂದು ಆಸೆಯೂ ಈಡೇರುತ್ತದೆ” ಎಂದು ಹೇಳುತ್ತಾರೆ. ಪ್ರತಿಯೊಬ್ಬರಿಗೂ ಮದುವೆಯ ಬಗ್ಗೆ ಹಲವು ಆಸೆಗಳಿರುತ್ತವೆ. ಮದುವೆಯಾಗಿ ಗಂಡನ ಮನೆಗೆ ಹೋಗುವುದರಿಂದ ತಮ್ಮ ಜೀವನದ ಪ್ರತಿಯೊಂದು ಆಸೆಯೂ ಈಡೇರುತ್ತವೇ ಎಂದು ಹುಡುಗಿಯರು ಭಾವಿಸುತ್ತಾರೆ.

ಎಷ್ಟೋ ಹೆಣ್ಣುಮಕ್ಕಳ ಆಸೆಗಳು ಗಂಡನ ಮನೆಗೆ ಹೋಗುವ ಮುಂಚೆನೇ ಈಡೇರುತ್ತವೆ, ಆದರೆ ಯಾವ ಹುಡುಗಿಯ ಆಸೆ ಪೂರ್ಣವಾಗುವದಿಲ್ಲೊ ಅವರು ತುಂಬಾ ನೋವು ಪಡುತ್ತಾರೆ. ಮದುವೆಯ ನಂತರ, ಪ್ರತಿ ಹುಡುಗಿಯೂ ತನ್ನ ಗಂಡನೊಂದಿಗೆ ಹೆಜ್ಜೆಯ ಮೇಲೆ ಹೆಜ್ಜೆ ಹಾಕಿ ಸಂಸಾರ ನಡೆಸಬೇಕಾಗುತ್ತದೆ. ಕಾರಣಾಂತರಗಳಿಂದ ಗಂಡ ಅವಳೊಂದಿಗೆ ಇರದಿದ್ದರೆ ಅವಳ ಬದುಕೇ ಸರ್ವನಾಶ ವಾಗುತ್ತದೆ. ಒಂದು ಸಂಸಾರದಲ್ಲಿ ಗಂಡ ಹೆಂಡತಿ ಜೊತೆಗಿರುವದು ತುಂಬಾ ಮುಖ್ಯವಾದ ಸಂಗತಿಯಾಗಿದೆ. ಏಕೆಂದರೆ ಇಂದಿನ ಸಮಾಜದ ಯೋಚನೆಯ ಮುಂದೆ ಹೆಂಡತಿ ತನ್ನ ಗಂಡನ್ನಿಲ್ಲದೆ ಬದುಕು ಸಾಗಿಸುವದು ಅಷ್ಟೊಂದು ಸುಲಭವಾದ ಕಾರ್ಯವಲ್ಲ.

ಇಂದಿನ ಈ ಲೇಖನ ಒಬ್ಬ ವೀರವನಿತೆಯದ್ದಾಗಿದೆ. ಈ ಹುಡುಗಿ ತನ್ನ ಮದುವೆಯಾದ ನಂತರ ಗಂಡನ ಮನೆಗೆ ಹೋಗಿ ಸಂಸಾರದ ಬಂಡಿ ಸಾಗಿಸುವ ತಯಾರಿಯಲ್ಲಿ ಇರುವಾಗಲೇ ತನ್ನ ಪತಿಯನ್ನು ಕಳೆದುಕೊಳ್ಳುವ ಪರಸ್ಥಿತಿ ಬರುತ್ತದೆ. ಆದರೆ ಗಂಡನಿಲ್ಲ ಎಂಬ ಯೋಚನೆ ಮಾಡದೆ ಸ್ವತಃ ತಾನೂ ಸಹ ಗಂಡನಿದ್ದ ಜಾಗದಲ್ಲೇ ಅಧಿಕಾರಿಯಾಗಬೇಕೆಂಬ ಹೊಣೆ ಹೊತ್ತು ಇಂದು ಅಧಿಕಾರಿಯಾಗಲು ಹೊರಟಿದ್ದಾರೆ. ಈ ಮಹಿಳೆಯ ಜೀವನ ನಮ್ಮ ದೇಶದ ಇತರ ಮಹಿಳೆಯರಿಗೆ ಮಾದರಿ ಯಾಗಲಿದೆ.

ಕರುಣಾ ಸಿಂಗ್ ರತ್ಲಂ ಮೂಲದವರು. ಇವರ ಜೀವನದಲ್ಲಿ ಖುಷಿ ಬರುವ ಮುಂಚೆಯೇ ದುಃಖ ಬಂದಿದೆ ಎಂದರೆ ಹೇಳಿದರೆ ತಪ್ಪಾಗದು. ಇವರು ಮದುವೆಯಾದರು ಸಹ ಗಂಡನ ಜೊತೆಗೆ 40 ದಿವಸ ಸಹ ಇರಲು ಸಾಧ್ಯವಾಗಲಿಲ್ಲ. ಜನರ ಜೀವನ ಉಳಿಸುವ ಸಲುವಾಗಿ ತನ್ನ ಪ್ರಾಣವನ್ನು ಪಣಕ್ಕಿಟ್ಟು ಹೋರಾಡಿ ಪತಿ ದೇಶಕ್ಕಾಗಿ ಹುತಾತ್ಮರಾದರು. ಇವರ ಪತಿಯ ಹೆಸರು ಧರ್ಮೇಂದ್ರ ಸಿಂಗ್ ಚೌಹಾಣ್ ಇದ್ದು ಅವರು ಮೆಕ್ಯಾನಿಕಲ್‌ನಲ್ಲಿ ಎಂಟೆಕ್ ಮಾಡಿದ್ದಾರೆ. ಇಂತಹ ಸಮಯದಲ್ಲಿ ಪತಿಯನ್ನು ಕಳೆದುಕೊಂಡ ಕರುಣಾ ಎದೆಗುಂದದೆ ತನ್ನ ಜವಾಬ್ದಾರಿಯನ್ನು ನಿಭಾಯಿಸಿಕೊಳ್ಳುತ್ತ ಸೇನೆಯನ್ನು ಸೇರುವ ಸಿದ್ಧತೆಗಳನ್ನು ನಡೆಸಿದಳು.

ಕರುಣಾ ಅವರು ಪದವಿಯ ಶಿಕ್ಷಣ ಪಡೆಯುತ್ತಿದ್ದಾಗ ಅವರ ತಂದೆ ನಿಧನರಾದರು. ತಂದೆಯನ್ನು ಕಳೆದುಕೊಂಡ ನಂತರ ಅವರ ಜೀವನ ಹೇಗೆ ಸಾಗಿಸಬೇಕು ಎಂಬ ಸಮಸ್ಯೆ ನಿರ್ಮಾಣವಾಯಿತು. ಆದರೆ ಅವರ ತಂದೆಯ ಮಾತ್ರಕ್ಕೆ ನಿಲ್ಲಲಿಲ್ಲ ಕಳೆದ ಮೂರು ವರ್ಷದಲ್ಲಿ ತಮ್ಮ ಕುಟುಂಬದಲ್ಲಿಯ ನಾಲ್ಕು ಸದಸ್ಯರನ್ನು ಕಳೆದುಕೊಂಡರು. ಆದರೂ ಕೂಡಾ ಅವರು ತಮ್ಮ ಉತ್ಸಾಹ ಕಳೆದುಕೊಳ್ಳಲಿಲ್ಲ ಏಕೆಂದರೆ ಗಂಡನ ಮನೆಗೆ ಹೋದರೆ ಅಲ್ಲಿಯ ಹೊಸ ಜೀವನ ಹೊಸ ಪರಿಸರ ದಿಂದ ತಮ್ಮ ಎಲ್ಲ ದುಃಖ ಮರೆಯಾಗುವದು ಎಂಬುದು ಅವರ ಆಸೆ ಆಗಿತ್ತು. ಇಷ್ಟೆಲ್ಲ ಆಸೆ ಹೊತ್ತು ಬಂದ ಕರುಣಾಳಿಗೆ ಗಂಡನ ಮನೆಯಲ್ಲಿ ಸಹ ತನಗೆ ಸಿಗಬೇಕಾದ ಖುಷಿ ಸಿಗಲೇ ಇಲ್ಲ. ಇದು ಅವರ ಹಣೆಬರಹವೆ ಆಗಿರಬೇಕು. ಮದುವೆಯಾದ 40 ದಿನಗಳು ಸಹ ಜೊತೆಗೆ ಕಳೆದ್ದಿರಲಿಲ್ಲ. ಪತಿ ದೇಶದ ಜನತೆಯ ರಕ್ಷಣೆ ಮಾಡುವ ಸಲುವಾಗಿ ತಮ್ಮ ಸೇವೆಗೆ ಹಾಜರಾದರು. ಜನರ ರಕ್ಷಿಸುವ ಸಮಯದಲ್ಲಿ ಪತಿ ಹುತಾತ್ಮರಾದರು. ಪತಿಯನ್ನು ಕಳೆದುಕೊಂಡ ನಂತರ ಇವರಿಗೆ ಇರಫಾನ್ ಎಂಬ ಹೆಸರಿನ ಕ್ಯಾಪ್ಟನ್ ತಾವು ಸಹ ಸೈನ್ಯಕ್ಕೆ ಸೇರಬಹುದು ಎಂದು ಸೂಚಿಸಿದಾಗ ಇವರು ಸೈನ ಸೇರಲು ಸಿದ್ಧರಾದರು. ತದನಂತರ ಸೈನ್ಯದ ಪ್ರಶಿಕ್ಷಣ ಸಲುವಾಗಿ ಇಂದೋರ್ ಗೆ ಹೋದರು. ಗುರಿಯ ಕಡೆಗೆ ನಿರ್ಲಕ್ಷ್ಯ ವಹಿಸಿದೆ ಸದಾ ತಮ್ಮ ಸಾಧನೆಯತ್ತ ಸಾಗುವ ಪ್ರಯತ್ನ ಮಾಡುತ್ತಿದ್ದರು.

ಕರುಣಾ ಅವರು ಸೈನ್ಯದ ಸಮವಸ್ತ್ರವನ್ನು ಧರಿಸುವುದೇ ‘ತನ್ನ ಪತಿಗೆ ನೀಡುವ ಮದುವೆಯ ಉಡುಗೊರೆಯಾಗುತ್ತದೆ’ ಎಂಬುದು ಕರುಣಾಳ ವಿಚಾರವಾಗಿದೆ. ಈ ಉಡುಗೊರೆಯನ್ನು ತನ್ನ ಪತಿಗೆ ನೀಡಬೇಕು ಎಂದು ಅವರು ದಿನವಿಡೀ ಶ್ರಮಿಸಲು ಪ್ರಾರಂಭ ಮಾಡಿದರು. ಸದ್ಯಕ್ಕೆ ಅವರು ತರಬೇತಿ ಪಡೆಯುತ್ತಿದ್ದಾರೆ ಅಷ್ಟೇ ಅಲ್ಲ ಶೀಘ್ರದಲ್ಲೇ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಆಗಲಿದ್ದಾರೆ.

ಧೈರ್ಯದ ಜೊತೆಗೆ ಕರುಣಾ ಅವರು ತಮ್ಮ ಜವಾಬ್ದಾರಿ ನಿಭಾಯಿಸುತ್ತ ದೇಶದ ಸೈನ್ಯದಲ್ಲಿ ಸೇರ್ಪಡೆಯಾಗುವ ಸಲುವಾಗಿ ಶ್ರಮವನ್ನು ವಹಿಸಿದ ರೀತಿ ನಿಜಕ್ಕೂ ಶ್ಲ್ಯಾಘನೀಯ. ನಮ್ಮ ದೇಶದ ಈ ವೀರ ವನಿತೆ ಕರುಣಾ ಸಿಂಗ್ ಬಗ್ಗೆ ನಮಗೆ ಹೆಮ್ಮೆ ಇದೆ.